'ಗೀತಗೋವಿಂದಂ' ಚಿತ್ರದಲ್ಲಿ ನಾನು ನಟಿಸ್ಬೇಕಿತ್ತು; ವಿರೋಷ್ ಮದುವೆ ಬೆನ್ನಲ್ಲೇ ಖ್ಯಾತ ನಟನ ಮಗಳ ಹೇಳಿಕೆ ವೈರಲ್
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಏಳೆಂಟು ದಿನಗಳ ಕಾಲ ಮದುವೆ ಸಂಭ್ರಮ ನಡೀತು. 8 ವರ್ಷಗಳ ಹಿಂದೆ 'ಗೀತಗೋವಿಂದಂ' ಸಿನಿಮಾ ಜೋಡಿ ಒಂದಾಗಲು ನಾಂದಿ ಹಾಡಿತ್ತು. ಅದೇ ಸಿನಿಮಾದಲ್ಲಿ ಇಬ್ಬರ ನಡುವೆ ಪರಿಚಯ, ಸ್ನೇಹ ಶುರುವಾಗಿ ಬಳಿಕ ಪ್ರೀತಿಗೆ ತಿರುಗಿ ಈಗ ಮದುವೆ ಮುದ್ರೆ ಬಿದ್ದಿದೆ.
'ಗೀತಗೋವಿಂದಂ' ಚಿತ್ರದಲ್ಲಿ ವಿಜಯ್, ರಶ್ಮಿಕಾ ಕೆಮೆಸ್ಟ್ರಿ ವರ್ಕ್‌ಔಟ್ ಆಗಿತ್ತು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಬಳಿಕ 'ಡಿಯರ್ ಕಾಮ್ರೇಡ್' ಚಿತ್ರಕ್ಕಾಗಿ ಮತ್ತೆ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿತ್ತು, ಮೊದಲಿಗೆ ರಶ್ಮಿಕಾ ಪ್ರಪೋಸ್ ಮಾಡಿದ್ದರು ಎಂದು ಹೇಳಲಾಗ್ತಿದೆ. ಇದೆಲ್ಲದರ ನಡುವೆ 'ಗೀತಗೋವಿಂದಂ' ಚಿತ್ರದಲ್ಲಿ ನಾನು ನಟಿಸ್ಬೇಕಿತ್ತು ಎಂದು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಹೇಳಿರುವುದು ವೈರಲ್ ಆಗ್ತಿದೆ.

ಶಕ್ತಿ ಪ್ರಸಾದ್ ಕುಟುಂಬದಿಂದ ಹಲವರು ಚಿತ್ರರಂಗಕ್ಕೆ ಬಂದಿದ್ದಾರೆ. ಮಗಳನ್ನು ನಾಯಕಿಯನ್ನಾಗಿ ಮಾಡಿ ಅರ್ಜುನ್ ಸರ್ಜಾ ಸಿನಿಮಾಗಳನ್ನು ಮಾಡ್ತಿದ್ದಾರೆ. 'ಪ್ರೇಮಬರಹ' ಬಳಿಕ 'ಸೀತಾಪಯಣ' ಎಂಬ ಸಿನಿಮಾ ಕಟ್ಟಿಕೊಟ್ಟಿದ್ದರು. ಇತ್ತೀಚೆಗೆ ಆ ಸಿನಿಮಾ ತೆರೆಗೆ ಬಂದಿತ್ತು. ಐಶ್ವರ್ಯಗೆ ಚಿತ್ರರಂಗದಲ್ಲಿ ದೊಡ್ಟಮಟ್ಟದ ಬ್ರೇಕ್ ಸಿಗಲೇ ಇಲ್ಲ.
ಮದುವೆ ಬಳಿಕ ಕೂಡ ಐಶ್ವರ್ಯ ಸಿನಿಮಾಗಳಲ್ಲಿ ನಟಿಸುವುದು ಮುಂದುವರೆಸಿದ್ದಾರೆ. Pakka Local ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಐಶ್ವರ್ಯ ಭಾಗಿ ಆಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ 'ಗೀತಗೋವಿಂದಂ' ಸಿನಿಮಾ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆ ಕಥೆಯನ್ನು ನಾನು ಕೇಳಿದ್ದೆ. ಆದರೆ ನಟಿಸೋಕೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ನನಗೆ ಒಳ್ಳೆ ಸಿನಿಮಾಗಳಲ್ಲಿ ನಟಿಸೋಕೆ ಸಾಧ್ಯವಾಗಲಿಲ್ಲ. ಒಳ್ಳೆ ಸ್ಕ್ರಿಪ್ಟ್ ಸಿಗಲಿಲ್ಲ, ಒಳ್ಳೆ ಸಮಯಕ್ಕೆ ಒಳ್ಳೆ ಅವಕಾಶ ಸಿಗಲಿಲ್ಲ. 'ಪ್ರೇಮಬರಹ' ಕನ್ನಡದಲ್ಲಿ ಹಿಟ್ ಆಗಿತ್ತು. ಆದರೆ ಬಳಿಕ ಒಳ್ಳೆ ಸ್ಕ್ರಿಪ್ಟ್ ಸಿಗಲಿಲ್ಲ.. ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ನೀವು ಖ್ಯಾತ ನಟನ ಮಗಳು. ಹಾಗಾಗಿ ನಿಮಗೆ ಕಥೆ ಹೇಳಲು ಸಾಕಷ್ಟು ಜನ ಯೋಚಿಸುತ್ತಾರೆ ಎಂದು ನನಗೆ ಕೆಲವರು ಹೇಳುವುದನ್ನು ಕೇಳಿದ್ದೇನೆ ಎಂದು ಐಶ್ವರ್ಯಾ ಅರ್ಜುನ್ ಹೇಳಿದ್ದಾರೆ.
ನಾನು ಕಥೆ ಕೇಳಿ ಒಪ್ಪದೇ ಕೈತಪ್ಪಿದ ಕೆಲ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಇದೇ ರೀತಿ ಆಗಿದೆ. 'ಗೀತಗೋವಿಂದಂ' ಸಿನಿಮಾ ಕಥೆಯನ್ನು ಸಾಕಷ್ಟು ನಟಿಯರು ಕೇಳಿದ್ದರು. ನಾನು ಆ ಕಥೆ ಕೇಳಿದ್ದೆ. ಆದರೆ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ನಿಜಕ್ಕೂ ಆ ಸಿನಿಮಾ ಬಹಳ ಚೆನ್ನಾಗಿ ಮೂಡಿಬಂತು. ಅದೇ ರೀತಿ ಕನ್ನಡದಲ್ಲಿ ಕೂಡ ನಾನು ಕಥೆ ಕೇಳಿ ನಟಿಸದೇ ಹಿಟ್ ಆಗಿರುವ ಸಿನಿಮಾಗಳಿವೆ. ಸಿನಿಮಾ ಹೆಸರು ಹೇಳುವುದಿಲ್ಲ ಎಂದು ಐಶ್ವರ್ಯಾ ಹೇಳಿರುವುದು ವೈರಲ್ ಆಗ್ತಿದೆ.
2018ರಲ್ಲಿ ಪರಶುರಾಮ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಗೀತಗೋವಿಂದಂ' ತೆರೆಗೆ ಬಂದಿತ್ತು. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರವಿಂದ್ ಸಿನಿಮಾ ನಿರ್ಮಾಣ ಮಾಡಿದ್ದರು. ಗೋಪಿ ಸುಂದರ್ ಸಂಗೀತ ಚಿತ್ರದ ಹೈಲೆಟ್ ಆಗಿತ್ತು. 5ರಿಂದ 10 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 100 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.
'ಸೀತಾಪಯಣ' ಚಿತ್ರದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಹೀರೊ ಆಗಿ ನಟಿಸಿದ್ದರು. ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬಂದಿತ್ತು. ತಮಿಳು ಹಾಗೂ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಪ್ರಕಾಶ್ ರಾಜ್ ಜೊತೆಗೆ ಅರ್ಜುನ್ ಸರ್ಜಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಧ್ರುವ ಸರ್ಜಾ ಗೆಸ್ಟ್ ಅಪಿಯರೆನ್ಸ್ ಕೂಡ ಇತ್ತು. ಆದರೆ ಸಿನಿಮಾ ಗೆಲ್ಲುವಲ್ಲಿ ವಿಫಲವಾಗಿತ್ತು.


Click it and Unblock the Notifications











