RRR ಚಿತ್ರಕ್ಕಾಗಿ ಅಜಯ್ ದೇವ್ಗನ್ ಸಂಭಾವನೆ ಬಗ್ಗೆ ಗೊತ್ತಾದರೆ ಖಂಡಿತ ಆಶ್ಚರ್ಯ ಪಡ್ತೀರಾ.!

ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರುವ 'ಆರ್.ಆರ್.ಆರ್' ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಪ್ರತಿದಿನ ಒಂದಲ್ಲಾ ಒಂದು ವಿಶೇಷತೆಯಿಂದ ಸದ್ದು ಮಾಡುತ್ತಿರುವ 'ಆರ್.ಆರ್.ಆರ್' ಚಿತ್ರ ಮುಂದಿನ ವರ್ಷದ ಜನವರಿ ತಿಂಗಳಲ್ಲಿ ನಿಮ್ಮ ಮುಂದೆ ಬರಲಿದೆ.

ಸ್ವಾತಂತ್ರ್ಯ ಪೂರ್ವದ ಕೆಲ ಘಟನೆಗಳ ಸುತ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಾಮ್ ಭೀಮ್ ಮತ್ತು ಅಲ್ಲುರಿ ಸೀತಾರಾಮ ರಾಜು ಕುರಿತು 'ಆರ್.ಆರ್.ಆರ್' ಚಿತ್ರಕಥೆ ಹೆಣೆಯಲಾಗಿದೆ.

ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ 'ಆರ್.ಆರ್.ಆರ್' ಚಿತ್ರದಲ್ಲಿ ರಾಮ್ ಚರಣ್ ತೇಜಾ, ಜೂನಿಯರ್ ಎನ್.ಟಿ.ಆರ್, ಆಲಿಯಾ ಭಟ್, ಅಜಯ್ ದೇವ್ಗನ್ ನಟಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ.

ಅಂದ್ಹಾಗೆ, 'ಆರ್.ಆರ್.ಆರ್' ಚಿತ್ರದಲ್ಲಿ ನಟಿಸಲು ಬಾಲಿವುಡ್ ನಟ ಅಜಯ್ ದೇವ್ಗನ್ ಪಡೆದಿರುವ ಸಂಭಾವನೆ ವಿಚಾರದ ಬಗ್ಗೆ ನಿಮಗೆ ಗೊತ್ತಾದರೆ ಖಂಡಿತ ಆಶ್ಚರ್ಯ ಪಡದೆ ಇರಲ್ಲ.!

'ಆರ್.ಆರ್.ಆರ್' ಚಿತ್ರಕ್ಕಾಗಿ ಅಜಯ್ ದೇವ್ಗನ್ ಪಡೆದ ಸಂಭಾವನೆ ಎಷ್ಟು.?

'ಆರ್.ಆರ್.ಆರ್' ಚಿತ್ರಕ್ಕಾಗಿ ಅಜಯ್ ದೇವ್ಗನ್ ಪಡೆದ ಸಂಭಾವನೆ ಎಷ್ಟು.?

ಚಿತ್ರವೊಂದರಲ್ಲಿ ನಟಿಸಲು ಬಾಲಿವುಡ್ ನ ಅಜಯ್ ದೇವ್ಗನ್ ಕಮ್ಮಿ ಅಂದರೂ 35 ರಿಂದ 40 ಕೋಟಿ ಸಂಭಾವನೆ ಪಡೆಯುತ್ತಾರೆ. ಇಂತಿಪ್ಪ ಅಜಯ್ ದೇವ್ಗನ್ ರಾಜಮೌಳಿ ನಿರ್ದೇಶನದ 'ಆರ್.ಆರ್.ಆರ್' ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಅಚ್ಚರಿ ಅಂದ್ರೆ, 'ಆರ್.ಆರ್.ಆರ್' ಚಿತ್ರದ ಸ್ಪೆಷಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲು ಅಜಯ್ ದೇವ್ಗನ್ ಸಂಭಾವನೆ ಪಡೆದಿಲ್ಲ. ಫ್ರೀಯಾಗಿ 'ಆರ್.ಆರ್.ಆರ್' ಚಿತ್ರಕ್ಕೆ ಕಾಲ್ ಶೀಟ್ ಕೊಟ್ಟಿದ್ದಾರೆ.!

ಅಜಯ್ ದೇವ್ಗನ್ ಪಾತ್ರವೇನು.?

ಅಜಯ್ ದೇವ್ಗನ್ ಪಾತ್ರವೇನು.?

'ಆರ್.ಆರ್.ಆರ್' ಚಿತ್ರದಲ್ಲಿ ಅಜಯ್ ದೇವ್ಗನ್ ನಿಭಾಯಿಸುತ್ತಿರುವ ಪಾತ್ರ ತೀರಾ ಚಿಕ್ಕದು. ವರದಿಗಳ ಪ್ರಕಾರ, 'ಆರ್.ಆರ್.ಆರ್' ಸಿನಿಮಾದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಆಗಿ ಅಜಯ್ ದೇವ್ಗನ್ ಕಾಣಿಸಿಕೊಳ್ಳುತ್ತಿದ್ದಾರೆ. ಸಣ್ಣ ಪಾತ್ರದಲ್ಲಿ ಆಕ್ಟ್ ಮಾಡುತ್ತಿದ್ದರೂ, ಅಜಯ್ ದೇವ್ಗನ್ ಗೆ ಪೂರ್ಣ ಸಂಭಾವನೆ (35-40 ಕೋಟಿ) ಕೊಡುವುದಕ್ಕೆ ನಿರ್ಮಾಪಕ ಡಿ.ವಿ.ವಿ.ದಾನಯ್ಯ ರೆಡಿ ಇದ್ದರು. ಆದ್ರೆ, 'ಆರ್.ಆರ್.ಆರ್' ನಿರ್ಮಾಪಕರಿಂದ ಒಂದು ರೂಪಾಯಿಯನ್ನೂ ಅಜಯ್ ದೇವ್ಗನ್ ಪಡೆದಿಲ್ಲ ಎನ್ನಲಾಗಿದೆ.

ರಾಜಮೌಳಿ ಜೊತೆಗಿನ ಸ್ನೇಹ ಕಾರಣ.!

ರಾಜಮೌಳಿ ಜೊತೆಗಿನ ಸ್ನೇಹ ಕಾರಣ.!

'ಆರ್.ಆರ್.ಆರ್' ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವ್ಗನ್ ಫ್ರೀಯಾಗಿ ನಟಿಸುತ್ತಿರುವುದಕ್ಕೆ ಕಾರಣ ನಿರ್ದೇಶಕ ರಾಜಮೌಳಿ ಜೊತೆಗಿನ ಸ್ನೇಹ. ವರ್ಷಗಳಿಂದಲೂ ರಾಜಮೌಳಿ ಮತ್ತು ಅಜಯ್ ದೇವ್ಗನ್ ಆತ್ಮೀಯ ಗೆಳೆಯರು. ಹೀಗಾಗಿ, 'ಆರ್.ಆರ್.ಆರ್' ಚಿತ್ರಕ್ಕೆ ರಾಜಮೌಳಿ ಆಫರ್ ಮಾಡಿದ ಕೂಡಲೆ ಹಿಂದು ಮುಂದು ನೋಡದೆ ಅಜಯ್ ದೇವ್ಗನ್ ಕಾಲ್ ಶೀಟ್ ಕೊಟ್ಟಿದ್ದಾರೆ. ಅದು ಫ್ರೀಯಾಗಿ.!

ಅಜಯ್ ದೇವ್ಗನ್-ರಾಜಮೌಳಿ ನಡುವೆ ಇದೆ ಉತ್ತಮ ಒಡನಾಟ

ಅಜಯ್ ದೇವ್ಗನ್-ರಾಜಮೌಳಿ ನಡುವೆ ಇದೆ ಉತ್ತಮ ಒಡನಾಟ

2012 ರಲ್ಲಿ ರಾಜಮೌಳಿ ನಿರ್ದೇಶನದ 'ಈಗ' ಚಿತ್ರ ತೆರೆಗೆ ಬಂದಿತ್ತು. ಇದೇ ಚಿತ್ರ ಹಿಂದಿಯಲ್ಲಿ 'ಮಕ್ಕಿ' ಆಗಿ ರಿಲೀಸ್ ಆಗಿತ್ತು. 'ಈಗ' ಚಿತ್ರದ ಹಿಂದಿ ವರ್ಷನ್ 'ಮಕ್ಕಿ'ಗೆ ಅಜಯ್ ದೇವ್ಗನ್ ವಾಯ್ಸ್ ನೀಡಿದ್ದರು. ಅಲ್ಲಿಂದಲೂ ರಾಜಮೌಳಿ ಮತ್ತು ಅಜಯ್ ದೇವ್ಗನ್ ನಡುವೆ ಉತ್ತಮ ಒಡನಾಟ ಇದೆ. ಇದೀಗ ಇವರಿಬ್ಬರು 'ಆರ್.ಆರ್.ಆರ್' ಚಿತ್ರದ ಮೂಲಕ ಒಟ್ಟಿಗೆ ಕೆಲಸ ಮಾಡುವಂತಾಗಿದೆ. ಅಂದ್ಹಾಗೆ, 'ಆರ್.ಆರ್.ಆರ್' ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿ ಇದೆ.

More from Filmibeat

English summary
Bollywood Actor Ajay Devgan is reportedly doing RRR film for Free.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X