ಬಾಲಯ್ಯ ಇದೇನಯ್ಯ ? 17 ವರ್ಷದ ಯುವ ನಟಿಯನ್ನು ಎಲ್ಲರೆದುರೇ ಬಲವಂತದಿಂದ ಎಳೆದ 65 ವರ್ಷದ ಅಖಂಡ
ಬಾಲಯ್ಯ ಅವರಿಗೆ ತೆಲುಗು ಚಿತ್ರರಂಗದಲ್ಲಿ ಅವ್ರದ್ದೇ ಆದ ಖದರ್ ಇದೆ, ತೆಲುಗು ನಾಡಿನಲ್ಲಿ ಪವರ್ ಇದೆ. ಆಂಧ್ರ ತೆಲಂಗಾಣ ಮಾತ್ರ ಅಲ್ಲ ಕರ್ನಾಟಕದಲ್ಲಿ ಕೂಡ ಬಾಲಕೃಷ್ಣ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇನ್ನು ಬಾಲಯ್ಯ ತೆರೆ ಮೇಲೆ ಸಿಂಹದಂತೆ ಗರ್ಜಿಸಿ ಚಿತ್ರದ ವಿಲನ್‌ಗಳ ವಿರುದ್ಧ ನಡೆಸುವ ಆಟಾಟೋಪ ಒಂದೆರಡಲ್ಲ. ತುಪಾಕಿಯಿಂದ ಸಿಡಿದ ಗುಂಡಿನಂತೆ ಮಾತನಾಡುವ ಬಾಲಯ್ಯನ ಡೈಲಾಗ್‌ಗೆ ಚಪ್ಪಾಳೆ ಶಿಳ್ಳೆ ಖಚಿತ.
ಇಂಥಾ ಬಾಲಯ್ಯ ಚೂರು ಮುಂಗೋಪಿ. ಕೋಪದ ಕೈಗೆ ಬುದ್ದಿ ಕೊಟ್ಟು ಆಗಾಗ ಬಾಲಯ್ಯ ಕೈ ಕೈ ಹಿಸುಕಿಕೊಂಡಿದ್ದು ಇದೆ. ವಿವಾದಕ್ಕೀಡಾಗಿದ್ದು ಇದೆ. ಇದಕ್ಕೆ ತೀರಾ ಇತ್ತೀಚೆಗೆ ನಡೆದ ''ಅಖಂಡ 2'' ಚಿತ್ರದ ಕಾರ್ಯಕ್ರಮ ಮತ್ತೊಂದು ಉದಾಹರಣೆ.

ಹೌದು, ಬಾಲಯ್ಯ ಅಭಿನಯದ ಬಹು ನಿರೀಕ್ಷಿತ ಚಿತ್ರ ''ಅಖಂಡ 2'' ತೆರೆಗೆ ಬರಲು ಸಿದ್ಧವಾಗಿದೆ. ಇದೇ ಡಿಸೆಂಬರ್ ಮೊದಲ ವಾರದಲ್ಲಿ ಬೆಳ್ಳಿತೆರೆಯ ಮೇಲೆ ಅಖಂಡ 2 ಧಗಧಗಿಸಲಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗಿದ್ದು ಚಿತ್ರದ ಮೊದಲ ಹಾಡನ್ನು ಸದ್ಯ ಬಿಡುಗಡೆ ಮಾಡಲಾಗಿದೆ.
ಇದೇ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಬಾಲಯ್ಯ ಚಿತ್ರದಲ್ಲಿ ಅಭಿನಯಿಸಿರುವ ತನಗಿಂತ 48 ವರ್ಷ ಚಿಕ್ಕವಳಾಗಿರುವ, ತನ್ನ ಮಗಳ ವಯಸ್ಸಿನ ನಾಯಕಿ ಹರ್ಷಾಲಿ ಮಲ್ಹೋತ್ರಾ ಕೈಯನ್ನು ಹಿಡಿದು ಎಳೆದಿದ್ದಾರೆ. ಆ ನಂತರ ಕ್ಯಾಮರಾಗೆ ಫೋಸ್ ನೀಡಿದ್ದಾರೆ.
ಆದರೆ.. ಬಾಲಯ್ಯ ಅವರ ಈ ವರ್ತನೆಯಿಂದ ಹರ್ಷಾಲಿ ವೇದಿಕೆಯಲ್ಲಿ ಆಘಾತಕ್ಕೊಳಗಾಗಿದ್ದಾರೆ. ಮುಖದಲ್ಲಿ ನಗು ಇದ್ದರೂ ಕೂಡ ಹರ್ಷಾಲಿ ಕಣ್ಣುಗಳಲ್ಲಿ ಭಯ ಕಂಡಿದೆ. ಹರ್ಷಾಲಿ ಮುಖದಲ್ಲಿನ ಈ ಭಯ ಸೋಶಿಯಲ್ ಮೀಡಿಯಾದ ಬಳಕೆದಾರರ ಕಣ್ಣೀಗೆ ಕೂಡ ಬಿದ್ದಿದೆ.
ಹೀಗಾಗಿಯೇ ಹಲವರು ಈಗ ಬಾಲಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಂಡ ಕಾರುತ್ತಿದ್ದಾರೆ. ಬಾಲಯ್ಯಗೆ ವಯಸ್ಸಾಗಿದೆ ಅಷ್ಟೇ, ಆದರೆ ಎಲ್ಲಿ ಹೇಗೆ ನಡೆದುಕೊಳ್ಳಬೇಕೆನ್ನುವ ಪರಿಜ್ಞಾನ ಇಲ್ಲ ಎನ್ನುತ್ತಿದ್ದಾರೆ. ಫರ್ನಿಚರ್ ಎಳೆದಂತೆ ಆಕೆಯನ್ನು ಎಳೆಯುತ್ತಿದ್ದೀರಲ್ಲ ಎಂದು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಾಲಯ್ಯ ವಿರುದ್ದ ಸದ್ಯ ಮತ್ತೊಂದು ಸುತ್ತಿನ ಸಮರವನ್ನು ಸಾರಿದ್ದಾರೆ. ಬಾಲಯ್ಯ ಕಪಿಮುಷ್ಠಿಯಿಂದ ಆ ಹುಡುಗಿಯನ್ನು ಯಾರಾದರೂ ಕಾಪಾಡಿ ಎಂದು ಮನವಿಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ.

ಸದ್ಯ ಹರ್ಷಾಲಿ ಅವರ ಕೈಯನ್ನು ಬಲವಂತದಿಂದ ಹಿಡಿದು ಬಾಲಯ್ಯ ಎಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಅಂದ್ಹಾಗೇ ಬಾಲಯ್ಯ ಅವರ ವರ್ತನೆಯಿಂದ ಹೈರಾಣಾದ ಈ 17ರ ಚೆಲುವೆ ಹರ್ಷಾಲಿ ಮಲ್ಹೋತ್ರಾ ಬೇರೆ ಯಾರು ಅಲ್ಲ ಬದಲಿಗೆ ''ಭಜರಂಗಿ ಭಾಯಿಜಾನ್'' ಚಿತ್ರದ ಮುನ್ನಿ ಎನ್ನುವುದು ವಿಶೇಷ.
ಹೌದು. ಮುನ್ನಿ. ಸಲ್ಮಾನ್ ಖಾನ್ ಅಭಿನಯದ, ಎರಡು ದಶಕದ ಹಿಂದೆ ತೆರೆಗೆ ಬಂದಿದ್ದ ''ಭಜರಂಗಿ ಭಾಯಿಜಾನ್'' ಚಿತ್ರದ ಚೈಲ್ಡ್ ಆರ್ಟಿಸ್ಟ್ . ತನ್ನ ಅಭಿನಯದಿಂದ ಸಲ್ಮಾನ್ ಖಾನ್ ಅವರನ್ನೇ ಚಿತ್ರದಲ್ಲಿ ಓವರ್ ಟೇಕ್ ಮಾಡಿದ್ದ ಹರ್ಷಾಲಿ ಸದ್ಯ ಚಿತ್ರರಂಗಕ್ಕೆ ಮರಳಿದ್ದಾರೆ. ನಾಯಕಿಯಾಗಿ ನೆಲೆಯೂರಬೇಕೆಂಬ ಕನಸೊತ್ತು ಉತ್ತರದಿಂದ ದಕ್ಷಿಣಕ್ಕೆ ವಲಸೆ ಬಂದಿದ್ದಾರೆ. ''ಅಖಂಡ 2'' ನಟಿಯಾಗಿ ಹರ್ಷಾಲಿ ಮಲ್ಹೋತ್ರಾ ಮಾಡುತ್ತಿರುವ ಮೊದಲ ಪ್ರಯತ್ನ.
ಹೀಗಾಗಿ ತಮ್ಮ ಮೊದಲ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಖುಷಿ ಖುಷಿಯಾಗಿ ಹರ್ಷಾಲಿ ಭಾಗವಹಿಸಿದ್ದರು. ಆದರೆ ಬಾಲಯ್ಯ ಅವರ ವರ್ತನೆಯಿಂದ, ಹರ್ಷಾಲಿಯ ಈ ಖುಷಿಗೆ ದೃಷ್ಟಿ ಬಿದ್ದಿದೆ. ಬಾಲಯ್ಯ ಅವರ ಈ ವರ್ತನೆಯ ಕುರಿತು ಹರ್ಷಾಲಿಗೆ ಮುಂಬರುವ ದಿನಗಳಲ್ಲಿ ಪ್ರಶ್ನೆಗಳು ಎದುರಾಗಿಯೇ ಆಗಲಿವೆ. ಆಗ ಹರ್ಷಾಲಿ ಅವರ ಉತ್ತರ ಏನಾಗಿರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Munni needs help
byu/saurabhagarwal8 inBollyBlindsNGossip


Click it and Unblock the Notifications











