'ಅಖಂಡ' ಹತ್ತು ದಿನಕ್ಕೆ ಗಳಿದೆಷ್ಟು: ಬಾಕ್ಸಾಫಿಸ್‌ನಲ್ಲಿ ಬಾಲಯ್ಯ ಬರೆದ ಹೊಸ ದಾಖಲೆ!
ಲಾಕ್‌ಡೌನ್ ಬಳಿಕ ಸಿನಿಮಾರಂಗಕ್ಕೆ ದೊಡ್ಡ ಸವಾಲು ಎದುರಾಗಿತ್ತು. ಕೊರೊನಾ ಪರಿಣಾಮದಿಂದ ಚಿತ್ರ ಮಂದಿರಕ್ಕೆ ಜನ ಬರ್ತಾರೊ ಇಲ್ಲವೊ ಎನ್ನುವ ಪ್ರಶ್ನೆ ಸಿನಿಮಾ ಮಂದಿಯನ್ನು ಕಾಡುತ್ತಿತ್ತು. ಆದರೆ ಟಾಲಿವುಡ್‌ನ ಎಲ್ಲಾ ಗೊಂದಲಗಳಿಗೂ ಉತ್ತರ ನೀಡಿದ್ದು ನಟ ನಂದಮುರಿ ಬಾಲಕೃಷ್ಣ.
ಲಾಕ್‌ಡೌನ್ ಬಳಿಕ ಒಂದಷ್ಟು ಸಿನಿಮಾಗಲು ರಿಲೀಸ್ ಆದ್ರೂ ಕೂಡ, ಸಿನಿಮಾರಂಗದಲ್ಲಿ ಭರವಸೆ ಮೂಡಿಸಿದ್ದು ಮಾತ್ರ ಬಾಲಯ್ಯ ಅಭಿನಯದ 'ಅಖಂಡ' ಸಿನಿಮಾ. ಈ ಚಿತ್ರ ರಿಲೀಸ್ ಆದ ಮೊದಲ ದಿನವೇ ಟಾಲಿವುಡ್ ಮಂದಿಯ ಮುಖದಲ್ಲಿ ಸಂತಸ ಅರಳಿತ್ತು.
ಅಂತೆಯೇ 'ಅಖಂಡ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಾ ಮುನ್ನುಗ್ಗುತ್ತಿದೆ. ಬಿಗ್ ಓಪನಿಂಗ್ ಪಡೆದ 'ಅಖಂಡ' 10ನೇ ದಿನವೂ ಬಾಕ್ಸಾಫೀಸ್ ರೆಕಾರ್ಡ್ ಮಾಡಿದೆ.

ಅದ್ಧೂರಿ ಓಪನಿಂಗ್ ಪಡೆದುಕೊಂಡಿದ್ದ 'ಅಖಂಡ'!
'ಅಖಂಡ' ಸಿನಿಮಾ ನಿರೀಕ್ಷೆಗೂ ಮೀರಿದ ಬಿಗ್ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾ ರಿಲೀಸ್ ನಂತರ ಸಿಕ್ಕ ರೆಸ್ಪಾನ್ಸ್ ಕೇವಲ ಸಿನಿಮಾ ತಂಡಕ್ಕೆ ಮಾತ್ರವಲ್ಲ ಇಡೀ ತೆಲುಗು ಚಿತ್ರರಂಗಕ್ಕೆ ಒಮದು ರೀತಿಯ ಭರವಸೆ ಮೂಡಿಸಿತ್ತು. ಕೊರೊನಾಗೂ ಮೊದಲು ಇದ್ದ ಸಿನಿಮಾ ಕ್ರೇಜ್ ಅಖಂಡ ಚಿತ್ರಕ್ಕೆಕಂಡು ಬಂತು. ಎಲ್ಲೆಲ್ಲೂ ಬಾಲಯ್ಯನ ಅಭಿಮಾನಿಗಳು ಸಿನಿಮಾವನ್ನು ಹಾಡಿ, ಹೊಗಳಿ ಕೊಂಡಾಡಿದ್ದಾರೆ.
ಈ ಸಿನಿಮಾಗೆ ಮಾಸ್ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯಿಕ್ಕಿದ್ದು ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಒಟ ಆರಂಭಿಸಿತ್ತು.

10 ದಿನಕ್ಕೆ 'ಅಖಂಡ' ಒಟ್ಟಾರೆ ಕಲೆಕ್ಷನ್ 100 ಕೋಟಿ!
ಅಖಂಡ ಸಿನಿಮಾ ರಿಲೀಸ್ ಆಗಿ ಹತ್ತು ದಿನಕಳೆದಿದೆ. ಹತ್ತು ದಿನ ಆದರು ಈ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಹೆಚ್ಚಿನ ಮಟ್ಟದ ಇಳಿಕೆ ಕಂಡು ಬಂದಿಲ್ಲ. ಹತ್ತು ದಿನದಲ್ಲಿ ಅಖಂಡ 100 ಕೋಟಿಯ ಗಡಿ ಮುಟ್ಟಿದೆ. ಒಟ್ಟಾರೆ ವಿಶ್ವಾದ್ಯಂತ ಕಲೆಕ್ಷನ್ 100 ಕೋಟಿ ಆಗಿದೆ. ಕೊರೋನಾ ಬಳಿಕಾ ಈ ರೀತಿ ಗಳಿಕೆ ಸುದ್ದಿ ಕೇಳಿ ಸಿನಿಮಾ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೆ ಬಾಲಯ್ಯ ಮತ್ತು ಬೊಯಪಾತಿ ಶ್ರೀನು ಕಾಂಬಿನೇಷನ್ ಮತ್ತೆ ಮರುಕಳಿಸಿದ್ದು, ತೆರೆಮೇಲೆ ಜಾದು ಮಾಡಿದ್ದಾರೆ.

'ಅಖಂಡ' ಭಾರತದಲ್ಲಿ ಮೊದಲ ವಾರದ ಗಳಿಕೆ ಪಟ್ಟಿ!
ಗುರುವಾರ- 22 ಕೋಟಿ ರೂ, ಶುಕ್ರವಾರ-11.5 ಕೋಟಿ ರೂ, ಶನಿವಾರ-12 ಕೋಟಿ ರೂ, ಭಾನುವಾರ-14.5 ಕೋಟಿ ರೂ, ಸೋಮವಾರ- 6.75 ಕೋಟಿ ರೂ, ಮಂಗಳವಾರ- 5 ಕೋಟಿ ರೂ, ಬುಧವಾರ-3.25 ಕೋಟಿ ರೂ, ಗುರುವಾರ-2.75 ಕೋಟಿ ರೂ ಗಳಿಕೆ ಆಗಿದೆ. ಒಟ್ಟಾರೆ ಮೊದಲ ವಾರದಲ್ಲಿ 'ಅಖಂಡ' ಭಾರತದಲ್ಲಿ ಗಳಿಸಿದ್ದು 77.75 ಕೋಟಿ ರೂ ಎಂದು ಟಾಲಿವುಡ್ ಮೂಲಗಳು ಹೇಳುತ್ತಿವೆ.

ಮತ್ತೆ ಚರಿತ್ರೆ ಸೃಷ್ಟಿಸಲು ಬಾಲಯ್ಯ ನಿರ್ಧಾರ!
'ಅಖಂಡ' ಚಿತ್ರ ಮೊದಲ ದಿನದ ಮೊದಲ ಶೋ ಇಂದಲೇ ಪಾಸಿಟಿವ್ ಟಾಕ್ ಪಡೆಯುತ್ತಿದ್ದಂತೆ ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿತ್ತು. ಇಲ್ಲಿ ಸಾಕಷ್ಟು ಲವಲವಿಕೆಯಿಂದ ಕಂಡುಬಂದ ಬಾಲಕೃಷ್ಣ ಅವರು ಚಿತ್ರದ ಯಶಸ್ಸಿನ ಬಗ್ಗೆ ಖುಷಿ ಹಂಚಿಕೊಂಡರು. "ಅಖಂಡ ಮೊದಲ ದಿನದ ಮೊದಲ ಶೋ ಇಂದಲೇ ಸೂಪರ್ ಹಿಟ್ ಟಾಕ್ ಬಂದಿದೆ. ಇದು ನಮ್ಮೆಲ್ಲರ ಪ್ರಯತ್ನಕ್ಕೆ ಸಂದ ಗೆಲುವು. ನೀವು ಇತಿಹಾಸ ತೆಗೆದುಕೊಂಡರೆ ಇತಿಹಾಸ ಸೃಷ್ಟಿಸಿದವರು ನಾವೆ (ನಂದಮೂರಿ ಕುಟುಂಬದವರು) ಮತ್ತೆ ಇತಿಹಾಸವನ್ನು ರಚಿಸುವರು ಕೂಡ ನಾವೇ" ಅಂತ ಹೇಳಿಕೊಂಡಿದ್ದರು. ಹಾಗಾಗಿ 'ಅಖಂಡ' ಬಳಿಕ ಬರಲಿರುವ ಬಾಲಯ್ಯನ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಮನೆ ಮಾಡಿದೆ.


Click it and Unblock the Notifications











