'ಅಖಂಡ' ಚಿತ್ರದಿಂದ ನಂದಮೂರಿ ಬಾಲಕೃಷ್ಣಗೆ ಹೊಸ ತಲೆನೋವು!

ನಂದಮೂರಿ ಬಾಲಕೃಷ್ಣ ಅವರು ಸದ್ಯ ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದಾರೆ. ಯಾಕೆಂದರೆ ಅವರು ಅಭಿನಯದ ಅಖಂಡ ಸಿನಿಮಾ ರಿಲೀಸ್‌ ಆಗಿದೆ. ಜೊತೆಗೆ ರಿಲೀಸ್‌ ಆದ ಮೊದಲ ದಿನ ಅಖಂಡ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಾಗಾಗಿ ನಟ ನಂದಮೂರಿ ಬಾಲಕೃಷ್ಣ ಸಂತಸದಲ್ಲಿ ಇದ್ದಾರೆ.

ಆದರೆ ಬಾಲಕೃಷ್ಣ ಅವರಿಗೆ ಈಗ ಹೊಸ ತಲೆನೋವು ಆರಂಭ ಆಗಿದೆ. ಅದರಲ್ಲೂ ಅವರ ಅಭಿನಯದ 'ಅಖಂಡ' ಚಿತ್ರದಿಂದಲೇ ಬಾಲಕೃಷ್ಣ ಅವರಿಗೆ ಸಂಕಷ್ಟ ಎದುರಾಗಿದೆ. ಸಿನಿಮಾ ರಿಲೀಸ್‌ ಆದ ಒಂದೆ ದಿನಕ್ಕೆ ಚಿತ್ರತಂಡಕ್ಕೆ ಕೊಟ್ಟೆ ಸುದ್ದಿ ಸಿಕ್ಕಿದೆ.

ಹೌದು ಬಹುಕೋಟಿ ವೆಚ್ಚದಲ್ಲಿ ತಯಾರಾಗಿ ತೆರೆಗೆ ಬಂದಿರುವ 'ಅಖಂಡ' ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ಒಂದೇ ದಿನಕ್ಕೆ ಚಿತ್ರ ಲೀಕ್ ಆಗಿದೆ.

ರಿಲೀಸ್‌ ದಿನವೇ 'ಅಖಂಡ' ಪೈರಸಿ!

ರಿಲೀಸ್‌ ದಿನವೇ 'ಅಖಂಡ' ಪೈರಸಿ!

ನಂದಮೂರಿ ಬಾಲಕೃಷ್ಣ ಅಭಿನಯದ 'ಅಖಂಡ' ಚಿತ್ರ ಪೈರಸಿಗೆ ಬಲಿಯಾಗಿದೆ. ಇಂದು (ಡಿಸೆಂಬರ್ 2) ಬಿಡುಗಡೆಯಾದ 'ಅಖಂಡ' ಒಂದೇ ಪ್ರಥಮ ಶೋ ಆಗುತ್ತಲೆ ಪೈರಸಿ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಲೀಕ್ ಆಗಿದೆ. ಟೆಲಿಗ್ರಾಮ್, ತಮಿಳುರಾಕರ್ಸ್ ಸೇರಿದಂತೆ ಇತರೆ ವೆಬ್‌ಸೈಟ್‌ಗಳಲ್ಲಿ ಚಿತ್ರ ಸೋರಿಕೆಯಾಗಿದೆ. ಮೊದಲ ದಿನವೇ ಹೀಗೆ ಸಿನಿಮಾ ಪೈರಸಿ ಆಗಿರೋದು ಚಿತ್ರ ತಂಡಕ್ಕೆ ತಲೆನೋವಾಗಿದೆ. ಅಖಂಡ ಸಿನಿಮಾ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಎಲ್ಲೆಲ್ಲೂ ಅಖಂಡ ಚಿತ್ರದ ಬಗ್ಗೆಯೇ ಮಾತು. ಸಿನಿಮಾ ಬಿಗ್‌ ಓಪನಿಂಗ್ ಪಡೆಯುತ್ತಿರುವಾಗಲೇ ಪೈರಸಿ ಕಾಟಕೊಡುತ್ತಿದೆ. ಹಾಗಾಗಿ ಸಿನಿಮಾದ ಬಾಕ್ಸಾಫೀಸ್‌ ಕಲೆಕ್ಷನ್ ಮೇಲೆ ಪೈರಸಿ ಪರಿಣಾಮ ಬೀರಲಿದೆ.

'ಲವ್ ಸ್ಟೋರಿ', 'ವಕೀಲ್ ಸಾಬ್' ಚಿತ್ರಗಳನ್ನು ಕಾಡಿದ್ದ ಪೈರಸಿ!

'ಲವ್ ಸ್ಟೋರಿ', 'ವಕೀಲ್ ಸಾಬ್' ಚಿತ್ರಗಳನ್ನು ಕಾಡಿದ್ದ ಪೈರಸಿ!

ಇನ್ನು ಲಾಕ್‌ ಡೌನ್‌ ಬಳಿಕ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಲಿದೆ. ಪ್ರೇಕ್ಷಕರು ಕೂಡ ಚಿತ್ರಮಂದಿರಗಳತ್ತ ಮುಖ ಮಾಡುತ್ತಲಿದ್ದಾರೆ. ಆದರೆ ಪೈರಸಿ ಕಾಟ ಮಾತ್ರ ಇನ್ನು ತಪ್ಪಿಲ್ಲದಂತಿರುವಂತೆ. ಸಿನಿಮಾಗಳು ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಸೋರಿಕೆ ಆಗುತ್ತಿವೆ. ಈ ಹಿಂದೆ ರಿಲೀಸ್‌ ಆಗಿದ್ದ 'ಪಾಗಲ್', 'ಲವ್ ಸ್ಟೋರಿ', 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್', 'ವಕೀಲ್ ಸಾಬ್' ಮತ್ತು 'ಎಸ್‌ಆರ್ ಕಲ್ಯಾಣ ಮಂಟಪ' ಚಿತ್ರಗಳು ಕೂಡ ಪೈರಸಿಗೆ ಬಲಿಯಾಗಿವೆ.

ಅಖಂಡ ಅದ್ದೂರಿ ಬಜೆಟ್‌ನ ಕಮರ್ಷಿಯಲ್ ಸಿನಿಮಾ!

ಅಖಂಡ ಅದ್ದೂರಿ ಬಜೆಟ್‌ನ ಕಮರ್ಷಿಯಲ್ ಸಿನಿಮಾ!

ಟಾಲಿವುಡ್‌ನಲ್ಲಿ ಬಾಲಯ್ಯ ಅವರ ಸಿನಿಮಾಗಳು ಅಂದರೇನೆ ಒಂದು ರೀತಿ ಭಿನ್ನ. ಅವರ ಸಿನಿಮಾಗಳು ಸಹಜ ರೀತಿಯಲ್ಲಿ ಇರುವುದಿಲ್ಲ. ಇನ್ನೂ ಬಾಲಯ್ಯ ಅವರ ಅಭಿಮಾನಿಗಳು ಕೂಡ ಅವರನ್ನು ಭಿನ್ನವಾಗಿ ನೋಡಲು ಇಷ್ಟ ಪಡುತ್ತಾರೆ. ಈ ಚಿತ್ರದಲ್ಲಿ ಅದ್ದೂರಿ ತಾರಗಣ ಇದೆ. ಪ್ರಜ್ಞಾ ಜೈಸ್ವಾಲ್, ಜಗಪತಿ ಬಾಬು, ಶ್ರೀಕಾಂತ್, ಶಮ್ನಾ ಕಾಸಿಂ, ಅವಿನಾಶ್, ಸುಬ್ಬರಾಜು, ಪಿ ಸಾಯಿ ಕುಮಾರ್, ಶ್ರವಣ್ ಮತ್ತು ಪ್ರಭಾಕರ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ. ಈ ಸಿನಿಮಾ ತಾರಗಣದಿಂದಲೇ ಹೆಚ್ಚಿನ ನಿರೀಕ್ಷೆ ಮೂಡಿಸಿತ್ತು.

ಶ್ರೀನು ಕಥೆಗೆ ಉತ್ತಮ ರೆಸ್ಪಾನ್ಸ್!

ಶ್ರೀನು ಕಥೆಗೆ ಉತ್ತಮ ರೆಸ್ಪಾನ್ಸ್!

ಅಖಂಡ ಚಿತ್ರಕ್ಕೆ ಬೋಯಪಾತಿ ಶ್ರೀನು ಕಥೆ ಬರೆದಿದ್ದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಬಾಲಯ್ಯ ಅವರ ನಟನೆ ಪ್ರೇಕ್ಷಕರನ್ನು ಬೆರಗುಗೊಳಿಸುತ್ತದೆ ಎನ್ನುತ್ತಿದ್ದಾರೆ ಸಿನಿಮಾ ನೋಡಿದ ಪ್ರೇಕ್ಷಕರು. ಎಸ್ ಥಮನ್ ಸಂಗೀತ ಈ ಚಿತ್ರಕ್ಕಿದೆ. ಈಗಾಗಲೇ 'ಅಖಂಡ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲಿದೆ. ಹಾಗಾಗಿ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು ಎನ್ನುವ ಕುತೂಹಲ ಮೂಡಿವೆ.

More from Filmibeat

English summary
Akhanda Movie Piracy On Release Day: Full Movie Leaked Online For Free Download.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X