ಏಜೆಂಟ್‌ ಟ್ರೈಲರ್: ಸಿಂಹ ಬೇಟೆಯಾಡಲು ಬಂದು ಬುಲೆಟ್ ಮಳೆ ಸುರಿಸಿದ ಹಸಿದ ಹುಲಿ

ತೆಲುಗಿನ ಸೂಪರ್ ಸ್ಟಾರ್ ಕಿಂಗ್ ಅಕ್ಕಿನೇನಿ ನಾಗಾರ್ಜುನ ಅವರ ಎರಡನೇ ಪುತ್ರ ಅಖಿಲ್ ಅಕ್ಕಿನೇನಿ ಈಗಾಗಲೇ ನಾಲ್ಕು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದು, ಈ ಯಾವ ಚಿತ್ರಗಳೂ ಸಹ ಹೇಳಿಕೊಳ್ಳುವಂತಹ ಫಲಿತಾಂಶವನ್ನು ತಂದುಕೊಟ್ಟಿಲ್ಲ. ಮೊದಲಿಗೆ ಅಖಿಲ್ ಎಂಬ ಆಕ್ಷನ್ ಚಿತ್ರದ ಮೂಲಕ ನಾಯಕನಾಗಿ ಸಿನಿ ಜರ್ನಿ ಆರಂಭಿಸಿದ ಅಖಿಲ್ ಅಕ್ಕಿನೇನಿ ಬಳಿಕ ಹಲೋ, ಮಿಸ್ಟರ್ ಮಜ್ನು ಹಾಗೂ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಚಿತ್ರಗಳ ಮೂಲಕ ಲವರ್ ಬಾಯ್ ಆಗಿಯೂ ಕಾಣಿಸಿಕೊಂಡಿದ್ದರು.

ಲವರ್ ಬಾಯ್ ಪಾತ್ರಗಳೂ ಸಹ ಹೆಚ್ಚೇನೂ ಸದ್ದು ಮಾಡದ ಕಾರಣ ಅಖಿಲ್ ಮತ್ತೆ ಆಕ್ಷನ್ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿಯಲು ಸಜ್ಜಾಗಿದ್ದಾರೆ. ರೇಸ್ ಗುರ್ರಂ ಹಾಗೂ ಧೃವ ರೀತಿಯ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಸುರೇಂದರ್ ರೆಡ್ಡಿ ಜತೆ 'ಏಜೆಂಟ್' ಎಂಬ ಚಿತ್ರಕ್ಕಾಗಿ ಅಖಿಲ್ ಅಕ್ಕಿನೇನಿ ಕೈಜೋಡಿಸಿದ್ದಾರೆ.

Akhil Akkineni and Mammotty starrer Agent movie trailer released

ಈ ಹಿಂದೆ ಟೀಸರ್, ಪೋಸ್ಟರ್, ಮೇಕಿಂಗ್ ಹಾಗೂ ಸ್ಟಾರ್ ಕಾಸ್ಟ್ ಮೂಲಕ ಸದ್ದು ಮಾಡಿ ಹೈಪ್ ಹುಟ್ಟುಹಾಕಿದ್ದ ಏಜೆಂಟ್ ಚಿತ್ರತಂಡ ಈಗ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಹೈಪ್ ಎಂಬ ಬೆಂಕಿಗೆ ಪೆಟ್ರೋಲ್ ಸುರಿದಿದೆ. ಎಕೆ ಎಂಟರ್‌ಟೈನ್‌ಮೆಂಟ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಟ್ರೈಲರ್ ಬಿಡುಗಡೆಗೊಂಡಿದ್ದು, ಟ್ರೈಲರ್ ಔಟ್ ಅಂಡ್ ಔಟ್ ಮಾಸ್ ಅಂಶಗಳಿಂದ ತುಂಬಿ ತುಳುಕುತ್ತಿದೆ.

ಟ್ರೈಲರ್‌ನಲ್ಲಿ ಹೆಚ್ಚಾಗಿ ಆಕ್ಷನ್ ದೃಶ್ಯಗಳೇ ತುಂಬಿದ್ದು, ಚಿತ್ರ ಆಕ್ಷನ್ ಥ್ರಿಲ್ಲರ್ ಎಂಬುದನ್ನು ಸಾರಿ ಹೇಳುತ್ತಿವೆ. ದೇಶಕ್ಕೆ ಪ್ರಮಾದಕರವಾದಂತಹ ಯೋಜನೆಯೊಂದನ್ನು ಮಾಡುತ್ತಿರುವ ಗುಂಪೊಂದನ್ನು ಸದೆ ಬಡಿಯುವಲ್ಲಿ ಭಾರತ ಸೇನೆ ವಿಫಲವಾದಾಗ ಅಖಿಲ್ ಅಕ್ಕಿನೇನಿ ಏಜೆಂಟ್ ಆಗಿ ತಂಡವನ್ನು ಸೇರಿಕೊಳ್ಳಲಿದ್ದು, ಎದುರಾಳಿಗಳನ್ನು ಸದೆ ಬಡಿಯಬೇಕಾದ ಆತನೇ ಬಾರ್ಡರ್ ದಾಟಿ ನಿಯಮ ಮುರಿದಾಗ ಆತನನ್ನು ನೇಮಿಸಿಕೊಂಡ ಸೈನ್ಯವೇ ಆತನನ್ನು ಮುಗಿಸಲು ಮುಂದಾಗಲಿದೆ. ಈ ಸಂದರ್ಭದಲ್ಲಿ ಆತ ಹೇಗೆ ಪಾರಾಗುತ್ತಾನೆ, ತನಗೆ ವಹಿಸಿದ ಕೆಲಸವನ್ನು ಯಶಸ್ವಿಯಾಗಿ ಮುಗಿಸುತ್ತಾನೆ, ಆತ ನಿಯಮ ಮೀರಿದ್ದೇಕೆ ಎಂಬ ಅಂಶಗಳು ಟ್ರೈಲರ್‌ನಲ್ಲಿ ಬಹಿರಂಗವಾಗಿವೆ.

ಹೀಗೆ ಆರ್ಮಿ ಜತೆ ನಾಯಕ ಕೈಜೋಡಿಸಲಿದ್ದು, ಮಿಷನ್ ಒಂದನ್ನು ಪೂರೈಸಲು ಹೋಗಿ ತಾನು ಏನೆಲ್ಲಾ ಸವಾಲುಗಳನ್ನು ಎದುರಿಸಲಿದ್ದಾನೆ ಎಂಬುದು ಚಿತ್ರದ ಒನ್ ಲೈನ್ ಕಥೆ ಎನ್ನಬಹುದಾಗಿದೆ. ಅಖಿಲ್ ಏಜೆಂಟ್ ಪಾತ್ರವನ್ನು ನಿರ್ವಹಿಸಿದ್ದು, ಆರ್ಮಿ ಆಫೀಸರ್ ಆಗಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟ್ಟಿ ನಟಿಸಿದ್ದಾರೆ.

Akhil Akkineni and Mammotty starrer Agent movie trailer released

ಇನ್ನು ಟ್ರೈಲರ್ ತೆಲುಗು ಆಕ್ಷನ್ ಚಿತ್ರಕ್ಕೆ ಬೇಕಾದ ಅದ್ದೂರಿ ಸಂಗೀತ, ಭರ್ಜರಿ ಮೇಕಿಂಗ್ ಹಾಗೂ ಕೌಂಟರ್ ಡೈಲಾಗ್‌ಗಳನ್ನು ಹೊಂದಿದ್ದು, ವಿಲನ್ ನಾಯಕನಿಗೆ ಸಿಂಹ ಬೇಟೆಯಾಡಲು ಹಸಿದ ಹುಲಿ ಬರುತ್ತಿದೆ ಎಂದು ಹೇಳುವ ಡೈಲಾಗ್, ಸ್ಪೈ ಎಂದಮೇಲೆ ಬುಲೆಟ್‌ಗಳು ಮಳೆಯ ಹಾಗೆ ಬೀಳುತ್ತಾ ಇರುತ್ತವೆ, ಯಾವ ಬುಲೆಟ್ ಮೇಲೆ ನಿನ್ನ ಹೆಸರು ಬರೆದಿರುತ್ತೋ ನಿನಗೇ ತಿಳಿದಿರುವುದಿಲ್ಲ ಎಂದು ಮಮ್ಮೂಟ್ಟಿ ಹೇಳುವ ಡೈಲಾಗ್ ಹಾಗೂ ವಿಶೇಷವಾಗಿ ಅಖಿಲ್ ಅಕ್ಕಿನೇನಿ ಹೇಳುವ 'ನೀಚ್ ಕಾಮಿನ್ ಕುತ್ತೆ ಕೆಲಸಗಳನ್ನು ಮಾಡಲು ಬಹಳ ಗಟ್ಸ್ ಬೇಕು, ನನ್ನ ದೃಷ್ಟಿಯಲ್ಲಿ ನಾವೆಲ್ಲರೂ ಸೂಪರ್ ಹೀರೊಸ್' ಎಂಬ ಡೈಲಾಗ್ ಮತ್ತು 'ಕೈನಲ್ಲಿ ಗನ್ನು, ಆಕ್ಷನ್ನು, ಎಮೋಷನ್ನು, ಪ್ರತಿ ನಿಮಿಷ ಗೂಸ್‌ಬಂಪ್ಸ್ ಅಲ್ವಾ ಜೀ' ಎಂಬ ಡೈಲಾಗ್‌ಗಳು ಕಿಕ್ ಕೊಡ್ತಿವೆ.

ಇನ್ನು ಚೇಸಿಂಗ್, ಆಕ್ಷನ್ ಹಾಗೂ ಗನ್ ದೃಶ್ಯಗಳು ಆಕ್ಷನ್ ಸಿನಿಮಾ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕಿಕ್ ಕೊಡ್ತಿದ್ದು, ಆಕ್ಷನ್ ಪ್ರಿಯರಿಗೆ ಹಬ್ಬದೂಟ ಬಡಿಸಲಿದೆ ಎಂದೇ ಹೇಳಬಹುದು. ಇನ್ನು ಏಜೆಂಟ್ ಇದೇ ತಿಂಗಳ 28ರಂದು ಬಿಡುಗಡೆಯಾಗಲಿದೆ.

More from Filmibeat

English summary
Akhil Akkineni and Mammotty starrer Agent movie trailer released. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X