39ವರ್ಷದ ಚೆಲುವೆ ಜೊತೆ 'ಈ ದಿನ'ದಂದು ಮದುವೆಯಾಗಲಿದ್ದಾರೆ ನಾಗಾರ್ಜುನ ಎರಡನೇ ಮಗ ಅಖಿಲ್..!

ಪ್ರೀತಿ ಯಾಕೆ ಹುಟ್ಟುತ್ತದೆ, ಎದೆಯೊಳಗೆ ಎಲ್ಲಿ ಇಳಿಯಿತು ಎಂಬೆಲ್ಲ ಜಿಜ್ಞಾಸೆಗಳು ಅನೇಕ ಕಾಲದಿಂದ ನಡೆದೇ ಇವೆ. ಅದಕ್ಕೊಂದು ಕಾರಣ, ತರ್ಕ, ತತ್ವ ಎನ್ನುವುದು ಇನ್ನೂ ಸಿದ್ಧವಾಗಿಲ್ಲ. ಅದೊಂದು ಅಮೂರ್ತ ಪರಿಕಲ್ಪನೆ. ಊಹೆಗೂ ನಿಲುಕದ ಸಾಧನೆಯೂ ಹೌದು, ವೇದನೆಯೂ ಹೌದು. ಇಂಥಾ ಪ್ರೀತಿಯಲ್ಲಿ ಅಲೆಯಲ್ಲಿ ತೇಲುತ್ತಿರುವ ನಾಗಾರ್ಜುನ ಎರಡನೇ ಮಗ ಅಖಿಲ್ ಅಕ್ಕಿನೇನಿ ಮತ್ತು ಝೈನಾಬ್ ರಾವಡ್ಜಿ ಮದುವೆಯ ಬಂಧನಕ್ಕೊಳಗಾಗಲು ಸಿದ್ಧರಾಗಿದ್ದಾರೆ. ಇಂತಹದ್ದೊಂದು ನ್ಯೂಸು ಸದ್ಯ ಹೈದರಾಬಾದ್‌ನಲ್ಲಿ ಕೇಳಿ ಬರುತ್ತಿದೆ.

ಹೌದು, ಕಳೆದ ವರ್ಷ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈ ಮಾರ್ಚ್‌ 24ಕ್ಕೆ ಸಪ್ತಪದಿ ತುಳಿಯಲಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಇನ್ನು ತಮ್ಮ ಹಿರಿ ಮಗ ನಾಗಚೈತನ್ಯ ಅವರ ಎರಡನೇ ಮದುವೆಯನ್ನು ಕಳೆದ ವರ್ಷ ಅದ್ದೂರಿಯಾಗಿ ಮಾಡಿದ್ದ ನಾಗಾರ್ಜುನ, ಅಖಿಲ್ ಮದ್ವೆಯ ತಯಾರಿಗಳನ್ನು ಈಗಿಂದನೇ ಮಾಡಲು ಶುರು ಮಾಡಿದ್ದಾರೆ. ಭಾರತೀಯ ಚಿತ್ರರಂಗದ ಅನೇಕ ತಾರೆಯರು, ರಾಜಕಾರಣಿಗಳು, ಕ್ರಿಕೆಟ್ ಆಟಗಾರರು ಮತ್ತು ಉದ್ಯಮಿಗಳು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

Akhil Akkineni and Zainab Ravdjee s marriage date is fixed Here are the details

ಇನ್ನೂ ಇದು ಡೆಸ್ಟಿನೇಶನ್ ವೆಡ್ಡಿಂಗ್ ಕಾಲ. ತಮ್ಮ ಇಷ್ಟದ ಸ್ಥಳದಲ್ಲಿ, ದೇಶದಲ್ಲಿ ಮದುವೆಯಾಗುವ ಕಾಲ. ಪ್ರಿಯಾಂಕ ಚೋಪ್ರಾ ಅವರಿಂದ ಹಿಡಿದು ದೀಪಿಕಾ ಪಡುಕೋಣೆಯವರೆಗೆ, ಅನುಷ್ಕಾ ಶರ್ಮಾ ಅವರಿಂದ ಹಿಡಿದು ಪರಿಣಿತಿ ಚೋಪ್ರಾವರೆಗೆ ಅನೇಕರು ಈ ಪರಿಕಲ್ಪನೆಯಡಿಯಲ್ಲಿಯೇ ಮದುವೆಯಾಗಿದ್ದಾರೆ. ಅಖಿಲ್ ಅಕ್ಕಿನೇನಿ ಮತ್ತು ಝೈನಾಬ್ ಕೂಡ ಈ ಲಿಸ್ಟ್‌ಗೆ ಸೇರ್ತಾರಾ ಅಥವಾ ತಮ್ಮ ಅನ್ನಪೂರ್ಣ ಸ್ಟುಡಿಯೋದಲ್ಲಿಯೇ ಮದುವೆಯಾಗುತ್ತಾರಾ ಎನ್ನುವ ಚಿಂತೆ ಈಗ ಅನೇಕರನ್ನು ಕಾಡುತ್ತಿದೆ.

ಅಂದ್ಹಾಗೇ ಎರಡು ವರ್ಷದ ಹಿಂದೆ ಅಖಿಲ್ ಮತ್ತು ಝೈನಾಬ್ ಮೊದಲ ಬಾರಿ ಭೇಟಿಯಾಗಿದ್ದರು. ಅಲ್ಲಿಂದ ಶುರುವಾದ ಸ್ನೇಹ ಆ ನಂತರ ಪ್ರೀತಿಗೆ ತಿರುಗಿತು. ಈಗ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಮದುವೆಯಾಗಲು ಸಿದ್ಧರಾಗಿದ್ದಾರೆ.

ಇನ್ನು ಝೈನಾಬ್ ತಂದೆ ಜುಲ್ಫಿ ಪ್ರಸಿದ್ಧ ಕೈಗಾರಿಕೋದ್ಯಮಿ. ಇನ್ನೂ ಝೈನಾಬ್ ಹುಟ್ಟಿದ್ದು ಬೆಳೆದಿದ್ದು ಹೈದ್ರಾಬಾದ್‌ನಲ್ಲಾದರೂ ಸದ್ಯಕ್ಕೆ ಮುಂಬೈನಲ್ಲಿ ಝೈನಾಬ್ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ಚಿತ್ರಕಲೆಯ ಮೂಲಕ ಎಲ್ಲರ ಗಮನವನ್ನೂ ಸೆಳೆದಿದ್ದಾರೆ. ರಿಫ್ಲೆಕ್ಷನ್ಸ್ ಸೇರಿ ದುಬೈನಿಂದ ಹಿಡಿದು ಲಂಡನ್‌ವರೆಗೆ ಅನೇಕ ಪ್ರದರ್ಶನಗಳಲ್ಲಿ ಇವರ ಕಲಾಕೃತಿ ಪ್ರದರ್ಶನಗೊಂಡಿದೆ. ಇನ್ನೂ ಎಂ.ಎಫ್ ಹುಸೇನ್ ನಿರ್ದೇಶನದಲ್ಲಿ 2004ರಲ್ಲಿ ತೆರೆಗೆ ಬಂದಿದ್ದ ಮೀನಾಕ್ಷಿ ; ಎ ಟೇಲ್ ಆಫ್ ತ್ರೀ ಸಿಟೀಸ್ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಕೂಡ ಝೈನಾಬ್ ನಿರ್ವಹಿಸಿದ್ದರು.

ವಿಶೇಷ ಅಂದರೆ ಅಖಿಲ್ ಅವರಿಗಿಂತ ಝೈನಾಬ್ ವಯಸ್ಸಿನಲ್ಲಿ ದೊಡ್ಡವರು. ಅಖಿಲ್‌ ಅಕ್ಕಿನೇನಿ ಅವರಿಗೆ ಈಗ ಮೂವತ್ತು ವರ್ಷವಾದರೆ, ಝೈನಾಬ್ ಅವರಿಗೆ ಈಗ ಮೂವತ್ತೊಂಬತ್ತು ವರ್ಷ. ಇನ್ನುಳಿದಂತೆ ಝೈನಾಬ್ ಜೊತೆ ಮದುವೆಯಾಗಲು ಸಿದ್ದವಾದ ಅಖಿಲ್ ಈ ಹಿಂದೆ ಶ್ರಿಯಾ ಭೂಪಾಲ್ ಅವರನ್ನು ಪ್ರೀತಿಸುತ್ತಿದ್ದರು. ಶ್ರಿಯಾ ಜೊತೆ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿದ್ದರು. ಇನ್ನೇನು ಇಬ್ಬರು ಮದುವೆಯಾಗಲಿದ್ದಾರೆ ಎನ್ನುವಷ್ಟರಲ್ಲಿ ಸಂಬಂಧ ಮುರಿದು ಬಿದ್ದಿತ್ತು. ಒಟ್ನಲ್ಲಿ ಸದ್ಯಕ್ಕೆ ತಮಗಿಂತ ಒಂಬತ್ತು ವರ್ಷ ದೊಡ್ಡವರಾದ ಝೈನಾಬ್ ಜೊತೆ ಅಖಿಲ್ ಮದುವೆಯಾಗಲು ಸಿದ್ಧರಾಗಿದ್ದಾರೆ. ಮಾರ್ಚ್‌ನಲ್ಲಿ ಮದುವೆ ನಡೆಯಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ತಮ್ಮ ಮಗನ ಮದುವೆಯ ಬಗ್ಗೆ ನಾಗಾರ್ಜುನ ಅಧಿಕೃತ ಘೋಷಣೆಯನ್ನು ಇನ್ನೂ ಮಾಡಬೇಕಿದೆ.

More from Filmibeat

Read more about: akhil akkineni marriage tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X