ಅಖಿಲ್ ಅಕ್ಕಿನೇನಿ ಸೋಲಿಗೆ ಅಪ್ಪನೇ ಕಾರಣ: ನಾಗಾರ್ಜುನ ಮಾಡ್ತಿರೋದೇನು ಗೊತ್ತಾ?
ನಟ ಅಕ್ಕಿನೇನಿ ನಾಗಾರ್ಜುನ ತೆಲುಗಿನ ಸ್ಟಾರ್ ನಟ. ನಾಗಾರ್ಜುನ ಬಳಿಕ ಅವರ ಇಬ್ಬರೂ ಪುತ್ರರು ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ನಾಗಚೈತನ್ಯ ಸಿನಿಮಾರಂಗದಲ್ಲಿ ಒಂದು ಮಟ್ಟಿಗೆ ಹೆಸರು ಗಳಿಸಿದ್ದಾರೆ. ಅವರ ಸಿನಿಮಾಗಳು ಕೂಡ ಹಿಟ್ ಆಗುತ್ತವೆ. ಆದರೆ ನಾಗಾರ್ಜುನ ಎರಡನೇ ಪುತ್ರನ ಅದೃಷ್ಟವೇ ಸರಿ ಇಲ್ಲ. ಯಾವ ಸಿನಿಮಾ ಮಾಡಿದ್ರು ಹಿಟ್ ಲಿಸ್ಟ್ ಸೇರುತ್ತಿಲ್ಲ.
ಅಖಿಲ್ ಅಕ್ಕಿನೇನಿ ಮುಂದೆ ದೊಡ್ಡ ಸವಾಲಿದೆ. ಅಖಿಲ್ ಲಾಂಚ್ ಆದ ಚಿತ್ರದಿಂದಲೇ ಸೋಲನ್ನು ಅನುಭವಿಸಿದ್ದಾರೆ. ಆ ಬಳಿಕ ಬಂದ ಚಿತ್ರಗಳು ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ಸೋತಿವೆ. ಹಾಗಾಗಿ ಈಗ ಅಖಿಲ್ ಹಿಟ್ ಸಿನಿಮಾ ಕೊಡುವ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. 'ಏಜೆಂಟ್' ಚಿತ್ರದ ಮೂಲಕ ಹೊಸ ಪ್ರಯೋಗಕ್ಕ ಅಖಿಲ್ ಮುಂದಾಗಿದ್ದಾರೆ.
ಮಗ ಅಖಿಲ್ ಸಿನಿಮಾ ವಿಚಾರದಲ್ಲಿ ನಟ ನಾಗಾರ್ಜುನ ಹೆಚ್ಚು ತಲೆಕೆಡಿಸಿಕೊಂಡಿದ್ದಾರಂತೆ. ಈ ಬಾರಿ ಅಖಿಲ್ ಸಿನಿಮಾವನ್ನು ಗೆಲ್ಲಿಸಲೇ ಬೇಕೆಂದು ಪಣತೊಟ್ಟಂತೆ ಕಾಣುತ್ತಿದೆ. ಹಾಗಾಗಿ ಅಖಿಲ್ ಮುಂದಿನ ಚಿತ್ರದ ವಿಚಾರದಲ್ಲಿ ನಾಗಾರ್ಜುನ ಹೆಚ್ಚು ಆಸಕ್ತಿ ತೋರುತ್ತಿದ್ದಾರಂತೆ. ಆದರೆ ಇದರಿಂದ ಚಿತ್ರ ತಂಡದಲ್ಲಿ ಗೊಂದಲ ಶುರುವಾಗಿದೆಯಂತೆ.

'ಏಜೆಂಟ್' ಚಿತ್ರದ ವಿಚಾರದಲ್ಲಿ ಮೂಗು ತೂರಿಸಿದ ನಾಗಾರ್ಜುನ!
ಅಖಿಲ್ ಅಭಿನಯದ 'ಏಜೆಂಟ್' ಸಿನಿಮಾ ಈಗಾಗಲೇ ಒಂದಷ್ಟು ಚಿತ್ರೀಕರಣವನ್ನು ಮುಗಿಸಿದೆ. ಚಿತ್ರೀಕರಣ ಆದ ದೃಶ್ಯಗಳನ್ನು ಚಿತ್ರತಂಡ ನಾಗಾರ್ಜುನ ಅವರಿಗೆ ತೋರಿಸಿದೆಯಂತೆ. ಆದರೆ ಅವರಿಗೆ ಅದು ಇಷ್ಟ ಆಗಿಲ್ಲವಂತೆ. ಹಾಗಾಗಿ ಒಂದಷ್ಟು ಬದಲಾವಣೆಗಳು ಮಾಡಿಕೊಳ್ಳಲು ಹೇಳಿದ್ದಾರಂತೆ. ಅಷ್ಟೆ ಅಲ್ಲಾ ಅಖಿಲ್ ಭಾಗದ ಒಂದಷ್ಟು ದೃಶ್ಯಗಳನ್ನು ಬದಲಿಸಲು ಹೇಳಿದ್ದು, ಸ್ಕ್ರಿಪ್ಟ್‌ನಲ್ಲಿ ಬದಲಾವಣೆ ಮಾಡಲು ಆಗ್ರಹಿಸಿದ್ದಾರಂತೆ.

ನಾಗಾರ್ಜುನ ನಡೆಗೆ ನಿರ್ದೇಶಕ ಸುರೇಂದರ್ ರೆಡ್ಡಿ ಬೇಸರ!
ನಾಗಾರ್ಜುನ ಒಂದೆರಡು ಬಾರಿ ಸಲಹೇ ನೀಡಿದ್ದಲ್ಲ. ಪದೇ ಪದೇ ಪ್ರತಿಯೊಂದು ವಿಚಾರದಲ್ಲೂ ಬದಲಾವಣೆ ಮಾಡಲು ಹೇಳುತ್ತಿದ್ದಾರಂತೆ. ಚಿತ್ರದ ಕ್ರಿಯೇಟಿವ್ ವಿಚಾರದಲ್ಲಿ ನಿರ್ದೇಶಕ ಸುರೇಂದರ್ ರೆಡ್ಡಿ ಮತ್ತು ನಾಗಾರ್ಜುನ ನಡುವೆ ವ್ಯತ್ಯಾಸ ಕಂಡು ಬರುತ್ತಿದೆಯಂತೆ. ನಾಗಾರ್ಜುನ ಸಲಹೆಗಳನ್ನು ಒಪ್ಪಿಕೊಳ್ಳಲು ನಿರ್ದೇಶಕ ಸಿದ್ಧರಿಲ್ಲವಂತೆ. ಹಾಗಾಗಿ 'ಏಜೆಂಟ್' ಚಿತ್ರದ ಶೂಟಿಂಗ್ ತಡವಾಗುತ್ತೆಯಂತೆ. ನಿರ್ದೇಶಕ ಮತ್ತು ನಾಗಾರ್ಜುನ ನಡುವೆ ಚಿತ್ರ ನಲುಗಿ ಹೋಗಿದೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ನಾಗಾರ್ಜುನ ಸಲಹೆಯಿಂದ 'ಏಜೆಂಟ್' ಚಿತ್ರೀಕರಣ ಸ್ಥಗಿತ!
ನಿರ್ದೇಶಕ ಸುರೇಂದರ್ ರೆಡ್ಡಿ ಈಗಾಗಲೇ ಒಬ್ಬ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ಈ ಹಿಂದೆ ಅವರು ಚಿರಂಜೀವಿಗಾಗಿ ಮಾಡಿದ 'ಸೈರಾ' ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಆದರೆ ಇಂತಹ ನಿರ್ದೇಶಕನ ಮೇಲೆ ನಾಗಾರ್ಜುನ ಅವರಿಗೆ ಭರವಸೆ ಇಲ್ಲವಂತೆ. ಹಾಗಾಗಿ ಅವರು ಸ್ಕ್ರಿಪ್ಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿದ್ದಾರಂತೆ. ಇದೇ ಕಾರಣಕ್ಕೆ ಅಖಿಲ್ ಅವರ 'ಏಜೆಂಟ್' ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆಯಂತೆ. ಚಿತ್ರದ ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ತಕ್ಷಣವೇ ಮಾಡಬೇಕೆಂದು ನಾಗಾರ್ಜುನ್ ಅವರು ಒತ್ತಾಯಿಸಿದ್ದಾರಂತೆ. ಇದರಿಂದ ಸುರೇಂದರ್ ರೆಡ್ಡಿಗೆ ಕಿರಿಕಿರಿ ಉಂಟಾಗುತ್ತಿದೆಯಂತೆ.

ಅಖಿಲ್ ಸೋಲಿಗೆ ಅಪ್ಪನೇ ಕಾರಣವಂತೆ!
ಇನ್ನು ಅಖಿಲ್ ಸೋಲಿಗೆ ನಾಗಾರ್ಜುನ ಸಲಹೆಗಳೇ ಕಾರಣ ಎನ್ನಲಾಗುತ್ತಿದೆ. ಅಖಿಲ್ ಅಭಿನಯದ 'ಅಖಿಲ್', 'ಹಲೋ' ಮತ್ತು 'ಮಿಸ್ಟರ್ ಮಜ್ನು' ಮುಂತಾದ ಚಲನಚಿತ್ರಗಳಿಗೆ ನಾಗಾರ್ಜುನ ಸಾಕಷ್ಟು ಸಲಹೆಗಳನ್ನು ಕೊಟ್ಟಿದ್ದಾರಂತೆ. ಆದರೆ ಅವುಗಳಲ್ಲಿ ಯಾವುದೂ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿಲ್ಲ. ಹಿರಿಯ ನಾಯಕ ನಟ ನಾಗಾರ್ಜುನ ಆಲೋಚನಾ ಪ್ರಕ್ರಿಯೆಯು ಹೊಸ ತಲೆಮಾರಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲ ಆಗುತ್ತಿವೆ ಎನ್ನುವ ಮಾತು ಕೇಳಿ ಬರ್ತಿದೆ.


Click it and Unblock the Notifications











