ಮಾಜಿ ಅತ್ತಿಗೆ ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಬಗ್ಗೆ ಅಖಿಲ್ ಕಾಮೆಂಟ್ಸ್ ವೈರಲ್

ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ತೆಲುಗಿನಲ್ಲಿ ಎಲ್ಲಾ ಮಹಿಳಾ ಪ್ರಧಾನ ಸಿನಿಮಾಗಳ ದಾಖಲೆ ಮುರಿದು ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ. ನಂದಿನಿ ರೆಡ್ಡಿ ನಿರ್ದೇಶನದ ಚಿತ್ರವನ್ನು ಸ್ವತಃ ಸ್ಯಾಮ್ ನಿರ್ಮಿಸಿದ್ದಾರೆ. ಇದೀಗ ಚಿತ್ರದ ಬಗ್ಗೆ ನಟ ಅಖಿಲ್ ಅಕ್ಕಿನೇನಿ ಪ್ರತಿಕ್ರಿಯಿಸಿದ್ದಾರೆ.

Akhil Akkineni comments on Samantha-

ಆಕ್ಷನ್ ಥ್ರಿಲ್ಲರ್ 'ಮಾ ಇಂಟಿ ಬಂಗಾರಂ' ಚಿತ್ರಕ್ಕೆ ಸಮಂತಾ ಪತಿ ರಾಜ್ ನಿಡುಮೊರು ಕಥೆ, ಚಿತ್ರಕಥೆ ಬರೆದಿದ್ದಾರೆ. ಜಬರ್ದಸ್ತ್ ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಸ್ಯಾಮ್ ಅಬ್ಬರಿಸಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಅದರಲ್ಲೂ ಮಹಿಳಾ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ಬೆಂಬಲಿಸಿದ್ದಾರೆ. 'ಲೆನಿನ್' ಪ್ರಚಾರದಲ್ಲಿ ಅಖಿಲ್ ಅಕ್ಕಿನೇನಿ ಬ್ಯುಸಿಯಾಗಿದ್ದಾರೆ. ಮಾಜಿ ಅತ್ತಿಗೆ ಸಿನಿಮಾ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಇನ್ನು ಸಿನಿಮಾ ನೋಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ನಾಗಚೈತನ್ಯಾ ಹಾಗೂ ಸಮಂತಾ ಪ್ರೀತಿಸಿ ಮದುವೆ ಆಗಿದ್ದು ಬಳಿಕ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ಡಿವೋರ್ಸ್ ಪಡೆದು ದೂರಾಗಿದ್ದರು. ಇದೀಗ ಇಬ್ಬರೂ ಬೇರೆ ವ್ಯಕ್ತಿಗಳನ್ನು ಪ್ರೀತಿಸಿ 2ನೇ ಮದುವೆ ಆಗಿದ್ದಾರೆ. ಚೈತು ಇಂದ ದೂರಾಗಿದ್ದರೂ ಸಹೋಹರ ಅಖಿಲ್ ಜೊತೆ ಸ್ಯಾಮ್ ಒಡನಾಟ ಮುಂದುವರೆಸಿದ್ದಾರೆ. ಅಖಿಲ್ ಹುಟ್ಟುಹಬ್ಬಕ್ಕೂ ಸಮಂತಾ ಹಿಂದೆ ಶುಭ ಕೋರಿದ್ದರು. 'ಮಾ ಇಂಟಿ ಬಂಗಾರಂ' ಸಿನಿಮಾ ಸಕ್ಸಸ್ ಬಗ್ಗೆ ಅಖಿಲ್ ಮೆಚ್ಚಿಕೊಂಡಿದ್ದಾರೆ.

ಜೂನ್ 19ರಂದು ತೆರೆಗೆ ಬಂದಿದ್ದ 'ಮಾ ಇಂಟಿ ಬಂಗಾರಂ' ಚಿತ್ರ 80 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಅನುಷ್ಕಾ ಶೆಟ್ಟಿ ನಟನೆಯ 'ಅರುಂಧತಿ' ಸಿನಿಮಾ ಬಾಕ್ಸಾಫೀಸ್ ದಾಖಲೆ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಟಿವಿ5 ತೆಲುಗು ಸಂದರ್ಶನದಲ್ಲಿ ಸಿನಿಮಾ ಬಗ್ಗೆ ಅಖಿಲ್ ಮಾತನಾಡಿದ್ದಾರೆ. "ನಾನು 'ಲೆನಿನ್' ಪ್ರಚಾರದಲ್ಲಿ ಬ್ಯುಸಿ ಇರುವುದರಿಂದ 'ಮಾ ಇಂಟಿ ಬಂಗಾರಂ' ಸಿನಿಮಾ ನೋಡೊಕೆ ಸಾಧ್ಯವಾಗ್ಲಿಲ್ಲ. ಆದ್ರೆ ಟ್ರೈಲರ್ ನೋಡಿದ್ದೀನಿ. ಬಹಳ ಇಷ್ಟವಾಯ್ತು. ವೈಬ್ ಸಖತ್ತಾಗಿದೆ. ಸಿನಿಮಾ ಗೆಲುವಿಗೆ ಇಡೀ ತಂಡಕ್ಕೆ ಅಭಿನಂದನೆ. ಬಹಳ ಇಂಟ್ರೆಸ್ಟಿಂಗ್ ಆಗಿದೆ. ಮನೆ ಒಳಗೆ ಇರುವ ಮಹಿಳೆ ಆ ರೀತಿ ಆಕ್ಷನ್ ಮಾಡೋದು, ಮಹಿಳಾ ಪಾತ್ರ ಅಂತಹ ಆಕ್ಷನ್ ಅದ್ಭುತ. ಒಟ್ಟಾರೆ ಸ್ಯಾಮ್ ಶ್ರಮ ಮೆಚ್ಚಬೇಕು, ಇಡೀ ತಂಡಕ್ಕೆ ಒಳ್ಳೆದಾಗ್ಲಿ" ಎಂದಿದ್ದಾರೆ.

ಅಖಿಲ್ ನಟನೆಯ 'ಲೆನಿನ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಮಾಜಿ ಅತ್ತಿಗೆ ರೀತಿಯಲ್ಲೇ ಅಖಿಲ್‌ಗೆ ಕೂಡ ಬ್ರೇಕ್ ಬೇಕಿದೆ. ಈವರೆಗೆ ಅವರು ನಟಿಸಿದ ಯಾವುದೇ ಸಿನಿಮಾ ಗೆದ್ದಿಲ್ಲ. 'ಲೆನಿನ್' ಸಿನಿಮಾ ಗೆಲ್ಲಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಅದ್ಯಾಕೋ ನಾಗಾರ್ಜುನ ಕಿರಿಮಗನ ಸಿನಿಜರ್ನಿ ಅಷ್ಟು ಚೆನ್ನಾಗಿಲ್ಲ. 'ಅಖಿಲ್' ಎಂಬ ಸಿನಿಮಾ ಮೂಲಕವೇ ಅವರು ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ 'ಹೆಲೋ', 'ಮಿ. ಮಜ್ನು', ಮೋಸ್ಟ್ ಎಲಿಜಬಲ್ ಬ್ಯಾಚುಲರ್' ಹಾಗೂ 'ಏಜೆಂಟ್' ಸಿನಿಮಾಗಳಲ್ಲಿ ನಟಿಸಿದ್ದರು. ಯಾವುದೇ ಸಿನಿಮಾ ಗೆಲ್ಲಲಿಲ್ಲ.

ಇಷ್ಟು ದಿನ ಲವರ್ ಬಾಯ್ ಆಗಿ ನಟಿಸುತ್ತಿದ್ದ ಅಖಿಲ್ ಇದೇ ಮೊದಲ ಬಾರಿಗೆ ರಾಯಲಸೀಮ ಹಿನ್ನೆಲೆಯ ಹಳ್ಳಿ ಮಾಸ್ ಎಂಟರ್‌ಟೈನರ್ 'ಲೆನಿನ್' ಚಿತ್ರದಲ್ಲಿ ನಟಿಸಿದ್ದಾರೆ. ಮುಂದಿನ ವಾರವೇ ಸಿನಿಮಾ ತೆರೆಗೆ ಬರಲಿದೆ. ಭಾಗ್ಯಶ್ರೀ ಬ್ರೋಸ್ ನಾಯಕಿಯಾಗಿ ಮಿಂಚಿದ್ದಾರೆ. ಶಿವಾಜಿ, ಸುನಿಲ್, ಬ್ರಹ್ಮಾಜಿ, ಈಶ್ವರಿ ರಾವ್ ಹಾಗೂ ಗೆಟಪ್ ಶ್ರೀನು ತಾರಾಗಣದಲ್ಲಿದ್ದಾರೆ. ಮುರಳಿ ಕಿಶೋರ್ ಅಬ್ಬರೂ ಆಕ್ಷನ್ ಕಟ್ ಹೇಳಿದ್ದು ಸ್ವತಃ ನಾಗಾರ್ಜುನ ಬಂಡವಾಳ ಹೂಡಿದ್ದಾರೆ.

ಮತ್ತೊಂದು ಕಡೆ 'ಮಾ ಇಂಟಿ ಬಂಗಾರಂ' ಸಿನಿಮಾ ಸಕ್ಸಸ್ ಬೆನ್ನಲ್ಲೇ ಸ್ಯಾಮ್ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಸಮಂತಾ ಈಗ ಗರ್ಭಿಣಿಯಾಗಿದ್ದಾರೆ. ಇತ್ತೀಚೆಗೆ ಈ ಸಿಹಿಸುದ್ದಿ ಹಂಚಿಕೊಂಡಿದ್ದರು. ಹಾಗಾಗಿ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. 'ಮಾ ಇಂಟಿ ಬಂಗಾರಂ' ಸೀಕ್ವೆಲ್ ಮಾಡುವುದಾಗಿ ಕೂಡ ಹೇಳಿದ್ದಾರೆ. ಅದಕ್ಕಾಗಿ ಅಭಿಮಾನಿಗಳು ಕೆಲ ದಿನ ಕಾಯಬೇಕು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X