39 ವರ್ಷದ ಚೆಲುವೆಗೆ ಮನ ಸೋತರಾ ನಾಗಾರ್ಜುನ ಮಗ ? ಅಖಿಲ್‌ ಮತ್ತು ಝೈನಾಬ್ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ?

ಪ್ರೀತಿ ಯಾಕೆ ಹುಟ್ಟುತ್ತದೆ, ಎದೆಯೊಳಗೆ ಎಲ್ಲಿ ಇಳಿಯಿತು ಎಂಬೆಲ್ಲ ಜಿಜ್ಞಾಸೆಗಳು ಅನೇಕ ಕಾಲದಿಂದ ನಡೆದೇ ಇವೆ. ಅದಕ್ಕೊಂದು ಕಾರಣ, ತರ್ಕ, ತತ್ವ ಎನ್ನುವುದು ಇನ್ನೂ ಸಿದ್ಧವಾಗಿಲ್ಲ. ಅದೊಂದು ಅಮೂರ್ತ ಪರಿಕಲ್ಪನೆ. ಊಹೆಗೂ ನಿಲುಕದ ಸಾಧನೆಯೂ ಹೌದು, ವೇದನೆಯೂ ಹೌದು. ಅದರ ಸೆಳೆತಕ್ಕೆ ಸಿಕ್ಕು ದಡ ಸೇರಿದವರು ಹಲವರಿದ್ದರೆ ಗುರಿ ಮುಟ್ಟಲಾಗದೇ ದೇವದಾಸರಾದವರು ಅನೇಕರು. ಕೆಲವರಿಗೆ ಇದು ವರವಾದರೆ ಹಲವರಿಗೆ ಇದು ಹೋರಾಟ. ಇದಕ್ಕೆ ಅಖಿಲ್ ಅಕ್ಕಿನೇನಿ ಸದ್ಯದ ಉದಾಹರಣೆ.

ಹೌದು, ನಾಗಾರ್ಜುನ ಎರಡನೇ ಮಗ ಅಖಿಲ್ ಅಕ್ಕಿನೇನಿ ಮತ್ತು ಝೈನಾಬ್ ರಾವಡ್ಜಿ ಪರಸ್ಪರ ಪ್ರೀತಿಸಿದ್ದಾರೆ. ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿದ್ದಾರೆ. ಆದರೆ, ಅಖಿಲ್ ಅಕ್ಕಿನೇನಿ ಮತ್ತು ಝೈನಾಬ್ ಅವರ ಈ ಪ್ರೇಮ ಕಥೆಗೆ ಅನೇಕರು ಈಗ ತಕರಾರು ತೆಗೆಯುತ್ತಿದ್ದಾರೆ. ಇಬ್ಬರನ್ನು ನಿಂದಿಸುತ್ತಿದ್ದಾರೆ. ಟ್ರೋಲ್ ಹೆಸರಿನಲ್ಲಿ ಅಖಿಲ್ ಮತ್ತು ಝೈನಾಬ್ ಭಾವನೆಗಳಿಗೆ ನೋವುಂಟು ಮಾಡುತ್ತಿದ್ಧಾರೆ. ಇದಕ್ಕೆ ಕಾರಣ ಇಬ್ಬರ ನಡುವೆ ಇರುವ ವಯಸ್ಸಿನ ಅಂತರ.

Akhil Akkineni turns off comments following backlash over his age gap with fianc e Zainab Ravdjee

ಹೌದು, ಅಸಲಿಗೆ ಅಖಿಲ್ ಮತ್ತು ಝೈನಾಬ್ ನಡುವೆ ಒಂಬತ್ತು ವರ್ಷಗಳ ಅಂತರ ಇದೆ. ವಿಶೇಷ ಅಂದರೆ ಅಖಿಲ್ ಅವರಿಗಿಂತ ಝೈನಾಬ್ ವಯಸ್ಸಿನಲ್ಲಿ ದೊಡ್ಡವರು. ಅಖಿಲ್‌ ಅಕ್ಕಿನೇನಿ ಅವರಿಗೆ ಈಗ ಮೂವತ್ತು ವರ್ಷವಾದರೆ, ಝೈನಾಬ್ ಅವರಿಗೆ ಈಗ ಮೂವತ್ತೊಂಬತ್ತು ವರ್ಷ. ಹೀಗಾಗಿಯೇ ಪ್ರೀತಿ ಇದ್ದಲ್ಲಿ ವಯಸ್ಸಿನ ಹಂಗೆಲ್ಲಿ ಎಂದೆಲ್ಲ ಮಾತನಾಡುವವರೆಲ್ಲ ಈಗ ಅಖಿಲ್ ಮತ್ತು ಝೈನಾಬ್ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆ ಮಾತನಾಡುತ್ತಿದ್ದಾರೆ.

ಇನ್ನೂ .. ಝೈನಾಬ್ ಜೊತೆ ಮದುವೆಯಾಗಲು ಸಿದ್ದವಾದ ಅಖಿಲ್ ಈ ಹಿಂದೆ ಶ್ರಿಯಾ ಭೂಪಾಲ್ ಅವರನ್ನು ಪ್ರೀತಿಸುತ್ತಿದ್ದರು. ಶ್ರಿಯಾ ಜೊತೆ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿದ್ದರು. ಇನ್ನೇನು ಇಬ್ಬರು ಮದುವೆಯಾಗಲಿದ್ದಾರೆ ಎನ್ನುವಷ್ಟರಲ್ಲಿ ಸಂಬಂಧ ಮುರಿದು ಬಿದ್ದಿತ್ತು. ಇನ್ನೂ ವಿಶೇಷ ಅಂದರೆ ಆಗ ಅಖಿಲ್‌ಗೆ 23 ವರ್ಷ ವಯಸ್ಸಾಗಿದ್ದರೆ ಶ್ರಿಯಾ ಅವರಿಗೆ 26 ವರ್ಷ ವಯಸ್ಸಾಗಿತ್ತು. ಈ ವಿಚಾರವನ್ನು ಕೂಡ ಈಗ ನೆನಪು ಮಾಡಿಕೊಳ್ಳುತ್ತಿರುವ ಅನೇಕರು ನಿಮಗಿಂತ ವಯಸ್ಸಿನಲ್ಲಿ ಕಿರಿಯರಾದ ಹುಡುಗಿಯರು ಯಾರು ನಿಮಗೆ ಸಿಗುವುದೇ ಇಲ್ಲ ಎಂದು ಅಖಿಲ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.ಆಗ ಶ್ರಿಯಾ ಈಗ ಝೈನಾಬ್, ವಯಸ್ಸಿನಲ್ಲಿ ಒಂಬತ್ತು ವರ್ಷ ದೊಡ್ಡವರಾಗಿರುವ ಝೈನಾಬ್ ಜೊತೆ ಮದುವೆಯಾಗುವುದು ಎಷ್ಟು ಸರಿ ಎನ್ನುತ್ತಿದ್ದಾರೆ. ವಯಸ್ಸಿನ ವಿಚಾರವನ್ನು ಮುಂದಿಟ್ಟುಕೊಂಡು ಅಖಿಲ್ ಅಕ್ಕಿನೇನಿ ವಿರುದ್ಧ ಅನೇಕರು ಕಿಡಿ ಕಾರುತ್ತಿದ್ದಾರೆ. ಹೀಗಾಗಿಯೇ ಬೇಸತ್ತಿರುವ ಅಖಿಲ್ ಅಕ್ಕಿನೇನಿ ತಮ್ಮ ಇನ್ಸ್ಟಾಗ್ರಾಂನ ಕಾಮೆಂಟ್ ಸೆಕ್ಷನ್‌ನ ಆಫ್ ಮಾಡಿದ್ದಾರೆ.

ಅಂದ್ಹಾಗೇ ಝೈನಾಬ್ ತಂದೆ ಜುಲ್ಫಿ ಪ್ರಸಿದ್ಧ ಕೈಗಾರಿಕೋದ್ಯಮಿ. ಇನ್ನೂ ಝೈನಾಬ್ ಹುಟ್ಟಿದ್ದು ಬೆಳೆದಿದ್ದು ಹೈದ್ರಾಬಾದ್‌ನಲ್ಲಾದರೂ ಸದ್ಯಕ್ಕೆ ಮುಂಬೈನಲ್ಲಿ ಝೈನಾಬ್ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ಚಿತ್ರಕಲೆಯ ಮೂಲಕ ಎಲ್ಲರ ಗಮನವನ್ನೂ ಸೆಳೆದಿದ್ದಾರೆ. ರಿಫ್ಲೆಕ್ಷನ್ಸ್ ಸೇರಿ ದುಬೈನಿಂದ ಹಿಡಿದು ಲಂಡನ್‌ವರೆಗೆ ಅನೇಕ ಪ್ರದರ್ಶನಗಳಲ್ಲಿ ಇವರ ಕಲಾಕೃತಿ ಪ್ರದರ್ಶನಗೊಂಡಿದೆ. ಇನ್ನೂ ಎಂ.ಎಫ್ ಹುಸೇನ್ ನಿರ್ದೇಶನದಲ್ಲಿ 2004ರಲ್ಲಿ ತೆರೆಗೆ ಬಂದಿದ್ದ ಮೀನಾಕ್ಷಿ ; ಎ ಟೇಲ್ ಆಫ್ ತ್ರೀ ಸಿಟೀಸ್ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಕೂಡ ಝೈನಾಬ್ ನಿರ್ವಹಿಸಿದ್ದರು.

ಇನ್ನುಳಿದಂತೆ ಎರಡು ವರ್ಷದ ಹಿಂದೆ ಅಖಿಲ್ ಮತ್ತು ಝೈನಾಬ್ ಮೊದಲ ಬಾರಿ ಭೇಟಿಯಾಗಿದ್ದರು. ಅಲ್ಲಿಂದ ಶುರುವಾದ ಸ್ನೇಹ ಆ ನಂತರ ಪ್ರೀತಿಗೆ ತಿರುಗಿತು. ಈಗ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಮದುವೆಯಾಗಲಿದ್ದಾರೆ. ಒಟ್ನಲ್ಲಿ ಸದ್ಯಕ್ಕೆ ತಮಗಿಂತ ಒಂಬತ್ತು ವರ್ಷ ದೊಡ್ಡವರಾದ ಝೈನಾಬ್ ಜೊತೆ ಅಖಿಲ್ ಮದುವೆಯಾಗಲು ಸಿದ್ಧರಾಗಿದ್ದಾರೆ. ಈ ವಯಸ್ಸಿನ ಅಂತರದಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗಿದ್ದಾರೆ. ಟ್ರೋಲ್ ಆಗುತ್ತಿದ್ದಾರೆ. ಮದುವೆ ಬಳಿಕ ತನ್ನ ವೃತ್ತಿ ಹಾಗೂ ಪರ್ಸನಲ್ ಲೈಫ್ ಅನ್ನು ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X