For Quick Alerts
  ALLOW NOTIFICATIONS  
  For Daily Alerts

  ಅಪ್ಪ ನಾಗಾರ್ಜುನ ಸಿನಿಮಾದ ಪ್ರೀ ರಿಲೀಸ್‌ ಈವೆಂಟ್‌ಗೆ ಮಕ್ಕಳೇ ಗೆಸ್ಟ್!

  |

  ಟಾಲಿವುಡ್‌ನಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಇರುವ ಬೆಲೆನೇ ಬೇರೆ. ಈ ಕುಟುಂಬದಿಂದ ಬಂದ ನಟರೆಲ್ಲರೂ ತೆಲುಗು ಮಂದಿಯ ಮೆಚ್ಚಿನ ನಟರಾಗಿದ್ದಾರೆ. ಅಕ್ಕಿನೇನಿ ನಾಗೇಶ್ವರ ರಾವ್ ಬಳಿಕ ನಾಗಾರ್ಜುನ ಕೂಡ ಟಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

  ನಾಗಾರ್ಜುನಾರನ್ನು ತೆಲುಗು ಅಭಿಮಾನಿಗಳು ಪ್ರೀತಿಯಿಂದ ಟಾಲಿವುಡ್ ಕಿಂಗ್ ಅಂತಲೇ ಕರೆಯುತ್ತಾರೆ. ಸದ್ಯ ಅಕ್ಕಿನೇನಿ ನಾಗಾರ್ಜುನ ಅಭಿನಯದ ಹೊಸ 'ಘೋಸ್ಟ್' ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಹೀಗಾಗಿ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಅನ್ನು ಚಿತ್ರತಂಡ ಆಯೋಜಿಸಿದೆ.

  ಈ ವರ್ಷದ ಆರಂಭದಲ್ಲಿ ನಾಗಾರ್ಜುನ ಹಾಗೂ ಪುತ್ರ ನಾಗ ಚೈತನ್ಯ ಅಭಿನಯಿಸಿದ್ದ 'ಬಂಗಾರ್‌ ರಾಜು' ಸಿನಿಮಾ ಸೂಪರ್‌ ಹಿಟ್ ಆಗಿತ್ತು. ಈ ಸಿನಿಮಾ ಮೂಲಕ ನಾಗಾರ್ಜುನಾ ಈ ವರ್ಷದ ಆರಂಭದಲ್ಲಿಯೇ ಮೊದಲ ಹಿಟ್ ದಾಖಲಿಸಿದ್ದರು.

  ಈ ಯಶಸ್ಸಿನ ಬಳಿಕ ಅಕ್ಕಿನೇನಿ ನಾಗಾರ್ಜುನ ಇದೀಗ 'ಘೋಸ್ಟ್' ಅನ್ನೋ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶಿಷ್ಟ ಚಿತ್ರಗಳನ್ನು ನಿರ್ದೇಶ ಮಾಡುವ ಪ್ರವೀಣ್ ಸತ್ತಾರು 'ಘೋಸ್ಟ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದು ಪೂರ್ಣ ಪ್ರಮಾಣದ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಈ ಚಿತ್ರದ ಶೂಟಿಂಗ್ ಕೊರೊನಾ ಎರಡನೇ ಅಲೆಯಿಂದಾಗಿ ನಿಂತಿತ್ತು. ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಸಿನಿಮಾದ ಚಿತ್ರೀಕರಣ ಶುರುವಾಗಿ ಈಗ ಬಿಡುಗಡೆ ಸಜ್ಜಾಗಿದೆ.

  ನಾಗಾರ್ಜುನ ಅಭಿನಯದ ಕ್ರೇಜಿ ಕಾಂಬಿನೇಷನ್ ಸಿನಿಮಾ 'ಘೋಸ್ಟ್' ಅಕ್ಟೋಬರ್ 05 ರಂದು ಬಿಡುಗಡೆಯಾಗಿತ್ತಿದೆ. ಹೀಗಾಗಿ ನಾಗಾರ್ಜುನ ಅಂಡ್ ಟೀಮ್ ಭರ್ಜರಿಯಾಗಿ ಪ್ರಚಾರವನ್ನು ಆರಂಭಿಸಿದೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್ ಹಾಗೂ ಹಾಡುಗಳು ಸಿನಿಪ್ರಿಯರ ಮನಗೆದ್ದಿದೆ. ಅಕ್ಕಿನೇನಿ ಅಭಿಮಾನಿಗಳು ಅಷ್ಟೇ ಅಲ್ಲದೆ, ಎಲ್ಲಾ ವರ್ಗದ ಜನರೂ ಕೂಡ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ನೀಡಿದ್ದಾರೆ.

  Akhil And Naga Chaitanya Guests For Nagarjuna Starrer Ghost Pre Release Event

  ಹೀಗಾಗಿ 'ಘೋಸ್ಟ್' ಚಿತ್ರತಂಡ ಬಿಡುಗಡೆ ಮುನ್ನ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸೆಪ್ಟೆಂಬರ್ 25 ರಂದು ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅಕ್ಕಿನೇನಿ ಕುಟುಂಬದ ಯುವ ಸಾಮ್ರಾಟ್ ನಾಗ ಚೈತನ್ಯ ಮತ್ತು ಹ್ಯಾಂಡ್‌ಸಮ್ ಹೀರೊ ಅಖಿಲ್ ಅಕ್ಕಿನೇನಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವಿಷಯವನ್ನು ಚಿತ್ರತಂಡ ಅಧಿಕೃತವಾಗಿ ಬಹಿರಂಗಪಡಿಸಿದೆ. ಈ ಮೂಲಕ ಅಕ್ಕಿನೇನಿ ಕುಟುಂಬದ ಮೂವರು ಹೀರೊಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  'ಘೋಷ್ಟ್' ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ ಇಂಟರ್‌ಪೋಲ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ ಜೊತೆ ಸೋನಾಲ್ ಚೌಹಾಣ್ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾರಾಯಣದಾಸ್ ನಾರಂಗ್, ಪುಷ್ಕರ್ ರಾಮಮೋಹನ್ ರಾವ್ ಮತ್ತು ಶರತ್ ಮರಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  English summary
  Akhil And Naga Chaitanya Guests For Nagarjuna Starrer Ghost Pre Release Event, Know More.
  Sunday, September 25, 2022, 0:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X