2022ರಲ್ಲಿ ಸಾಲು ಸಾಲು ಸೋಲು; ಅಪ್ಪ - ಮಕ್ಕಳಿಗೆ ಇದು ಕೆಟ್ಟ ವರ್ಷ!

2022ರಲ್ಲಿ ಬಾಲಿವುಡ್‌ಗಿಂತ ದಕ್ಷಿಣ ಭಾರತದ ಚಿತ್ರರಂಗಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದವು ಎಂಬ ವಿಷಯ ತಿಳಿದೇ ಇದೆ. ಈ ಹಿಂದೆ ಸೋತಿದ್ದಂತಹ ಹಾಗೂ ಅವಕಾಶಗಳು ಸಿಗದೇ ಪರದಾಡಿದ್ದಂತಹ ನಟರು ಹಾಗೂ ನಿರ್ದೇಶಕರು ಈ ವರ್ಷ ಭರ್ಜರಿ ಹಿಟ್‌ಗಳನ್ನು ನೀಡಿ ಖ್ಯಾತಿ ಪಡೆದಿದ್ದಾರೆ. ಸ್ಟಾರ್ ನಟ ಕಮಲ್ ಹಾಸನ್ ವಿಕ್ರಮ್ ಮೂಲಕ ದೊಡ್ಡ ಮಟ್ಟದಲ್ಲಿ ಕಮ್ ಬ್ಯಾಕ್ ಮಾಡಿದರೆ, ಪ್ರದೀಪ್ ರಂಗನಾಥನ್ ಹಾಗೂ ರಿಷಬ್ ‍ಶೆಟ್ಟಿ ರೀತಿಯ ಪ್ರತಿಭಾವಂತ ನಿರ್ದೇಶಕರು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡು ಮುಂದೆ ಯಾವ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ವೀಕ್ಷಕರು ಕಾಯುವ ರೀತಿ ಮಾಡಿದ್ದಾರೆ.

ಹೀಗೆ ಕೆಲ ಸ್ಟಾರ್‌ಗಳು ಹಾಗೂ ಯುವ ಕಲಾವಿದರು ಗೆದ್ದಿದ್ದರೆ, ಕೆಲವರಿಗೆ ಮಾತ್ರ ಈ ವರ್ಷ ಅತಿಕೆಟ್ಟ ವರ್ಷವಾಗಿ ಪರಿಣಮಿಸಿದೆ. ಎಷ್ಟೇ ಪ್ರಚಾರ ಮಾಡಿದರೂ, ಕೋಟಿ ಕೋಟಿ ಬಂಡವಾಳ ಹೂಡಿ ಚಿತ್ರ ಮಾಡಿದರೂ ಸಿನಿ ರಸಿಕರು ಮಾತ್ರ ಚಿತ್ರಮಂದಿರಗಳ ಕಡೆ ಬಾರದೇ ನಿರಾಸಕ್ತಿ ತೋರಿದ್ದಾರೆ. ಪರಿಣಾಮ ಚಿತ್ರಗಳನ್ನು ಮಾಡಿದ್ದ ಕೆಲ ಸ್ಟಾರ್ ನಟರು ಕೈಸುಟ್ಟಿಕೊಂಡಿದ್ದಾರೆ.

ಇದಕ್ಕೆ ದೊಡ್ಡ ಉದಾಹರಣೆಯೆಂದರೆ ತೆಲುಗಿನ ಅಕ್ಕಿನೇನಿ ಕುಟುಂಬ. ಹೌದು, ಅಕ್ಕಿನೇನಿ ಕುಟುಂಬದ ಮೂವರೂ ನಾಯಕರಿಗೂ ಸಹ ಈ ವರ್ಷ ಸಂತಸವನ್ನು ತರಲಿಲ್ಲ. ಅಕ್ಕಿನೇನಿ ನಾಗಾರ್ಜುನ, ಅಕ್ಕನೇನಿ ನಾಗ ಚೈತನ್ಯ ಹಾಗೂ ಅಕ್ಕಿನೇನಿ ಅಖಿಲ್ ಈ ಮೂವರೂ ಸಹ ಈ ವರ್ಷ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲರಾಗಿದ್ದಾರೆ.

ನಾಗಾರ್ಜುನ ಚಿತ್ರ ದೊಡ್ಡ ಫ್ಲಾಪ್

ನಾಗಾರ್ಜುನ ಚಿತ್ರ ದೊಡ್ಡ ಫ್ಲಾಪ್

ಈ ವರ್ಷದ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಗಾರ್ಜುನ ಹಾಗೂ ಪುತ್ರ ನಾಗ ಚೈತನ್ಯ ನಟನೆಯ 'ಬಂಗಾರ್ರಾಜು' ಚಿತ್ರ ಬಿಡುಗಡೆಗೊಂಡಿತ್ತು. ಈ ಚಿತ್ರ ಸಾಧಾರಣ ಎಂಬ ಫಲಿತಾಂಶ ಪಡೆದುಕೊಂಡಿತು. ಇದೊಂದೇ ಸಿನಿಮಾ ವಿಚಾರವಾಗಿ ಅಕ್ಕಿನೇನಿ ಕುಟುಂಬ ಕಂಡ ತುಸು ಸಂತಸದ ಸುದ್ದಿ ಎನ್ನಬಹುದು. ಇನ್ನುಳಿದಂತೆ ನಾಗಾರ್ಜುನ ನಟನೆಯ ಬಹುನಿರೀಕ್ಷಿತ ಘೋಸ್ಟ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು ಹಾಗೂ ನಾಗಾರ್ಜುನ ನಿರೂಪಣೆಯಲ್ಲಿ ಮೂಡಿಬಂದ ಬಿಗ್ ಬಾಸ್ ತೆಲುಗು ಸಹ ನೀರಸ ಪ್ರತಿಕ್ರಿಯೆ ಪಡೆದುಕೊಂಡಿತು. ಅಷ್ಟೇ ಅಲ್ಲದೇ ಮುಂದಿನ ಬಿಗ್ ಬಾಸ್ ಆವೃತ್ತಿಯನ್ನು ಬಾಲಕೃಷ್ಣ ನಡೆಸಲಿದ್ದಾರೆ ಎಂಬ ಸುದ್ದಿಯೂ ಇದ್ದು, ಇದು ನಾಗಾರ್ಜುನಗೆ ಮತ್ತೊಂದು ಹಿನ್ನಡೆ ಎಂದೇ ಹೇಳಬಹುದು.

ನಾಗಚೈತನ್ಯ ಚಿತ್ರಗಳ ಫೇಲ್ಯೂರ್

ನಾಗಚೈತನ್ಯ ಚಿತ್ರಗಳ ಫೇಲ್ಯೂರ್

ಇನ್ನು ನಾಗಚೈತನ್ಯ ತಂದೆ ಜತೆ ನಟಿಸಿದ್ದ 'ಬಂಗಾರ್ರಾಜು' ಸಾಧಾರಣ ಗೆಲುವು ಕಂಡ ಬಳಿಕ 'ಥ್ಯಾಂಕ್ ಯೂ' ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ತೆಲುಗು ಚಿತ್ರರಂಗದಲ್ಲಿ ಈ ವರ್ಷ ಅತಿದೊಡ್ಡ ಸೋಲು ಕಂಡ ಚಿತ್ರಗಳ ಪೈಕಿ ಈ ಥ್ಯಾಂಕ್ ಯೂ ಕೂಡ ಒಂದು. ಅಷ್ಟೇ ಅಲ್ಲದೇ ನಾಗ ಚೈತನ್ಯ ಆಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ' ಮೂಲಕ ಬಾಲಿವುಡ್‌ಗೂ ಕೂಡ ಕಾಲಿಟ್ಟಿದ್ದರು. ಆದರೆ ಈ ಚಿತ್ರ ಕೂಡ ಕೆಟ್ಟ ಸೋಲನ್ನು ಕಂಡಿತ್ತು.

ಬಿಡುಗಡೆಯಾಗಲೇ ಇಲ್ಲ ಅಖಿಲ್ ಚಿತ್ರ

ಬಿಡುಗಡೆಯಾಗಲೇ ಇಲ್ಲ ಅಖಿಲ್ ಚಿತ್ರ

ಇನ್ನು ನಾಗಾರ್ಜುನ ಅವರ ದ್ವಿತೀಯ ಪುತ್ರ ಅಖಿಲ್ ಅಕ್ಕಿನೇನಿ ನಟನೆಯ 'ಏಜೆಂಟ್' ಚಿತ್ರ ಈ ವರ್ಷ ಬಿಡುಗಡೆಗೊಳ್ಳಬೇಕಿತ್ತು. ಆದರೆ ಚಿತ್ರ ಆಗ ಬಿಡುಗಡೆಯಾಗಲಿದೆ, ಈಗ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹೊರಬಿತ್ತೇ ಹೊರತು ಚಿತ್ರ ಮಾತ್ರ ತೆರೆಗೆ ಬಾರದೇ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಹೀಗೆ ಅಖಿಲ್ ಅಕ್ಕಿನೇನಿ ಕೂಡ ಈ ವರ್ಷ ಮನರಂಜಿಸುವಲ್ಲಿ ಸಫಲರಾಗಿಲ್ಲ. ಒಟ್ಟಿನಲ್ಲಿ ಸಿನಿಮಾ ಕ್ಷೇತ್ರಕ್ಕೆ ಗೋಲ್ಡನ್ ಇಯರ್ ಆಗಿರುವ ಈ ವರ್ಷ ಅಕ್ಕನೇನಿ ಕುಟುಂಬದ ಕೊಡುಗೆ ಮಾತ್ರ ಶೂನ್ಯ.

More from Filmibeat

English summary
Akkineni heroes failed to give big hits in the year 2022. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X