Just In
Don't Miss!
- News
ಎಪಿಜೆ ಅಬ್ದುಲ್ ಕಲಾಂರ ಅಣ್ಣ ಮೊಹಮ್ಮದ್ ನಿಧನ
- Sports
ಆತನಲ್ಲಿ ನನಗಿಂತಲೂ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವಿದೆ: ರವಿಶಾಸ್ತ್ರಿ
- Finance
ಮಾರ್ಚ್ 07ರಂದು ಚಿನ್ನದ ಬೆಲೆ ಯಾವ ನಗರದಲ್ಲಿ ಹೆಚ್ಚು ಬೆಲೆ?
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೂರದ ಅಮೇರಿಕಾದಲ್ಲೂ ಮಹೇಶ್ ಬಾಬು ದಾಖಲೆ ಅಳಿಸಿ ಹಾಕಿದ ಅಲ್ಲು ಅರ್ಜುನ್.!
ದೂರದ ಅಮೇರಿಕಾದಲ್ಲೂ 'ಪ್ರಿನ್ಸ್' ಮಹೇಶ್ ಬಾಬು ಮಾಡಿದ್ದ ದಾಖಲೆಯನ್ನ 'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ ಅಳಿಸಿ ಹಾಕಿದ್ದಾರೆ. ಯು.ಎಸ್.ಎ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ್ದ ತೆಲುಗು ಚಿತ್ರಗಳ ಪೈಕಿ ಮಹೇಶ್ ಬಾಬು ಅಭಿನಯದ 'ಭರತ್ ಅನೇ ನೇನು' ನಾಲ್ಕನೇ ಸ್ಥಾನದಲ್ಲಿತ್ತು.
ಆದ್ರೀಗ, 'ಭರತ್ ಅನೇ ನೇನು' ಚಿತ್ರವನ್ನು ಅಲ್ಲು ಅರ್ಜುನ್ ಕೆಳಕ್ಕೆ ತಳ್ಳಿದ್ದಾರೆ. ಸದ್ಯ ಮೂರನೇ ಸ್ಥಾನದಲ್ಲಿರುವ ರಾಮ್ ಚರಣ್ ತೇಜಾ ಅಭಿನಯದ 'ರಂಗಸ್ಥಳಂ' ಚಿತ್ರದ ಮೇಲೆ ಅಲ್ಲು ಅರ್ಜುನ್ ಕಣ್ಣಿಟ್ಟಿದ್ದಾರೆ. ಅಷ್ಟರಮಟ್ಟಿಗೆ ಯು.ಎಸ್.ಎ ಬಾಕ್ಸ್ ಆಫೀಸ್ ನಲ್ಲಿ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಕಮಾಲ್ ಮಾಡುತ್ತಿದೆ. ಮುಂದೆ ಓದಿರಿ..

ಯು.ಎಸ್.ಎ ನಲ್ಲಿ 'ಅಲಾ ವೈಕುಂಠಪುರಮುಲೋ' ಕಲೆಕ್ಷನ್ ಎಷ್ಟು.?
ವರದಿಗಳ ಪ್ರಕಾರ, ಯು.ಎಸ್.ಎ ಬಾಕ್ಸ್ ಆಫೀಸ್ ನಲ್ಲಿ ಅಲ್ಲು ಅರ್ಜುನ್ ಅಭಿನಯದ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಅಲಾ ವೈಕುಂಠಪುರಮುಲೋ' ಚಿತ್ರ 15 ದಿನಗಳಲ್ಲಿ $3,420,402 ಕಲೆಕ್ಷನ್ ಮಾಡಿದೆ. ಆ ಮೂಲಕ ಯು.ಎಸ್.ಎ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತೆಲುಗು ಚಿತ್ರಗಳ ಪೈಕಿ 'ಅಲಾ ವೈಕುಂಠಪುರಮುಲೋ' ನಾಲ್ಕನೇ ಸ್ಥಾನಕ್ಕೇರಿ, ಮಹೇಶ್ ಬಾಬು ನಟನೆಯ 'ಭರತ್ ಅನೇ ನೇನು' ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದೆ.
ಹೈದರಾಬಾದ್ ನಲ್ಲಿ ತಲೆಯೆತ್ತಲಿದೆ ಅಲ್ಲು ಅರ್ಜುನ್ ಕನಸಿನ ಅರಮನೆ.!

ಈ ವಾರದಲ್ಲಿ ಮೂರನೇ ಸ್ಥಾನ ಪಕ್ಕಾ.!
ಯು.ಎಸ್.ಎ ನಲ್ಲಿ 'ಅಲಾ ವೈಕುಂಠಪುರಮುಲೋ' ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದರೆ, ಈ ವಾರದಲ್ಲಿ 'ಅಲಾ ವೈಕುಂಠಪುರಮುಲೋ' ಮೂರನೇ ಸ್ಥಾನಕ್ಕೆ ಜಿಗಿಯುವುದು ಪಕ್ಕಾ. ಯು.ಎಸ್.ಎ ಬಾಕ್ಸ್ ಆಫೀಸ್ ನಲ್ಲಿ ರಾಮ್ ಚರಣ್ ತೇಜಾ ಅಭಿನಯದ 'ರಂಗಸ್ಥಳಂ' ಚಿತ್ರ $3.5 ಮಿಲಿಯನ್ ಕಲೆಕ್ಷನ್ ಮಾಡಿತ್ತು. ಈಗಾಗಲೇ 'ಅಲಾ ವೈಕುಂಠಪುರಮುಲೋ' ಚಿತ್ರ $3.4 ಮಿಲಿಯನ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸಲು ಟಬು ಪಡೆದ ಸಂಭಾವನೆ ಅಬ್ಬಬ್ಬಾ ಇಷ್ಟೊಂದಾ.?!

'ಬಾಹುಬಲಿ' ಫಸ್ಟ್, 'ಅಲಾ ವೈಕುಂಠಪುರಮುಲೋ' ನೆಕ್ಸ್ಟು.!
ಯು.ಎಸ್.ಎ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತೆಲುಗು ಚಿತ್ರಗಳ ಪೈಕಿ 'ಬಾಹುಬಲಿ 2: ದಿ ಕನ್ ಕ್ಲೂಶನ್' ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿದೆ 'ಬಾಹುಬಲಿ: ದಿ ಬಿಗಿನಿಂಗ್'. 'ರಂಗಸ್ಥಳಂ' ಚಿತ್ರದ ದಾಖಲೆ ಪುಡಿ ಪುಡಿ ಮಾಡಿದರೆ, ಯು.ಎಸ್.ಎ ಬಾಕ್ಸ್ ಆಫೀಸ್ ನಲ್ಲೂ 'ಬಾಹುಬಲಿ' ಬಿಟ್ಟರೆ, ಅಲ್ಲು ಅರ್ಜುನ್ ರದ್ದೇ ದರ್ಬಾರ್.
'ಬಾಹುಬಲಿ' ಬಿಟ್ಟರೆ ಟಾಲಿವುಡ್ ಕಲೆಕ್ಷನ್ ನಲ್ಲಿ ಅಲ್ಲು ಅರ್ಜುನ್ 'ಕಿಂಗ್'.!

ತೆಲುಗು ಅಂಗಳದಲ್ಲೂ ಇದೇ ಕಥೆ.!
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 15 ದಿನಗಳಲ್ಲಿ 116.44 ಕೋಟಿ ಕಲೆಕ್ಷನ್ ಮಾಡಿದೆ 'ಅಲಾ ವೈಕುಂಠಪುರಮುಲೋ' ಚಿತ್ರ. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಬಿಟ್ಟರೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇಷ್ಟೊಂದು ಕಲೆಕ್ಷನ್ ಮಾಡಿರೋದು 'ಅಲಾ ವೈಕುಂಠಪುರಮುಲೋ' ಚಿತ್ರ ಮಾತ್ರ.

ವರ್ಲ್ಡ್ ವೈಡ್ ಕಲೆಕ್ಷನ್ ಎಷ್ಟು.?
ವರದಿಯೊಂದರ ಪ್ರಕಾರ, ಭಾರತದಲ್ಲಿ 'ಅಲಾ ವೈಕುಂಠಪುರಮುಲೋ' ಚಿತ್ರದ ಕಲೆಕ್ಷನ್ 183.40 ಕೋಟಿ. ಇನ್ನೂ ವರ್ಲ್ಡ್ ವೈಡ್ ಲೆಕ್ಕಾಚಾರ ತೆಗೆದುಕೊಂಡರೆ 15 ದಿನಗಳಲ್ಲಿ ಅಲ್ಲು ಅರ್ಜುನ್ ಚಿತ್ರ 247 ಕೋಟಿ ಬಾಚಿಕೊಂಡಿದೆ. ಅಲ್ಲು ಅರ್ಜುನ್ ವೃತ್ತಿ ಜೀವದಲ್ಲಿಯೇ ಇದು ಹೊಸ ದಾಖಲೆ.

'ಅಲಾ ವೈಕುಂಠಪುರಮುಲೋ' ಚಿತ್ರದ ಕುರಿತು
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರ 'ಅಲಾ ವೈಕುಂಠಪುರಮುಲೋ'. ಅಲ್ಲು ಅರ್ಜುನ್, ಪೂಜಾ ಹೆಗ್ಡೆ, ಟಬು, ಜಯರಾಮ್, ಸಮುದ್ರಖಣಿ, ರಾಹುಲ್ ರಾಮಕೃಷ್ಣ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿರುವ ಈ ಚಿತ್ರಕ್ಕೆ ತಮನ್ ಸಂಗೀತ ಸಂಯೋಜಿಸಿದ್ದಾರೆ. 100 ಕೋಟಿ ರೂಪಾಯಿ ಬಂಡವಾಳ ಹಾಕಿ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತಂದವರು ಅಲ್ಲು ಅರವಿಂದ್ ಮತ್ತು ಎಸ್.ರಾಧಾ ಕೃಷ್ಣ.