ರಾಜಮೌಳಿಯ ಹೊಗಳಿ ಅಟ್ಟಕ್ಕೇರಿಸಿದ ಚೆಲುವೆ ಆಲಿಯಾ ಭಟ್

ರಾಜಮೌಳಿ ಭಾರತದ ಅತ್ಯುತ್ತಮ ಕಮರ್ಶಿಯಲ್ ಸಿನಿಮಾ ನಿರ್ದೇಶಕರಲ್ಲಿ ಪ್ರಮುಖರು. ಅವರ ಪ್ರತಿಭೆಯನ್ನು ಹೊಸದಾಗಿ ಸಿನಿ ಪ್ರೇಕ್ಷಕರಿಗೆ ಪರಿಚಯಿಸುವ ಅಗತ್ಯವಿಲ್ಲ. ಆ ಕಾರ್ಯವನ್ನು ಅವರ ಸಿನಿಮಾಗಳೇ ಮಾಡಿವೆ, ಮಾಡಲಿವೆ.

ರಾಜಮೌಳಿ ನಿರ್ದೇಶನದ ಮತ್ತೊಂದು ಅತ್ಯದ್ಭುತ ಸಿನಿಮಾ 'ಆರ್ಆರ್ಆರ್' ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗವಿದೆ. ಸೂಪರ್ ಸ್ಟಾರ್ ನಟರಾದ ಜೂ ಎನ್‌ಟಿಆರ್, ರಾಮ್ ಚರಣ್ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರಿಗೆ ತಕ್ಕಂತೆ ನಾಯಕಿಯಾಗಿ ಬಾಲಿವುಡ್‌ನಿಂದ ಆಲಿಯಾ ಭಟ್ ಅನ್ನು, ಅಜಯ್ ದೇವಗನ್ ಅನ್ನೂ ಕರೆತರಲಾಗಿದೆ.

ಆಲಿಯಾ ಭಟ್‌ಗೆ ಇದು ಮೊದಲ ದಕ್ಷಿಣ ಭಾರತ ಸಿನಿಮಾ. ರಾಜಮೌಳಿ ಅಂಥಹಾ ಹಿಟ್ ನಿರ್ದೇಶಕನ ಸಿನಿಮಾ ಮೂಲಕ ದಕ್ಷಿಣ ಭಾರತ ಚಿತ್ರರಂಗ ಪ್ರವೇಶಿಸಿದ್ದಕ್ಕೆ ಆಲಿಯಾ ಭಟ್ ಸಹಜವಾಗಿಯೇ ಖುಷಿಯಾಗಿದ್ದಾರೆ. ಇದೀಗ 'ಆರ್ಆರ್ಆರ್' ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಿದ್ದು, 'ಆರ್‌ಆರ್‌ಆರ್‌' ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ, ನಿರ್ದೇಶಕ ರಾಜಮೌಳಿ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ ಆಲಿಯಾ ಭಟ್.

''ಆರ್‌ಆರ್‌ಆರ್‌ ಸಿನಿಮಾದ ಸೀತಾ ಪಾತ್ರದಲ್ಲಿ ನಟಿಸಲು ಕೇಳಿದಾಗ ನನಗೆ ಬಹಳ ಖುಷಿಯಾಯಿತು ಜೊತೆಗೆ ಹಿಂಜರಿಕೆಯೂ ಆಯಿತು. ನನಗೆ ಹಿಂಜರಿಕೆ ಆಗಿದ್ದು ಭಾಷೆಯ ಕಾರಣಕ್ಕೆ. ನನಗೆ ತೆಲುಗು ಬರುವುದಿಲ್ಲ. ನನ್ನ ಸಂಭಾಷಣೆಯನ್ನು ಓದಿಗೊಂಡು ಬಾಯಿಪಾಠ ಮಾಡಿ, ತೆಲುಗು ಭಾಷಿಕರು ಮಾತನಾಡುವ ಶೈಲಿಯಲ್ಲಿಯೇ ಅದನ್ನು ಒಪ್ಪಿಸುವುದು ಹೇಗೆ ಎಂಬ ಯೋಚನೆಗೆ ಬಿದ್ದಿದ್ದೆ'' ಎಂದು ಪಾತ್ರದಲ್ಲಿದ್ದ ಸವಾಲುಗಳ ಬಗ್ಗೆ ಆಲಿಯಾ ಮಾತನಾಡಿದ್ದಾರೆ.

ರಾಜಮೌಳಿಯ ಹೊಗಳಿದ ಆಲಿಯಾ ಭಟ್

ರಾಜಮೌಳಿಯ ಹೊಗಳಿದ ಆಲಿಯಾ ಭಟ್

''ಆದರೆ ನಾನು ಸೆಟ್‌ಗೆ ಹೋದಾಗ ರಾಜಮೌಳಿ ಅವರು ಎಲ್ಲವನ್ನೂ ಸಿದ್ಧವಿಟ್ಟಿದ್ದರು. ನನಗೆ ಹೆಚ್ಚು ಶ್ರಮವೇ ಆಗದಂತೆ ಎಲ್ಲವೂ ನಡೆದುಕೊಂಡು ಹೋಗಿಬಿಟ್ಟತು. ಸಿನಿಮಾದ ಚಿತ್ರೀಕರಣ ಅದೆಷ್ಟು ಸರಳವಾಗಿ ಆಗಿಬಿಟ್ಟಿತೆಂದರೆ ಚಿತ್ರೀಕರಣ ಮುಗಿದಾಗ ನನಗೆ ಬೇಸರವಾಯಿತು ಅಯ್ಯೋ ಮುಗಿದು ಬಿಟ್ಟಿತಲ್ಲ ಎಂದು. ಭವಿಷ್ಯದಲ್ಲಿ ರಾಜಮೌಳಿ ಅವರೊಟ್ಟಿಗೆ ಹೆಚ್ಚು ಸಿನಿಮಾಗಳು ಮಾಡುವಂತಾಗಲಿ'' ಎಂದಿದ್ದಾರೆ ಆಲಿಯಾ ಭಟ್.

'ಗಂಗೂಭಾಯಿ ಕಾತ್ಯಾವಾಡಿ' v/s 'ಆರ್‌ಆರ್‌ಆರ್‌'

'ಗಂಗೂಭಾಯಿ ಕಾತ್ಯಾವಾಡಿ' v/s 'ಆರ್‌ಆರ್‌ಆರ್‌'

ತಮ್ಮ 'ಗಂಗೂಭಾಯಿ ಕಾಠಿಯಾವಾಡಿ' ಹಾಗೂ 'ಆರ್‌ಆರ್‌ಆರ್‌' ಸಿನಿಮಾ ಒಂದೇ ದಿನ ಬಿಡುಗಡೆ ಆಗುವ ಸನ್ನಿವೇಶ ನಿರ್ಮಾಣವಾದ ಬಗ್ಗೆ ಮಾತನಾಡಿದ ಆಲಿಯಾ ಭಟ್, ''ಸಂಜಯ್ ಲೀಲಾ ಬನ್ಸಾಲಿ ಹಾಗೂ ರಾಜಮೌಳಿ ಇಬ್ಬರೂ ತಮ್ಮ ತಮ್ಮ ರೀತಿಯ ಸಿನಿಮಾ ಮೇಕಿಂಗ್‌ನಲ್ಲಿ ಅತ್ಯುತ್ತಮರು. ಅವರಿಗೆ ಅವರ ಸಿನಿಮಾದ ಬಗ್ಗೆ ಚೆನ್ನಾಗಿ ಗೊತ್ತಿದೆ. ಮತ್ತು ಸಿನಿಮಾವನ್ನು ಗೌರವಿಸುವುದು ಸಹ ಅವರಿಗೆ ಗೊತ್ತಿದೆ. ಹಾಗಾಗಿ ಈ ಪರಿಸ್ಥಿತಿ ನಿವಾರಣೆ ಆಗುತ್ತದೆ ಎಂಬ ನಂಬಿಕೆ ನನಗೆ ಇತ್ತು'' ಎಂದಿದ್ದಾರೆ ಆಲಿಯಾ ಭಟ್.

ಆಗಿದ್ದಾಗಲಿ ಎಂದುಕೊಂಡಿದ್ದೆ: ಆಲಿಯಾ ಭಟ್

ಆಗಿದ್ದಾಗಲಿ ಎಂದುಕೊಂಡಿದ್ದೆ: ಆಲಿಯಾ ಭಟ್

''ಒಂದೊಮ್ಮೆ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಿಬಿಟ್ಟಿದ್ದರೆ ನಾನು ಅದಕ್ಕೂ ತಯಾರಾಗಿದ್ದೆ. ಏನು ಆಗಿಬಿಡುತ್ತದೆ 'ಆಲಿಯಾ v/s ಆಲಿಯಾ', 'ಅಜಯ್ ದೇವಗನ್ v/s ಅಜಯ್ ದೇವಗನ್' ಎಂದು ನೋಡಿ ಬಿಡುವ ಎಂದು ತಯಾರಾಗಿದ್ದೆ. ಆದರೆ ಅದು ಆಗಲಿಲ್ಲ'' ಎಂದಿದ್ದಾರೆ ಆಲಿಯಾ ಭಟ್. 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ಆಲಿಯಾ ಭಟ್ ಜೊತೆಗೆ ಅಜಯ್ ದೇವಗನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಆರ್‌ಆರ್‌ಆರ್‌' ಸಿನಿಮಾ ಬಿಡುಗಡೆ ಯಾವಾಗ?

'ಆರ್‌ಆರ್‌ಆರ್‌' ಸಿನಿಮಾ ಬಿಡುಗಡೆ ಯಾವಾಗ?

'ಆರ್‌ಆರ್‌ಆರ್‌' ಸಿನಿಮಾವು ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಜೀವನ ಆಧರಿಸಿದ ಸಿನಿಮಾ ಆಗಿದೆ. ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ಆಲಿಯಾ ನಟಿಸಿದ್ದಾರೆ. ಸಿನಿಮಾವು ಜನವರಿ 7 ರಂದು ತೆರೆಗೆ ಬರಲಿದೆ. ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ನಿರ್ದೇಶನ ಮಾಡಿರುವುದು ರಾಜಮೌಳಿ, ಬಂಡವಾಳ ಹೂಡಿರುವುದು ಡಿವಿವಿ ದಯಾನಂದ.

More from Filmibeat

English summary
Bollywood actress Alia Bhat talks about RRR movie director Rajamouli. She said Rajamouli is one of the best director, she look forward to work with his in future.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X