For Quick Alerts
  ALLOW NOTIFICATIONS  
  For Daily Alerts

  ಮುಂಬೈನಿಂದ ಹೈದರಾಬಾದ್‌ಗೆ ಬಂದ ಆಲಿಯಾ ಭಟ್-ರಶ್ಮಿಕಾ ಮಂದಣ್ಣ

  |

  ಕೊರೊನಾ ಎರಡನೇ ಅಲೆ ಲಾಕ್‌ಡೌನ್ ತೆರವುಗೊಳುತ್ತಿದ್ದಂತೆ ಚಿತ್ರೀಕರಣ ಶುರುವಾಗುತ್ತಿದೆ. ಎಲ್ಲಾ ಭಾಷೆಯ ಚಿತ್ರಗಳು ಶೂಟಿಂಗ್‌ಗೆ ಮರು ಚಾಲನೆ ಕೊಡ್ತಿವೆ. ಕಳೆದ ಕೆಲವು ತಿಂಗಳು ಶೂಟಿಂಗ್ ಇಲ್ಲದೇ ಮನೆಯಲ್ಲಿ ಟೈಂ ಪಾಸ್ ಮಾಡಿದ್ದ ಕಲಾವಿದರು ಈಗ ಮತ್ತೆ ಕೆಲಸಕ್ಕೆ ಹಾಜರ್ ಆಗುತ್ತಿದ್ದಾರೆ.

  ಮುಂಬೈನಲ್ಲಿ 'ಗುಡ್ ಬೈ' ಸಿನಿಮಾದ ಚಿತ್ರೀಕರಣ ಮಾಡ್ತಿದ್ದ ನಟಿ ರಶ್ಮಿಕಾ ಮಂದಣ್ಣ ಈಗ ಹೈದರಾಬಾದ್‌ ಕಡೆ ಹೆಜ್ಜೆ ಹಾಕಿದ್ದಾರೆ. ಇನ್ನು ಲಾಕ್‌ಡೌನ್‌ನಿಂದ ಬ್ರೇಕ್‌ನಲ್ಲಿದ್ದ ಆಲಿಯಾ ಭಟ್ ಸಹ ಹೈದರಾಬಾದ್‌ ವಿಮಾನ ಹತ್ತಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ಭಾರತೀಯ ಸಿನಿಮಾರಂಗಕ್ಕೆ ಹೈದರಾಬಾದ್‌ ಕೇಂದ್ರಭಾಗವಾಗಿದ್ದು ಸ್ಟಾರ್ ನಟ-ನಟಿಯರು ತೆಲುಗು ನಗರದ ಕಡೆ ಮುಖ ಮಾಡುತ್ತಿದ್ದಾರೆ. ಮುಂದೆ ಓದಿ....

  ಸಮಂತಾ, ವಿಜಯ್ ದೇವರಕೊಂಡ ಹಿಂದಿಕ್ಕಿದ ರಶ್ಮಿಕಾ ಮಂದಣ್ಣಸಮಂತಾ, ವಿಜಯ್ ದೇವರಕೊಂಡ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ

  ಆರ್‌ಆರ್‌ಆರ್ ಚಿತ್ರೀಕರಣಕ್ಕೆ ಆಲಿಯಾ ಭಟ್

  ಆರ್‌ಆರ್‌ಆರ್ ಚಿತ್ರೀಕರಣಕ್ಕೆ ಆಲಿಯಾ ಭಟ್

  ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸುತ್ತಿರುವ ವಿಷಯ ತಿಳಿದಿದೆ. ಈ ಸಿನಿಮಾದ ಬಾಕಿ ಉಳಿದಿರುವ ದೃಶ್ಯಗಳನ್ನು ಮುಗಿಸಲು ಈಗ ಆಲಿಯಾ ಭಟ್ ಹೈದರಾಬಾದ್‌ ತೆರಳಿದ್ದಾರೆ.

  ತೆಲುಗಿನಲ್ಲಿ ಚೊಚ್ಚಲ ಸಿನಿಮಾ

  ತೆಲುಗಿನಲ್ಲಿ ಚೊಚ್ಚಲ ಸಿನಿಮಾ

  ರಾಮ್ ಚರಣ್ ತೇಜ, ಜೂನಿಯರ್ ಎನ್‌ಟಿಆರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ಆಲಿಯಾ ಭಟ್ ನಾಯಕಿ. ಈಗಾಗಲೇ ಸ್ಟಾರ್ ನಟರು ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಈಗ ಆಲಿಯಾ ಭಟ್ ಬಾಕಿ ಉಳಿದಿರುವ ಚಿತ್ರೀಕರಣ ಮುಂದುವರಿಸಲಿದ್ದಾರೆ. ಅದಾಗಲೇ ಹೈದರಾಬಾದ್‌ಗೆ ಬಂದಿಳಿದಿದ್ದು, ಮೇಕಪ್ ಹಾಕಿಕೊಳ್ಳುತ್ತಿರುವ ಫೋಟೋ ಸಹ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  ಮಾಫಿಯಾ ರಾಣಿ ಗಂಗೂಭಾಯಿ ಕಾತ್ಯಾವಾಡ: ಈಕೆಗಿದೆ ಭಯಾನಕ ಇತಿಹಾಸಮಾಫಿಯಾ ರಾಣಿ ಗಂಗೂಭಾಯಿ ಕಾತ್ಯಾವಾಡ: ಈಕೆಗಿದೆ ಭಯಾನಕ ಇತಿಹಾಸ

  ಶರ್ವಾನಂದ್ ಜೊತೆ ರಶ್ಮಿಕಾ

  ಶರ್ವಾನಂದ್ ಜೊತೆ ರಶ್ಮಿಕಾ

  ಮುಂಬೈನಲ್ಲಿ 'ಗುಡ್ ಬೈ' ಸಿನಿಮಾ ಚಿತ್ರೀಕರಣ ಮುಗಿಸಿದ ರಶ್ಮಿಕಾ ಮಂದಣ್ಣ ಈಗ ಹೈದರಾಬಾದ್‌ನಲ್ಲಿ ಹೊಸ ಸಿನಿಮಾ ಆರಂಭಿಸಿದ್ದಾರೆ. ತೆಲುಗಿನ ಯುವ ನಟ ಶರ್ವಾನಂದ್ ನಟಿಸುತ್ತಿರುವ 'ಆಡವಾಳ್ಳು ಮೀಕು ಜೋಹರ್ಲು' ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

  ಪಡ್ಡೆಗಳ ನಿದ್ದೆಗೆಡಿಸಿ ವಿಚಿತ್ರ ಸ್ಟೇಟಸ್ ಹಾಕಿದ ವಿಕ್ರಾಂತ್ ರೋಣ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್
  'ಪುಷ್ಪ' ಚಿತ್ರೀಕರಣ ಮುಗಿಸಿದ ನಟಿ

  'ಪುಷ್ಪ' ಚಿತ್ರೀಕರಣ ಮುಗಿಸಿದ ನಟಿ

  ಹಿಂದಿಯಲ್ಲಿ ಎರಡು ಸಿನಿಮಾ ಮಾಡ್ತಿದ್ದು ಇಷ್ಟು ದಿನ ಮುಂಬೈನಲ್ಲಿದ್ದರು. ಈಗ ಹೈದರಾಬಾದ್‌ಗೆ ಬಂದ ರಶ್ಮಿಕಾ ತೆಲುಗು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲು ಅರ್ಜುನ್ ಜೊತೆಗಿನ 'ಪುಷ್ಪ' ಸಿನಿಮಾದ ಕೊನೆಯ ಹಂತದ ಶೂಟಿಂಗ್ ಇತ್ತೀಚಿಗಷ್ಟೆ ಮುಗಿಸಿಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ಈಗ ಶರ್ವಾನಂದ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

  English summary
  Alia Bhatt and Rashmika Mandanna Jets off to Hyderabad to resume their shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X