'RRR' ಸಿನಿಮಾಗೆ ಕೇವಲ 10 ದಿನಕ್ಕೆ ಅಲಿಯಾ ಸಂಭಾವನೆ ಇಷ್ಟೊಂದಾ?

ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷ ಸಿನಿಮಾವನ್ನು ತೆರೆಗೆ ಬರಲು ನಿರ್ಧರಿಸಿದೆ.

ಇತ್ತೀಚಿಗೆ ಚಿತ್ರದಿಂದ ಅಲಿಯಾ ಭಟ್ ಔಟ್ ಆಗಿದ್ದಾರೆ ಎನ್ನುವ ಆಘಾತಕಾರಿ ಸುದ್ದಿಯೊಂದು ಹರಿದಾಡುತ್ತಿತ್ತು. ಆದರೀಗ ಅಲಿಯಾ ಸಿನಿಮಾದಲ್ಲಿ ಅಭಿನಯಿಸುವುದು ಕನ್ಫರ್ಮ್ ಅಂತೆ. ಆದರೀಗ ಅಲಿಯಾ ಕಡೆಯಿಂದ ಮತ್ತೊಂದು ಅಚ್ಚರಿಕರ ಸುದ್ದಿ ಕೇಳಿಬರುತ್ತಿದೆ. ಹೌದು, ಚಿತ್ರಕ್ಕಾಗಿ ಅಲಿಯಾ ಪಡೆಯತ್ತಿರುವ ಸಂಭಾವನೆ ಕೇಳಿ ಟಾಲಿವುಡ್ ಬೆಚ್ಚಿಬೆದ್ದಿದೆ. ಅಲಿಯಾ ಕೇವಲ 10 ದಿನಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

ದಿನಕ್ಕೆ 50 ಲಕ್ಷ ಸಂಭಾವನೆ

ದಿನಕ್ಕೆ 50 ಲಕ್ಷ ಸಂಭಾವನೆ

ಅಲಿಯಾ ಭಟ್ ಆರ್ ಆರ್ ಆರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಅಲಿಯಾ ಕಾಲ್ ಶೀಟ್ ಕೇವಲ 10 ದಿನಗಳು ಮಾತ್ರ. 10 ದಿನಕ್ಕೆ ಅಲಿಯಾ ಬರೋಬ್ಬರಿ 5 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ ದಿನಕ್ಕೆ 50 ಲಕ್ಷ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಅಲಿಯಾ.

ತಿಂಗಳ ಹಿಂದೆಯೇ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು

ತಿಂಗಳ ಹಿಂದೆಯೇ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು

ಅಲಿಯಾ ತಿಂಗಳ ಹಿಂದೆಯೆ ಆರ್ ಆರ್ ಆರ್ ಸಿನಿಮಾದ ಗುಜರಾತ್ ಮತ್ತು ಉತ್ತರ ಭಾರತದ ಚಿತ್ರೀಕರಣ ಹಂತದಲ್ಲಿ ಭಾಗಿಯಾಗಬೇಕಿತ್ತು. ಆದರೆ ಸಮಯದಲ್ಲಿ ನಟ ರಾಮ್ ಚರಣ್ ಚಿತ್ರೀಕರಣ ವೇಳೆ ಗಾಯಗೊಂಡಿದ್ದರು. ಹಾಗಾಗಿ ಚಿತ್ರೀಕರಣ ರದ್ದಾದ ಕಾರಣ ನಟಿ ಅಲಿಯಾ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಲಿಲ್ಲ. ಆ ನಂತರ ಚಿತ್ರತಂಡಕ್ಕೆ ಹೇಳದೆ ಕೇಳದೆ ಯು ಎಸ್ ಗೆ ಹಾರಿದ್ದರಂತೆ. ಹಾಗಾಗಿ ಅಲಿಯಾ ಭಾಗದ ಚಿತ್ರೀಕರಣ ತಡವಾಗುತ್ತಲೆ ಇದೆ. ಸದ್ಯ ಏಪ್ರಿಲ್ ನಲ್ಲಿ ಭಗಿಯಾಗಬೇಕಿತ್ತು. ಅಷ್ಟರಲ್ಲಿ ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ರದ್ದಾಗಿದೆ.

ರಾಮ್ ಚರಣ್ ಗೆ ಅಲಿಯಾ ನಾಯಕಿ

ರಾಮ್ ಚರಣ್ ಗೆ ಅಲಿಯಾ ನಾಯಕಿ

ಅಲಿಯಾ ಭಟ್ ಆರ್ ಆರ್ ಆರ್ ಸಿನಿಮಾದಲ್ಲಿ ನಟ ರಾಮ್ ಚರಣ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಅಲಿಯಾ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್ ಇಬ್ಬರು ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

ಅಲಿಯಾ ಬಳಿ ಇರುವ ಸಿನಿಮಾಗಳು

ಅಲಿಯಾ ಬಳಿ ಇರುವ ಸಿನಿಮಾಗಳು

ಅಲಿಯಾ ಸದ್ಯ ಸಂಜಯ್ ದತ್ ಅಭಿನಯದ ಸಾದಕ್-2, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗುಬಾಯಿ ಕಥಿಯಾವಾಡಿ ಮತ್ತು ಬ್ರಾಹ್ಮಸ್ತ್ರ ಸಿನಿಮಾಗಳು ಒಟ್ಟಿಗೆ ಚಿತ್ರೀಕರಣ ನಡೆಯುತ್ತಿದೆ. ಹಾಗಾಗಿ ಆರ್ ಆರ್ ಆರ್ ಸಿನಿಮಾಗೆ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೀಗ ಅಭಿನಯಿಸುವುದು ಕನ್ಫರ್ಮ್ ಆಗಿದೆ. ಅಲ್ಲದೆ ಕೋಟಿ ಕೋಟಿ ಸಂಭಾವನೆ ಸಹ ಪಡೆಯುತ್ತಿದ್ದಾರೆ.

More from Filmibeat

English summary
Bollywood Actress Alia Bhatt Charges 5 crore remuneration For RRR movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X