Jr NTR ಮಕ್ಕಳಿಗೆ ಬಟ್ಟೆ ಗಿಫ್ಟ್ ಮಾಡಿದ ಆಲಿಯಾ: ನನಗೂ ಬಟ್ಟೆ ಬೇಕು ಎಂದು ಕೇಳಿದ ತಾರಕ್
ಒಂದೊಂದು ಸಿನಿಮಾದಲ್ಲಿ ನಟ- ನಟಿಯರು ಬೇರೆ ಬೇರೆ ತಂಡಗಳ ಜೊತೆ ಕೆಲಸ ಮಾಡುತ್ತಾರೆ. ಮತ್ತೊಂದು ಚಿತ್ರದಲ್ಲಿ ಹೊಸಬರ ಪರಿಚಯ ಆಗುತ್ತದೆ. ಆದರೆ ಒಂದು ಸಿನಿಮಾದಲ್ಲಿ ನಟಿಸುವ ನಟ- ನಟಿಯರ ನಡುವೆ ಆತ್ಮೀಯ ಅನುಬಂಧ ಬೆಳೆಯುತ್ತದೆ. ಆ ಸಿನಿಮಾ ಮುಗಿದ್ಮೇಲೂ ಅದು ಮುಂದುವರೆಯುತ್ತದೆ. 'RRR' ಚಿತ್ರದಲ್ಲಿ ನಟಿಸಿದ ತಾರಕ್- ಆಲಿಯಾ ಮಧ್ಯೆ ಉತ್ತಮ ಒಡನಾಟ ಇದೆ.
ಕೆಲವರು ಸಿನಿಮಾ ಮುಗಿದ್ಮೇಲೆ ಸಹ ಕಲಾವಿದರನ್ನು ಮರತೇಬಿಡುತ್ತಾರೆ. ಅದರೆ ಕೆಲವರು ಫ್ಯಾಮಿಲಿ ರೀತಿ ಬೆರೆತು ಬಿಡುತ್ತಾರೆ. ನಟಿಯರ ಜೊತೆಗೂ ನಟರ ಅನುಬಂಧ ಇದೇ ರೀತಿ ಇರುತ್ತದೆ. ಅದೇನೋ ಗೊತ್ತಿಲ್ಲದ ಬಾಂಡಿಂಗ್ ಶುರುವಾಗಿ ಮುಂದುವರೆಯುತ್ತದೆ. ಫ್ಯಾಮಿಲಿ ಅಂದಮೇಲೆ ಹಬ್ಬ ಹರಿದಿನ, ಪಾರ್ಟಿ ಅಂತ ಆಹ್ವಾನ, ಉಡುಗೊರೆಗಳ ವಿನಿಮಯ ನಡೆಯುತ್ತಲೇ ಇರುತ್ತದೆ. 'RRR' ಚಿತ್ರದಲ್ಲಿ ಒಟ್ಟಿಗೆ ನಟಿಸಿ ತಾರಕ್- ಆಲಿಯಾ ಮಧ್ಯೆ ಇದೇ ನಡೀತಿದೆ. ಇತ್ತೀಚೆಗೆ ಬಾಲಿವುಡ್ ನಟಿ ಆಲಿಯಾ ಜ್ಯೂ. ಎನ್‌ಟಿಆರ್ ಮನೆಗೆ ಉಡುಗೊರೆಗಳನ್ನು ಕಳುಹಿಸಿದ್ದಾರೆ.

'RRR' ಚಿತ್ರದಲ್ಲಿ ಸೀತಾರಾಮ ಜೋಡಿ ಅಂದ್ರೆ ರಾಮ್‌ಚರಣ್ ಜೋಡಿಯಾಗಿ ಸೀತಾ ಪಾತ್ರದಲ್ಲಿ ಆಲಿಯಾ ಭಟ್ ಮಿಂಚಿದ್ದರು. ಆದರೆ ಆಕೆ ತಾರಕ್‌ಗೆ ಒಳ್ಳೆ ಸ್ನೇಹಿತೆಯಾಗಿಬಿಟ್ಟಿದ್ದಾರೆ. ಅಂದಿನಿಂದಲೂ ಇಬ್ಬರು ನಡುವೆ ಆತ್ಮೀಯ ಒಡನಾಟವಿದೆ. ತಾರಕ್ ಮನೆ ಸದಸ್ಯೆ ಆಗಿಬಿಟ್ಟಿದ್ದಾರೆ. ಆಲಿಯಾ ಬರೀ ಸಿನಿಮಾಗಳಲ್ಲಿ ನಟಿಸೋದಷ್ಟೆ ಅಲ್ಲಾ ಉದ್ಯಮಿ ಕೂಡ ಆಗಿದ್ದಾರೆ. ಈದ್-ಎ- ಮಮ್ಮ ಎನ್ನುವ ಕಿಡ್ಸ್ ಕ್ಲಾತಿಂಗ್ ಬ್ರ್ಯಾಂಡ್ ಇದೆ. ಆಗಾಗ್ಗೆ ತಮ್ಮ ಸ್ನೇಹಿತರ ಮಕ್ಕಳಿಗೆ ಒಳ್ಳೆಯ ಬಟ್ಟೆಗಳನ್ನು ಉಡುಗೊರೆಯಾಗಿ ಕಳುಹಿಸುತ್ತಿರುತ್ತಾರೆ.
ಟಾಲಿವುಡ್ ಯಂಗ್ ಟೈಗರ್ ಎನ್‌ಟಿಆರ್‌ಗೂ ಆಲಿಯಾ ಭಟ್ ಇದೇ ರೀತಿ ಸರ್‌ಪ್ರೈಸ್ ನೀಡಿದ್ದಾರೆ. ತಾರಕ್ ಮಕ್ಕಳಾದ ಅಭಯ್ ರಾಮ್ ಹಾಗೂ ಭಾರ್ಗವ್ ರಾಮ್‌ಗೆ ಒಳ್ಳೆ ಬಟ್ಟೆಗಳನ್ನು ಬ್ಯಾಕ್‌ನಲ್ಲಿ ಪಾರ್ಸಲ್ ಮಾಡಿ ಉಡುಗೊರೆಯಾಗಿ ಕಳುಹಿಸಿದ್ದಾರೆ ಬಾಲಿವುಡ್ ಬ್ಯೂಟಿ. ಆ ಬಟ್ಟೆಗಳನ್ನು ನೋಡಿ ಎನ್‌ಟಿಆರ್ ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿ ಆಲಿಯಾ ಧನ್ಯವಾದ ತಿಳಿಸಿದ್ದಾರೆ. "ಥ್ಯಾಂಕ್ಯೂ ಆಲಿಯಾ.. ನಿನ್ನ ಕ್ಲಾತಿಂಗ್ ಬ್ರ್ಯಾಂಡ್ ಸದಾ ಅಭಯ್, ಭಾರ್ಗವ್ ಮುಖದಲ್ಲಿ ಸಂತೋಷ ತರುತ್ತದೆ. ನನ್ನ ಹೆಸರಿನಲ್ಲೂ ಒಂದು ಬ್ಯಾಗ್ ಬೇಗ ಬರುತ್ತೆ ಎಂದುಕೊಂಡಿದ್ದೇನೆ" ಎಂದು ತಮಾಷೆ ಮಾಡಿದ್ದಾರೆ.
ಎನ್‌ಟಿಆರ್ ಪೋಸ್ಟ್‌ಗೆ ರಿಪ್ಲೇ ಮಾಡಿರುವ ಆಲಿಯಾ ಭಟ್ "ನಿನಗೆ ಮಾತ್ರ ಈದ್ ಸ್ಪೆಷಲ್ ಆಗಿ ಬಟ್ಟೆ ಕಳುಹಿಸುತ್ತೇನೆ. ನೀನು ಸ್ವೀಟೆಸ್ಟ್ ಪರ್ಸನ್, ಥ್ಯಾಂಕ್ಯು" ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿದ್ದಾರೆ. ಸದ್ಯ ಎನ್‌ಟಿಆರ್, ಆಲಿಯಾ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 'RRR' ಸಿನಿಮಾ ವರ್ಷದ ಹಿಂದೆ ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾ ಮೂಲಕ ಆಲಿಯಾ ಭಟ್ ಸೌತ್ ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಸೀತಾರಾಮರಾಜು ಜೋಡಿ ಸೀತಾ ಪಾತ್ರದಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿದ್ದರು.

ಸಿನಿಕರಿಯರ್‌ನ ಪೀಕ್‌ನಲ್ಲಿದ್ದ ಆಲಿಯಾ ನಟ ರಣ್‌ಬೀರ್ ಕಪೂರ್‌ನ ಪ್ರೀತಿಸಿ ಕಳೆದ ವರ್ಷ ಮದುವೆ ಆಗಿದ್ದರು. ಕಳೆದ ವರ್ಷವೇ ದಂಪತಿ ಮುದ್ದಾದ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಆಲಿಯಾ ಈಗ ಮಗಳ ಲಾಲನೆ ಪಾಲನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಮಗಳಿಗಾಗಿ 2 ವರ್ಷ ಚಿತ್ರರಂಗದಿಂದ ದೂರ ಇರಲು ನಿರ್ಧರಿಸಿದ್ದಾರೆ. ಅಂದಹಾಗೆ ಆಕೆ 2021ರಲ್ಲಿ ಗಾರ್ಮೆಂಟ್ ಬ್ಯುಸಿನೆಸ್ ಆರಂಭಿಸಿದ್ದರು. ರಣ್‌ಬೀರ್ ಕೂಡ ಮಗಳಿಗಾಗಿ 6 ತಿಂಗಳು ಸಿನಿಮಾಗಳಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ.


Click it and Unblock the Notifications











