RRR ಸಿನಿಮಾದಲ್ಲಿ ಅನಾವರಣವಾಗಲಿದೆ ಆಲಿಯಾ ಭಟ್ ರ ಮತ್ತೊಂದು ಪ್ರತಿಭೆ

ಆರ್‌ಆರ್ಆರ್ ಸಿನಿಮಾಕ್ಕೆ ನಾಯಕಿಯಾಗಿ ಆಲಿಯಾ ಭಟ್ ಅನ್ನು ಆಯ್ಕೆ ಮಾಡಿದಾಗ ನಿರ್ದೇಶಕ ರಾಜಮೌಳಿ ನಿರ್ಧಾರವನ್ನು ಕೆಲವರು ಟೀಕಿಸಿದರು.

ಸುಶಾಂತ್ ಸಾವಿನ ನಂತರ ನೆಪೊಟಿಸಮ್ ಚರ್ಚೆ ನಡೆದಾಗಲೂ ಆಲಿಯಾ ಭಟ್ ಅನ್ನು ಆರ್‌ಆರ್‌ಆರ್ ಸಿನಿಮಾದಿಂದ ತೆಗೆಯಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ ರಾಜಮೌಳಿ. ಈಗ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ ಆಲಿಯಾ ಭಟ್.

ಆಲಿಯಾ ಭಟ್ ಒಳ್ಳೆಯ ನಟಿ ಮಾತ್ರವಲ್ಲ ಒಳ್ಳೆಯ ಗಾಯಕಿ ಸಹ, ನಟನೆಯ ಜೊತೆಗೆ ಆಲಿಯಾರ ಗಾಯನ ಪ್ರತಿಭೆಯನ್ನೂ ಬಳಸಿಕೊಳ್ಳಲು ನಿರ್ಧರಿಸಿದಂತಿದ್ದಾರೆ ನಿರ್ದೇಶಕ ರಾಜಮೌಳಿ. ಆರ್‌ಆರ್‌ಆರ್ ಸಿನಿಮಾದಲ್ಲಿ ಹಾಡೊಂದನ್ನು ಆಲಿಯಾ ಭಟ್ ಹಾಡುವ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ.

ಬಾಲಿವುಡ್‌ ಸಿನಿಮಾಗಳಲ್ಲಿ ಹಾಡಿದ್ದಾರೆ ಆಲಿಯಾ

ಬಾಲಿವುಡ್‌ ಸಿನಿಮಾಗಳಲ್ಲಿ ಹಾಡಿದ್ದಾರೆ ಆಲಿಯಾ

ಹೌದು, ಆಲಿಯಾ ಭಟ್ ಈಗಾಗಲೇ ಕೆಲವು ಬಾಲಿವುಡ್ ಸಿನಿಮಾಗಳಿಗೆ ಹಾಡಿದ್ದಾರೆ. ಅವರ ಇಕ್‌ ಕುಡಿ, ಸಮಜವಾನ್ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಇನ್ನೂ ಕೆಲವು ಸಿನಿಮಾಗಳಿಗೆ ಹಾಡಿದ್ದಾರೆ ಆಲಿಯಾ ಭಟ್.

ತಾವು ಅಭಿನಯಿಸುವ ಹಾಡನ್ನು ತಾವೇ ಹಾಡಲಿದ್ದಾರೆ ಆಲಿಯಾ!

ತಾವು ಅಭಿನಯಿಸುವ ಹಾಡನ್ನು ತಾವೇ ಹಾಡಲಿದ್ದಾರೆ ಆಲಿಯಾ!

ಆರ್‌ಆರ್‌ಆರ್ ಸಿನಿಮಾದಲ್ಲಿ ಆಲಿಯಾ ಭಟ್ ನರ್ತಿಸಲಿರುವ ಒಂದು ಜೋಶ್‌ ಭರಿತ ಹಾಡೊಂದಿದೆಯಂತೆ, ಈ ಹಾಡನ್ನು ಆಲಿಯಾ ಭಟ್ ರಿಂದಲೇ ಹಾಡಿಸಲು ಉತ್ಸುಕರಾಗಿದ್ದಾರೆ ರಾಜಮೌಳಿ. ಆದರೆ ಹಾಡನ್ನು ತೆಲುಗಿನಲ್ಲಿ ಹಾಡುತ್ತಾರಾ ಅಥವಾ ಆರ್‌ಆರ್‌ಆರ್ ಸಿನಿಮಾದ ಹಿಂದಿ ಡಬ್‌ಗೆ ಹಿಂದಿ ಹಾಡು ಹಾಡುತ್ತಾರಾ ಎಂಬುದು ಕಾದು ನೋಡಬೇಕಿದೆ.

ತೆಲುಗು ಕಲಿಯುತ್ತಿದ್ದಾರೆ ಆಲಿಯಾ ಭಟ್

ತೆಲುಗು ಕಲಿಯುತ್ತಿದ್ದಾರೆ ಆಲಿಯಾ ಭಟ್

ಆರ್‌ಆರ್ಆರ್ ಸಿನಿಮಾಕ್ಕಾಗಿ ಆಲಿಯಾ ಭಟ್ ತೆಲುಗು ಸಹ ಕಲಿಯುತ್ತಿದ್ದಾರಂತೆ. ಆಲಿಯಾ ಭಟ್ ಕೈಲಿ ತೆಲುಗು ಡಬ್ ಮಾಡಿಸುವ ಸಾಧ್ಯತೆ ಕಡಿಮೆ ಇದೆ. ಆದರೆ ಅಭಿನಯಿಸುವ ವೇಳೆ ಲಿಪ್‌ ಸಿಂಕ್‌ಗಾಗಿಯಾದರೂ ಆಲಿಯಾ ಕೊಂಚವಾದರೂ ತೆಲುಗು ಕಲಿಯಲೇಬೇಕಿದೆ.

Recommended Video

Vijay Deverakonda ತಮ್ಮನಿಗೋಸ್ಕರ ಸಾಲು ಸಾಲು ಟ್ವೀಟ್ ಮಾಡಿದ Rashmika | Filmibeat Kannada
ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ

ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ

ಆರ್‌ಆರ್‌ಆರ್ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಸಿದ್ದು, ತೆಲುಗಿನ ಇಬ್ಬರು ಸೂಪರ್ ಸ್ಟಾರ್‌ಗಳಾದ ಜ್ಯೂ ಎನ್‌ಟಿಆರ್‌, ರಾಮ್‌ಚರಣ್ ತೇಜ ಒಟ್ಟಿಗೆ ಅಭಿನಯಿಸುತ್ತಿರುವುದು ಒಂದು ಕಾರಣವಾದರೆ, ಸೂಪರ್ ಹಿಟ್ ನಿರ್ದೇಶಕ ರಾಜಮೌಳಿ ನಿರ್ದೇಶಕ ಎಂಬುದು ಮತ್ತೊಂದು ಕಾರಣ.

More from Filmibeat

English summary
Bollywood actress Alia Bhatt may do playback singing for Telugu RRR movie. She is leading lady in RRR movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X