'RRR' ಸಿನಿಮಾದ 'ಸೀತಾ' ಅಲಿಯಾ ಭಟ್ ಮೊದಲ ನೋಟ ಬಿಡುಗಡೆ

ದಕ್ಷಿಣ ಭಾರತದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಆರ್ ಆರ್ ಆರ್ ಸಿನಿಮಾದ ಅಲಿಯಾ ಭಟ್ ಮೊದಲ ನೋಟ ಬಿಡುಗಡೆಯಾಗಿದೆೆ. ಸೀತಾ ಪಾತ್ರದಲ್ಲಿ ನಟಿಸಿರುವ ಅಲಿಯಾ ಲುಕ್ ಅಭಿಮಾನಿಗಳ ನಿದ್ದೆಗೆಡಿಸಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಲಿಯಾಗೆ ಮೊದಲ ನೋಟ ಬಿಡುಗಡೆ ಮಾಡುವ ಮೂಲಕ ಆರ್ ಆರ್ ಆರ್ ಸಿನಿಮಾತಂಡ ಭರ್ಜರಿ ಉಡುಗೊರೆ ನೀಡಿದೆ. ಅಂದಹಾಗೆ ಅಲಿಯಾ ಪಾತ್ರದ ಮೊದಲ ನೋಟ ಬಿಡುಗಡೆ ಮಾಡುವುದಾಗಿ ಸಿನಿಮಾತಂಡ ನಿನ್ನೆಯೇ ಬಹಿರಂಗ ಪಡಿಸಿತ್ತು.

ಕತ್ತಲಲ್ಲಿ ದೇವರ ಮುಂದೆ ಕುಳಿತಿರುವ ಅಲಿಯಾ ಫೋಟೋ ಹಂಚಿಕೊಳ್ಳುವ ಮೂಲಕ ನಿರ್ದೇಶಕ ರಾಜಮೌಳಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು. ಇಂದು ಅಲಿಯಾ ಭಟ್‌ಗೆ ಶುಭಾಶಯ ತಿಳಿಸುವ ಜೊತೆಗೆ ಸೀತಾ ಪಾತ್ರದ ಮೊದಲ ನೋಟಕ್ಕಾಗಿ ಕಾಯುತ್ತಿರುವುದಾಗಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದರು.

Alia Bhatts first look as Sita in SS Rajamoulis RRR released today on her birthday

ಕೊನೆಗೂ ಸೀತಾ ಪಾತ್ರ ರಿವೀಲ್ ಆಗಿದೆ. ಹಸಿರು ಸೀರೆ ಧರಿಸಿ ರಾಮರಾಜುಗಾಗಿ ಕಾಯುತ್ತಾ ಕುಳಿತಿರುವ ಅಲಿಯಾ ಲುಕ್ ವೈರಲ್ ಆಗಿದೆ. ಅಲಿಯಾ ಮೊದಲ ನೋಟವನ್ನು ಹಂಚಿಕೊಂಡಿರುವ ನಿರ್ದೇಶಕ ರಾಜಮೌಳಿ, 'ರಾಮರಾಜುಗಾಗಿ ಸೀತಾ ಕಾಯುವಿಕೆ' ಎಂದು ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ರಾಮ್ ಚರಣ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್, ಚಿತ್ರದಲ್ಲಿ ಅಲ್ಲುರಿ ಸೀತಾರಾಮರಾಜು ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಮರಾಜು ಪ್ರೇಯಸಿ ಪಾತ್ರದಲ್ಲಿ ಅಲಿಯಾ ಬಣ್ಣ ಹಚ್ಚಿದ್ದಾರೆ.

ಇನ್ನು ಚಿತ್ರದಲ್ಲಿ ಜೂ. ಎನ್ ಟಿ ಆರ್ ಕೂಡ ನಟಿಸಿದ್ದು, ಕೊಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪಾತ್ರದ ಟೀಸರ್ ರಿಲೀಸ್ ಆಗಿದೆ. ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13ರಂದು ಬಿಡುಗಡೆಯಾಗುತ್ತಿದೆ.

Recommended Video

ಯಾರಿಗೂ ಗೊತ್ತಾಗದಂತೆ ಅಭಿಮಾನಿಗಳ ಮಧ್ಯೆ ಕುಳಿತು ರಾಬರ್ಟ್ ನೋಡಿದ ದರ್ಶನ್ | Filmibeat Kannada

More from Filmibeat

English summary
Actress Alia Bhatt's first look as Sita in SS Rajamouli's RRR released today on her birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X