ಮಹೇಶ್ ಬಾಬುಗಾಗಿ ಬರ್ತಿದ್ದಾಳೆ ಬಾಲಿವುಡ್ ಸುರಸುಂದರಿ!
ಪ್ಯಾನ್ ಇಂಡಿಯಾ ಸಿನಿಮಾಗಳು ಕಾನ್ಸೆಪ್ಟ್ ಬಂದಮೇಲೆ, ಬಾಲಿವುಡ್ ಮಂದಿ ಸೌತ್ ಚಿತ್ರದತ್ತ ಹೆಚ್ಚೆಚ್ಚು ಗಮನ ಕೊಡ್ತಿದ್ದಾರೆ. ಸದ್ಯ ತಮಿಳು, ತೆಲುಗು ಸಿನಿಮಾಗಳಲ್ಲಿ ಬಾಲಿವುಡ್ ಮಂದಿ ಯಾವುದೇ ಬ್ಯಾರಿಕೇಡ್ ಇಲ್ಲದೆ ಅಭಿನಯಿಸೋಕೆ ಮುಂದಾಗಿದ್ದಾರೆ. ಸದ್ಯ ಸೌತ್‌ನಲ್ಲಿ ಮಿಂಚಲು ರೆಡಿಯಾಗಿರುವ ಬಾಲಿವುಡ್ ಸ್ಟಾರ್ ನಟಿಯರು ಅಂದರೆ ಅದು ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ. ಈ ಇಬ್ಬರು ನಟಿಯರು ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅದರಲ್ಲೂ ಆಲಿಯಾ ಭಟ್ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.
ನಟಿ ಆಲಿಯಾ ಭಟ್ಟ RRR ಚಿತ್ರದ ಮೂಲಕ ಸೌತ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿನ ಆಲಿಯಾ ಭಟ್ ಲುಕ್ ಎಲ್ಲರಿಗೂ ಇಷ್ಟವಾಗಿದೆ. ಸೀತಾ ಪಾತ್ರದಲ್ಲಿ ಆಲಿಯಾ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಇದೇ ಮಾರ್ಚ್ 25ಕ್ಕೆ RRR ರಿಲೀಸ್ ಆಗುತ್ತಿದೆ. ರಾಜಮೌಳಿ ಚಿತ್ರದಲ್ಲಿ ಆಲಿಯಾ ಅಭಿನಯ ಹೇಗಿರಲಿದೆ ಎನ್ನುವ ಸಾಕಷ್ಟು ಕುತೂಹಲ ಮೂಡಿದೆ. ಈ ಚಿತ್ರದಲ್ಲಿ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಇದ್ದಾರೆ.
ಈಗ ಆಲಿಯಾ ಅದ್ಯಾಕೊ ಸೌತ್‌ನಲ್ಲೇ ಸೆಟಲ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಯಾಕೆಂದರೆ ಸಾಲು ಸಾಲು ತೆಲುಗು ಸಿನಿಮಾಗಳಿಗೆ ಆಲಿಯಾ ಹೆಸರು ಕೇಳಿ ಬರ್ತಿದೆ. ಈಗ ಮತ್ತೊಬ್ಬ ಸ್ಟಾರ್ ನಟನ ಜೊತೆಗೆ ಆಲಿಯಾ ಭಟ್ ಹೆಸರು ಕೇಳಿಬಂದಿದೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ಆಲಿಯಾ ಭಟ್ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರಕ್ಕೆ ನಿರ್ದೇಶಕ ರಾಜಮೌಳಿ ನಿರ್ದೇಶನ ಇರಲಿದೆ.

ನಿರ್ದೇಶಕ ರಾಜಮೌಳಿ RRR ಚಿತ್ರದ ಬಳಿಕ ಮಹೇಶ್ ಬಾಬುಗೆ ಸಿನಿಮಾ ಮಾಡಲಿದ್ದಾರೆ. ರಾಜಮೌಳಿಯ ಮುಂದಿನ ಮಹೇಶ್ ಬಾಬು ಜೊತೆಗೆ ಎನ್ನಲಾಗಿದೆ. ಇನ್ನು ಮಹೇಶ್ ಬಾಬು ಕೂಡ ರಾಜಮೌಳಿ ನಿರ್ದೇಶನದಲ್ಲಿ ಅಬ್ಬರಿಸುತ್ತಾರೆ ಎನ್ನುವ ಸುದ್ದಿ ಅದಾಗಲೇ ಟಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿದೆ. ಆದರೆ ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಸುದ್ದಿ ಈಗ ಮುನ್ನೆಲೆಗೆ ಬಂದಿದೆ. ನಟಿ ಆಲಿಯಾ ಭಟ್ ಮಹೇಶ್ ಬಾಬು ಜೊತೆಗೆ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ.
RRR ಚಿತ್ರ ಮುಗಿದ ಬಳಿಕ ಆಲಿಯಾ ಮತ್ತೊಂದು ತೆಲುಗು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಹಿಂದೆ ಆಲಿಯಾ ಭಟ್ ನಟ ಜೂನಿಯರ್ ಎನ್‌ಟಿಆರ್ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಸುದ್ದಿಗಳು ಬಂದಿದ್ದವು. ಆದರೆ ಆ ಸುದ್ದಿ ಅಧಿಕೃತವಾಗಿಲ್ಲ. ಅಷ್ಟರಲ್ಲೇ ಈಗ ಆಲಿಯಾ ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡುತ್ತಾರೆ ಎನ್ನಲಾಗಿದೆ. ಆದರೆ ಈ ವಿಚಾರವನ್ನು ಚಿತ್ರತಂಡವೇ ಅಧಿಕೃತಗೊಳಿಸಬೇಕು.

ಒಟ್ಟಾರೆ ಬಾಲಿವುಡ್‌ನಲ್ಲಿ ಬೇಲಿ ಹಾಕಿಕೊಂಡು ಲಾಕ್ ಆಗಿದ್ದ, ಸೋ ಕಾಲ್ಡ್ ಬಾಲಿವುಡ್ ಮಂದಿ ಈಗ ಬದಲಾಗಿದ್ದಾರೆ. ಸೌತ್ ಸಿನಿಮಾಗಳ ರುಚಿ ಕಂಡವರು ಇಲ್ಲೇ ಹೆಚ್ಚೆಚ್ಚು ಸಿನಿಮಾ ಮಾಡಲು ಮುಂದಾಗುತ್ತಿದ್ದಾರೆ. ಆ ಸಾಲಿಗೆ ಈಗ ಅಲಿಯಾ ಭಟ್ ಕೂಡ ಸೇರಿಕೊಂಡಿದ್ದಾರೆ. ಆಲಿಯಾ ಮಹೇಶ್ ಬಾಬು ಮತ್ತು ಜೂನಿಯರ್ ಎನ್‌ಟಿಆರ್ ಜೊತೆಗೆ ಅಭಿನಯಿಸಿದರೆ, ಒಟ್ಟು 3 ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದಂತಾಗುತ್ತದೆ. ಇನ್ನು ಆಲಿಯಾ ನಂತರ ದೀಪಿಕಾ ಸರದಿಯಲ್ಲಿ ಇದ್ದಾರೆ. ಸದ್ಯ ಪ್ರಾಜೆಕ್ಟ್ ಕೆ, ಚಿತ್ರದ ಮೂಲಕ ನಟಿ ದೀಪಿಕಾ ಪಡುಕೋಣೆ ಪ್ರಭಾಸ್ ಜೊತೆಗೆ ಅಭಿನಯಿಸುತ್ತಿದ್ದಾರೆ. ಆದರೆ ಈ ಚಿತ್ರದ ಬಳಿಕ ಮತ್ತೆ ತೆಲುಗು ಅಥವಾ ಸೌತ್ ಸಿನಿಮಾಗಳಲ್ಲಿ ಅಭಿನಯಿಸುತ್ತಾರಾ ನೋಡಬೇಕು.


Click it and Unblock the Notifications











