twitter
    For Quick Alerts
    ALLOW NOTIFICATIONS  
    For Daily Alerts

    "ಆಲ್ ಅಬೌಟ್ ಲವ್: ಪ್ರೀತಿ ಬಲವಾದ ಭಾವನೆ" ಪೂಜಾ ಹೆಗ್ಡೆ

    By ರವಿ ಕೊಟಕಿ
    |

    ತೆಲುಗು ಸಿನಿಮಾ ರಂಗದಲ್ಲಿ ಕರಾವಳಿ ಬೆಡಗಿಯರದ್ದೇ ಹವಾ. ಮೊದಲು ಅನುಷ್ಕಾ ಶೆಟ್ಟಿ ನಂಬರ್1 ನಟಿಯಾಗಿದ್ದಳು. ಇನ್ನು ಪೂಜಾ ಹೆಗ್ಡೆ ಈಗ ಆ ಸ್ಥಾನಕ್ಕೆ ಬಂದಿದ್ದಾಳೆ. ಇನ್ನು ಈಕೆಗೆ ಕಾಂಪಿಟೇಶನ್ ಕೊಡುವಂತೆ ಕೃತಿ ಶೆಟ್ಟಿ ಕೂಡ ಬೆಳೆಯುತ್ತಿದ್ದಾಳೆ. ಹಾಗೆ ನೋಡಿದರೆ ತೆಲುಗು ಸಿನಿಮಾ ರಂಗವನ್ನು ಹೆಚ್ಚುಕಾಲ ಆಳಿದ್ದು ಕನ್ನಡದ ನಟಿ ಸೌಂದರ್ಯ. ಅಲ್ಲದೆ ಈಗಂತೂ ಕನ್ನಡ ಬೆಡಗಿಯರದ್ದೆ ತೆಲುಗು ಸಿನಿಮಾ ರಂಗದಲ್ಲಿ ಪೂರ್ತಿ ಕಾರುಬಾರು.

    ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ, ನಭಾ ನಟೇಶ್, ಶ್ರೀಲೀಲಾ ಹೀಗೆ ಕನ್ನಡ ನಟಿಯರೇ ಅಲ್ಲಿ ಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಇನ್ನು ತೆಲುಗು ಸಿನಿಮಾ ರಂಗದಲ್ಲಿ ಟಾಪ್ ಒನ್ ನಟಿ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ ಮಧ್ಯೆ ತೀವ್ರ ಪೈಪೋಟಿ ಕೂಡ ನಡೆಯುತ್ತಿದೆ.

    ಅಲ್ಲದೆ ಇಬ್ಬರೂ ಕೂಡ ಈಗ ಬಾಲಿವುಡ್‌ನಲ್ಲಿಯೂ ಕೂಡ ಕೂಡ ತಮ್ಮ ಪಾರುಪತ್ಯ ಮೆರೆಯಲು ಮುಂದಾಗಿದ್ದು ಅಲ್ಲಿಯೂ ಕೂಡ ಇವರಿಬ್ಬರ ಮಧ್ಯೆ ನಡೆಯುವ ಸಾಧ್ಯತೆಗಳಿವೆ. ರಶ್ಮಿಕಾ ಮಂದಣ್ಣ ತನ್ನ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ 'ಪುಷ್ಪ' ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಪೂಜಾ ಹೆಗ್ಡೆ ಕೂಡ ಪ್ರಭಾಸ್ ಜೊತೆ ಅಭಿನಯಿಸಿರುವ 'ರಾಧೇಶ್ಯಾಮ್' ಬಿಡುಗಡೆಗಾಗಿ ಎದುರುನೋಡುತ್ತಿದ್ದಾರೆ.

    'ರಾಧೇಶ್ಯಾಮ್' ಡಬ್ಬಿಂಗ್ ಮುಗಿಸಿದ ಪೂಜಾ ಹೆಗ್ಡೆ

    'ರಾಧೇಶ್ಯಾಮ್' ಡಬ್ಬಿಂಗ್ ಮುಗಿಸಿದ ಪೂಜಾ ಹೆಗ್ಡೆ

    ಪೂಜಾ ಹೆಗ್ಡೆ ಪ್ರಸ್ತುತ ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಒಳ್ಳೆ ಅವಕಾಶ ಬಂದರೆ ತಮಿಳು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಮುಂಬೈನಲ್ಲಿ ಸ್ಥಿರಗೊಂಡಿರುವ ಮಂಗಳೂರಿನ ಈ ಶೆಟ್ಟರ ಮನೆಯ ಹುಡುಗಿ. ಪ್ರಸ್ತುತ 'ರಾಧೇಶ್ಯಾಮ್' ಚಿತ್ರದ ಮೇಲೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿರುವoತಹ ಪೂಜಾ ಹೆಗ್ಡೆ ಚಿತ್ರದ ಡಬ್ಬಿಂಗನ್ನು ಕೂಡ ಈಗಷ್ಟೆ ಮುಗಿಸಿದ್ದಾರೆ. 5 ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರದ ತೆಲುಗು ಮತ್ತು ಹಿಂದಿ ವರ್ಷನ್ ಗಳಿಗೆ ಮಾತ್ರ ಪೂಜಾ ಡಬ್ ಮಾಡಿದ್ದಾರೆ. ಕಳೆದ ವರ್ಷ 'ಅಲಾ ವೈಕುಂಠಪುರಮಲೋ'ಚಿತ್ರದ ಮೂಲಕ ಭಾರಿ ಯಶಸ್ಸನ್ನು ಕಂಡಿರುವ ಪೂಜಾ ಹೆಗಡೆ ಪ್ರಸ್ತುತ ತಮಿಳಿನ ಸೂಪರ್ ಸ್ಟಾರ್ ವಿಜಯ್ ಜೊತೆಯಲ್ಲಿ 'ಬ್ರೀಸ್ಟ್' ಚಿತ್ರದಲ್ಲಿ, ಬಾಲಿವುಡ್ ನಲ್ಲಿ ರಣವೀರ್ ಸಿಂಗ್ ಅಭಿನಯದ ರೋಹಿತ್ ಶೆಟ್ಟಿ ನಿರ್ದೇಶನದ 'ಸರ್ಕಸ್' ಚಿತ್ರಗಳಲ್ಲಿ ಕೂಡ ಅಭಿನಯಿಸುತ್ತಿದ್ದಾರೆ.

    ಮತ್ತೆ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರದಲ್ಲಿ ಅವಕಾಶ

    ಮತ್ತೆ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರದಲ್ಲಿ ಅವಕಾಶ

    ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರೂ ಪೂಜಾ ಹೆಗ್ಡೆ ಮಾತ್ರ ತನ್ನ ನೆಲೆಯಾದ ತೆಲುಗು ಸಿನಿಮಾ ರಂಗವನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. 'ತೆಲುಗಿನ ಆಫರ್ ಗಳನ್ನು ಪಕ್ಕಕ್ಕಿಟ್ಟು ಇತರ ಭಾಷೆಯ ಚಿತ್ರಗಳನ್ನು ಮಾಡಲು ತಾನು ಸಿದ್ಧ ಇಲ್ಲ' ಅಂತ ಹೇಳಿದ್ದಾಳೆ ಈ ಮೂವತ್ತೊಂದು ವರ್ಷದ ಬೆಡಗಿ. ಪ್ರಸ್ತುತ ಚಿರಂಜೀವಿ ರಾಮ್ ಚರಣ್ ಅಭಿನಯದ 'ಆಚಾರ್ಯ' ಚಿತ್ರದಲ್ಲಿ ನಟಿಸುತ್ತಿದ್ದು ಅದರ ನಂತರ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಮುಂದಿನ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಕೊಟ್ಟಿದ್ದಾರೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮಹೇಶ್ ಅವರಿಗೆ ನಾಯಕನಟಿಯಾಗಿ ನಟಿಸುತ್ತಿದ್ದಾಳೆ. ಇನ್ನು ಈ ಚಿತ್ರ ಪೂಜಾ ಹೆಗ್ಡೆ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಅವರ ಹ್ಯಾಟ್ರಿಕ್ ಕಾಂಬಿನೇಷನ್ ಅಂತ ಹೇಳಬಹುದು. ತ್ರಿವಿಕ್ರಮ್ ನಿರ್ದೇಶನದ 'ಅರವಿಂದ ಸಮೇತ' ಮತ್ತು 'ಅಲಾ ವೈಕುಂಠಪುರಮುಲೋ'ಚಿತ್ರಗಳಲ್ಲೂ ಕೂಡ ಪೂಜಾ ಹೆಗ್ಡೆ ನಾಯಕ ನಟಿಯಾಗಿ ನಟಿಸಿದ್ದಳು.ಇನ್ನು ತನ್ನ ಮುಂಬರುವ ಚಿತ್ರಗಳು ಸೇರಿದಂತೆ ಇತರ ವಿಚಾರಗಳ ಬಗ್ಗೆ ಪೂಜಾ ಹೆಗ್ಡೆ ಅನೇಕ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾಳೆ.

    'ಆಲ್ ಅಬೌಟ್ ಲವ್...'

    'ಆಲ್ ಅಬೌಟ್ ಲವ್...'

    ಪೂಜಾ ಹೆಗ್ಡೆಗೆ ಸಿನಿಮಾಗಳೆಂದರೆ ತುಂಬಾ ಇಷ್ಟ. ಅಭಿಮಾನಿಗಳು ಆಕೆಯನ್ನು ಪ್ರೀತಿಸುತ್ತಾರೆ. ಆಕೆಯ ಸಮರ್ಪಣ ಮನೋಭಾವಕ್ಕೆ ಉದ್ಯಮವು ಅವಳನ್ನು ಇಷ್ಟಪಡುತ್ತದೆ. ಅಭಿಮಾನಿಗಳು ಮತ್ತು ಉದ್ಯಮವು ಪ್ರೀತಿಯ ಪೂಜಾಳನ್ನು 'ಲಕ್ಕಿ ಚಾರ್ಮ್' ಎಂದು ಕರೆಯುತ್ತಾರೆ. "ಸಿನಿಮಾದ ಮೂಲಕ ತುಂಬಾ ಪ್ರೀತಿ ಸಿಕ್ಕಿದೆ, ಹಾಗಾಗಿ ಸಮಾಜಕ್ಕೆ ಮರಳಿ ಕೊಡಲು ಬಯಸುತ್ತೇನೆ" ಎಂದಿರುವ ಪೂಜಾ ಹೆಗ್ಡೆ 'ಆಲ್ ಅಬೌಟ್ ಲವ್' ಫೌಂಡೇಶನ್ ಆರಂಭಿಸಿದ್ದಾಳೆ. 'ಪ್ರೀತಿ ಬಲವಾದ ಭಾವನೆ' ಎನ್ನುತ್ತಾರೆ ಪೂಜಾ.

    ಪ್ರಸ್ತುತ ನಟಿಸುತ್ತಿರುವ ಚಿತ್ರಗಳು

    ಪ್ರಸ್ತುತ ನಟಿಸುತ್ತಿರುವ ಚಿತ್ರಗಳು

    ಪ್ರಸ್ತುತ ನಟಿಸುತ್ತಿರುವ ಚಿತ್ರಗಳ ಬಗ್ಗೆ ಮಾತನಾಡಿರುವ ಪೂಜಾ" ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ಒಟ್ಟು ಆರು ಚಿತ್ರಗಳಲ್ಲಿ ಪ್ರಸ್ತುತ ನಟಿಸುತ್ತಿದ್ದೇನೆ. ಪ್ರಸ್ತುತ ಕೆರಿಯರ್ ಬ್ಯುಸಿ. ಡೇಟ್ಸ್ ಅಡ್ಜೆಸ್ಟ್ ಮಾಡಲು ಸಾಧ್ಯವಿಲ್ಲ ಅಂದುಕೊಂಡರೂ ನನ್ನ ನಿರ್ಮಾಪಕರು 'ಏನಾಯ್ತು, ಮ್ಯಾನೇಜ್ ಮಾಡೋಣ, ಒಪ್ಪಿಕೊಳ್ಳಿ' ಎಂದು ಪ್ರೀತಿಯಿಂದ ಹೇಳುತ್ತಾರೆ. ಏಕೆಂದರೆ ನಾನು ಎಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ ಎಂಬುದು ನನ್ನ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಗೊತ್ತು. 'ನಿಮಗಾಗಿ ಈ ಪಾತ್ರವನ್ನು ಬರೆದಿದ್ದೇನೆ' ಎಂದು ನಿರ್ದೇಶಕರು ಹೇಳಿದಾಗ ಹೆಚ್ಚು ಜವಾಬ್ದಾರಿ ಅನಿಸುತ್ತದೆ. ಅದಕ್ಕಾಗಿಯೇ ನಾನು ಮಾಡುವ ಪ್ರತಿ ಪಾತ್ರಕ್ಕೂ ನೂರಕ್ಕೆ ನೂರು ಶ್ರಮ ಹಾಕುತ್ತೇನೆ.

    ‘ಲಕ್ಕಿ ಚಾರ್ಮ್...’ ಎಂಬ ಮಾತು ಕೇಳಿಬರುತ್ತಿದೆ

    ‘ಲಕ್ಕಿ ಚಾರ್ಮ್...’ ಎಂಬ ಮಾತು ಕೇಳಿಬರುತ್ತಿದೆ

    'ಈ ಟ್ಯಾಗ್ ತುಂಬಾ ಭಾರವಾಗಿರುವುದರಿಂದ ಸಿನಿಮಾ ಬಿಡುಗಡೆಗೂ ಮುನ್ನ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತೀರಾ?' ಎಂಬ ಪ್ರಶ್ನೆಗೆ ನಗುವ ಪೂಜಾ ಹೆಗ್ಡೆ "ಇಷ್ಟು ಪ್ರೀತಿ ನೀಡುವ ಅಭಿಮಾನಿಗಳು ಮತ್ತು ಒಳ್ಳೆಯ ಪಾತ್ರಗಳನ್ನು ನೀಡುವ ನಿರ್ದೇಶಕರು-ನಿರ್ಮಾಪಕರು ಸಿಗುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಯಾವುದೇ ಚಿತ್ರ ದೊಡ್ಡ ಹಿಟ್ ಆಗಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ಆದರೆ ಲಕ್ಕಿ ಚಾರ್ಮ್ ಟ್ಯಾಗ್ ಇಲ್ಲದಿದ್ದರೂ ಸಿನಿಮಾ ರಿಲೀಸ್ ಗೂ ಮುನ್ನ ನನಗೆ ಟೆನ್ಷನ್ ಇರುತ್ತದೆ. ನಾನು ಮಾಡುವ ಪ್ರತಿಯೊಂದು ಸಿನಿಮಾ ನನಗೆ ಮುಖ್ಯ. ಅಲ್ಲದೆ ಲಕ್ಕಿ ಚಾರ್ಮ್ ಮೊದಲ ಕೆಲವು ಬಾರಿ ಒಳ್ಳೆಯದು. ಒಂದೋ ಎರಡೋ ಸಿನಿಮಾ ಹಿಟ್ ಆದ್ರೆ ಅದೃಷ್ಟ. ಐದನೇ ಮತ್ತು ಆರನೇ ಬಾರಿ ಹಿಟ್‌ಗಳನ್ನು ಸಾಧಿಸುವುದು ಕೇವಲ ಅದೃಷ್ಟವಲ್ಲ. ಸರಿಯಾದ ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡುವುದು ಕಾರಣ. ಕಥೆ ಕೇಳಿದ ನಂತರ ಈ ಸಿನಿಮಾ ಮಾಡಬೇಕೆಂದರೆ ಮಾಡುತ್ತೇನೆ. ಇಂತಹ ದಿಟ್ಟ ನಂಬಿಕೆಗಳನ್ನಿಟ್ಟು ಮಾಡಿದ ಚಿತ್ರಗಳು ಯಶಸ್ವಿಯಾದವು. ನಾನು ಬಿಟ್ಟುಕೊಟ್ಟ ಕೆಲವು ಸಿನಿಮಾಗಳು ಚೆನ್ನಾಗಿ ಆಡಲಿಲ್ಲ. ಸಿನಿಮಾ ಹಿಟ್ ಆಗುತ್ತಿದ್ದಂತೆ ನನ್ನ ತೀರ್ಪಿನ ಮೇಲಿನ ನಂಬಿಕೆ ಹೆಚ್ಚಾಯಿತು. ಆದ್ದರಿಂದಲೇ ನನ್ನ ಚಿತ್ರಗಳು ಹಿಟ್ ಆಗುವುದು ಸಂಪೂರ್ಣ ಅದೃಷ್ಟವಲ್ಲ.

    ಕೆಲಸದೊಂದಿಗೆ ಮದುವೆಯಾಗಿದೆ

    ಕೆಲಸದೊಂದಿಗೆ ಮದುವೆಯಾಗಿದೆ

    ಪ್ರಸ್ತುತ ಕೈತುಂಬ ಕೆಲಸ ಹೊಂದಿರುವ ಪೂಜಾ ಹೆಗ್ಡೆ ಮದುವೆ ವಿಚಾರದ ಬಗ್ಗೆ ಕೇಳಿದರೆ
    " ಈಗ ಮದುವೆಯಾಗುವ ಯೋಚನೆ ಇಲ್ಲ. ಇದೀಗ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ.
    'ಮನೆ ಕಟ್ಟು ಮದುವೆ ಮಾಡು' ಎನ್ನುತ್ತಾರೆ. ಈ ನಡುವೆ ಮುಂಬೈನಲ್ಲಿ ಮನೆ ಖರೀದಿಸಿದ್ದೇನೆ. ಮನೆ ಕಟ್ಟುವ ಕೆಲಸ ಮುಗಿದಿದೆ ಆದರೆ ಇನ್ನೂ ಮದುವೆಯಾಗಲು ತುಂಬಾ ಸಮಯ ಇದೆ. ಪ್ರಸ್ತುತ ಕೆಲಸದೊಂದಿಗೆ ನನ್ನ ಮದುವೆಯಾಗಿದೆ" ಅಂತ ಜೋರಾಗಿ ನಗುತ್ತಾಳೆ.

    ಇಲ್ಲಿ ಗಾಸಿಪ್ ತುಂಬಾ ಕಾಮನ್

    ಇಲ್ಲಿ ಗಾಸಿಪ್ ತುಂಬಾ ಕಾಮನ್

    ಸಿನಿಮಾರಂಗದಲ್ಲಿ ಗಾಸಿಪ್ ಗಳು ಸರ್ವೇಸಾಮಾನ್ಯ ಇಲ್ಲಿ 'ಇಲಿ ಹೋದರು ಹುಲಿ ಹೋಯಿತು'ಅಂತ ಬಣ್ಣಿಸುತ್ತಾರೆ. ತಂದೆ ತುಂಬಾ ಕಟ್ಟುನಿಟ್ಟಾಗಿದ್ದರು. ಆದರೆ, ನಮ್ಮ ತಾಯಿ ತುಂಬಾ ಸ್ವತಂತ್ರಳು. ನಮ್ಮ ತಂದೆ ಮುಕ್ತ ಮನಸ್ಸಿನವರು. ನನ್ನ ಸ್ವಂತ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುವಂತೆ ನನ್ನನ್ನು ಬೆಳೆಸಿದ್ದಾರೆ. ಸುಖಾಸುಮ್ಮನೆ ನಾಯಕಿಯರ ಬಗ್ಗೆ ಗಾಸಿಪ್‌ಗಳು ಹುಟ್ಟಿಕೊಳ್ಳುತ್ತವೆ. ಅದೆಲ್ಲವನ್ನೂ ಸಹಿಸುವ ಧೈರ್ಯವಿರುವ ಹುಡುಗಿಯಾಗಿ ನಮ್ಮ ಅಜ್ಜಿ ನನ್ನನ್ನು ಬೆಳೆಸಿದ್ದಾರೆ. ನಾವು ಸ್ಪಷ್ಟ, ಮುಕ್ತ ಮತ್ತು ಹೃತ್ಪೂರ್ವಕವಾಗಿರಬೇಕು. ಮನೆಯವರೊಂದಿಗೆ ಧೈರ್ಯವಾಗಿ ನಮ್ಮ ಮನದ ಮಾತನ್ನು ಹೇಳಬೇಕು. ಮನೆಯಲ್ಲಿ ಹೆಚ್ಚು ಸ್ವಾತಂತ್ರ್ಯ ಇದ್ದಾಗ ನಾವು ಏನನ್ನೂ ಎದುರಿಸುತ್ತೇವೆ ಅದನ್ನು ಹಂಚಿಕೊಳ್ಳುವ ಮುಕ್ತ ಅವಕಾಶವಿರುತ್ತದೆ. ನಮ್ಮ ಮನೆಯಲ್ಲಿ ಆ ಸ್ವಾತಂತ್ರ್ಯವಿದೆ.

    ನಾನು ತುಂಬಾ ಕೂಲ್ ಹುಡುಗಿ

    ನಾನು ತುಂಬಾ ಕೂಲ್ ಹುಡುಗಿ

    "ನಾನು ಪ್ರತಿಯೊಂದನ್ನು ಮೃದುವಾಗಿಯೇ ಹೇಳುತ್ತೇನೆ. ಕಠಿಣವಾದ ಶಬ್ದಗಳಿಂದ ಪ್ರತಿಕ್ರಿಯಿಸಲು ನನಗೆ ಇಷ್ಟವಿಲ್ಲ, ನಾನು ತುಂಬಾ ಕೂಲ್ ಹುಡುಗಿ. ನನಗೆ ಸಿಟ್ಟು ಬಂದರು, ನೊಂದುಕೊಂಡರು ಅಳುತ್ತೇನೆ.ನಾವು ಎಲ್ಲದರಲ್ಲೂ ಕಠಿಣವಾಗಿರಬೇಕು ಎಂದು ನಾನು ಭಾವಿಸುವುದಿಲ್ಲ. ಆದಾಗ್ಯೂ, ನಮ್ಮ ಸ್ವಾಭಿಮಾನಕ್ಕೆ ಹಾನಿಯಾಗುವ ಸಂದರ್ಭಗಳಲ್ಲಿ ನಾವು ಕಠಿಣವಾಗಿರಬಹುದು ಎಂದು ನಾನು ನಂಬುತ್ತೇನೆ. ಮತ್ತು ಪ್ರತಿ ಸಣ್ಣ ವಿಷಯಕ್ಕೂ ಬಿಪಿ ಏರಿಸಿಕೊಂಡು ಪ್ರತಿಕ್ರಿಯಿಸುವುದು ವ್ಯರ್ಥ ಎಂಬುದು ನನ್ನ ಭಾವನೆ. ಇದು ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ."

    ಫೌಂಡೇಶನ್ ಮೂಲಕ ಹೆಚ್ಚಿನ ಸೇವಾ ಕಾರ್ಯಗಳು

    ಫೌಂಡೇಶನ್ ಮೂಲಕ ಹೆಚ್ಚಿನ ಸೇವಾ ಕಾರ್ಯಗಳು

    'ಆಲ್ ಅಬೌಟ್ ಲವ್' ಎಂಬ ಪ್ರತಿಷ್ಠಾನದ ಮೂಲಕ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಗ್ಗೆ ಮಾತನಾಡಿರುವ ಪೂಜಾ ಹೆಗ್ಡೆ " ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ಭಾವನೆಗಳಲ್ಲಿ ಪ್ರೀತಿ ತುಂಬಾ ಪ್ರಬಲವಾಗಿದೆ ಎಂದು ನಾನು ನಂಬುತ್ತೇನೆ. ಪ್ರೀತಿಯಿಂದ ಏನೇ ಮಾಡಿದರೂ ಮನಸ್ಸಿಗೆ ಒಳ್ಳೆಯದು. ಹೀಗಾಗಿ ಪ್ರೀತಿಯಿಂದಲೇ ನಾನು ದಾನಧರ್ಮ ಮಾಡುತ್ತಿದ್ದೇನೆ. ಆದಾಗ್ಯೂ, ಫೌಂಡೇಶನ್ ಮೂಲಕ ಇನ್ನೂ ಹೆಚ್ಚಿ ಸೇವಾಕಾರ್ಯಗಳನ್ನು ಮಾಡಲು ಇಚ್ಚಿಸಿದ್ದೇನೆ. ಪ್ರೀತಿಯಿಂದ ಮಾಡುವ ಯಾವುದೇ ಕಾರ್ಯವು ಹೆಚ್ಚು ಸಂತೃಪ್ತಿಯನ್ನು ಕೊಡುತ್ತದೆ ಮತ್ತು ಅದು ಶಾಶ್ವತ ಎಂದು ನಾನು ಭಾವಿಸುತ್ತೇನೆ."ಎನ್ನುತ್ತಾರೆ ಪೂಜಾ ಹೆಗ್ಡೆ

    English summary
    All about life: love is a strong feeling: Pooja heage, 'all about love' is a foundation dedicated to social service which is founded by Pooja.
    Monday, December 6, 2021, 9:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X