For Quick Alerts
  ALLOW NOTIFICATIONS  
  For Daily Alerts

  ತೆಲುಗಿನಲ್ಲಿ ಅಲ್ಲು ಅರವಿಂದ್ Vs ದಿಲ್ ರಾಜು: ತಮಿಳಿನಲ್ಲಿ ಸೆಲ್ವ ರಾಘವನ್ Vs ಮಣಿರತ್ನಂ!

  |

  ಟಾಲಿವುಡ್‌ನಲ್ಲಿ ಇಬ್ಬರು ದೊಡ್ಡ ನಿರ್ಮಾಪಕರು ಬಾಕ್ಸಾಫೀಸ್‌ನಲ್ಲಿ ಕಾದಾಟಕ್ಕೆ ಇಳಿಯೋದು ಹೊಸದೇನಲ್ಲ. ಈ ಹಿಂದೆ ಕೂಡ ತೆಲುಗು ಚಿತ್ರರಂಗದಲ್ಲಿ ಇಂತಹ ಹಲವು ಘಟನೆಗಳು ನಡೆದಿದೆ. ಈ ಬಾರಿ ಸ್ಟಾರ್ ನಿರ್ಮಾಪಕರಿಬ್ಬರ ಬಾಕ್ಸಾಫೀಸ್ ಫೈಟ್ ಕೊಂಚ ಇಂಟ್ರೆಸ್ಟಿಂಗ್.

  ಅಂದ್ಹಾಗೆ, ಬಾಕ್ಸಾಫೀಸ್‌ನಲ್ಲಿ ಕಾದಾಟಕ್ಕೆ ಇಳಿದಿರೋ ಇಬ್ಬರು ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರು ಮೆಗಾ ಫ್ಯಾಮಿಲಿಗೆ ಸೇರಿದ ನಿರ್ಮಾಪಕ ಅಲ್ಲು ಅರವಿಂದ್. ಇನ್ನೊಬ್ಬ ಸ್ಟಾರ್ ನಿರ್ಮಾಪಕ ದಿಲ್ ರಾಜು. ಇವರಿಬ್ಬರೂ ಆಂಧ್ರ-ತೆಲಂಗಾಣ ವಿತರಣೆ ಮಾಡಲು ಹೊರಟಿರೋ ಸಿನಿಮಾಗಳು ಒಂದು ದಿನ ಹಿಂದೆ ಮುಂದೆ ರಿಲೀಸ್ ಆಗುತ್ತಿದೆ.

  ರಜನಿಕಾಂತ್ ಮಾಜಿ ಅಳಿಯ ಧನುಷ್ ಒಟ್ಟು ಆಸ್ತಿ ಎಷ್ಟು? ಬಂಗಲೆ, ಕಾರುಗಳು ಬಲು ದುಬಾರಿ!ರಜನಿಕಾಂತ್ ಮಾಜಿ ಅಳಿಯ ಧನುಷ್ ಒಟ್ಟು ಆಸ್ತಿ ಎಷ್ಟು? ಬಂಗಲೆ, ಕಾರುಗಳು ಬಲು ದುಬಾರಿ!

  ಇನ್ನೊಂದು ಕಡೆ ತಮಿಳುನಾಡಿನಲ್ಲೂ ನಿರ್ದೇಶಕ ಮಣಿರತ್ನಂ ಹಾಗೂ ಸೆಲ್ವರಾಘವನ್ ಮಧ್ಯೆ ಫೈಟ್ ಏರ್ಪಟ್ಟಿದೆ. ಇವರಿಬ್ಬರ ಮಧ್ಯೆ ಯಾರು ಗೆಲ್ಲುತ್ತಾರೋ? ಅನ್ನೋ ಕುತೂಹಲ ದುಪ್ಪಟ್ಟಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಎರಡೂ ಕಾಳಗಳಿಗೂ ಒಂದು ಕಾಮನ್ ಲಿಂಕ್ ಇದೆ.

   ಅಲ್ಲು ಅರವಿಂದ್ Vs ದಿಲ್ ರಾಜು

  ಅಲ್ಲು ಅರವಿಂದ್ Vs ದಿಲ್ ರಾಜು

  ಎರಡು ತಮಿಳು ಸಿನಿಮಾಗಳಿಗಾಗಿ ತೆಲುಗಿನ ನಿರ್ಮಾಪಕರು ಬಾಕ್ಸಾಫೀಸ್‌ನಲ್ಲಿ ಕಾದಾಡಲು ಶುರು ಮಾಡಿದ್ದಾರೆ. ಅಲ್ಲು ಅರವಿಂದ್ ತಮಿಳಿನ ಧನುಷ್ ಅಭಿನಯದ 'ನೇನೆ ವಸ್ತುನ್ನಾ' ಸಿನಿಮಾವನ್ನು ವಿತರಣೆ ಮಾಡುತ್ತಿದ್ದಾರೆ. ಅತ್ತ ದಿಲ್ ರಾಜು ತಮಿಳಿನ ಅದ್ಧೂರಿ ಸಿನಿಮಾ 'ಪೊನ್ನಿಯನ್ ಸೆಲ್ವನ್-1' ಅನ್ನು ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದಾರೆ. 'ನೇನೇ ವಸ್ತುನ್ನಾ' ಸೆಪ್ಟೆಂಬರ್ 29ಕ್ಕೆ ತೆರೆಕಾಣುತ್ತಿದ್ದರೆ, ಅತ್ತ 'ಪೊನ್ನಿಯನ್ ಸೆಲ್ವನ್' ಸೆಪ್ಟೆಂಬರ್ 30ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ ಇಬ್ಬರೂ ಗಳಿಕೆಗಾಗಿ ಬಾಕ್ಸಾಫೀಸ್‌ನಲ್ಲಿ ಕಾದಾಡಲೇ ಬೇಕಿದೆ.

  ರಜನಿಕಾಂತ್ ಕಾಲಿಗೆ ಬಿದ್ದ ಐಶ್ವರ್ಯಾ ರೈ: ಹಾಗಂತ ಇದು ಮೊದಲೇನಲ್ಲ!ರಜನಿಕಾಂತ್ ಕಾಲಿಗೆ ಬಿದ್ದ ಐಶ್ವರ್ಯಾ ರೈ: ಹಾಗಂತ ಇದು ಮೊದಲೇನಲ್ಲ!

   ಮಣಿರತ್ನಂ Vs ಸೆಲ್ವ ರಾಘವನ್

  ಮಣಿರತ್ನಂ Vs ಸೆಲ್ವ ರಾಘವನ್

  ತಮಿಳುನಾಡಿನಲ್ಲೂ ಈ ಎರಡು ಸಿನಿಮಾಗಳೇ ಪೈಪೋಟಿಗೆ ಇಳಿದಿವೆ. ಮಣಿರತ್ನಂ ಹಾಗೂ ಸೆಲ್ವ ರಾಘವನ್ ಇಬ್ಬರೂ ನಿರ್ದೇಶಿಸಿದ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಗುದ್ದಾಡಲಿವೆ. ಸೆಲ್ವ ರಾಘವನ್ ನಿರ್ದೇಶಿಸಿದ ಸಿನಿಮಾ ತಮಿಳಿನಲ್ಲಿ 'ನಾನೇ ವರುವೇನ್' ಶೀರ್ಷಿಕೆಯಲ್ಲಿ ರಿಲೀಸ್ ಆಗಲಿದೆ. ಇತ್ತ 'ಪೊನ್ನಿಯನ್ ಸೆಲ್ವನ್' ಸೇಮ್ ಟೈಟಲ್‌ನಲ್ಲಿ ಬಿಡುಗಡೆಯಾಗಲಿದೆ. ಇವೆರಡೂ ಕಾಲಿವುಡ್‌ ಬಾಕ್ಸ್‌ಆಫೀಸ್‌ಗೆ ಬಿಗ್ ಸಿನಿಮಾಗಳೇ..

   'ಪೊನ್ನಿಯನ್ ಸೆಲ್ವನ್' ಬಿಗ್ ಸಿನಿಮಾ

  'ಪೊನ್ನಿಯನ್ ಸೆಲ್ವನ್' ಬಿಗ್ ಸಿನಿಮಾ

  ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್' ಸಿನಿಮಾ ಮೇಲೆ ನಿರೀಕ್ಷೆಗಳು ನೂರಿವೆ. ಅಲ್ಲದೆ ಇದು ಮಲ್ಟಿ ಸ್ಟಾರರ್ ಸಿನಿಮಾ. ತಮಿಳಿನ ಬಹುತೇಕ ಸ್ಟಾರ್ ನಟರೆಲ್ಲರೂ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಾರ್ತಿ, ವಿಕ್ರಂ, ಜಯಂ ರವಿ, ತ್ರಿಶಾ ಸೇರಿದಂತೆ ಟಾಲಿವುಡ್‌ ದಿಗ್ಗಜರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೊಂದು ಕಡೆ ಮತ್ತೆ ಮಣಿರತ್ನಂ ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್ ನಟಿಸಿದ್ದು, ಸಿನಿಪ್ರಿಯರಲ್ಲಿ ಕುತೂಹಲ ದುಪ್ಪಟ್ಟಾಗಿದೆ.

   ಸಹೋದರರ ಸವಾಲ್!

  ಸಹೋದರರ ಸವಾಲ್!

  ಸೆಲ್ವ ರಾಘವನ್ ನಿರ್ದೇಶನದ 'ನಾನೇ ವರುವೇನ್' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಸೆಪ್ಟೆಂಬರ್ 29ರಂದು ಈ ಚಿತ್ರ ಬಿಡುಗಡೆಯಾಗುತ್ತೆ. ತಮಿಳಿನಲ್ಲಿ ಹೆಚ್ಚು ಸಕ್ಸಸ್‌ಫುಲ್ ಸಿನಿಮಾಗಳನ್ನು ನೀಡುತ್ತಿರೋ ಧನುಷ್ ಈ ಚಿತ್ರದ ಹೀರೊ. ಅಂದ್ಹಾಗೆ 'ಮಯಕ್ಕಂ ಎನ್ನ' ಸಿನಿಮಾದ ಬಳಿಕ ಸಹೋದರರಾದ ಸೆಲ್ವ ರಾಘವನ್ ಹಾಗೂ ಧನುಷ್ ಇಬ್ಬರೂ ಒಂದೇ ಸಿನಿಮಾಗೆ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈಗ 'ನಾನೇ ವರುವೇನ್' ಮೂಲಕ ಸಹೋದರರು ಸವಾಲೆಸೆಯುವುದಕ್ಕೆ ಸಜ್ಜಾಗಿದ್ದಾರೆ.

  English summary
  Allu Aravind Vs Dil Raju And Dhanush Nenu Vastunna Vs Mani Ratnam Ponniyan Selvan Clash, Know More.
  Wednesday, September 14, 2022, 22:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X