twitter
    For Quick Alerts
    ALLOW NOTIFICATIONS  
    For Daily Alerts

    ಪವನ್ ಕಲ್ಯಾಣ್ ಹುಟ್ಟುಹಬ್ಬದಂದು ಫ್ಯಾನ್ಸ್ ಸಾವು: ಕುಟುಂಬದ ನೆರವಿಗೆ ನಿಂತ ಮೆಗಾ ನಟರು

    |

    ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟನ ಬರ್ತಡೇ ಪ್ರಯುಕ್ತ ಪವನ್ ಕಲ್ಯಾಣ್ ಬ್ಯಾನರ್‌ಗಳನ್ನು ಹಾಕುವ ವೇಳೆ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕುಪ್ಪುಂನಲ್ಲಿ ನಡೆದಿದೆ.

    Recommended Video

    Sudeep ಹುಟ್ಟು ಹಬ್ಬದಂದು ಅವರ ಬಯೋಗ್ರಫಿ ಬಿಡುಗಡೆ ಮಾಡಿದ Puneeth Rajkumar | Filmibeat Kannada

    ಪವರ್ ಸ್ಟಾರ್ ಜನುಮದಿನದ ಹಿನ್ನೆಲೆ ಕಳೆದ ರಾತ್ರಿ ಫ್ಲೆಕ್ಸ್ ಹಾಕಲು ಅಭಿಮಾನಿಗಳು ಮುಂದಾಗಿದ್ದರು. ಅದರ ಪಕ್ಕದಲ್ಲಿ ಕರೆಂಟ್ ವೈರ್ ಇದ್ದ ಕಾರಣ ವಿದ್ಯುತ್ ಸ್ಪರ್ಶವಾಗಿದೆ. ಸ್ಥಳದಲ್ಲೇ ಮೂವರು ಅಭಿಮಾನಿಗಳು ಮೃತಪಟ್ಟಿದ್ದಾರೆ. ಇದೀಗ, ಅಭಿಮಾನಿಗಳ ಕುಟುಂಬದ ಪರ ನಿಂತಿರುವ ಅಲ್ಲು ಅರ್ಜುನ್, ರಾಮ್ ಚರಣ್ ತೇಜ ಸೇರಿದಂತೆ ಕೆಲವು ನಿರ್ಮಾಣ ಸಂಸ್ಥೆಗಳು ಸಹ ನೆರವು ಘೋಷಿಸಿದೆ. ಮುಂದೆ ಓದಿ...

    2 ಲಕ್ಷ ಪರಿಹಾರ ಘೋಷಿಸಿದ ಅಲ್ಲು ಅರ್ಜುನ್

    2 ಲಕ್ಷ ಪರಿಹಾರ ಘೋಷಿಸಿದ ಅಲ್ಲು ಅರ್ಜುನ್

    ಪವನ್ ಕಲ್ಯಾಣ್ ಅಭಿಮಾನಿಗಳ ಸಾವಿಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಂತಾಪ ಸೂಚಿಸಿದ್ದಾರೆ. ''ಇಂತಹ ಸಂದರ್ಭದಲ್ಲಿ ಅವರ ಕುಟುಂಬದ ಜೊತೆ ನಿಲ್ಲಬೇಕಾಗಿರುವುದು ನಮ್ಮ ಕರ್ತವ್ಯ'' ಎಂದಿರುವ ಅಲ್ಲು ಮೃತ ಅಭಿಮಾನಿ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

    ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕಲು ಹೋಗಿ ಮೂವರು ಅಭಿಮಾನಿಗಳ ಸಾವುಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕಲು ಹೋಗಿ ಮೂವರು ಅಭಿಮಾನಿಗಳ ಸಾವು

    ರಾಮ್ ಚರಣ್ ತೇಜ ಪರಿಹಾರ

    ರಾಮ್ ಚರಣ್ ತೇಜ ಪರಿಹಾರ

    ಮೆಗಾಸ್ಟಾರ್ ಪುತ್ರ ರಾಮ್ ಚರಣ್ ತೇಜ ಸಹ ಪವನ್ ಕಲ್ಯಾಣ್ ಅಭಿಮಾನಿಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ 2.5 ಲಕ್ಷ ಪರಿಹಾರ ಘೋಷಿಸಿದ್ದಾರೆ.

    ಪವನ್ ಕಲ್ಯಾಣ್ ನೆರವು

    ಪವನ್ ಕಲ್ಯಾಣ್ ನೆರವು

    ಇನ್ನು ಪವನ್ ಕಲ್ಯಾಣ್ ಸಹ ಅಭಿಮಾನಿಗಳ ಸಾವಿಗೆ ಮರುಗಿದ್ದು, ಕುಟುಂಬಗಳ ನೆರವಿಗೆ ಧಾವಿಸಿದ್ದಾರೆ. ಮೂರು ಕುಟುಂಬಕ್ಕೂ ತಲಾ 2 ಲಕ್ಷ ಪರಿಹಾರ ನೀಡಿದ್ದಾರೆ.

    ಮಹೇಶ್ ಬಾಬು ಅಭಿಮಾನಿಗಳ ದಾಖಲೆ ಬೆನ್ನತ್ತಿದೆ ಪವನ್ ಕಲ್ಯಾಣ್ ಫ್ಯಾನ್ಸ್!ಮಹೇಶ್ ಬಾಬು ಅಭಿಮಾನಿಗಳ ದಾಖಲೆ ಬೆನ್ನತ್ತಿದೆ ಪವನ್ ಕಲ್ಯಾಣ್ ಫ್ಯಾನ್ಸ್!

    ನಿರ್ಮಾಣ ಸಂಸ್ಥೆಗಳು ಪರಿಹಾರ

    ನಿರ್ಮಾಣ ಸಂಸ್ಥೆಗಳು ಪರಿಹಾರ

    ಮೆಗಾಫ್ಯಾಮಿಲಿಯ ನಟರು ಮಾತ್ರವಲ್ಲ ಕೆಲವು ನಿರ್ಮಾಣ ಸಂಸ್ಥೆಗಳು ಸಹ ಮೃತ ಅಭಿಮಾನಿಗಳ ಕುಟುಂಬಕ್ಕೆ ನೆರವು ನೀಡಿದ್ದಾರೆ. ಪವನ್ ಕಲ್ಯಾಣ್ ನಟಿಸುತ್ತಿರುವ 'ವಕೀಲ್ ಸಾಬ್' ಚಿತ್ರ ನಿರ್ಮಿಸುತ್ತಿರುವ ಶ್ರೀವೆಂಕಟೇಶ್ವರ್ ಕ್ರಿಯೇಷನ್ಸ್ 2 ಲಕ್ಷ ಪರಿಹಾರ ಘೋಷಿಸಿದೆ. ಪವನ್ ಅವರು 27ನೇ ಚಿತ್ರ ನಿರ್ಮಿಸುತ್ತಿರುವ ಮೆಗಾ ಸೂರ್ಯ ಪ್ರೊಡಕ್ಷನ್ ಸಹ 2 ಲಕ್ಷ ಪರಿಹಾರ ಘೋಷಿಸಿದೆ. ಪವನ್ ಕಲ್ಯಾಣ್ 28ನೇ ಚಿತ್ರ ಮಾಡುತ್ತಿರುವ ಮೈತ್ರಿ ಮೂವಿ ಮೇಕರ್ಸ್ ಸಹ 2 ಲಕ್ಷ ಪರಿಹಾರ ನೀಡಿದ್ದಾರೆ.

    English summary
    Telugu actor Allu Arjun, Ram Charan teja announce financial aid to families of deceased pawan kalyan fans who died while erecting banners.
    Wednesday, September 2, 2020, 16:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X