ಸಮಂತಾ ಬೆನ್ನಿಗೆ ನಿಂತ ಅಲ್ಲು ಅರ್ಜುನ್, ರಾಮ್‌ಚರಣ್‌ ತೇಜ!

ನಟಿ ಸಮಂತಾ, ನಾಗಚೈತನ್ಯ ಜೊತೆಗೆ ವಿಚ್ಛೇದನ ಮಾಡಿಕೊಂಡ ಬಳಿಕ ಹೆಚ್ಚಾಗಿ ಚಿತ್ರರಂಗದಲ್ಲಿ ಸಕ್ರಿಯ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಸಮಂತಾ. ಇತ್ತೀಚೆಗೆ ರಿಲೀಸ್ ಆದ ಪುಷ್ಪ ಚಿತ್ರದ ಹಾಡಿನ ಮೂಲಕ ಸಮಂತಾ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದಾರೆ. ಜೊತೆಗೆ ಸಮಂತಾಗೆ ಬೇಡಿಕೆ ಕೂಡ ಹೆಚ್ಚಾಗಿದೆ.

ಇನ್ನು ತನ್ನ ಜೀವನದಲ್ಲಿ ನಡೆದ ಕಹಿ ಘಟನೆಯಿಂದಾಗಿ ಸಮಂತಾ ಮೂಲೆ ಗುಂಪು ಆಗುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿದ್ದವು. ಆದರೆ ಅದೆಲ್ಲವನ್ನೂ ಮೀರಿ ಸಮಂತಾ ತಾನೇನು ಎಂಬುದನ್ನು ಸಾಬೀತು ಮಾಡಿದ್ದಾರೆ. ಜೀವನದಲ್ಲಿ ವಿಚಲಿತರಾಗದೆ ಚಿತ್ರಗಳಲ್ಲಿ ಬಣ್ಣ ಹಚ್ಚಿ ಲವಲವಿಕೆಯಿಂದ ಮುಂದಿನ ಹೆಜ್ಜೆ ಇಡುತ್ತಿದ್ದಾರೆ.

ಸಮಂತಾ ನಾಗಚೈತ್ಯರಿಂದ ದೂರವಾದ ಬಳಿಕ, ಚಿತ್ರರಂಗ ಸಮಂತಾಳನ್ನು ದೂರ ತಳ್ಳಲಿಲ್ಲ. ಬದಲಿಗೆ ಸಮಂತಾಗೆ ಚಿತ್ರರಂಗ ಬೆನ್ನುಲುಬಾಗಿ ನಿಂತಿದೆ. ಆಕೆಯನ್ನು ಒಂಟಿಯಾಗಿ ಬಿಟ್ಟಿಲ್ಲ. ಹಾಗಾಗಿ ಸಮಂತಾ ಸಾಲು ಸಾಲು ಸಿನಿಮಾಗಳನ್ನು ಮಾಡುವುದು ಸಾಧ್ಯ ಆಗುತ್ತಿದೆ. ಸದ್ಯ ತೆಲುಗಿನ ಸ್ಟಾರ್‌ ನಟ ರಾಮ್‌ ಚರಣ್ ತೇಜ ಸಮಂತಾಗೆ ಮೂರು ಕಿವಿಮಾತನ್ನು ಹೇಳಿದ್ದಾರೆ.

ಮತ್ತಷ್ಟು ಗಟ್ಟಿಯಾಗಿ, ದೊಡ್ಡಮಟ್ಟದಲ್ಲಿ ಹಿಂದಿರುಗಿ ಬಾ: ರಾಮ್‌ ಚರಣ್‌ ತೇಜ!

ಮತ್ತಷ್ಟು ಗಟ್ಟಿಯಾಗಿ, ದೊಡ್ಡಮಟ್ಟದಲ್ಲಿ ಹಿಂದಿರುಗಿ ಬಾ: ರಾಮ್‌ ಚರಣ್‌ ತೇಜ!

ಸಮಂತಾ ಬಗ್ಗೆ ಚಿತ್ರರಂಗದಲ್ಲಿ ಯಾವುದೇ ರೀತಿಯ ಕೆಟ್ಟ ಅಭಿಪ್ರಾಯ ಇಲ್ಲ. ಆಕೆಯ ವೈಯಕ್ತಿಕ ಬದುಕನ್ನು, ವೃತ್ತಿ ಬದುಕಿಗೆ ತಾಳೆ ಹಾಕುತ್ತಿಲ್ಲ. ಹಾಗಾಗಿ ನಟ ರಾಮ್‌ ಚರಣ್‌ ತೇಜ ಸಂದರ್ಶನ ಒಂದರಲ್ಲಿ ಸಮಂತಾ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಸಮಂತಾಗೆ ಏನು ಹೇಳುತ್ತೀರಿ ಎನ್ನುವ ಪ್ರಶ್ನೆ ಎದುರಾದಾಗ, "ಕಮ್‌ ಬ್ಯಾಕ್, ಬಿಗ್ಗರ್, ಸ್ಟ್ರಾಂಗರ್" ಎಂದು ರಾಮ್‌ ಚರಣ್‌ ಹೇಳಿದ್ದಾರೆ. ಅಂದರೆ ಮತ್ತಷ್ಟು ಗಟ್ಟಿಯಾಗಿ, ದೊಡ್ಡ ಮಟ್ಟದಲ್ಲಿ ವಾಪಸ್‌ ಚಿತ್ರರಂಗಕ್ಕೆ ಬಾ ಎಂದು ಹೇಳಿದ್ದಾರೆ. ರಾಮ್‌ ಚರಣ್ ಈ ಹೇಳಿಕೆ ಎಲ್ಲೆಡೆ ವೈರಲ್‌ ಆಗಿದೆ.

ಸಮಂತಾ ನಂಬಿಕೆಯ ಬಗ್ಗೆ ಅಲ್ಲು ಅರ್ಜುನ್ ಮಾತು!

ಸಮಂತಾ ನಂಬಿಕೆಯ ಬಗ್ಗೆ ಅಲ್ಲು ಅರ್ಜುನ್ ಮಾತು!

ಇನ್ನು ಸಮಂತಾ ಪುಷ್ಪ ಚಿತ್ರದ ವಿಶೇಷ ಹಾಡಿನಲ್ಲಿ ಡ್ಯಾನ್ಸ್‌ ಮಾಡಿದ್ದಾರೆ. ಈ ಹಾಡು ಯುಟ್ಯೂಬ್‌ನಲ್ಲಿ ವಿಶ್ವದ ನಂ.1 ಸ್ಥಾನದಲ್ಲಿ ಇದೆ. ಈ ಬಗ್ಗೆ ಪುಷ್ಪ ಚಿತ್ರದ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್‌ ಮಾತನಾಡಿದ್ದಾರೆ. ಹಾಡಿಗಿಂತಲೂ ಸಮಂತಾ ಬಗ್ಗೆ ಹೆಚ್ಚಾಗಿ ಮಾತನಾಡಿದ್ದಾರೆ. ಈ ಹಾಡು ಮಾಡುವ ಮುನ್ನ ಸಮಂತಾಳಿಗೆ ಹತ್ತು, ಹಲವು ಅನುಮಾನಗಳು ಇದ್ದವಂತೆ. ಆದರೆ ಅದೆಲ್ಲವನ್ನು ಬದಿಗೊತ್ತಿ ಚಿತ್ರ ತಂಡದ ಮೇಲಿನ ನಂಬಿಕೆಯಿಂದ ಸಮಂತಾ ಈ ಹಾಡಿನಲ್ಲಿ ಡಾನ್ಸ್‌ ಮಾಡಲು ಒಪ್ಪಿದ್ದಾರಂತೆ. ಸಮಂತಾ ನಂಬಿಕೆ ಬಗ್ಗೆ ಅಲ್ಲು ಅರ್ಜುನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಅದನ್ನು ಟ್ವಿಟ್ಟರ್‌ನಲ್ಲಿ ಸಮಂತಾ ಹಂಚಿಕೊಂಡು, "ಇನ್ನು ಮುಂದೆ ಸದಾ ನಿನ್ನನ್ನು ನಂಬುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಫೀನಿಕ್ಸ್‌ನಂತೆ ಎದ್ದು ಬಂದ ಸ್ಯಾಮ್!

ಫೀನಿಕ್ಸ್‌ನಂತೆ ಎದ್ದು ಬಂದ ಸ್ಯಾಮ್!

ಹೌದು ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನ ಅವರ ಕುಟುಂಬಕ್ಕೆ ಮಾತ್ರವಲ್ಲ, ಅಭಿಮಾನಿ ಬಳಗ ಮತ್ತು ಚಿತ್ರರಂಗದ ಮಂದಿಗೂ ದೊಡ್ಡ ಶಾಕ್ ಕೊಟ್ಟಿತ್ತು. ಡಿವೋರ್ಸ್ ಬಳಿಕ ಸಮಂತಾ ತನ್ನ ಸ್ನೇಹಿತರೊಂದಿಗೆ ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದರು. ಆಗ ಸಮಂತಾ ಇನ್ನು ಚಿತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸುವುದಿಲ್ಲ. ಆಕೆಯ ಸಿನಿಮಾ ಕೆರಿಯರ್‌ ಕಥೆ ಮುಗಿಯಿತು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಅದೆಲ್ಲವನ್ನೂ ಮೀರಿ ಫೀನಿಕ್ಸ್ ಪಕ್ಷಿಯಂತೆ ಸಮಂತಾ ಎದ್ದು ಬಂದಿದ್ದಾರೆ. ಮತ್ತೆ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಕಮ್‌ ಬ್ಯಾಕ್ ಮಾಡಿದ್ದಾರೆ.

ಟೀಕೆಗಳಿಗೆ ಸೋಲದ ಗಟ್ಟಿಗಿತ್ತಿ ಸಮಂತಾ!

ಟೀಕೆಗಳಿಗೆ ಸೋಲದ ಗಟ್ಟಿಗಿತ್ತಿ ಸಮಂತಾ!

ವಿಚ್ಛೇದನದ ಬಳಿಕ ಹೆಚ್ಚಿನ ಜನರು ಜರಿದಿದ್ದು ಸಮಂತಾಳನ್ನೇ. ಸಮಂತಾ ಮಾಡಿರುವ ತಪ್ಪುಗಳೇ ಅವರ ವಿಚ್ಛೇದನಕ್ಕೆ ಕಾರಣ ಆಗಿವೆ ಎನ್ನುವ ಟೀಕೆಗಳು ಕೇಳಿ ಬಂದವು. ನಾಗಚೈತನ್ಯಗೆ ಅಯ್ಯೋ ಪಾಪ ಎಂದವರೇ ಹೆಚ್ಚು. ಅಷ್ಟೇ ಯಾಕೆ ಒಬ್ಬ ವ್ಯಕ್ತಿ ಸಮಂತಾಳನ್ನು ಸೆಕೆಂಡ್‌ ಹ್ಯಾಂಡ್ ಐಟಂ ಅಂತ ಸಾಮಾಜಿಕ ಜಾಲತಾಣದಲ್ಲಿ ಕರೆದಿದ್ದ. ಆತನಿಗೆ ಸಮಂತಾ ಅಲ್ಲೇ ಉತ್ತರ ಕೊಟ್ಟಿದ್ದರು. ಅಂದರೆ ಸಮಂತಾ ಮತ್ತಷ್ಟು ಸ್ಟ್ರಾಂಗ್‌ ಆಗಿದ್ದಾರೆ ಎನ್ನುವುದು ಈ ಮೂಲಕ ಗೊತ್ತಾಗುತ್ತದೆ. ಸದ್ಯದಲ್ಲೇ ಸಮಂತಾಳ ಮತ್ತಷ್ಟು ಚಿತ್ರಗಳು ಪ್ರಕಟಗೊಳ್ಳಲಿವೆ.

More from Filmibeat

English summary
Allu Arjun And Ram charan Support For Samantha, She Trust Allu Arjun,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X