ಅಲ್ಲು ಅರ್ಜುನ್ ದಂಪತಿಯ ವಿವಾಹ ವಾರ್ಷಿಕೋತ್ಸವ: ಪತ್ನಿಗೆ ಸ್ಟೈಲಿಶ್ ಸ್ಟಾರ್ ಕಡೆಯಿಂದ ಸಿಹಿಯಾದ ಸಂದೇಶ
ಟಾಲಿವುಡ್ ನ ಸ್ಟೈಲೀಸ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ದಂಪತಿಗೆ ಇಂದು ವಿಶೇಷವಾದ ದಿನ. ಹೌದು, ಅಲ್ಲು ಅರ್ಜುನ್ ಮತ್ತು ಸ್ನೇಹಾ ಇಂದು (ಮಾರ್ಚ್ 6) ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುದಿನ. ಇಬ್ಬರ ದಾಂಪತ್ಯ ಜೀವನಕ್ಕೆ ಈಗ 10 ವರ್ಷಗಳ ಸಂಭ್ರಮ. ಇಬ್ಬರು ಮದ್ದಾದ ಮಕ್ಕಳ ಪೋಷಕರಾಗಿರುವ ಅಲ್ಲು ಮತ್ತು ಸ್ನೇಹಾ 10 ವರ್ಷಗಳ ಹಿಂದೆ ಇದೆ ದಿನ ಚಿತ್ರರಂಗದ ಗಣ್ಯರ ನಡುವೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು 10 ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಅಲ್ಲು ದಂಪತಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ವಿಶೇಷ ದಿನಕ್ಕೆ ಸ್ಟೈಲಿಶ್ ಸ್ಟಾರ್ ಪತ್ನಿ ಸ್ನೇಹಾಗೆ ಪ್ರೀತಿಯ ವಿಶ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ 10 ವರ್ಷದ ಸಂಭ್ರಮವನ್ನು ಶೇರ್ ಮಾಡಿಕೊಂಡಿದ್ದಾರೆ. ಮುಂದೆ ಓದಿ...

ಎಂತಹ ಅದ್ಭುತವಾದ ಪಯಣ
ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಜೊತೆ ತಾಜ್ ಮಹಲ್ ಮುಂಬಾಗದಲ್ಲಿ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಮತ್ತೊಂದು ಮದುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ, 10ನೇ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಕ್ಯೂಟಿ. ಹತ್ತು ವರ್ಷಗಳು ಎಂತಹ ಅದ್ಭುತ ಪಯಣ. ಇನ್ನು ಅನೇಕ ವರ್ಷಗಳು ಬರಲಿ' ಎಂದು ಹೇಳಿದ್ದಾರೆ.

ಸ್ನೇಹಾ ಪರಿಚಯವಾಗಿದ್ದು ಯಾವಾಗ?
ಅಲ್ಲು ಅರ್ಜುನ್ ಸಿನಿಮಾ ರಂಗದಲ್ಲಿ ಒಂದು ಸ್ಟಾರ್ ಆಗಿ ಗುರುತಿಸಿಕೊಂಡ ಬಳಿಕ ಬಳಿಕ ಮದುವೆ ಪಾರ್ಟಿಯಲ್ಲಿ ಸ್ನೇಹ ರೆಡ್ಡಿಯನ್ನು ಮೊದಲ ಬಾರಿಗೆ ನೊಡಿದರಂತೆ. ಸ್ನೇಹಾ ರೆಡ್ಡಿ ಆಗಷ್ಟೆ ವಿದೇಶದಲ್ಲಿ ಓದು ಮುಗಿಸಿ ಭಾರತಕ್ಕೆ ವಾಪಸ್ಸಾಗಿದ್ದರು. ಸ್ನೇಹಾ ರೆಡ್ಡಿಯನ್ನು ನೋಡಿದ ಕೂಡಲೇ ಬನ್ನಿಗೆ ಲವ್ ಅಟ್ ಫಸ್ಟ್ ಸೈಟ್ ಎನ್ನುವ ಹಾಗೆ ಮೊದಲ ನೋಟದಲ್ಲೇ ಇಷ್ಟವಾಗಿದೆ.

ದೊಡ್ಡ ಉದ್ಯಮಿ ಮಗಳು ಸ್ನೇಹಾ
ಇಬ್ಬರಿಗೂ ಕಾಮನ್ ಗೆಳೆಯರೊಬ್ಬರಿಂದ ಪರಿಚಯವಾಗಿದೆ, ಪರಿಚಯ, ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಸ್ನೇಹಾ ರೆಡ್ಡಿ ದೊಡ್ಡ ಬ್ಯುಸಿನೆಸ್ ಮನ್ ಕೆಪಿ ರೆಡ್ಡಿ ಮಗಳು. ಇಬ್ಬರೂ ಪ್ರೀತಿಸುತ್ತಿರುವ ವಿಷಯ ಮೊದಲು ಅಲ್ಲು ಅರ್ಜುನ್ ಮನೆಯಲ್ಲಿ ಗೊತ್ತಾಗಿದೆ. ನಂತರ ಸ್ನೇಹಾ ರೆಡ್ಡಿ ಮನೆಯಲ್ಲಿಯೂ ವಿಷಯ ಗೊತ್ತಾಗಿದೆ. ಆದರೆ ಸ್ನೇಹಾ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಕ್ಕಿರಲಿಲ್ಲ.

ಸ್ನೇಹಾ ರೆಡ್ಡಿ ಮನೆಯವರನ್ನು ಮದುವೆಗೆ ಒಪ್ಪಿಸಿದ ಅಲ್ಲು
ಅಲ್ಲು ಅರ್ಜುನ್ ಮನೆಯಲ್ಲಿ ಮದುವೆಗೆ ಒಪ್ಪಿಕೊಂಡರಾದರೂ, ಜಾತಿ ಕಾರಣ ಮುಂದಿಟ್ಟು ಸ್ನೇಹಾ ರೆಡ್ಡಿ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರಂತೆ. ನಂತರ ಅಲ್ಲು ಅರ್ಜುನ್ ಅವರೇ ಸಾಕಷ್ಟು ಪ್ರಯತ್ನ ಪಟ್ಟು, ಹಲವು ಗಣ್ಯರಿಂದ ಸ್ನೇಹಾ ರೆಡ್ಡಿ ತಂದೆಯವರಿಗೆ ಹೇಳಿಸಿ ಕೊನೆಗೆ ಮದುವೆಗೆ ಒಪ್ಪಿಕೊಳ್ಳುವಂತೆ ಮಾಡಿದರಂತೆ. ಸ್ನೇಹಾ ರೆಡ್ಡಿ ಸಹ ಅಲ್ಲು ಅರ್ಜುನ್ ಅನ್ನೇ ಮದುವೆಯಾಗುವುದಾಗಿ ಮನೆಯಲ್ಲಿ ಹಠ ಮಾಡಿದ್ದರಂತೆ.
Recommended Video

2011ರಲ್ಲಿ ಮದುವೆ
ಕೊನೆಗೆ ಮಾರ್ಚ್ 6, 2011 ರಲ್ಲಿ ಸ್ನೇಹ ರೆಡ್ಡಿ-ಅಲ್ಲು ಅರ್ಜುನ್ ಮದುವೆ ಗುರು ಹಿರಿಯರ ನಿಶ್ಚಯದೊಂದಿಗೆ ಅದ್ಧೂರಿಯಾಗಿ ನೆರವೇರಿತು. ಕನ್ನಡ ನಟರಾದ ನಟ ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್ ಅವರುಗಳು ಅಲ್ಲು ಅರ್ಜುನ್ ವಿವಾಹಕ್ಕೆ ಹಾಜರಾಗಿದ್ದರು. ಇಬ್ಬರು ದಂಪತಿಗೆ ಅಲ್ಲು ಅಯಾನ್ ಮತ್ತು ಅಲ್ಲು ಅರ್ಹ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.


Click it and Unblock the Notifications











