'ಪುಷ್ಪ'ರಾಜ್ ಜೊತೆ ಕಿಸಕ್ಕನೆ ನಕ್ಕ ಶ್ರೀಲೀಲಾ; ಫುಲ್ ಟ್ರೆಂಡಿಂಗ್
ತೆಲುಗಿನ 'ಪುಷ್ಪ'-2 ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗ್ತಿದೆ. ಶೀಘ್ರದಲ್ಲೇ ಟ್ರೈಲರ್ ಲಾಂಚ್ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಿದ್ದು ದೊಡ್ಡ ಮಟ್ಟದಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ಕನ್ನಡ ನಟಿ ಶ್ರೀಲೀಲಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ.
ದೇವಿಶ್ರೀಪ್ರಸಾದ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಕುಮಾರ್ ಈ ಬಾರಿ ದೊಡ್ಡದಾಗಿ ಪ್ಲ್ಯಾನ್ ಮಾಡ್ತಿದ್ದು 1000 ಕೋಟಿ ರೂ, ಕಲೆಕ್ಷನ್ ಟಾರ್ಗೆಟ್ ಇಟ್ಟುಕೊಂಡಿದೆ ಚಿತ್ರತಂಡ. ತೆಲುಗು ಚಿತ್ರಗಳಲ್ಲಿ ಸ್ಪೆಷಲ್ ಸಾಂಗ್ಸ್ ಮಾಮೂಲಿ. ಈ ಹಿಂದೆ 'ಪುಷ್ಪ' ಚಿತ್ರದಲ್ಲಿ ಸಮಂತಾ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದರು.

'ಊ ಅಂಟಾವಾ ಮಾವ' ಸಾಂಗ್ ಯಾವ ರೇಂಜಿಗೆ ಹಿಟ್ ಆಗಿತ್ತು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಇದೀಗ ಸೀಕ್ವೆಲ್‌ನಲ್ಲಿ 'ಕಿಸ್ಸಿಕ್' ಎಂದು ಶುರುವಾಗುವ ಹಾಡಿಗೆ ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ ಎನ್ನಲಾಗ್ತಿದೆ. ಸದ್ದಿಲ್ಲದೇ ಸಾಂಗ್ ಶೂಟ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಮತ್ತೊಮ್ಮೆ ರಾಕ್‌ಸ್ಟಾರ್ ಡಿಎಸ್‌ಪಿ ತಮ್ಮ ಮ್ಯೂಸಿಕ್ ಮೂಲಕ ಧೂಳೆಬ್ಬಿಸಲು ಸಿದ್ಧರಾಗಿದ್ದಾರೆ.
ರಾಮೋಜಿ ಫಿಲ್ಮ್‌ಸಿಟಿಯಲ್ಲಿ ಭಾರೀ ಸೆಟ್ ಹಾಕಿ ಸಾಂಗ್ ಶೂಟಿಂಗ್ ಮಾಡುತ್ತಿದ್ದಾರೆ. ಈ ಹಿಂದೆ ಶ್ರದ್ಧಾಕಪೂರ್ ಹೆಸರು ಈ ಹಾಡಿಗೆ ಕೇಳಿಬಂದಿತ್ತು. ಆಕೆ ಹೆಚ್ಚು ಸಂಭಾವನೆ ಕೇಳಿದ್ದಕ್ಕೆ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಗುಲ್ಲಾಗಿದೆ. ಇನ್ನು ಶ್ರೀಲೀಲಾ ಸದ್ಯಕ್ಕೆ ನಾನು ಸ್ಪೆಷಲ್ ಸಾಂಗ್‌ಗಳಿಗೆ ಹೆಜ್ಜೆ ಹಾಕಲ್ಲ ಎಂದು ಕಳೆದ ವರ್ಷ ಹೇಳಿದ್ದರು. ಆದರೆ 'ಪುಷ್ಪ'-2 ಚಿತ್ರಕ್ಕಾಗಿ ತಮ್ಮ ನಿರ್ಧಾರ ಬದಲಿಸಿರುವಂತೆ ಕಾಣುತ್ತಿದೆ.
3 ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 350 ಕೋಟಿ ರೂ,ಗೂ ಅಧಿಕ ಗಳಿಕೆ ಕಂಡು ಹಿಟ್ ಲಿಸ್ಟ್ ಸೇರಿತ್ತು. ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ. ಫಹಾದ್ ಫಾಸಿಲ್, ಧನಂಜಯ್, ಅನಸೂಯ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಹೆಚ್ಚು ಕಡಿಮೆ ಅದೇ ತಂಡ ಸೀಕ್ವೆಲ್‌ನಲ್ಲಿ ಮುಂದುವರೆದಿದೆ.
ಸುಕುಮಾರ್ ಹಲವು ಬಾರಿ ಕಥೆಯನ್ನು ತಿದ್ದಿ ತೀಡಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಈ ಬಾರಿ ದೇಶ, ವಿದೇಶಗಳಲ್ಲಿ ಚಿತ್ರದ ಕಥೆ ಸಾಗಲಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಆದರೂ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಆಗಿಲ್ಲ. ಟ್ರೈಲರ್ ಹಾಗೂ 'ಕಿಸ್ಸಿಕ್' ಸಾಂಗ್ ರಿಲೀಸ್ ಮಾಡಿ ನಿರೀಕ್ಷೆ ಹೆಚ್ಚಿಸುವ ಕೆಲಸ ನಡೀತಿದೆ.
'ಊ ಅಂಟಾವಾ' ಸಾಂಗ್ ಮೀರಿಸುವಂತ ಟ್ಯೂನ್, ಮೇಕಿಂಗ್, ಸೆಟ್ ಪ್ಲ್ಯಾನ್ ಮಾಡಲಾಗುತ್ತಿದೆ. ಡಿಸೆಂಬರ್ 5ಕ್ಕೆ 'ಪುಷ್ಪ-2' ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಪ್ರಮೋಷನ್ ಶುರುವಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಇನ್ನು 'ಪುಷ್ಪ'-2 ಐಟಂ ಸಾಂಗ್ ಎಂದು ಒಂದಷ್ಟು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಅದೆಲ್ಲ ಮಾರ್ಪ್ ಮಾಡಿರುವ ಫೋಟೊಗಳು. ಅಧಿಕೃತವಾಗಿ ಯಾವುದೇ ಫೋಟೊ ಹೊರ ಬಂದಿಲ್ಲ.
ಈಗಾಗಲೇ 'ಪುಷ್ಪ'-2 ಸಿನಿಮಾ 1000 ಕೋಟಿ ರೂ.ಗೂ ಅಧಿಕ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ. ಓಟಿಟಿ, ಸ್ಯಾಟಲೈಟ್ ರೈಟ್ಸ್ ಕೂಡ ದೊಡ್ಡ ಮೊತ್ತಕ್ಕೆ ಬಿಕರಿಯಾಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆ ನಿರೀಕ್ಷೆಯ ಭಾರವನ್ನು ಸಿನಿಮಾ ತಡೆದುಕೊಳ್ಳುತ್ತಾ? ಗೆಲ್ಲುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.
'ಪುಷ್ಪ' ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಮತ್ತೊಮ್ಮೆ ಪುಷ್ಪರಾಜ್ ಆಗಿ ಸ್ಟೈಲಿಶ್ ಸ್ಟಾರ್ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗುತ್ತಿದೆ.


Click it and Unblock the Notifications











