"ಸುಮ್ಮನೆ ಡಿಸ್ಟರ್ಬ್ ಮಾಡಬೇಡಿ"; 'ಪುಷ್ಪ-2' ಬಗ್ಗೆ ಸುಕುಮಾರ್ ಹೀಗಂದಿದ್ಯಾಕೆ?
ತೆಲುಗಿನ 'ಪುಷ್ಪ'-2 ಸಿನಿಮಾ ಭಾರೀ ಕ್ರೇಜ್ ಹುಟ್ಟಾಕ್ಕಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು. ನಿರ್ದೇಶಕ ಸುಕುಮಾರ್ ಹಾಗೂ ನಟ ಅಲ್ಲು ಅರ್ಜುನ್ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿಬಂದಿತ್ತು.
3 ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಸಿನಿಮಾ ಪ್ಲ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿತ್ತು. ಹಿಂದಿ ಬೆಲ್ಟ್‌ನಲ್ಲಿ ಕೂಡ ಸಿನಿಮಾ ಸದ್ದು ಮಾಡಿತ್ತು. 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಅದೇ ಕಾರಣಕ್ಕೆ ಸೀಕ್ವೆಲ್ ಬಗ್ಗೆ ಭಾರೀ ಹೈಪ್ ಕ್ರಿಯೇಟ್ ಆಗಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಪುಷ್ಪ'-2 ಮೂಡಿ ಬರ್ತಿದೆ.

ಈಗಾಗಲೇ 'ಪುಷ್ಪ'-2 ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಸ್ಟೈಲಿಶ್ ಸ್ಟಾರ್ ಅಭಿಮಾನಿಗಳಂತೂ ಯಾವಾಗ್ಯಾವಾಗ ಸಿನಿಮಾ ನೋಡ್ತೀವೋ ಎಂದು ಬೆರಗುಗಣ್ಣಿನಿಂದ ಕಾಯುತ್ತಿದ್ದಾರೆ. ಮೆಗಾ ಫ್ಯಾಮಿಲಿ ಜೊತೆಗಿನ ಭಿನ್ನಾಭಿಪ್ರಾಯದಿಂದ ಇತ್ತೀಚೆಗೆ ಅಲ್ಲು ಅರ್ಜುನ್ ಸಾಕಷ್ಟು ಟ್ರೋಲ್ ಎದುರಿಸುವಂತಾಗಿತ್ತು. 'ಪುಷ್ಪ'-2 ಗಳಿಕೆ ಮೇಲೆ ಕೂಡ ಇದು ಪರಿಣಾಮ ಬೀರುತ್ತದೆ ಎನ್ನಲಾಗಿತ್ತು.
'ಪುಷ್ಪ'-2 ರಿಲೀಸ್ ತಡವಾಗಲೂ ಕಾರಣ ಏನು ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ನಡೆಯುತ್ತಲೇಯಿದೆ. ಫಹಾದ್ ಫಾಸಿಲ್ ಡೇಟ್ಸ್ ಸಮಸ್ಯೆ ಎದುರಾಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಕೆಲ ಭಿನ್ನಾಭಿಪ್ರಾಯಗಳಿಂದ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮಾತು ಬಿಟ್ಟಿದ್ದಾರೆ. ಮುನಿಸಿಕೊಂಡು ಬನ್ನಿ ಗಡ್ಡ ಟ್ರಿಮ್ ಮಾಡಿ ಫ್ಯಾಮಿಲಿ ಜೊತೆ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ಎನ್ನಲಾಗಿತ್ತು.
ಚಿತ್ರದಲ್ಲಿ ಅಲ್ಲು ಅರ್ಜುನ್ ರಗಡ್ ಲುಕ್ ಹೈಲೆಟ್. ಅದಕ್ಕಾಗಿ ಉದ್ದ ಗಡ್ಡ ಬಿಟ್ಟು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇದ್ದಕ್ಕಿದಂತೆ ಗಡ್ಡ ಟ್ರಿಮ್ ಮಾಡಿ ವಿದೇಶಕ್ಕೆ ಹೋಗಿದ್ಯಾಕೆ? ಸುಕುಮಾರ್ ಜೊತೆಗಿನ ಭಿನ್ನಾಭಿಪ್ರಾಯ ನಿಜವೇ? ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಆದರೆ ಮತ್ತೆ ಕಳೆದ 15 ದಿನಗಳಿಂದ 'ಪುಷ್ಪ'-2 ಚಿತ್ರೀಕರಣ ಆರಂಭವಾಗಿದೆ. ಇನ್ನು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸುಕ್ಕು-ಬನ್ನಿ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದರು.

'ಮಾರುತಿ ನಗರ್ ಸುಬ್ರಮಣ್ಯಂ' ಎನ್ನುವ ಸಿನಿಮಾ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಇಬ್ಬರು ಭಾಗಿ ಆಗಿದ್ದರು. ವೇದಿಕೆ ಮೇಲೆ ಮಾತನಾಡುತ್ತಾ 'ಪುಷ್ಪ'-2 ಬಗ್ಗೆ ಅಪ್‌ಡೇಟ್ ನೀಡಿದರು. ಸುಕ್ಕು ಮೈಕ್ ಕೈಗೆ ತೆಗದುಕೊಳ್ಳುತ್ತಿದ್ದಂತೆ ಅಭಿಮಾನಿಗಳು ಪುಷ್ಪ.. ಪುಷ್ಪ ಎಂದು ಕೂಗಲು ಆರಂಭಿಸಿದರು. ಆಗ ಅವರು ಮಾತನಾಡಿ ಸದ್ಯ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ದಯವಿಟ್ಟು ಡಿಸ್ಟರ್ಬ್ ಮಾಡಬೇಡಿ ಎಂದು ಮನವಿ ಮಾಡಿದರು. ಇನ್ನು ವೇದಿಕೆಯಲ್ಲಿ ಇವರಿಬ್ಬರ ಬಾಂಡಿಂಗ್ ನೋಡಿ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಂತಾಗಿದೆ.
'ಪುಷ್ಪ'-2ಗೆ ಕಥೆ ನಿಲ್ಲಲ್ಲ. ಇನ್ನು ಐದಾರು ಸೀಕ್ವೆಲ್ ಮಾಡ್ತೀವಿ ಎಂದು ತಮಾಷೆಯಾಗಿ ಸುಕುಮಾರ್ ಹೇಳಿದರು. ಇನ್ನು ಅಲ್ಲು ಅರ್ಜುನ್ ಮಾತನಾಡಿ ಡಿಸೆಂಬರ್ 6ಕ್ಕೆ ಸಿನಿಮಾ ರಿಲೀಸ್ ಆಗುವುದು ಪಕ್ಕಾ ಎಂದರು. ಸಾಮಾನ್ಯವಾಗಿ ನನ್ನ ಸಿನಿಮಾ ಬಗ್ಗೆ ಹೆಚ್ಚು ಮಾತನಾಡಲ್ಲ. ಆದರೆ ಈ ಬಾರಿ ಆ ರೀತಿ ಅಲ್ಲ. ಬಹಳ ಧೈರ್ಯದಿಂದ ಹೇಳುತ್ತಿದ್ದೇನೆ ಎಂದರು. ಇನ್ನು ಮುಂದೆ ಬೇಗ ಬೇಗ ಸಿನಿಮಾ ಮಾಡ್ತೀನಿ ಎಂದು ಅಭಿಮಾನಿಗಳಿಗೆ ತಿಳಿಸಿದರು. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡ್ತಿದೆ.


Click it and Unblock the Notifications











