'ಪುಷ್ಪ- 2' ಹೈಲೆಟ್ಸ್ ಏನು? ಈ ಅಂಶಗಳೇ ಚಿತ್ರದ ನಿಜವಾದ ಶಕ್ತಿ

'ಪುಷ್ಪ-2' ಸಿನಿಮಾ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಚಿತ್ರ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಮುಂದೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆಲ್ಲಾ ಸದ್ದು ಮಾಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

3 ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದವರಿಗೆ ' ಪುಷ್ಪ'ರಾಜ್ ಹೊಸ ವರಸೆ ಅಷ್ಟಾಗಿ ಇಷ್ಟವಾಗಿಲ್ಲ. ಕೆಲವರಿಗೆ ಇಷ್ಟವಾದರೆ ಬಹುತೇಕರು ಚೆನ್ನಾಗಿಲ್ಲ ಎಂದು ಮೂಗು ಮುರಿಯುತ್ತಿದ್ದಾರೆ. ಗಟ್ಟಿ ಕಥೆ ಇಲ್ಲದೇ ಬರೀ ಎಲಿವೇಷನ್ ಸೀನ್ಸ್ ಇಟ್ಟು ಪ್ರೇಕ್ಷಕರನ್ನು ರಂಜಿಸುವ ಸುಕ್ಕು ಪ್ಲ್ಯಾನ್ ಅಷ್ಟಾಗಿ ವರ್ಕ್ ಆಗಿಲ್ಲ.

Allu Arjun and Sukumar s Pushpa-2 the rule highlights

ಒಂದು ವರ್ಗದ ಜನ ಸಿನಿಮಾ ಮಾಸ್, ಭರ್ಜರಿ ಎಂಟರ್‌ಟೈನ್‌ಮೆಂಟ್ ಸಿನಿಮಾ ಎಂದು ಕೊಂಡಾಡುತ್ತಿದ್ದಾರೆ. ಉಳಿದವರು ಆವರೇಜ್, ಓಕೆ ಓಕೆ ಎಂದು ಷರಾ ಬರೆದುಬಿಟ್ಟಿದ್ದಾರೆ. ಸಾಕಷ್ಟು ಮೈನಸ್ ಪಾಯಿಂಟ್ಸ್ ನಡುವೆ ಒಂದಷ್ಟು ಹೈಲೆಟ್ಸ್ ಕೂಡ ಚಿತ್ರದಲ್ಲಿದೆ. ಅದರ ಬಗ್ಗೆ ಮುಂದೆ ಓದಿ.

1. ಅಲ್ಲು ಅರ್ಜುನ್ ನಟನೆ

'ಪುಷ್ಪ'-2 ಚಿತ್ರದ ಬಲ ಅಂದ್ರೆ ಅಲ್ಲು ಅರ್ಜುನ್ ನಟನೆ. ಸ್ಟೈಲಿಶ್ ಸ್ಟಾರ್ ಆರ್ಭಟದ ಮುಂದೆ ಸುಕುಮಾರ್ ಕಳೆದೇ ಹೋಗಿದ್ದಾರೆ. ರೊಟೀನ್ ಸ್ಟೋರಿ ಹೇಳಿದಂತೆ ಭಾಸವಾಗುತ್ತದೆ. ಆದರೆ ಅದನ್ನೆಲ್ಲಾ ಮರೆಸುವಂತೆ ಬನ್ನಿ ನಟಿಸಿದ್ದಾರೆ. ಮ್ಯಾನರಿಸಂ, ಆಕ್ಷನ್, ಡ್ಯಾನ್ಸ್ ಎಲ್ಲದರಲ್ಲೂ ಫುಲ್ ಅಂಕ ಗಿಟ್ಟಿಸಿದ್ದಾರೆ. ಆ ಪಾತ್ರದಲ್ಲಿ ತಲ್ಲೀನರಾಗಿದ್ದಾರೆ.

Allu Arjun and Sukumar s Pushpa-2 the rule highlights

2. ಎಲಿವೇಷನ್ ಸೀನ್ಸ್

ಇತ್ತೀಚೆಗೆ ಮಾಸ್ ಸಿನಿಮಾಗಳಲ್ಲಿ ಎಲಿವೇಷನ್ ಸೀನ್ಸ್ ಟ್ರೆಂಡ್ ಜೋರಾಗಿದೆ. 'ಪುಷ್ಪ'-2 ಅಂತಹ ಒಂದಷ್ಟು ಸನ್ನಿವೇಶಗಳಿವೆ. ಮೊದಲಿಗೆ ಬರುವ ಪೊಲೀಸ್ ಠಾಣೆ ಸನ್ನಿವೇಶ, ರಾಜ್ಯದ ಮುಖ್ಯಮಂತ್ರಿಯನ್ನೇ ಬದಲಿಸುವುದಾಗಿ ಪುಷ್ಪ ಪಣ ತೊಡುವುದು, ಇಂಟರ್‌ವಲ್ ವೇಳೆಗೆ ಬರುವ ಸ್ವಿಮ್ಮಿಂಗ್ ಫೂಲ್ ಸೀನ್, ರಕ್ತಚಂದನವನ್ನು ಶ್ರೀಲಂಲಾಗೆ ತಲುಪುವುದು, ಇದಕ್ಕೆ ಬೆಸ್ಟ್ ಎಕ್ಸಾಂಪಲ್.

3. ಆಕ್ಷನ್ ಸೀನ್ಸ್

ಚಿತ್ರದ ಸನ್ನಿವೇಶಗಳಲ್ಲಿ ಲಾಜಿಕ್ ಬಯಸುವಂತಿಲ್ಲ. ಮಾಸ್ ಪ್ರೇಕ್ಷಕರನ್ನು ರಂಜಿಸಲು ಕೊಂಚ ಅತಿಯಾಗಿಯೇ ಪ್ರಸೆಂಟ್ ಮಾಡಿದ್ದಾರೆ. ಅದರಲ್ಲಿ ಹೀರೋ ಎಂಟ್ರಿ ಸೀನ್ ಫೈಟ್, ಕ್ಲೈಮ್ಯಾಕ್ಸ್ ಫೈಟ್ಸ್ ಅಭಿಮಾನಿಗಳ ಮನಗೆದ್ದಿದೆ. ಕೆಲವೊಮ್ಮೆ ಅತಿರೇಕ ಅನ್ನಿಸುವುದು ಇದೆ.

4. ಭಾವನಾತ್ಮಕ ಸನ್ನಿವೇಶಗಳು

ಯಾವುದೇ ದೊಡ್ಡ ಸಿನಿಮಾ ಆಗಿದ್ದರು ಎಮೋಷನಲ್ ಆಗಿ ಕನೆಕ್ಟ್ ಆಗಬೇಕು. ಇದು ಸಾಧ್ಯವಾಗದೇ ಇದ್ದರೆ ಸಿನಿಮಾ ಗೆಲ್ಲಲ್ಲ. 'ಪುಷ್ಪ'-2 ಚಿತ್ರದಲ್ಲಿ ಒಂದಷ್ಟು ಸೆಂಟಿಮೆಂಟ್ ಸೀನ್ಸ್ ಇವೆ. ಹೆಣ್ಣುಮಗು ಬೇಕು ಎಂದು ಗಂಗಮ್ಮ ವೇಷ ಹಾಕಿ ಪುಷ್ಪರಾಜ್ ಕುಣಿಯವುದು, ಮನೆತನದ ಹೆಸರು ಇಲ್ಲ ಎನ್ನುವ ಕಾರಣಕ್ಕೆ ಪುಷ್ಪ ಪದೇ ಪದೆ ಅನುಭವಿಸುವ ನೋವು ಗಮನ ಸೆಳೆದಿದೆ.

5. ಸಾಂಗ್ಸ್

'ಪುಷ್ಪ' ಚಿತ್ರಕ್ಕೆ ಹೋಲಿಸಿದರೆ ಸೀಕ್ವೆಲ್ ಆಲ್ಬಮ್ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೂ ಬೆಳ್ಳಿ ತೆರೆಮೇಲೆ ಸಾಂಗ್ಸ್ ಕಣ್ಣಿಗೆ ಹಬ್ಬ ಎನ್ನುವಂತಿದೆ. ಲಿರಿಕಲ್ ವೀಡಿಯೋ ಕೇಳಿ ಸುಮ್ಮನಾಗಿದ್ದರಿವರು ತೆರೆಮೇಲೆ ವೀಡಿಯೋ ಸಾಂಗ್ಸ್‌ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ, ಶ್ರೀಲೀಲಾ ಡ್ಯಾನ್ಸ್ ಕಿಕ್ ಕೊಡುವಂತಿದೆ.

More from Filmibeat

English summary
Pushpa-2 highlights;
Read more about: pushpa allu arjun tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X