For Quick Alerts
  ALLOW NOTIFICATIONS  
  For Daily Alerts

  ಇಬ್ಬರು ನಟರು ನಿರಾಕರಿಸಿದ್ದ ಸಿನಿಮಾದಲ್ಲಿ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ

  |

  ಕನ್ನಡ ಸಿನಿಮಾರಂಗದಲ್ಲಿ 'ಮಲ್ಟಿಸ್ಟಾರರ್' ಸಿನಿಮಾಗಳು ತುಸು ವಿರಳ. ಆದರೆ ತೆಲುಗು, ಮಲಯಾಳಂ ಹಾಗೂ ಹಿಂದಿ ಯಲ್ಲಿ ಮಲ್ಟಿಸ್ಟಾರರ್ ಸಿನಿಮಾಗಳು ಆಗಾಗ್ಗೆ ಬರುತ್ತಲೇ ಇರುತ್ತವೆ. ತಮಿಳಿನಲ್ಲಿಯೂ ಮಲ್ಟಿಸ್ಟಾರರ್‌ಗಳು ತುಸು ಕಡಿಮೆಯೇ.

  ಅದರಲ್ಲಿಯೂ ತೆಲುಗಿನಲ್ಲಿ ಮಲ್ಟಿಸ್ಟಾರರ್ ಸಿನಿಮಾಗಳು ಆಗಾಗ್ಗೆ ಬರುತ್ತಲೇ ಇರುತ್ತವೆ. ಇದೀಗ ಜೂ.ಎನ್‌ಟಿಆರ್-ರಾಮ್ ಚರಣ್ ತೇಜ ನಟನೆಯ 'RRR', ಪವನ್ ಕಲ್ಯಾಣ್-ರಾಣಾ ದಗ್ಗುಬಾಟಿ ನಟನೆಯ ಹೆಸರಿಡ ಸಿನಿಮಾ, ವೆಂಕಟೇಶ್-ವರುಣ್ ತೇಜ್ ನಟನೆಯ ಎಫ್‌3, ಚಿರಂಜೀವಿ-ರಾಮ್ ಚರಣ್ ತೇಜ ನಟನೆಯ ಆಚಾರ್ಯ, ಚಿರಂಜೀವಿ ವಿಜಯ್ ದೇವರಕೊಂಡ ನಟನೆಯ ಲುಸೀಫರ್ ರೀಮೇಕ್ ಸಿನಿಮಾ ಇನ್ನೂ ಕೆಲವು ಸಿನಿಮಾಗಳು ಚಿತ್ರೀಕರಣ ಹಾದಿಯಲ್ಲಿವೆ.

  ಇದರ ನಡುವೆ ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾವೊಂದು ತೆಲುಗಿನಲ್ಲಿ ಸೆಟ್ಟೇರಲು ಸಜ್ಜಾಗುತ್ತಿದೆ. ತೆಲುಗಿನ ಇಬ್ಬರು ಪ್ರತಿಭಾವಂತ, ಸ್ಟೈಲಿಷ್ ಸ್ಟಾರ್‌ಗಳು ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

  ಹೌದು, ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಹಾಗೂ ನಟ ಅಲ್ಲು ಅರ್ಜುನ್ ಒಟ್ಟಿಗೆ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಪರಸ್ಪರರ ಬಳಿ ಮಾತುಕತೆ ನಡೆದಿದ್ದು, ಪ್ರಾಜೆಕ್ಟ್ ಇಬ್ಬರೂ ನಾಯಕರು ಎಸ್ ಎಂದಿದ್ದಾರೆ ಎನ್ನಲಾಗುತ್ತಿದೆ.

  ಇಬ್ಬರು ನಟರು ನಿರಾಕರಿಸಿದ್ದ ಸಿನಿಮಾ

  ಇಬ್ಬರು ನಟರು ನಿರಾಕರಿಸಿದ್ದ ಸಿನಿಮಾ

  ಮೊದಲಿಗೆ ಕತೆಯನ್ನು ತೆಲುಗಿನ ನಟ ನಾನಿ ಹಾಗೂ ತಮಿಳು ನಟ ವಿಶಾಲ್‌ ಗೆ ಹೇಳಲಾಗಿತ್ತಂತೆ. ತಮಿಳು-ತೆಲುಗು ಎರಡೂ ಭಾಷೆಯಲ್ಲಿ ಒಟ್ಟಿಗೆ ಸಿನಿಮಾ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿತ್ತು. ಆದರೆ ಕಾರಣಾಂತರದಿಂದ ಇಬ್ಬರು ಹೀರೋಗಳು ಸಹ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಅದೀಗ ವಿಜಯ್ ದೇವರಕೊಂಡ-ಅಲ್ಲು ಅರ್ಜುನ್ ಪಾಲಾಗಿದೆ.

  ಮಹಿ ರಾಘವ್ ನಿರ್ದೇಶನ

  ಮಹಿ ರಾಘವ್ ನಿರ್ದೇಶನ

  ಸಿನಿಮಾವನ್ನು ಮಹಿ ವಿ ರಾಘವ್ ಎಂಬುವರು ನಿರ್ದೇಶಿಸುತ್ತಿದ್ದು. ಈ ನಿರ್ದೇಶಕ ಈ ಹಿಂದೆ ತಾಪ್ಸಿ ಪನ್ನು ಜೊತೆಗೆ 'ಆನಂದೋ ಬ್ರಹ್ಮ', 'ಪಾಠಶಾಲಾ' ಮತ್ತು ಮುಮ್ಮುಟಿ ನಟನೆಯ 'ಯಾತ್ರಾ' ಹೆಸರಿನ ರಾಜಕೀಯ ಘಟನೆ ಆಧರಿಸಿತ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

  ವಿಜಯ್ ದೇವರಕೊಂಡ-ಅಲ್ಲು ಅರ್ಜುನ್ ಒಳ್ಳೆ ಗೆಳೆಯರು

  ವಿಜಯ್ ದೇವರಕೊಂಡ-ಅಲ್ಲು ಅರ್ಜುನ್ ಒಳ್ಳೆ ಗೆಳೆಯರು

  ವಿಜಯ್ ದೇವರಕೊಂಡ ಹಾಗೂ ಅಲ್ಲು ಅರ್ಜುನ್ ನಿಜ ಜೀವನದಲ್ಲಿ ಒಳ್ಳೆಯ ಗೆಳೆಯರು. ಇಬ್ಬರೂ ಸಹ ಸ್ಟೈಲಿಷ್ ನಟರೆಂದೇ ಖ್ಯಾತಿ ಪಡೆದಿದ್ದಾರೆ. ಇಬ್ಬರಿಗೂ ತಮ್ಮದೇ ಆದ ಅಭಿಮಾನಿ ವರ್ಗವಿದೆ, ಹೀಗಿರುವಾಗ ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿದರೆ ಅಭಿಮಾನಿಗಳಿಗೆ ಹಬ್ಬವೇ ಸರಿ.

  ದರ್ಶನ್ ಮತ್ತು ಸುದೀಪ್ ಸ್ನೇಹದಲ್ಲಿ ಬಿರುಕು, ಸ್ಪಷ್ಟನೆ ಕೊಟ್ಟ ದೊಡ್ಡಣ್ಣ | Filmibeat Kannada
  ಇಬ್ಬರೂ ನಟರು ಬ್ಯುಸಿಯಾಗಿದ್ದಾರೆ

  ಇಬ್ಬರೂ ನಟರು ಬ್ಯುಸಿಯಾಗಿದ್ದಾರೆ

  ನಟ ವಿಜಯ್ ದೇವರಕೊಂಡ ಪ್ರಸ್ತುತ ಫೈಟರ್ ಹಾಗೂ ಅದರ ನಂತರ ಲೈಗರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟ ಚಿರಂಜೀವಿ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಸಹ ನಟಿಸಲಿದ್ದಾರೆ. ಇನ್ನು ನಟ ಅಲ್ಲು ಅರ್ಜುನ್ ಪ್ರಸ್ತುತ ಸುಕುಮಾರ್ ನಿರ್ದೇಶನದ 'ಪುಷ್ಪಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Allu Arjun and Vijay Ddevarakonda acting together in a Telugu movie. Director Mahi Raghav directing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X