ಕನ್ನಡ ಮಾಧ್ಯಮಗಳಿಗೆ ಕ್ಷಮೆ ಕೇಳಿದ ತೆಲುಗು ಸ್ಟಾರ್ ಅಲ್ಲು ಅರ್ಜುನ್!
ಸದ್ಯ ಎಲ್ಲೆಲ್ಲೂ 'ಪುಷ್ಪ' ಚಿತ್ರದ ಸುದ್ದಿಯೇ ಹರಿದಾಡುತ್ತಿದೆ. ಕಾರಣ 'ಪುಷ್ಪ' ಚಿತ್ರ ಇದೆ ಡಿಸೆಂಬರ್ 17ಕ್ಕೆ ತೆರೆಗೆ ಬರುತ್ತಿದೆ. ಹಾಗಾಗಿ ಚಿತ್ರ ತಂಡ ಭರ್ಜರಿಯಾಗಿ ಪ್ರಚಾರ ಕಾರ್ಯ ಶುರುಮಾಡಿದೆ. ಹೈದ್ರಾಬಾದ್ ಬಳಿಕ ಬೇರೆ ಬೇರೆ ಭಾಗಗಳಲ್ಲಿ ರಾಜ್ಯಗಳಲ್ಲಿ ಪುಷ್ಪ ಚಿತ್ರದ ಪ್ರಚಾರ ಕಾರ್ಯ ಆರಂಭ ಆಗಿದೆ.
ಅಂತೆಯೇ 'ಪುಷ್ಪ' ತಂಡ ಕರ್ನಾಟಕಕ್ಕೂ ಭೇಟಿ ನೀಡಿದೆ. ಪುಷ್ಪ ಸಿನಿಮಾ ಕನ್ನಡದಲ್ಲೂ ತೆರೆಗೆ ಬರ್ತಿದೆ. ಹಾಗಾಗಿ ಈ ಚಿತ್ರದ ಪ್ರಚಾರವನ್ನು ಚಿತ್ರ ತಂಡ ಕರ್ನಾಟಕದಲ್ಲೂ ಹಮ್ಮಿಕೊಂಡಿತ್ತು. ಇಂದು (ಡಿಸೆಂಬರ್ 17) ರಂದು ಪುಷ್ಪ ಚಿತ್ರತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಕನ್ನಡ ಮಾಧ್ಯಮಗಳ ಜೊತೆಗೆ ಮಾತನಾಡಿದೆ.
ಆದರೆ ಈ ವೇಳೆ ಅಲ್ಲು ಅರ್ಜುನ್ ಮಾಧ್ಯಮಗಳ ಬಳಿ ಕ್ಷಮೆ ಕೇಳಬೇಕಾಯಿತ್ತು. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಅಲ್ಲು ಅರ್ಜುನ್ ಮಾಧ್ಯಮಗಳ ಬಳಿ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಅಷ್ಟಕ್ಕೂ ಅಲ್ಲು ಅರ್ಜುನ್ ಕ್ಷಮೆ ಕೇಳುವಂಥದ್ದು ಏನಾಯ್ತು?... ಮುಂದೆ ಓದಿ...

ದಯವಿಟ್ಟು ಕ್ಷಮಿಸಿ: ಬೆಂಗಳೂರಲ್ಲಿ ಅಲ್ಲು ಅರ್ಜುನ್!
ಬೆಂಗಳೂರಿನಲ್ಲಿ ಆಯೋಜಿಸಿದ್ದ 'ಪುಷ್ಪ' ಚಿತ್ರದ ಸುದ್ದಿಗೋಷ್ಠಿಯಲ್ಲಿ ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ, ನಟ ಧನಂಜಯ್ ಪಾಲ್ಗೊಂಡಿದ್ದರು. ಕಾರ್ಯಕ್ರಮ ಆರಂಭ ಆದ ಬಳಿಕ ರಶ್ಮಿಕಾ, ಧನಂಜಯ್, ಅಲ್ಲು ಅರ್ಜುನ್ ಚಿತ್ರದ ಬಗ್ಗೆ ವೇದಿಕೆ ಮೇಲೆ ಮಾತನಾಡಿದರು. ನಂತರ ಸುದ್ದಿಗೋಷ್ಠಿ ಆರಂಭ ಆಯ್ತು. ಆದರೆ ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಅಲ್ಲು ಕ್ಷಮೆ ಕೇಳಿದರು ಕಾರಣ ಅಲ್ಲು ಅರ್ಜುನ್ ಮತ್ತು ತಂಡ 2ಗಂಟೆ ತಡವಾಗಿ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

ಕ್ಷಮೆಯಾಚಿಸಿ ಸುದ್ದಿಗೋಷ್ಠಿ ಆರಂಭಿಸಿದ ಅಲ್ಲು ಅರ್ಜುನ್!
ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದ ಮಾಧ್ಯಮಗಳು ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಅಲ್ಲು ಅರ್ಜುನ್‌ಗಾಗಿ ಕಾದಿದ್ದರು. ಆದರೆ ಬಂದ ಕೂಡಲೇ ಸೌಜ್ಯನಕ್ಕೂ ಯಾಕೆ ತಡವಾಗಿ ಬಂದರು ಎಂದು ಹೇಳಲಿಲ್ಲ. ಹಾಗಾಗಿ ಮಾಧ್ಯಮದ ವರದಿಗಾರರು ಈ ಪ್ರಶ್ನೆಯನ್ನು ಅಲ್ಲು ಅರ್ಜುನ್ ಅವರಿಗೆ ಕೇಳಿದರು. ಆಗ ಅಲ್ಲು ಅರ್ಜುನ್ ತನಗೆ ಈ ವಿಚಾರ ಎಂದು ಹೇಳಿ ಕ್ಷಮೆ ಕೇಳಿದರು. "ದಯವಿಟ್ಟು ಕ್ಷಮಿಸಿ, ನನಗೆ ಈ ವಿಚಾರ ಗೊತ್ತಿರಲಿಲ್ಲ. ನಾನು ಖಾಸಗಿ ವಿಮಾನದಲ್ಲಿ ಬಂದೆ. ವಾತಾವರಣದಲ್ಲಿ ಫಾಗ್ ವಿಮಾನ ಟೇಕ್ ಆಫ್ ಆಗುವುದಿಲ್ಲ. ಇದ್ದರೆ ಸ್ವಲ್ಪ ಲೇಟ್ ಆಗುತ್ತದೆ. ನನಗೆ ಯಾರಿಗೂ ನೋವು ಮಾಡಲು ಇಷ್ಟ ಇಲ್ಲ. ಹಾಗಾಗಿ ಕ್ಷಮೆ ಕೇಳುತ್ತೇನೆ. ತುಂಬಾ ಹೊತ್ತು ಕಾಯಿಸಿದ್ದಕ್ಕೆ ಎಲ್ಲಾ ಮಾಧ್ಯಮಗಳಿಗೂ ಕ್ಷಮೆ ಯಾಚಿಸುತ್ತೇನೆ. ಧನ್ಯವಾದಗಳು" ಎಂದು ವೇದಿಕೆ ಮೇಲೆ ಅಲ್ಲು ಹೇಳಿದರು.

ಬೆಂಗಳೂರು ಬಳಿಕ ಕೊಚ್ಚಿಯಲ್ಲಿ ಪುಷ್ಪ ಸುದ್ದಿಗೋಷ್ಠಿ!
ಪುಷ್ಪ ಸಿನಿಮಾತಂಡ ರಿಲೀಸ್‌ಗೆ ಇನ್ನೂ ಎರಡು ದಿನ ಮಾತ್ರ ಬಾಕಿ ಇದೆ. ಹಾಗಾಗಿ ಅಲ್ಲು ಅರ್ಜುನ್ ಮತ್ತು ತಂಡ ಸಾಲು ಸಾಲು ಸುದ್ದಿಗೋಷ್ಠಿಗಳನ್ನು ಮಾಡುತ್ತಿದೆ. ಮಲಯಾಳಂನಲ್ಲೂ ಕೂಡ ಪುಷ್ಪ ರಿಲೀಸ್ ಆಗ್ತಿದೆ. ಹಾಗಾಗಿ ಚಿತ್ರ ತಂಡ ಕೊಚ್ಚಿಗೆ ತೆರಳಿ ಅಲ್ಲಿಯೂ ಸದ್ದಿಗೋಷ್ಟಿ ನಡೆಸುತ್ತಿದೆ. ಕನ್ನಡ ನಾಡಿನಲ್ಲೂ ಕೂಡ ಅಲ್ಲು ಅರ್ಜುನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇಲ್ಲಿ ರಿಲೀಸ್ ಆಗುವ ಅವರ ಚಿತ್ರಗಳು ಉತ್ತಮ ಕಲೆಕ್ಷನ್ ಮಾಡುತ್ತವೆ.

ಪುಷ್ಪ ರಿಲಿಸ್‌ಗಾಗಿ ಕಾಯುತ್ತಿರುವ ಅಭಿಮಾನಿಗಳು!
'ಪುಷ್ಪ' ಚಿತ್ರದ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಕೊರೊನಾ ಲಾಕ್‌ಡೌನ್ ಬಳಿಕ ತೆರೆಗೆ ಬರುತ್ತಿವೆ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ. ಇನ್ನು ಚಿತ್ರದ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷಗಳು ಮನೆ ಮಾಡಿವೆ. ಹಾಗಾಗಿ ಪುಷ್ಪ ಚಿತ್ರ ಯಶಸ್ಸಿನ ಕಿರೀಟ ಧರಿಸುವ ಎಲ್ಲಾ ಸೂಚನೆಗಳು ಇವೆ. ಇನ್ನು ಚಿತ್ರ ರಿಲೀಸ್‌ಗೂ ಮೊದಲೆ 100 ಕೋಟಿ ಗಳಿಸಿ ಬಿಟ್ಟಿದೆ.


Click it and Unblock the Notifications











