ಇನ್ಸ್ಟಾಗ್ರಾಮ್‌ನಲ್ಲಿ ವೇಗವಾಗಿ 10 ಲಕ್ಷ ಲೈಕ್ಸ್ ಪಡೆದ ನಟರು; ಯಶ್ ದಾಖಲೆ ಮುರಿದು ನಂ.1 ಆದ ಅಲ್ಲು ಅರ್ಜುನ್!

ಸಾಮಾಜಿಕ ಜಾಲತಾಣ ಈಗಿನ ಜೀವನ ಶೈಲಿಗೆ ಅತಿ ಮುಖ್ಯವಾದ ಅಂಗವಾಗಿಬಿಟ್ಟಿದೆ. ಈ ಹಿಂದೆ ಟಿವಿಗಳಲ್ಲಿ ಸುದ್ದಿ ವಾಹಿನಿಗಳನ್ನು ನೋಡುವ ಮೂಲಕ ಆಗುಹೋಗುಗಳನ್ನು ತಿಳಿದುಕೊಳ್ಳುತ್ತಿದ್ದ ಜನರು ಈಗ ಸಾಮಾಜಿಕ ಜಾಲತಾಣದಲ್ಲಿಯೇ ಸುಲಭವಾಗಿ ಆ ಸುದ್ದಿಗಳನ್ನು ಪಡೆದುಕೊಳ್ಳುವ ಅನುಕೂಲವನ್ನು ಹೊಂದಿದ್ದಾರೆ.

ಇನ್ನು ಕೇವಲ ಆಗುಹೋಗುಗಳ ಬಗ್ಗೆ ಮಾತ್ರವಲ್ಲದೇ ಮನರಂಜನೆಯ ಅಂಶಗಳ ಮಾಹಿತಿಗಳಿಗೇನು ಈ ಸಾಮಾಜಿಕ ಜಾಲಾತಾಣದಲ್ಲಿ ಬರವಿಲ್ಲ. ಸಾಮಾಜಿಕ ಜಾಲತಾಣವೆಂದರೆ ಎಂಟರ್‌ಟೈನ್‌ಮೆಂಟ್ ಎಂಬಂತಾಗಿಬಿಟ್ಟಿದೆ. ಇನ್ನು ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಸಿನಿಮಾ ನಟ, ನಟಿಯರು, ನಿರ್ದೇಶಕರು ಹಾಗೂ ಪ್ರೊಡಕ್ಷನ್ ಹೌಸ್‌ಗಳು ಸೇರಿದಂತೆ ಹಲವಾರು ಬಹುತೇಕ ಎಲ್ಲಾ ಕಲಾವಿದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ತಮ್ಮ ಸಿನಿಮಾಗಳ ಮಾಹಿತಿಗಳನ್ನು ಇಲ್ಲಿಯೇ ಹಂಚಿಕೊಳ್ಳುತ್ತಿದ್ದಾರೆ.

Allu Arjun beats Yash in fastest 1 million instagram likes record

ಹೌದು, ಚಿತ್ರವೊಂದರ ಏನೇ ಘೋಷಣೆ ಮಾಡಬೇಕಿದ್ದರೂ ಸಾಮಾಜಿಕ ಜಾಲತಾಣವೇ ಬೃಹತ್ ವೇದಿಕೆ. ಟ್ವಿಟರ್, ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಮಾಡಿಬಿಟ್ಟರೆ ಸಾಕು, ಆ ಪೋಸ್ಟ್ ಕೋಟ್ಯಂತರ ಬಳಕೆದಾರರನ್ನು ನಿಮಿಷಗಳಲ್ಲಿ ತಲುಪಿಬಿಟ್ಟಿರುತ್ತದೆ. ಹೀಗಾಗಿಯೇ ಏನೇ ಪ್ರಕಟಣೆ ಇದ್ದರೂ ಸಾಮಾಜಿಕ ಜಾಲತಾಣದ ಮೂಲಕವೇ ಅದನ್ನು ಸಿನಿ ಮಂದಿ ತಿಳಿಸುತ್ತಾರೆ.

ಇನ್ನು ಸ್ಟಾರ್ ನಟರು ಯಾವ ವೇದಿಕೆಯಲ್ಲಿ ಇರುತ್ತಾರೋ ಅಲ್ಲಿನ ಅಂಕಿ ಅಂಶಗಳನ್ನು ಆಧರಿಸಿ ಯಾರ ಕ್ರೇಜ್ ಎಷ್ಟು ಎಂಬುದನ್ನು ಅಭಿಮಾನಿಗಳು ಅಳೆಯುವುದು ಕಾಮನ್. ಅದು ಈ ಸಾಮಾಜಿಕ ಜಾಲತಾಣದ ವಿಚಾರದಲ್ಲಿಯೂ ಮುಂದುವರಿದಿದೆ. ಹೌದ, ಯಾವ ನಟ ಹೆಚ್ಚು ಫಾಲೋವರ್ ಹೊಂದಿದ್ದಾರೆ, ಯಾವ ನಟ ಹೆಚ್ಚು ಲೈಕ್ಸ್ ಪಡೆದಿದ್ದಾರೆ ಹಾಗೂ ಯಾವ ನಟನ ಹೆಸರು ಹೆಚ್ಚು ಬಾರಿ ಉಲ್ಲೇಖಗೊಂಡಿದೆ ಎಂಬುದರ ಮೇಲೂ ಸಹ ಈ ಕ್ರೇಜ್ ಅನ್ನು ಅಳೆಯಲಾಗುತ್ತಿದೆ.

Allu Arjun beats Yash in fastest 1 million instagram likes record

ಇಷ್ಟು ದಿನಗಳವರೆಗೆ ಕೇವಲ ಟ್ವಿಟರ್ ರೆಕಾರ್ಡ್ಸ್ ಹಾಗೂ ಯುಟ್ಯೂಬ್ ರೆಕಾರ್ಡ್ಸ್ ಎಂದು ಚರ್ಚೆ ಮಾಡುತ್ತಿದ್ದ ಅಭಿಮಾನಿಗಳು ಹಾಗೂ ಸಿನಿ ರಸಿಕರು ಈಗ ಇನ್ಸ್ಟಾಗ್ರಾಮ್ ರೆಕಾರ್ಡ್ಸ್ ಬಗ್ಗೆಯೂ ಸಹ ಚರ್ಚಿಸಲು ಆರಂಭಿಸಿದ್ದಾರೆ. ಹೌದು, ಇನ್ಸ್ಟಾಗ್ರಾಮ್‌ನಲ್ಲಿ ಯಾವ ನಟನಿಗೆ ಹೆಚ್ಚು ಫಾಲೋವರ್ಸ್, ಯಾವ ನಟನಿಗೆ ಹೆಚ್ಚು ಲೈಕ್ಸ್ ಎಂಬ ರೆಕಾರ್ಡ್‌ಗಳು ಇವೆ.

ಇನ್ನು ಇನ್ಸ್ಟಾಗ್ರಾಮ್‌ನಲ್ಲಿ ಅತಿ ವೇಗವಾಗಿ ಅತಿಹೆಚ್ಚು ಲೈಕ್ಸ್ ಪಡೆದ ನಟ ಎಂಬ ದಾಖಲೆಯಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಸಾಧನೆ ಮಾಡಿದ್ದರು. ಯಶ್ ದೀಪಾವಳಿ ಹಬ್ಬದ ಪ್ರಯುಕ್ತ ಅಪ್‌ಲೋಡ್ ಮಾಡಲಾಗಿದ್ದ ತನ್ನ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜತೆಗಿನ ಫೋಟೊ 49 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡಿತ್ತು. ಈ ಮೂಲಕ ಅತಿವೇಗವಾಗಿ ಹತ್ತು ಲಕ್ಷ ಇನ್ಸ್ಟಾಗ್ರಾಮ್ ಲೈಕ್ಸ್ ಪಡೆದ ನಟ ಎಂಬ ದಾಖಲೆಯನ್ನು ಯಶ್ ನಿರ್ಮಿಸಿದ್ದರು.

ಈ ದಾಖಲೆಯನ್ನು ಇದೀಗ ಅಲ್ಲು ಅರ್ಜುನ್ ಅಳಿಸಿಹಾಕಿದ್ದಾರೆ. ತನ್ನ ಹುಟ್ಟುಹಬ್ಬದ ಪ್ರಯುಕ್ತ ಪುಷ್ಪ ದ ರೈಸ್ ತಂಡ ಬಿಡುಗಡೆ ಮಾಡಿದ ಪೋಸ್ಟರ್ ಅನ್ನು ಅಲ್ಲು ಅರ್ಜುನ್ ಹಂಚಿಕೊಂಡಿದ್ದರು. ಈ ಪೋಸ್ಟರ್ ಕೇವಲ 33 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಈ ಮೂಲಕ ಯಶ್ ಮಾಡಿದ್ದ ದಾಖಲೆಯನ್ನು ಅಲ್ಲು ಅರ್ಜುನ್ ಮುರಿದು ಹಾಕಿದ್ದು ಇನ್ಸ್ಟಾಗ್ರಾಮ್‌ನಲ್ಲಿ ಅತಿ ವೇಗವಾಗಿ ಹತ್ತು ಲಕ್ಷ ಲೈಕ್ಸ್ ಪಡೆದ ನಟ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

More from Filmibeat

English summary
Allu Arjun beats Yash in fastest 1 million instagram likes record. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X