ಬಾಲಿವುಡ್ ಖಾನ್‌ಗಳಿಗೂ ದೊಡ್ಡ ಸೂಪರ್ ಸ್ಟಾರ್ ಅಲ್ಲು ಅರ್ಜುನ್: ಪುಷ್ಪ ರಾಜ್‌ಗೆ ಹೊಸ ಕಿರೀಟ!
ಸದ್ಯಕ್ಕೆ ಲಾಕ್‌ಡೌನ್, ಕೊರೊನಾ ನಡುವೆಯೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಚಿತ್ರ ಎಂದರೆ ಅದು ಪುಷ್ಪ. ಅಲ್ಲು ಅರ್ಜುನ್ ಸಿನಿಮಾ ಬದುಕಿಗೆ ಪುಷ್ಪ ಸಿನಿಮಾ ಹೊಸ ಮೆರುಗು ತಂದಿರುವ ಚಿತ್ರ. ಎಲ್ಲಾ ರೀತಿಯಲ್ಲೂ ಪುಷ್ಪ ಚಿತ್ರ ತಂಡಕ್ಕೆ, ಚಿತ್ರರಂಗಕ್ಕೆ ಪ್ಲಸ್ ಆಗಿದೆ.
ಪುಷ್ಪ ಚಿತ್ರದ ಒಂದು ದೊಡ್ಡ ದಾಖಲೆ ಅಥವಾ ಸಾಧನೆ ಎಂದರೆ, ಅದು ಬಾಲಿವುಡ್‌ನಲ್ಲಿ ಮಾಡಿದ ದಾಖಲೆ. ಈ ಹಿಂದೆ ಸೌತ್ ಚಿತ್ರವೊಂದು ಬಾಲಿವುಡ್‌ನಲ್ಲಿ ಸದ್ದು ಮಾಡಿದೆ ಅಂದರೆ ಅದು ಕೇವಲ ಬಾಹುಬಲಿ ಚಿತ್ರಕ್ಕೆ ಮಾತ್ರ ಸೀಮಿತ ಆಗಿತ್ತು. ಈಗ ಬಾಹುಬಲಿಯನ್ನು ಮೀರಿ ಪುಷ್ಪ ಮುನ್ನುಗ್ಗುತ್ತಿದೆ. ಅಲ್ಲಿನ ಪ್ರೇಕ್ಷಕರು ಕೂಡ ಚಿತ್ರವನ್ನು ಒಪ್ಪಿದ್ದಾರೆ. ಮೆಚ್ಚಿಕೊಂಡಿದ್ದಾರೆ. ಈಗ ಈ ಚಿತ್ರದ ಮೂಲಕ ನಟ ಅಲ್ಲು ಅರ್ಜುನ್ ಸಾಕಷ್ಟು ಹಿಂದಿ ಪ್ರೇಕ್ಷಕರನ್ನು ಗಳಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್‌ಗೆ ಈಗ ಬಾಲಿವುಡ್ ನಿರ್ಮಾಪಕನೊಬ್ಬ ಹೊಸ ಕಿರೀಟ ತೊಡಿಸಿದ್ದಾರೆ. ಬಾಲಿವುಡ್‌ನಲ್ಲಿ ಸದಾ ವಿವಾದಗಳಿಂದ ಸುದ್ದಿ ಆಗುವ ನಿರ್ಮಾಪಕ, ನಟ ಕಮಾಲ್ ರಶೀದ್ ಖಾನ್ ಅಲ್ಲು ಅರ್ಜುನ್ ಮತ್ತು ಪುಷ್ಪ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ಬಗ್ಗೆ ಟ್ವಿಟ್ಟರ್‌ನಲ್ಲಿ ಹೊಸ ಹೇಳಿಕೆ ನೀಡಿದ್ದಾರೆ,
ಬಾಲಿವುಡ್ ಖಾನ್‌ಗಳನ್ನ ಮೀರಿಸಿದ ಅಲ್ಲು ಅರ್ಜುನ್: KRK
ಸೌತ್ ಚಿತ್ರ ರಂಗದಲ್ಲಿ ಬಹು ನಿರೀಕ್ಷೆಯೊಂದಿಗೆ ರಿಲೀಸ್ ಆಗಿ ಸೂಪರ್ ಹಿಟ್ ಆದ ಚಿತ್ರ ಪುಷ್ಪ. ಪುಷ್ಪ ಚಿತ್ರಕ್ಕೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕರು ಕೂಡ ದಿನ ಕಳೆದಂತೆ ಪುಷ್ಪ ಚಿತ್ರದ ಕ್ರೇಜ್ ಹೆಚ್ಚಾಗುತ್ತಾ ಬಂತು. ಅದರಲ್ಲೂ ವಿಶೇಷವಾಗಿ ಬಾಲಿವುಡ್‌ನಲ್ಲಿ ಪುಷ್ಪ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತು. ಚಿತ್ರವನ್ನು ಬಾಲಿವುಡ್ ತಾರೆಯರು ಸೇರಿದಂತೆ, ಹಿಂದಿ ಪ್ರೇಕ್ಷಕರು ಕೂಡ ಕೊಂಡಾಡಿದ್ದಾರೆ. ಈಗ ನಟ ಅಲ್ಲು ಅರ್ಜುನ್ ಬಾಲಿವುಡ್ ನಿರ್ಮಾಪಕ ಕಮಾಲ್ ರಶೀದ್ ಖಾನ್ ಹೊಸ ಕಿರೀಟ ತೊಡಿಸಿದ್ದಾರೆ. ಪುಷ್ಪ ಚಿತ್ರದ ಮೂಲಕ ಬಾಲಿವುಡ್ ಖಾನ್‌ಗಳನ್ನು ಮೀರಿಸಿದ ಅಲ್ಲು ಅರ್ಜುನ್ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ವಿರೋಧವೇನೂ ವ್ಯಕ್ತವಾಗಿಲ್ಲ. ಖಾನ್‌ಗಳ ಅಭಿಮಾನಿಗಳು ಕೂಡ ಇವರ ಮಾತಿಗೆ ತಲೆ ದೂಗಿದ್ದಾರೆ.

ಬಾಲಿವುಡ್‌ನಲ್ಲಿ ಸಿನಿಮಾ ಮಾಡುತ್ತಾರಾ ಅಲ್ಲು ಅರ್ಜುನ್!
ಈ ಮೂಲಕ ನಟ ಅಲ್ಲು ಅರ್ಜುನ್ ಮಾರ್ಕೆಟ್ ಬಾಲಿವುಡ್‌ನಲ್ಲೂ ಹೆಚ್ಚಾಗಿದೆ. ಬಾಹುಬಲಿಯಂತಹ ಸಿನಿಮಾಗಳು ಮಾತ್ರವಲ್ಲ, ಪುಷ್ಪ ರೀತಿಯ ಚಿತ್ರಗಳು ಕೂಡ ಬಾಲಿವುಡ್‌ನಲ್ಲಿ ಗೆಲ್ಲಬಹುದು ಎಂದು ಅಲ್ಲು ಅರ್ಜುನ್ ತೋರಿಸಿ ಕೊಟ್ಟಿದ್ದಾರೆ. ಈ ಮೂಲಕ ಅಲ್ಲು ಅರ್ಜುನ್‌ಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಅಲ್ಲು ಅರ್ಜುನ್ ಮುಂದೆ ಬಾಲಿವುಡ್ ಚಿತ್ರಗಳನ್ನು ಮಾಡುತ್ತಾರೆ ಎನ್ನಲಾಗುತ್ತಿದೆ. ಆದರೆ ಕೇವಲ ಬಾಲಿವುಡ್‌ಗೆ ತಮ್ಮ ಸಿನಿಮಾಗಳನ್ನು ಸೀಮಿತ ಗೊಳಿಸದೆ. ಇನ್ನು ಮುಂದೆ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ಯಾನ್ ಇಂಡಿಯಾ ಅಲ್ಲದಿದ್ದರು ಅವರು ತೆಲುಗು ಜೊತೆಗೆ ಹಿಂದಿಯಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಾರಂತೆ.

ಹಿಂದಿಯಲ್ಲಿ 80 ಕೋಟಿ ಗಳಿಸಿ ದಾಖಲೆ ಬರೆದ 'ಪುಷ್ಪ'!
ಸಿನಿಮಾ ಹೇಗೆ ಇದ್ದರೂ ಅಂತಿಮವಾಗಿ ಚಿತ್ರದ ಗಳಿಕೆ ಮೇಲೆ ಅದರ ಸಕ್ಸಸ್ ರೇಟ್ ನಿಂತಿರುತ್ತದೆ. ಹಾಗೆ ನೋಡಿದರೆ ಪುಷ್ಪ ಚಿತ್ರ ಹಿಂದಿ ಅವತರಣಿಕೆಯಲ್ಲಿ ಮಾತ್ರ ಪ್ರತ್ಯೇಕವಾಗಿ ಇಲ್ಲಿ ತನಕ 80 ಕೋಟಿ ರೂ ಮೊತ್ತ ಕಲೆ ಹಾಕಿದೆ. ಒಟ್ಟಾರೆ ವಿಶ್ವದಾದ್ಯಂತ ಕಲೆಕ್ಷನ್ 400 ಕೋಟಿಯತ್ತ ಸಾಗುತ್ತಿದೆ. ಇದರಲ್ಲಿ 80 ಕೋಟಿ ರೂ. ಪಾಲು ಹಿಂದಿ ಅವತರಣಿಕೆಯದ್ದು, ಈ ಮೂಕ ಅಲ್ಲು ಅರ್ಜುನ್ ಅವರ ಚಿತ್ರಗಳಿಗೆ ಬಾಲಿವುಡ್‌ನಲ್ಲಿ ದೊಡ್ಡ ಮಾರ್ಕೆಟ್ ಓಪನ್ ಆಗಿದೆ. ಹಾಗಾಗಿ ಅವರ ಚಿತ್ರಗಳು ಅಲ್ಲಿನ ಸ್ಟಾರ್ ನಟರ ಚಿತ್ರಗಳನ್ನು ಮೀರಿಸುವುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಉದಾರಣೆ ಆಗಿ ನಿಂತಿದೆ, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಅಭಿನಯದ '83' ಚಿತ್ರ.

OTTಯಲ್ಲಿ ರಿಲೀಸ್ ಆದರು, ಚಿತ್ರಮಂದಿರಗಳಲ್ಲಿ ಪುಷ್ಪಗೆ ಬೇಡಿಕೆ!
ಪುಷ್ಪ ಚಿತ್ರಕ್ಕೆ OTTಯಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರ ಮಂದಿರಲ್ಲಿ ಸಿನಿಮಾ ಬಹಳ ದಿನ ಇದ್ದರು ಕೂಡ, ಒಟಿಟಿಯಲ್ಲಿ ಚಿತ್ರಕ್ಕೆ ಬೇಡಿಕೆ ತಂದಿಲ್ಲ. ಇನ್ನು ಚಿತ್ರ ಒಟಿಟಿಯಲ್ಲಿ ಲಭ್ಯ ಇದ್ದರು ಜನ ಚಿತ್ರ ಮಂದಿರಗಳಲ್ಲಿ ಪುಷ್ಪ ಚಿತ್ರವನ್ನು ನೋಡುತ್ತಿದ್ದಾರೆ. ಕೆಲವು ಕಡೆ ಲಾಕ್ ಡೌನ್, ನೈಟ್ ಕರ್ಫ್ಯೂ ಇದೆ. ಆದರೂ ಇರುವ ಶೋಗಳಲ್ಲಿಯೇ ಪುಷ್ಪ ಚಿತ್ರವನ್ನು ಜನ ನೋಡುತ್ತಿದ್ದಾರೆ.


Click it and Unblock the Notifications











