HBD Allu Arjun: 3,500 ರೂ.ನಿಂದ ₹100 ಕೋಟಿ ಸಂಭಾವನೆ: ಮೆಗಾ ಕ್ಯಾಂಪ್ ಬಿಟ್ಟ ಬನ್ನಿ ಆಸ್ತಿ ಮೌಲ್ಯ ಎಷ್ಟು?
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಿರಂಜೀವಿ ಸೋದರಳಿಯನಾದರೂ ತನ್ನದೇ ವಿಭಿನ್ನ ಮ್ಯಾನರಿಸಂ ಹಾಗೂ ಅಭಿನಯದಿಂದ ಚಿತ್ರರಂಗದಲ್ಲಿ ಐಕಾನ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಆನಿಮೇಟರ್, ಡಿಸೈನರ್ ಆಗಿ ಬಣ್ಣದಲೋಕಕ್ಕೆ ಬಂದ ಬನ್ನಿ ಮುಂದೆ ಹೀರೊ ಆಗಿ ಎಂಟ್ರಿ ಕೊಟ್ಟರು. 'ಪುಷ್ಪ'ರಾಜ್ ಆಗಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ.
'ಗಂಗೋತ್ರಿ'ಯ ಸಿಂಹಾದ್ರಿ ಆಗಿ ಸಿನಿರಸಿಕರು ಮನಗೆಲ್ಲುವುದಕ್ಕು ಮುನ್ನ ಬನ್ನಿ ಬಾಲನಟನಾಗಿ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 'ಆರ್ಯ' ಚಿತ್ರದಿಂದ ರಾತ್ರೋರಾತ್ರಿ ಸ್ಟಾರ್ ಪಟ್ಟ ಅಲಂಕರಿಸಿದ್ದರು. ಚಿರಂಜೀವಿ ಮಡದಿ ಸುರೇಖಾ ಅಣ್ಣನ ಮಗ ಅಲ್ಲು ಅರ್ಜುನ್ ಈಗ ಟಾಲಿವುಡ್ ಸೂಪರ್ ಸ್ಟಾರ್ ಆಗಿದ್ದಾರೆ. ಆರಂಭದಲ್ಲಿ ಮೆಗಾಸ್ಟಾರ್ ಛಾಯೆಯಲ್ಲೇ ಅಲ್ಲು ಅರ್ಜುನ್ ಗುರ್ತಿಸಿಕೊಂಡಿದ್ದರು. ಆದರೆ ನಿಧಾನವಾಗಿ ತಮ್ಮದೇ ಹೊಸ ಹಾದಿ ಕಂಡುಕೊಂಡರು. ಡ್ಯಾನ್ಸ್, ಸ್ಟೈಲ್, ಆಕ್ಟಿಂಗ್‌ನಿಂದ ಮೋಡಿ ಮಾಡುತ್ತಾ ಬಂದರು.

ಅಲ್ಲು ಅರ್ಜುನ್ ಮೊದಲ ಸಂಭಾವನೆ 3.500 ರೂಪಾಯಿ. ಆದರೆ ಈಗ ಚಿತ್ರವೊಂದಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗ್ತಿದೆ. ಇನ್ನು ಜಾಹೀರಾತುಗಳಿಂದಲೂ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ಸೌತ್ ಸಿನಿಇಂಡಸ್ಟ್ರಿಯಲ್ಲಿ ಬಹಳ ಡಿಮ್ಯಾಂಡ್ ಇರುವ ನಟರಲ್ಲಿ ಒಬ್ಬರಾಗಿದ್ದಾರೆ. ತಂದೆ ಅಲ್ಲು ಅರವಿಂದ್ ಖ್ಯಾತ ನಿರ್ಮಾಪಕರು. ಬನ್ನಿ ಈಗ ಚಿತ್ರರಂಗಲ್ಲಿ ಹೀರೊ ಆಗಿ 20 ವರ್ಷ ಪೂರೈಸಿದ್ದಾರೆ. ಇಷ್ಟು ವರ್ಷಗಳಲ್ಲಿ ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದಾರೆ.
ಅಲ್ಲು ಅರ್ಜುನ್ ಆಸ್ತಿ ಮೌಲ್ಯ ₹350 ಕೋಟಿ
ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಪ್ರಕಾರ ಅಲ್ಲು ಅರ್ಜುನ್ 350 ಕೋಟಿ ರೂ. ಆಸ್ತಿಯ ಒಡೆಯ ಎನ್ನಲಾಗುತ್ತಿದೆ. ಐಷಾರಾಮಿ ಬಂಗಲೆಗಳು, ಕಾರುಗಳು ಅವರ ಬಳಿಯಿದೆ. ಜಾಹೀರಾತುಗಳಿಂದಲೇ ಬನ್ನಿ ಭಾರೀ ಆದಾಯ ಗಳಿಸುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ಸಿನಿಜರ್ನಿ ನಿಜಕ್ಕೂ ಸ್ಪೂರ್ತಿದಾಯಕ.

ದುಬಾರಿ ಕಾರುಗಳ ಒಡೆಯ
ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ ಕಾರುಗಳ ಕ್ರೇಜ್ ಹೆಚ್ಚು. ಅವರ ಗ್ಯಾರೇಜ್‌ನಲ್ಲಿ ಲಗ್ಜುರಿ ಕಾರುಗಳ ಕಲೆಕ್ಷನ್ ಇದೆ. ರೇಂಜ್ ರೋವರ್, ಹಮ್ಮರ್ H2, ಜಾಗ್ವಾರ್ XJL, ವೋಲ್ವೋ XC90 T8 ಎಕ್ಸ್‌ಲೆನ್ಸ್, ಮರ್ಸಿಡೀಸ್ GLE 350d, BMW X6m, ಫಾಲ್ಕನ್ ವ್ಯಾನಿಟಿ ವ್ಯಾನ್ ರೀತಿಯ ಐಷಾರಾಮಿ ವಾಹನಗಳಿವೆ.
ಅಲ್ಲು ಅರ್ಜುನ್ ಸ್ಥಿರಾಸ್ತಿ
ಐಕಾನ್ ಸ್ಟಾರ್ ಸಂಪಾದನೆಯ ಹಣವನ್ನು ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿದ್ದಾರೆ. ಮನೆಗಳು, ವಾಣಿಜ್ಯ ಸಂಕೀರ್ಣಗಳು ಇದೆ. ಇನ್ನು ಹೈದರಾಬಾದ್‌ನ ರಿಯಲ್ ಎಸ್ಟೇಟ್‌ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅಲ್ಲು ಸ್ಟುಡಿಯೋಸ್, ಅಲ್ಲು ಎಂಟರ್‌ಟೈನ್‌ಮೆಂಟ್(ಸಿನಿಮಾ ನಿರ್ಮಾಣ ಸಂಸ್ಥೆ), ಆಶಿರ್ವಾದಂ(ಫಾರ್ಮ್ ಹೌಸ್), ಜೂಬ್ಲಿ ಹಿಲ್ಸ್‌ನಲ್ಲಿ ಭವ್ಯ ಬಂಗಲೆ ಇದೆ. ಒಟ್ಟಿನಲ್ಲಿ ಅಲ್ಲು ಅರ್ಜುನ್ ಸಿನಿಜರ್ನಿ ಸಾಕಷ್ಟು ಜನರಿಗೆ ಪ್ರೇರಣೆ ಎನ್ನಬಹುದು. ಪರಿಶ್ರಮದಿಂದ ಸಕ್ಸಸ್ ಕಟ್ಟಿಟ್ಟ ಬುತ್ತಿ ಅನ್ನೋದನ್ನು ಸ್ಟೈಲಿಶ್ ಸ್ಟಾರ್ ಕೂಡ ಉತ್ತಮ ಉದಾಹರಣೆ.
ಮತ್ತೆ 'ಪುಷ್ಪ'ರಾಜ್ ಅವತಾರ
ಸದ್ಯ ಸುಕುಮಾರ್ ನಿರ್ದೇಶನದ 'ಪುಷ್ಪ'- 2 ಚಿತ್ರದಲ್ಲಿ ಅಲ್ಲು ಅರ್ಜುನ್ ಬಣ್ಣ ಹಚ್ಚಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲೇ ಚಿತ್ರದ ಕಾನ್ಸೆಪ್ಟ್ ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್‌ನಲ್ಲಿ ಗಂಗಮ್ಮ ತಲ್ಲಿ ವೇಷದಲ್ಲಿ ಬನ್ನಿ ಎಲ್ಲರ ಹುಬ್ಬೇರಿಸಿದ್ದಾರೆ. ಸ್ಟೈಲಿಶ್ ಸ್ಟಾರ್ ಇಂತಾದೊಂದು ವೇಷ ಹಾಕಲು ಒಪ್ಪಿದ್ದು ಗ್ರೇಟ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸೀರೆ ಉಟ್ಟು, ಬಳೆ, ಓಲೆ, ಮೂಗುತಿ ತೊಟ್ಟು ಅಲ್ಲು ಅರ್ಜುನ್ ಹುಬ್ಬೇರಿಸಿದ್ದಾರೆ. 2 ವರ್ಷಗಳ ಹಿಂದೆ ತೆರೆಕಂಡು ಸಕ್ಸಸ್ ಆಗಿದ್ದ 'ಪುಷ್ಪ' ಚಿತ್ರದ ಮುಂದುವರೆದ ಭಾಗ ಇದು.


Click it and Unblock the Notifications











