ಅವತ್ತೇನಾಗಿತ್ತು ಅಂದರೆ, ಗೋವಾದಲ್ಲಿ 'ಬಾರ್'ಗೆ ತೆರಳಿ 'ಎಣ್ಣೆ' ಖರೀದಿಸಿದ್ದೇಕೆ ಎಂದು ಹೇಳಿದ ಅಲ್ಲು ಅರ್ಜುನ್...!
ಚಿತ್ರರಂಗದ ತಾರೆಯರು ಏನೇ ಮಾಡಿದರೂ ನೋಡುಗರಿಗದು ಎಲೆ ಅಡಿಕೆಯೇ. ಕೆಮ್ಮಮಿದರೂ ಸುದ್ದಿ. ಪಾರ್ಟಿ ಮಾಡಿದರೂ ಸುದ್ದಿ. ಬಿಕಿನಿ ಹಾಕಿದರೂ ಸುದ್ದಿ, ಹಾಕದಿದ್ದರೂ ಸುದ್ದಿ. ಅಷ್ಟರ ಮಟ್ಟಿಗೆ ಸೆಲೆಬ್ರೆಟಿಗಳ ವ್ಯೆಯಕ್ತಿಕ ಬದುಕು ಮೂರಾ ಬಟ್ಟೆಯಾಗಿರುತ್ತೆ. ಇದಕ್ಕೆ 2017ರಲ್ಲಿ ವೈರಲ್ ಆಗಿದ್ದ ಅಲ್ಲು ಅರ್ಜುನ್ ಅವರ ವಿಡಿಯೋ ಮತ್ತೊಂದು ಸಾಕ್ಷಿ.
ಹೌದು,ಅಸಲಿಗೆ 2017ರಲ್ಲಿ ಅಲ್ಲು ಅರ್ಜುನ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ವೈರಲ್ ಆದ ವಿಡಿಯೋದಲ್ಲಿ ಗೋವಾ ಪ್ರವಾಸದಲ್ಲಿದ್ದ ಅಲ್ಲು ಅರ್ಜುನ್, ಜನಸಾಮಾನ್ಯರಂತೆ ನಡೆದುಕೊಂಡು ಮದ್ಯದಂಗಡಿಗೆ ಹೋಗಿದ್ದರು. ಜನಸಂದಣಿ ನಡುವೆ ನಿಂತುಕೊಂಡು ಎಣ್ಣೆ ಖರೀದಿಸಿದ್ದರು. ವಿಡಿಯೋ ಕಂಡು ಅನೇಕರು ಆಗ ಹೌಹಾರಿದ್ದರು. ಅಲ್ಲು ಅರ್ಜುನ್ ಆಲ್ಕೋಹಾಲ್ ಕುಡಿಯುತ್ತಾರಾ ಎಂದು ಪ್ರಶ್ನೆ ಮಾಡಿದ್ದರು. ಇನ್ನೂ ಕೆಲವರು ಅಲ್ಲು ಅರ್ಜುನ್ ಅವರನ್ನು ಗೋವಾದಲ್ಲಿ ಯಾರು ಗುರುತೇ ಹಿಡಿಯಲಿಲ್ಲವಾ ಎಂದು ಕೂಡ ಪ್ರಶ್ನೆ ಮಾಡಿದ್ದರು. ಇನ್ನೂ ಕೆಲವರು ಅಲ್ಲು ಅರ್ಜುನ್ ಜನಪ್ರಿಯತೆಯ ವ್ಯಂಗ್ಯವನ್ನು ಮಾಡಿದ್ದರು. ಮತ್ತೂ ಕೆಲವರು ಅನೇಕರಿಗೆ ಮಾದರಿಯಾಗಬೇಕಿದ್ದ ಸ್ಟಾರ್ ಒಬ್ಬ ತಾನೇ ಎಣ್ಣೆ ಹೊಡೆಯುತ್ತಿದ್ದಾನೆ ಈ ಮೂಲಕ ತನ್ನ ಅಭಿಮಾನಿಗಳ ದಾರಿಯನ್ನು ತಪ್ಪಿಸುತ್ತಿದ್ದಾನೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದರು. ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇನ್ನೂ ಹಲವರು ಅಲ್ಲಿ ಎಣ್ಣೆ ಖರೀದಿ ಮಾಡಿರುವ ಅಲ್ಲು ಅರ್ಜುನ್ ಅಲ್ಲ ಎಂಬ ವಾದವನ್ನು ಮಾಡಿದ್ದರು.

ಈಗ 07 ವರ್ಷದ ನಂತರ ಅಲ್ಲು ಅರ್ಜುನ್ ಈ ವೈರಲ್ ವಿಡಿಯೋ ಕುರಿತು ಮಾತನಾಡಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಇರುವುದು ಬೇರೆ ಯಾರು ಅಲ್ಲ ಬದಲಿಗೆ ನಾನೇ ಎಂದು ಒಪ್ಪಿಕೊಂಡಿದ್ದಾರೆ. ಹೌದು, ಆಹಾ ಓಟಿಟಿಗಾಗಿ ತೆಲುಗು ಚಿತ್ರರಂಗದ ಸ್ಟಾರ್ ಬಾಲಯ್ಯ ನಡೆಸಿಕೊಡುವ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ' ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಭಾಗಿಯಾಗಿದ್ದಾರೆ. ತಮ್ಮ ಪುಷ್ಟ 2 ಚಿತ್ರದ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡು ಚಿತ್ರದ ಪ್ರಚಾರವನ್ನು ಮಾಡಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಬಾಲಯ್ಯ ಆಂಧ್ರದಲ್ಲಿ ತನ್ನದೇ ಆದ ಚರಿಷ್ಮಾ ಸೃಷ್ಟಿ ಮಾಡಿಕೊಂಡಿರುವ ಹೀರೋ. ಬಾಲಯ್ಯ ತೆಲುಗು ಸ್ಟಾರ್ ನಟ ಬಾಲಯ್ಯ ತನ್ನದೇ ಆದ ಚರಿಷ್ಮಾ ಸೃಷ್ಟಿ ಮಾಡಿಕೊಂಡಿರುವ ನಟ. ಆಂಧ್ರ ತೆಲಂಗಾಣ ಮಾತ್ರವಲ್ಲ ಕರ್ನಾಟಕದಲ್ಲೂ ಬಾಲಕೃಷ್ಣರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ತೆರೆ ಮೇಲೆ ಸಿಂಹದಂತೆ ಗರ್ಜಿಸೋ ಬಾಲಯ್ಯ ಚಿತ್ರದಲ್ಲಿ ಖಳರ ವಿರುದ್ಧ ನಡೆಸುವ ಆಟಾಟೋಪಗಳು ಒಂದೆರಡಲ್ಲ. ತುಪಾಕಿಯಿಂದ ಸಿಡಿದ ಗುಂಡಿನಂತೆ ಮಾತಾಡೋ ಬಾಲಯ್ಯನ ಡೈಲಾಗ್ಸ್‌ಗೆ ಚಪ್ಪಾಳೆ ಶಿಳ್ಳೆ ಖಚಿತ.

ಇಂಥಾ ಬಾಲಯ್ಯ ತಮ್ಮ ಈ ಅನ್‌ಸ್ಟಾಪಬಲ್ ಕಾರ್ಯಕ್ರಮದಲ್ಲಿ ಕೇವಲ ಚಿತ್ರ ಮತ್ತು ಚಿತ್ರರಂಗದ ಕುರಿತು ಮಾತ್ರ ಮಾತನಾಡುವುದಿಲ್ಲ. ಪ್ರಶ್ನೆಯನ್ನು ಕೇಳುವುದಿಲ್ಲ. ಬದಲಿಗೆ ತಾರೆಯರ ವ್ಯೆಯಕ್ತಿಕ ಬದುಕನ್ನೂ ಇಣುಕಿ ನೋಡುವ ಪ್ರಯತ್ನ ಮಾಡುತ್ತಾರೆ. ತಮ್ಮದೇ ಶೈಲಿಯಲ್ಲಿ ಬಹಳ ರಸವತ್ತಾಗಿ ಬಾಲಯ್ಯ ಶೋ ನಿರೂಪಣೆ ಮಾಡುತ್ತಾರೆ.ಇದಕ್ಕೆ ಇನ್ನೊಂದು ಪುರಾವೆ ಎಂಬಂತೆ ಅಲ್ಲು ಅರ್ಜುನ್ ಅವರಿಗೆ ವೈರಲ್ ವಿಡಿಯೋದ ಹಿಂದಿನ ಸತ್ಯ ಹೇಳುವಂತೆ ಬಾಲಯ್ಯ ಹೇಳಿದ್ದಾರೆ.
ಬಾಲಯ್ಯ ಅವರ ಆದೇಶದ ಮೇರೆಗೆ ವೈರಲ್ ವಿಡಿಯೋ ಹಿಂದಿನ ಕಥೆ ಹೇಳಿರುವ ಅಲ್ಲು ಅರ್ಜುನ್ ಅವತ್ತು ಗೋವಾದಲ್ಲಿ ನಾನು ಮದ್ಯದ ಅಂಗಡಿಗೆ ಹೋಗಿದ್ದು ನಿಜ ಎಂದಿದ್ದಾರೆ. ಆದರೆ ಇದೇ ಸಮಯದಲ್ಲಿ ಆ ಮದ್ಯ ನನಗಲ್ಲ ಅದು ನನ್ನ ಸ್ನೇಹಿತನಗಾಗಿ ತೆಗೆದುಕೊಂಡ ಮದ್ಯ ಆಗಿತ್ತು ಎಂದಿದ್ದಾರೆ. ಸದ್ಯಕ್ಕೆ ಅಲ್ಲು ಅರ್ಜುನ್ ಅವರ ಈ ಮಾತಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲು ಅರ್ಜುನ್ ಅವರ ಎಪಿಸೋಡ್ ಇಂದು ಪ್ರಸಾರವಾಗಲಿದೆ. ಇನ್ನೂ ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಹೇಳಿರುವ ಆ ಸ್ನೇಹಿತ ಕೂಡ ಭಾಗಿಯಾಗಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.


Click it and Unblock the Notifications











