'ಆಲ್ ರೌಂಡರ್' ರಶ್ಮಿಕಾ ಮತ್ತು ನಿತಿನ್ ಗೆ ಶುಭಾಶಯ ತಿಳಿಸಿದ ಅಲ್ಲು ಅರ್ಜುನ್
ತೆಲುಗು ನಟ ನಿತಿನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಭೀಷ್ಮ' ಚಿತ್ರ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ ನಾಲ್ಕು ದಿನಗಳಲ್ಲಿ 22 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ 'ಭೀಷ್ಮ' ಮುನ್ನುಗ್ಗುತ್ತಿದೆ.
Recommended Video
ರೊಮ್ಯಾನ್ಸ್ ಮತ್ತು ಕಾಮಿಡಿ ಮಿಕ್ಸ್ ಆಗಿರುವ 'ಭೀಷ್ಮ' ಚಿತ್ರ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಪರಿಣಾಮ, 'ಭೀಷ್ಮ'ನನ್ನ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬೀಳುತ್ತಿದ್ದಾರೆ.
ಎಲ್ಲೆಡೆ 'ಭೀಷ್ಮ' ಹವಾ ಜೋರಾಗಿರುವುದರಿಂದ ನಿತಿನ್, ರಶ್ಮಿಕಾ ಮಂದಣ್ಣ ಮತ್ತು ನಿರ್ದೇಶಕ ವೆಂಕಿ ಕುಡುಮುಲ ರವರಿಗೆ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಶುಭಾಶಯಗಳನ್ನು ತಿಳಿಸಿದ್ದಾರೆ.

''ಕಮರ್ಶಿಯಲ್ ಎಮೋಷನಲ್ ಎಂಟರ್ ಟೈನರ್ ನೀಡಿದ ನಿರ್ದೇಶಕ ವೆಂಕಿ, ಆಲ್ ರೌಂಡರ್ ರಶ್ಮಿಕಾ ಮತ್ತು ನಿರ್ಮಾಪಕ ವಂಶಿಗೆ ಶುಭಾಶಯಗಳು. 2020 ರ ಜನವರಿ ಮತ್ತು ಫೆಬ್ರವರಿ ನಿಜಕ್ಕೂ ನಿಮಗೆ ಚೆನ್ನಾಗಿದೆ'' ಎಂದು ನಟ ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.
''ನಟ ನಿತಿನ್ ಗೆ ಡಬಲ್ ಕಂಗ್ರಾಕ್ಟ್ಸ್. ಈಗ ನಿಮ್ಮ ಮದುವೆ ಸಂಭ್ರಮಕ್ಕೆ ಡಬಲ್ ಜೋಷ್ ಸಿಗಲಿದೆ. ಒಳ್ಳೆಯ ಸಮಯಕ್ಕೆ ಒಳ್ಳೆಯದ್ದೇ ಆಗಿದೆ. ನಿಜಕ್ಕೂ ಖುಷಿ ಆಗುತ್ತಿದೆ. ಇಡೀ 'ಭೀಷ್ಮ' ತಂಡಕ್ಕೆ ನನ್ನ ಅಭಿನಂದನೆಗಳು'' ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.
ಅಂದ್ಹಾಗೆ, ವೆಂಕಿ ಕುಡುಮುಲ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಭೀಷ್ಮ'. ನಿತಿನ್, ರಶ್ಮಿಕಾ ಮಂದಣ್ಣ, ವೆನ್ನೆಲ್ಲ ಕಿಶೋರ್, ಸತ್ಯ, ಸಂಪತ್ ರಾಜ್, ರಘು ಬಾಬು ಮುಂತಾದವರ ಅಭಿನಯ ಚಿತ್ರದಲ್ಲಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ (ಫೆಬ್ರವರಿ 21) ರಂದು 'ಭೀಷ್ಮ' ಬಿಡುಗಡೆ ಆಗಿತ್ತು.


Click it and Unblock the Notifications











