ತಂದೆ-ಮಗನಾಗಿ ಸ್ಟೈಲಿಶ್ ಸ್ಟಾರ್ ಫೈಟ್; ಅಲ್ಲು ಅರ್ಜುನ್- ಅಟ್ಲಿ ಸಿನಿಮಾ ಕಥೆ ಲೀಕ್?

'ಪುಷ್ಪ' ಸರಣಿ ಬಳಿಕ ನಟ ಅಲ್ಲು ಅರ್ಜುನ್ ತಮಿಳು ನಿರ್ದೇಶಕ ಅಟ್ಲಿ ಜೊತೆ ಕೈಜೋಡಿಸಿದ್ದಾರೆ. ಈ ಕ್ರೇಜಿ ಕಾಂಬಿನೇಷನ್ ಚಿತ್ರಕ್ಕೆ ಸನ್ ಪಿಕ್ಚರ್ಸ್ ಸಂಸ್ಥೆ ಹಣ ಹೂಡಲಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಹಾಲಿವುಡ್ ಗ್ರಾಫಿಕ್ಸ್ ಸಂಸ್ಥೆಗಳ ಜೊತೆ ಇದಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೀಗ ಚಿತ್ರದ ಕಥೆ ಲೀಕ್ ಆಗಿದೆ ಎನ್ನಲಾಗ್ತಿದೆ.

ಇನ್ನು ಹೆಸರಿಡದ ಈ ಚಿತ್ರವನ್ನು ಸದ್ಯಕ್ಕೆ AA22xA6 ಎಂದು ಕರೆಯಲಾಗ್ತಿದೆ. ಕಾರಣ ಇದು ಅಲ್ಲು ಅರ್ಜುನ್ ನಟನೆಯ 22ನೇ ಸಿನಿಮಾ, ಅದೇ ರೀತಿ ಅಟ್ಲಿ ನಿರ್ದೇಶನದ 6ನೇ ಸಿನಿಮಾ. ದೀಪಿಕಾ ಪಡುಕೋಣೆ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರು, ಕಲಾವಿದರು ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ. ರಾಮಾಯಣ ಬಿಟ್ಟರೆ ಭಾರತೀಯ ಚಿತ್ರರಂಗದಲ್ಲೇ ಭಾರೀ ಬಜೆಟ್ ಸಿನಿಮಾ ಇದು ಎನ್ನಲಾಗ್ತಿದೆ.

Allu Arjun Deepika padukone and Atlee s AA22xA6 movie story Leaked

800 ಕೋಟಿ ರೂ. ಬಜೆಟ್‌ನಲ್ಲಿ AA22xA6 ಸಿನಿಮಾ ನಿರ್ಮಾಣವಾಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಈಗ ದೊಡ್ಡ ದೊಡ್ಡ ಸಿನಿಮಾಗಳು 1000 ಕೋಟಿ ರೂ. ಕಲೆಕ್ಷನ್ ಮಾಡುತ್ತಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿವೆ. ಮುಂದಿನ ದಿನಗಳಲ್ಲಿ ಪ್ಯಾನ್ ವರ್ಲ್ಡ್ ರೇಂಜ್ ಚಿತ್ರಗಳು ತಯಾರಾಗಲಿವೆ. ರಾಮಾಯಣ, ಟಾಕ್ಸಿಕ್, SSMB29 ಚಿತ್ರಗಳು ಇದೇ ಹಾದಿಯಲ್ಲಿದೆ. ಅದೇ ಸಾಲಿಗೆ ಅಲ್ಲು ಅರ್ಜುನ್, ಅಟ್ಲಿ ಜೋಡಿ ಸಿನಿಮಾ ಸೇರಿಕೊಳ್ತಿದೆ.

ಚಿತ್ರದಲ್ಲಿ ಅಲ್ಲು ಅರ್ಜುನ್ ತಂದೆ, ಮಗನಾಗಿ ದ್ವಿಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಅಟ್ಲಿ ತಮ್ಮ ಹಿಂದಿನ ಸಿನಿಮಾಗಳಲ್ಲಿ ಕೂಡ ನಾಯಕನನ್ನು ದ್ವಿಪಾತ್ರಗಳಲ್ಲಿ ತೋರಿಸಿರುವ ಉದಾಹರಣೆಗಳಿವೆ. ಅದೇ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಳ್ಳುವ ಸಾಧ್ಯತೆಯಿದೆ. ಇಷ್ಟು ದೊಡ್ಡ ಬಜೆಟ್ ಸಿನಿಮಾ ಕಥೆ ಏನು? ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳನ್ನು ಕಾಡುತ್ತಿದೆ.

Allu Arjun Deepika padukone and Atlee s AA22xA6 movie story Leaked

ಸಿನಿಮಾ ಕಥೆ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ಎಲ್ಲವನ್ನು ತೆರೆಮೇಲೆ ನೋಡಬೇಕು. ಆದರೆ ವೆಬ್‌ಸೈಟ್ ಪ್ರಕಾರ, ಅಲ್ಲು ಅರ್ಜುನ್ ಮತ್ತು ಅಟ್ಲೀ ಟೈಮ್ ಟ್ರಾವೆಲ್ ಸೈ-ಫೈ ಸಿನಿಮಾ ಆಗಿದ್ದು ತಂದೆ-ಮಗನ ಸಂಬಂಧದ ಭಾವನಾತ್ಮಕ ಕಥೆ ಚಿತ್ರದಲ್ಲಿದೆ ಎನ್ನಲಾಗ್ತಿದೆ. ಕಥೆಯ ಪ್ರಕಾರ ನಾಯಕ ತನ್ನ ಮಗನನ್ನು ಭೇಟಿಯಾಗಲು ಭವಿಷ್ಯಕ್ಕೆ ಹೋಗುತ್ತಾನೆ, ಅವನ ಹಿಂದಿನ ಹೋರಾಟಗಳನ್ನು ಹೇಳುತ್ತಾನೆ. ಮಗ, ತನ್ನ ವರ್ತಮಾನದಲ್ಲಿ, ತನ್ನ ತಂದೆಗಾಗಿ ಹೋರಾಡಿ ರಕ್ಷಿಸುತ್ತಾನೆ ಎಂದು ವೆಬ್‌ಸೈಟ್ ಪೋಸ್ಟ್‌ ಮಾಡಿರುವಂತೆ ಸ್ಕ್ರೀನ್‌ಶಾಟ್ ವೈರಲ್ ಆಗ್ತಿದೆ.

ಸದ್ಯ ಐಎಂಡಿಬಿ ವೆಬ್‌ಸೈಟ್‌ನಲ್ಲಿ AA22xA6 ಚಿತ್ರದ ಕಥೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಹಿಂದೆ ಕಥೆಯ ಬಗ್ಗೆ ಪೋಸ್ಟ್ ಮಾಡಿದ್ದರು, ಈಗ ಡಿಲೀಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಸ್ಕ್ರೀನ್‌ಶಾಟ್ ಅನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾ ಕಥೆ ಇದೇ ಆಗಿದ್ದರೆ ಸಿನಿರಸಿಕರಿಗೆ ಹಬ್ಬವೇ ಸರಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಅಲ್ಲು ಅರ್ಜುನ್ ದೀಪಿಕಾ ಪಡುಕೋಣೆ ಜೊತೆಗೆ ಮೃಣಾಲ್ ಠಾಕೂರ್, ಜಾನ್ವಿ ಕಪೂರ್, ರಶ್ಮಿಕಾ ಮಂದಣ್ಣ ಸೇರಿ ದೊಡ್ಡ ತಾರಾಗಣ ಇರುತ್ತದೆ ಎನ್ನಲಾಗ್ತಿದೆ. ದೀಪಿಕಾ ನಟಿಸುವುದು ಮಾತ್ರ ಖಚಿತವಾಗಿದೆ. 'ಪುಷ್ಪ' ಸರಣಿ ಚಿತ್ರಗಳಿಗಾಗಿ ಐದಾರು ವರ್ಷ ಅಲ್ಲು ಅರ್ಜುನ್ ವ್ಯಯಿಸಿದ್ದರು. ಇದೀಗ ಅಟ್ಲಿ ಚಿತ್ರಕ್ಕಾಗಿ ಎರಡ್ಮೂರು ವರ್ಷ ಮೀಸಲಿಡುತ್ತಿದ್ದಾರೆ.

ಕಳೆದ ವರ್ಷ ಡಿಸೆಂಬರ್ 5ರಂದು 'ಪುಷ್ಪ'-2 ಸಿನಿಮಾ ತೆರೆಗೆ ಬಂದಿತ್ತು. ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇನ್ನು 'ಜವಾನ್' ಬಳಿಕ ಅಟ್ಲಿ ಯಾವುದೇ ಸಿನಿಮಾ ಮಾಡಿಲ್ಲ. ಶಾರುಖ್ ಖಾನ್ ನಟಿಸಿದ್ದ ಈ ಸಿನಿಮಾ ಕೂಡ 1000 ಕೋಟಿ ರೂ, ಕಲೆಕ್ಷನ್ ಮಾಡಿದ ದಾಖಲೆ ಬರೆದಿತ್ತು.

More from Filmibeat

English summary
Allu arjun, atlee film story leaked reports
Read more about: allu arjun kollywood tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X