For Quick Alerts
  ALLOW NOTIFICATIONS  
  For Daily Alerts

  ಮೆಗಾ Vs ಅಲ್ಲು ಫ್ಯಾಮಿಲಿ: ಸ್ಟೈಲಿಶ್ ಸ್ಟಾರ್ ಆ ನಡೆಗೆ ಪವನ್ ಕಲ್ಯಾಣ್ ಫ್ಯಾನ್ಸ್ ಗರಂ!

  |

  ಟಾಲಿವುಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ಅಲ್ಲು ಅರವಿಂದ್ ಫ್ಯಾಮಿಲಿಗೆ ಸಪರೇಟ್ ಇಮೇಜ್ ಇದೆ. ಹೇಳಿ ಕೇಳಿ ಎಲ್ಲ ಸಂಬಂಧಿಕರೇ ಆಗಬೇಕು. ಅಲ್ಲು ಅರವಿಂದ್ ಸಹೋದರಿಯನ್ನು ಚಿರಂಜೀವಿ ಮದುವೆ ಆಗಿದ್ದಾರೆ. ಆದರೆ ಕೆಲ ದಿನಗಳಿಂದ ಎರಡೂ ಫ್ಯಾಮಿಲಿ ಮಧ್ಯೆ ವೈಮನಸ್ಸು ಇದೆ ಅನ್ನುವ ಮಾತುಗಳು ಕೇಳಿಬರುತ್ತಿದೆ. ಮೊದಲು ಯಾವುದೇ ಹಬ್ಬ, ಕಾರ್ಯಕ್ರಮ ಆದರೂ ಎರಡೂ ಫ್ಯಾಮಿಲಿ ಸದಸ್ಯರು ಒಟ್ಟಿಗೆ ಸೇರುತ್ತಿದ್ದರು. ಆದರೆ ಇತ್ತೀಚೆಗೆ ಅದು ಕಾಣುತ್ತಿಲ್ಲ. ಈ ಬಗ್ಗೆ ಇತ್ತೀಚೆಗಷ್ಟೆ ಪ್ರತಿಕ್ರಿಯಿಸಿದ್ದ ಅಲ್ಲು ಅರ್ಜುನ್ ತಂದೆ ಅದೆಲ್ಲ ಬರೀ ಗಾಳಿಸುದ್ದಿ. ನಾವೆಲ್ಲಾ ಒಟ್ಟಿಗೆ ಇದ್ದೇವೆ. ಎರಡೂ ಫ್ಯಾಮಿಲಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದಿದ್ದರು.

  ಸಂದರ್ಶನದಲ್ಲಿ ಮಾತನಾಡಿದ್ದ ಅಲ್ಲು ಅರವಿಂದ್ "ಎಲ್ಲರೂ ಅವರವರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಒಟ್ಟಿಗೆ ಸೇರಲು ಸಾಧ್ಯವಾಗುತ್ತಿಲ್ಲ. ನಟರಿಗೆ ಸ್ಟಾರ್‌ಡಮ್ ಬಂದ ಮೇಲೆ ಇಂತಹ ಸುದ್ದಿಗಳು ಹರಡುವುದು ಸಹಜ. ಆದರೆ ಎಲ್ಲರೂ ಊಹಿಸಿಕೊಳ್ಳುವಂತೆ ನಮ್ಮ ಎರಡೂ ಫ್ಯಾಮಿಲಿಗಳ ನಡುವೆ ಯಾವುದೇ ವೈಮನಸ್ಸು ಇಲ್ಲ" ಎಂದು ಹೇಳಿದ್ದರು. ಅಲ್ಲು ಅರವಿಂದ್ ಹೀಗೆ ಹೇಳಿ ಎರಡು ದಿನ ಕಳೆಯುವುದರೊಳಗೆ ಅಲ್ಲು ಅರ್ಜುನ್‌ರ ಆ ನಡೆ ಮತ್ತೆ ಗೊಂದಲ ಸೃಷ್ಟಿಸಿದೆ. ಪವನ್ ಕಲ್ಯಾಣ್‌ ಹುಟ್ಟುಹಬ್ಬ(ಸೆಪ್ಟೆಂಬರ್ 2)ಕ್ಕೆ ಅಲ್ಲು ಅರ್ಜುನ್ ಶುಭಾಶಯ ಕೋರದೇ ಇರುವುದೇ ಇಷ್ಟಕ್ಕೆಲ್ಲಾ ಕಾರಣ. ಕೆಲವೇ ದಿನಗಳ ಹಿಂದೆ ಚಿರು ಬರ್ತ್‌ಡೇಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಸ್ಟಾರ್ ಶುಭ ಕೋರಿದ್ದರು. ಆದರೆ ಪವನ್‌ಗೆ ಯಾಕೆ ವಿಶ್ ಮಾಡಲಿಲ್ಲ ಎಂದು ಕೆಲವರು ಕೇಳುತ್ತಿದ್ದಾರೆ.

  ಈ ವರ್ಷ ಪವನ್ ಕಲ್ಯಾಣ್ ಹುಟ್ಟುಹಬ್ಬವನ್ನು ಅಭಿಮಾನಿಗಳ ಬಹಳ ಜೋರಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಸೆಲೆಬ್ರೆಟಿಗಳು, ಅಭಿಮಾನಿಗಳು, ರಾಜಕೀಯ ಮುಖಂಡರಿಂದ ಜನಸೇನಾನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಆದರೆ ಅಲ್ಲು ಅರ್ಜುನ್ ಮಾತ್ರ ವಿಶ್ ಮಾಡಲಿಲ್ಲ. ಫೋನ್ ಮಾಡಿ ಅಥವಾ ಗ್ರೀಟಿಂಗ್ ಕಳುಹಿಸಿ ಬನ್ನಿ ವಿಶ್ ಮಾಡಿರಬಹುದು. ಎಲ್ಲವನ್ನು ಸೋಶಿಯಲ್ ಮೀಡಿಯಾ ಮೂಲಕ ಮಾಡಲು ಸಾಧ್ಯವೇ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಕಳೆದ ವರ್ಷ ಅಲ್ಲು ಅರ್ಜುನ್ ಟ್ವೀಟ್ ಮಾಡಿ ಶುಭ ಕೋರಿದ್ದರು. ಈ ಬಾರಿ ಚಿರುಗೂ ಸೋಶಿಯಲ್ ಮೀಡಿಯಾದಲ್ಲೇ ಶುಭಾಶಯ ತಿಳಿಸಿದ್ದಾರೆ. ಪವನ್‌ ಕಲ್ಯಾಣ್‌ ವಿಚಾರದಲ್ಲಿ ಯಾಕೆ ಈಗ ತಾತ್ಸಾರ ಎಂದು ಕೇಳುತ್ತಿದ್ದಾರೆ.

  ಅಲ್ಲು ಅರ್ಜುನ್ ಮಾತ್ರವಲ್ಲ ಪತ್ನಿ ಸ್ನೇಹಾ ರೆಡ್ಡಿ, ಸಹೋದರ ಅಲ್ಲು ಶಿರೀಶ್ ಸೇರಿದಂತೆ ಕುಟುಂಬದ ಯಾರೊಬ್ಬರು ಕೂಡ ಪವನ್ ಕಲ್ಯಾಣ್‌ ಹುಟ್ಟುಹಬ್ಬಕ್ಕೆ ಶುಭ ಕೋರಿ ಪೋಸ್ಟ್ ಮಾಡಲಿಲ್ಲ. ಇದನ್ನು ನೋಡಿದವರು ನಿಜಕ್ಕೂ ಎರಡೂ ಫ್ಯಾಮಿಲಿ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಮಾತನಾಡುತ್ತಿದ್ದಾರೆ. ಅಲ್ಲು ಅರ್ಜುನ್ ಈ ನಡೆ ತಪ್ಪು ಎಂದು ಕೆಲವರು ಹೇಳುತ್ತಿದ್ದಾರೆ. ಮನಸ್ಸಿನಲ್ಲಿ ಏನೇ ಇದ್ದರೂ ಒಂದು ಪೋಸ್ಟ್ ಮಾಡಿದ್ದರೆ ಎಲ್ಲಾ ಸರಿ ಹೋಗುತ್ತಿತ್ತು. ಈ ರೀತಿ ಮಾಡುವುದರಿಂದ ಆಡಿಕೊಳ್ಳುವವರ ಬಾಯಿಗೆ ಆಹಾರವಾದಂತಾಗಿದೆ ಎಂದು ಮೆಗಾ ಫ್ಯಾಮಿಲಿ ಅಭಿಮಾನಿಗಳು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇದಕ್ಕೆಲ್ಲಾ ಸ್ವತಃ ಅಲ್ಲು ಅರ್ಜುನ್ ಉತ್ತರಿಸಬೇಕಿದೆ.

  English summary
  Allu Arjun Did Not Wish To Pawan Kalyan Birthday Increasing Rift Between Both Families. Know More.
  Sunday, September 4, 2022, 22:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X