ಅಲ್ಲು ಅರ್ಜುನ್ ಸರಳತೆಗೆ ಸಾಕ್ಷಿ ಈ ವಿಡಿಯೋ

ನಟ ಅಲ್ಲು ಅರ್ಜುನ್ ಬಹು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ತೆಲುಗು ನಟ ಆಂಧ್ರ, ತೆಲಂಗಾಣಗಳಲ್ಲಿ ಮಾತ್ರವೇ ಅಲ್ಲದೆ, ಕೇರಳ, ಕರ್ನಾಟಕ, ತಮಿಳುನಾಡು, ಉತ್ತರ ಭಾರತದಲ್ಲಿಯೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಹಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ಅಲ್ಲು ಅರ್ಜುನ್ ಮೆಗಾಸ್ಟಾರ್ ಕುಟುಂಬದ ಕುಡಿ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ ಯಶಸ್ವೀ ನಿರ್ಮಾಫಕ ಮಾತ್ರವಲ್ಲ ಸಫಲ ಉದ್ಯಮಿಯೂ ಹೌದು.

ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದ ಅಲ್ಲು ಅರ್ಜುನ್‌ ಸಿರಿವಂತರ ಅಹಂಕಾರವನ್ನು ಬದಿಗಿಟ್ಟು ಸರಳತೆ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾದವರು. ಅಲ್ಲು ಅರ್ಜುನ್ ಸರಳತೆಗೆ ಇದೀಗ ಮತ್ತೊಂದು ಸಾಕ್ಷಿ ಇಲ್ಲಿದೆ ನೋಡಿ.

ನಟ ಅಲ್ಲು ಅರ್ಜುನ್ ಗುಡಿಸಲು ಹೋಟೆಲ್‌ ಒಂದರಲ್ಲಿ ಊಟ ಮಾಡಿ ಹೊರಬರುತ್ತಿರುವ ವಿಡಿಯೋ ಒಂದು ಬಹಳ ವೈರಲ್ ಆಗಿದೆ. ಎಲ್ಲಿಗೊ ತೆರಳುತ್ತಿದ್ದ ನಟ ಅಲ್ಲು ಅರ್ಜುನ್ ರಸ್ತೆ ಬದಿಯಲ್ಲಿ ಸಿಕ್ಕ ಗುಡಿಸಲು ಹೋಟೆಲ್ ಒಂದಕ್ಕೆ ತೆರಳಿ ಭೋಜನ ಸವಿದಿದ್ದಾರೆ. ಈ ವಿಡಿಯೋವನ್ನು ಯಾರೋ ದಾರಿಹೋಕರು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗೋಕವರಂನಲ್ಲಿ ರಸ್ತೆ ಬದಿ ತಿಂಡಿ ತಿಂದ ಅಲ್ಲು ಅರ್ಜುನ್

'ಪುಷ್ಪ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಅಲ್ಲು ಅರ್ಜುನ್, ಕಾಕಿನಾಡ ಪ್ರದೇಶದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಚಿತ್ರೀಕರಣ ಸೆಟ್‌ಗೆ ತೆರಳುವ ವೇಳೆ ಗೋಕವರಂ ಎಂಬಲ್ಲಿ ತಿಂಡಿ ತಿನ್ನಲು ಅಲ್ಲು ಅರ್ಜುನ್ ರಸ್ತೆ ಬದಿಯ ಸಣ್ಣ ಹೋಟೆಲ್ ಒಂದಕ್ಕೆ ತೆರಳಿದ್ದಾರೆ. ಹೋಟೆಲ್‌ನಿಂದ ಹೊರಗೆ ಬಂದ ಅಲ್ಲು ಅರ್ಜುನ್, ಹೋಟೆಲ್ ಮಾಲೀಕರಿಗೆ ಹಣ ನೀಡಲು ಹೋದಾಗ ಅವರು ನಿರಾಕರಿಸಿದ್ದಾರೆ. ಆದರೆ ಅಲ್ಲು ಅರ್ಜುನ್ ಬಲವಂತವಾಗಿ ಅವರಿಗೆ ಹಣ ನೀಡಿ. ಅವರಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟಿದ್ದಾರೆ. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಸ್ಟೈಲಿಷ್ ಸ್ಟಾರ್ ಆಗಿದ್ದರೂ ಸರಳವಾಗಿರುತ್ತಾರೆ ಅಲ್ಲು ಅರ್ಜುನ್

ಸ್ಟೈಲಿಷ್ ಸ್ಟಾರ್ ಆಗಿದ್ದರೂ ಸರಳವಾಗಿರುತ್ತಾರೆ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ತಮ್ಮ ಮೆಚ್ಚಿನ ನಟನ ಸರಳತೆಯನ್ನು ಕೊಂಡಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅನ್ನು ತೆಲುಗು ಚಿತ್ರರಂಗದಲ್ಲಿ ಸ್ಟೈಲಿಷ್ ಸ್ಟಾರ್ ಎಂದು ಕರೆಯುತ್ತಾರೆ. ಬಹಳ ಸ್ಟೈಲಿಷ್ ಆಗಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳುತ್ತಾರೆ. ಆದರೆ ಸರಳ ಜೀವನವನ್ನು ಸಹ ಎಂಜಾಯ್ ಮಾಡುತ್ತಾರೆ. ಮಕ್ಕಳಿಗೂ ಸರಳ ಜೀವನವನ್ನೇ ಅಭ್ಯಾಸ ಮಾಡಿಸುತ್ತಿರುವುದಾಗಿ ಅಲ್ಲು ಅರ್ಜುನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಸಿಬ್ಬಂದಿಯೊಬ್ಬರ ಹುಟ್ಟುಹಬ್ಬ ಆಚರಿಸಿದ್ದ ಅಲ್ಲು ಅರ್ಜುನ್

ಸಿಬ್ಬಂದಿಯೊಬ್ಬರ ಹುಟ್ಟುಹಬ್ಬ ಆಚರಿಸಿದ್ದ ಅಲ್ಲು ಅರ್ಜುನ್

ಕೆಲವು ತಿಂಗಳ ಹಿಂದೆ ಅಲ್ಲು ಅರ್ಜುನ್ ತಮ್ಮ ಸಿಬ್ಬಂದಿಯ ಹುಟ್ಟುಹಬ್ಬವನ್ನು ಆಚರಿಸಿದ್ದರು. ಸಿಬ್ಬಂದಿಗೆ ಪಾರ್ಟಿ ಕೊಟ್ಟಿದ್ದ ಅಲ್ಲು ಅರ್ಜುನ್ ಅವರೊಟ್ಟಿಗೆ ಬೆರೆತು ಊಟ ಸವಿದು, ಚಿತ್ರಗಳನ್ನು ತೆಗೆಸಿಕೊಂಡಿದ್ದರು. ಅಲ್ಲು ಅರ್ಜುನ್ ನೀಡಿದ್ದ ಪಾರ್ಟಿಯ ಚಿತ್ರಗಳು ಸಖತ್ ವೈರಲ್ ಆಗಿದ್ದವು. ಮತ್ತೊಂದು ಸಂದರ್ಭದಲ್ಲಿ ಅಲ್ಲು ಅರ್ಜುನ್ ಅನ್ನು ಹುಡುಕಿಕೊಂಡು ನೂರಾರು ಕಿ.ಮೀ ನಡೆದುಕೊಂಡು ಬಂದಿದ್ದ ಅಭಿಮಾನಿಯನ್ನು ಮನೆಗೆ ಆಹ್ವಾನಿಸಿ ಭೇಟಿ ಆಗಿ ಅವರಿಗೆ ಹಣ ಕೊಟ್ಟು ಕಳಿಸಿದ್ದರು ಅಲ್ಲು ಅರ್ಜುನ್.

'ಪುಷ್ಪ' ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಅಲ್ಲು ಅರ್ಜುನ್

'ಪುಷ್ಪ' ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಪ್ರಸ್ತುತ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಕ್ತ ಚಂದನ ಕಳ್ಳ ಸಾಗಣೆದಾರನ ಕತೆಯನ್ನು ಈ ಸಿನಿಮಾ ಹೊಂದಿದ್ದು, ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಮೊದಲ ಭಾಗವು ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ, ನಟ ಡಾಲಿ ಧನಂಜಯ್ ಹಾಗೂ ಕಿಶೋರ್ ಸಹ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಖ್ಯ ವಿಲನ್ ಆಗಿ ಮಲಯಾಳಂನ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದು ಸಿನಿಮಾವು ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

More from Filmibeat

English summary
Telugu actor Allu Arjun eats at a simple road side hotel in Gokavaram. Video of Allu Arjun coming out from road side hotel gone viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X