ವರದಕ್ಷಿಣೆ ತೆಗೆದುಕೊಂಡಿದ್ದರೇ ಅಲ್ಲು ಅರ್ಜುನ್, ಮಾವ ಹೇಳಿದ್ದೇನು?

'ಪುಷ್ಪ' ಸಿನಿಮಾದ ಬಳಿಕ ನಟ ಅಲ್ಲು ಅರ್ಜುನ್ ಹೆಸರು ದೇಶ, ವಿದೇಶಗಳಲ್ಲೂ ಜನಪ್ರಿಯಗೊಂಡಿದೆ. ತೆಲುಗು ಸ್ಟಾರ್ ಆಗಿದ್ದ ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ ಸ್ಟಾರ್.

ಅಲ್ಲು ಅರ್ಜುನ್ ಅತ್ಯುತ್ತಮ ನಟ ಮಾತ್ರವಲ್ಲ, ಉತ್ತಮ ತಂದೆ, ಪತಿ ಸಹ ಹೌದು. ಸ್ನೇಹಾ ರೆಡ್ಡಿ ಅವರೊಟ್ಟಿಗೆ 2011ರ ಮಾರ್ಚ್ 6ರಂದು ವಿವಾಹವಾದ ಅಲ್ಲು ಅರ್ಜುನ್‌ ಇಬ್ಬರು ಮುದ್ದಾದ ಮಕ್ಕಳ ತಂದೆ, ಸಿನಿಮಾದಲ್ಲಿ ಸ್ಟಾರ್‌ ಆಗಿ ಅಭಿಮಾನಿಗಳ ಮನರಂಜಿಸುವ ಜೊತೆಗೆ, ತಂದೆಯಾಗಿ, ಪತಿಯಾಗಿ ತಮ್ಮ ಜವಾಬ್ದಾರಿಗಳನ್ನು ಸಹ ಚಾಚೂ ತಪ್ಪದೆ ಪೂರೈಸುತ್ತಾ ಬಂದಿದ್ದಾರೆ.

ಉತ್ತಮ ಕೌಟುಂಬಿಕ ವ್ಯಕ್ತಿಯಾಗಿರುವ ಅಲ್ಲು ಅರ್ಜುನ್‌ ಬಗ್ಗೆ ಅವರ ಮಾವ ಚಂದ್ರಶೇಖರ ರೆಡ್ಡಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ, ಇದೇ ಸಮಯದಲ್ಲಿ ಮದುವೆ ಸಮಯದಲ್ಲಿ ಅಲ್ಲು ಅರ್ಜುನ್ ಎಷ್ಟು ವರದಕ್ಷಿಣೆ ಎಂಬುದರ ಬಗ್ಗೆ ಸಹ ಮಾತನ್ನಾಡಿದ್ದಾರೆ.

ಅಲ್ಲು ಅರ್ಜುನ್‌ ಬಗ್ಗೆ ಮಾವ ಚಂದ್ರಶೇಖರ್ ಮಾತು

ಅಲ್ಲು ಅರ್ಜುನ್‌ ಬಗ್ಗೆ ಮಾವ ಚಂದ್ರಶೇಖರ್ ಮಾತು

ಸಂದರ್ಶನದಲ್ಲಿ ಮಾತನಾಡಿರುವ ಅಲ್ಲು ಅರ್ಜುನ್ ಮಾವ ಚಂದ್ರಶೇಖರ್ ರೆಡ್ಡಿ, ''ಬನ್ನಿಗೆ (ಅಲ್ಲು ಅರ್ಜುನ್‌) ನಾನು ನೂರಕ್ಕೆ ನೂರು ಅಂಕ ಕೊಡುತ್ತೇನೆ. ಆತ ಒಬ್ಬ ಅದ್ಭುತ ಕಲಾವಿದ. ಅಲ್ಲು ಅರ್ಜುನ್ ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಜನಪ್ರಿಯ ನಟ. ಆತನ ಹಾಡುಗಳನ್ನು, ಸಿನಿಮಾಗಳನ್ನು ಜಮ್ಮು ಕಾಶ್ಮೀರದಲ್ಲಿ ಸಹ ನೋಡುತ್ತಿದ್ದಾರೆ. ಇಷ್ಟು ದೊಡ್ಡ ಜನಪ್ರಿಯತೆ ಗಳಿಸಿಕೊಳ್ಳಲು ದೊಡ್ಡ ಮಟ್ಟದ ಶ್ರಮ ಬೇಕಾಗುತ್ತದೆ. ಅದಕ್ಕಾಗಿ ಅವರು ಬಹಳ ಶ್ರಮಪಡುತ್ತಾರೆ'' ಎಂದಿದ್ದಾರೆ ಅಲ್ಲು ಅರ್ಜುನ್.

ವರದಕ್ಷಿಣೆ ತೆಗೆದುಕೊಂಡಿದ್ದರೇ ಅಲ್ಲು ಅರ್ಜುನ್?

ವರದಕ್ಷಿಣೆ ತೆಗೆದುಕೊಂಡಿದ್ದರೇ ಅಲ್ಲು ಅರ್ಜುನ್?

''ಅಳಿಯನಾಗಿ ಬನ್ನಿಗೆ ನಾನು 100 ಕ್ಕೆ 100 ಅಂಕಗಳನ್ನು ಕೊಡುತ್ತೇನೆ'' ಎಂದ ಚಂದ್ರಶೇಖರ್ ರೆಡ್ಡಿ, ಮದುವೆ ಸಮಯದಲ್ಲಿ ಅಲ್ಲು ಅರ್ಜುನ್ ವರದಕ್ಷಿಣೆ ತೆಗೆದುಕೊಂಡಿದ್ದರೆ? ಎಂಬ ಪ್ರಶ್ನೆಗೆ, ಖಂಡಿತ ಅಲ್ಲು ಅರ್ಜುನ್ ವರದಕ್ಷಿಣೆ ತೆಗೆದುಕೊಂಡಿಲ್ಲ, ಅಲ್ಲು ಅರ್ಜುನ್ ಕುಟುಂಬದವರು ವರ ದಕ್ಷಿಣಗೆ ವಿರೋಧವಾಗಿದ್ದರು. ಅಲ್ಲದೆ ಅಲ್ಲು ಅರ್ಜುನ್ ಅವರೇ ಸಾಕಷ್ಟು ಸಿರಿವಂತರಾಗಿದ್ದಾರೆ, ಅವರಿಗೆ ವರದಕ್ಷಿಣೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ'' ಎಂದಿದ್ದಾರೆ.

ಅಮೆರಿಕದಲ್ಲಿ ಶುರುವಾದ ಪ್ರೇಮ

ಅಮೆರಿಕದಲ್ಲಿ ಶುರುವಾದ ಪ್ರೇಮ

ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ಪ್ರೇಮ ಶುರುವಾಗಿದ್ದು ಅಮೆರಿಕದಲ್ಲಿ. ಅಮೆರಿಕದಲ್ಲಿ ಮದುವೆಯೊಂದಕ್ಕೆ ಅಲ್ಲು ಅರ್ಜುನ್ ಹೋಗಿದ್ದಾಗ ಅಲ್ಲಿ ಸ್ನೇಹಾ ರೆಡ್ಡಿಯನ್ನು ನೋಡಿದ್ದರು. ಅಲ್ಲು ಗೆಳೆಯರೊಬ್ಬರು ಸ್ನೇಹಾರ ಪರಿಚಯವನ್ನು ಅಲ್ಲು ಅರ್ಜುನ್‌ಗೆ ಮಾಡಿಸಿದ್ದರು. ಮೊದಲ ನೋಡದಲ್ಲಿಯೇ ಪ್ರೇಮದಲ್ಲಿ ಬಿದ್ದ ಅಲ್ಲು ಅರ್ಜುನ್ ಆ ನಂತರ ಅದನ್ನು ಸ್ನೇಹಾ ರೆಡ್ಡಿಗೆ ಹೇಳಿದರು. ಅಲ್ಲು ಪ್ರೊಪೋಸ್‌ ಅನ್ನು ಸ್ನೇಹಾ ರೆಡ್ಡಿ ಒಪ್ಪಿಕೊಂಡರು. ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ವಿವಾಹಕ್ಕೆ ಕೆಲ ವಿಘ್ನಗಳು ಎದುರಾಗಿದ್ದವು. ಇಬ್ಬರದ್ದೂ ಬೇರೆ-ಬೇರೆ ಜಾತಿ ಆದ್ದರಿಂದ ಸ್ನೇಹಾ ರೆಡ್ಡಿ ಕುಟುಂಬದ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅಲ್ಲು ಅರ್ಜುನ್ ಒತ್ತಾಯಕ್ಕೆ ಮಣಿದು ಸುಸೂತ್ರವಾಗಿ ವಿವಾಹ ನಡೆಯಿತು.

ಮುದ್ದಾದ ಮಕ್ಕಳು ಹೊಂದಿರುವ ಅಲ್ಲು ಅರ್ಜುನ್ ದಂಪತಿ

ಮುದ್ದಾದ ಮಕ್ಕಳು ಹೊಂದಿರುವ ಅಲ್ಲು ಅರ್ಜುನ್ ದಂಪತಿ

ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿಗೆ ಆಯನ್ ಎಂಬ ಗಂಡು ಮಗು ಹಾಗೂ ಅರ್ಹಾ ಹೆಸರಿನ ಹೆಣ್ಣು ಮಗು ಇದೆ. ಅರ್ಹಾ ಈಗಾಗಲೇ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾಳೆ. ಸಮಂತಾ ನಟಿಸಿರುವ ಗುಣಶೇಖರ್ ನಿರ್ದೇಶನದ 'ಶಾಕುಂತಲಮ್' ಸಿನಿಮಾದಲ್ಲಿ ಅಲ್ಲು ಅರ್ಜುನ್ ಪುತ್ರಿ ನಟಿಸಿದ್ದಾರೆ. ಈ ಮೊದಲು 'ಅಂಜಲಿ-ಅಂಜಲಿ' ವಿಡಿಯೋ ಹಾಡಿನಲ್ಲಿ ಸಹ ಅರ್ಹಾ ನಟಿಸಿದ್ದರು. ಸಣ್ಣ ವಯಸ್ಸಿಗೆ ಒಳ್ಳೆಯ ಚೆಸ್ ಆಟಗಾರ್ತಿ ಸಹ ಆಗಿದ್ದಾರೆ ಅರ್ಹಾ.

More from Filmibeat

English summary
Allu Arjun's father in law Chandrashekhar Reddy talks about Bunny. He also reveal weather Allu Arjun took dowry while marrying his daughter Sneha Reddy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X