ನೌಕರನಿಗೆ ಸರ್ಪ್ರೈಸ್ ಪಾರ್ಟಿ ಕೊಟ್ಟ ನಟ ಅಲ್ಲು ಅರ್ಜುನ್
ನಟ ಅಲ್ಲು ಅರ್ಜುನ್ ಒಳ್ಳೆಯ ನಟಮಾತ್ರವಲ್ಲ, ಹೃದಯವುಳ್ಳ ವ್ಯಕ್ತಿ. ಇದನ್ನು ಅವರ ಕಾರ್ಯಗಳು ಆಗಾಗ್ಗೆ ಸಾಬೀತು ಮಾಡುತ್ತಲೇ ಇರುತ್ತವೆ.
ಇತ್ತೀಚೆಗಷ್ಟೆ ಮಳೆಯಿಂದ ಹಾನಿಗೊಳಗಾದವರಿಗೆಂದು ಆರ್ಥಿಕ ಸಹಾಯ ಮಾಡಿದ್ದ ಅಲ್ಲು ಅರ್ಜು, ಅದಕ್ಕೂ ಮುನ್ನಾ, ಫ್ಲೆಕ್ಸ್ ಕಟ್ಟುವಾಗ ಮೃತಪಟ್ಟ ಮೂರು ಮಂದಿ ಪವನ್ ಕಲ್ಯಾಣ್ ಅಭಿಮಾನಿಗಳ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದರು. ಇಂಥಹಾ ಹಲವು ಕಾರ್ಯಗಳನ್ನು ಅವರು ಮಾಡಿದ್ದಾರೆ.
ಸಾಮಾಜಿಕ ಕಾರ್ಯ ಮಾಡುವುದು ಮಾತ್ರವಲ್ಲ, ತಮ್ಮ ಸುತ್ತಲಿದ್ದವರನ್ನೂ ಸಹ ಅಲ್ಲು ಅರ್ಜುನ್ ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಇತ್ತೀಚಿನ ಘಟನೆಯೊಂದು ಸಾಕ್ಷಿಯಾಗಿದೆ.

ಸಿಬ್ಬಂದಿಯಲ್ಲಿ ಒಬ್ಬರಿಗೆ ಸರ್ಪ್ರೈಸ್ ಪಾರ್ಟಿ
ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಬಳಿ ಹಲವು ಕೆಲಗಾರರಿದ್ದಾರೆ. ತಮ್ಮ ಖಾಸಗಿ ಸಿಬ್ಬಂದಿಯವರನ್ನು ಪ್ರೀತಿಯಿಂದಲೇ ಕಾಣುತ್ತಾರೆ ಅಲ್ಲು ಅರ್ಜುನ್. ತಮ್ಮ ಸಿಬ್ಬಂದಿಯಲ್ಲಿ ಒಬ್ಬರಿಗೆ ಇತ್ತೀಚೆಗಷ್ಟೆ ಸರ್ಪ್ರೈಸ್ ಪಾರ್ಟಿ ಕೊಟ್ಟಿದ್ದಾರೆ ಅಲ್ಲು ಅರ್ಜುನ್.

ಖಾಸಗಿ ನೌಕರ ಅಭಿನವ್ ಗೆ ಪಾರ್ಟಿ ಕೊಟ್ಟ ಅಲ್ಲು
ಹೌದು, ಅಲ್ಲು ಅರ್ಜುನ್ ಖಾಸಗಿ ಸಿಬ್ಬಂದಿಗಳಲ್ಲಿ ಒಬ್ಬ ವ್ಯಕ್ತಿ ಅಭಿನವ್ ನಟಾ ಗೆ ಮದುವೆ ನಿಗದಿಯಾಗಿದೆ. ಹಾಗಾಗಿ ಅಲ್ಲು ಅರ್ಜುನ್ ಆತನಿಗೆ, ಉಳಿದ ಸಿಬ್ಬಂದಿಗೆ ಹಾಗೂ ಆತನ ಕೆಲವು ಗೆಳೆಯರಿಗಾಗಿ ಬ್ಯಾಚುಲರ್ ಪಾರ್ಟಿ ಅರೇಂಜ್ ಮಾಡಿಸಿದ್ದಾರೆ.

ಸಿಬ್ಬಂದಿಯೊಂದಿಗೆ ಬೆರೆತು ಪಾರ್ಟಿ ಮಾಡಿದ್ದಾರೆ
ಸಿಬ್ಬಂದಿ ಹಾಗೂ ಅವರ ಗೆಳೆಯರೊಂದಿಗೆ ಅಲ್ಲು ಅರ್ಜುನ್ ಸಹ ಪಾರ್ಟಿಯಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ್ದಾರೆ. ಅಲ್ಲು ಅರ್ಜುನ್ ಪಾರ್ಟಿ ನೀಡಿ ಸಿಬ್ಬಂದಿಯೊಂದಿಗೆ ತೆಗೆಸಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಲು ಅರ್ಜುನ್ ಅವರ ಈ ಕಾರ್ಯವನ್ನು ನೆಟ್ಟಿಗರು ಹೊಗಳಿದ್ದಾರೆ.

ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟನೆ
ಸಿನಿಮಾ ವಿಷಯಕ್ಕೆ ಮರಳುವುದಾದರೆ, ಅಲ್ಲು ಅರ್ಜುನ್ ಪುಷ್ಪಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ರಕ್ತ ಚಂದನ ಮರದ ಕಳ್ಳ ನಾಗಾಣೆದಾರನ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











