For Quick Alerts
  ALLOW NOTIFICATIONS  
  For Daily Alerts

  ಸುಂದರ ಉಡುಗೊರೆ ಕೊಟ್ಟ ಬ್ರಹ್ಮಾನಂದಂ: ಭಾವುಕರಾದ ಅಲ್ಲು ಅರ್ಜುನ್

  |

  ಬ್ರಹ್ಮಾನಂದಂ ತೆಲುಗಿನ ಅಪ್ರತಿಮ ಕಾಮಿಡಿ ನಟ. ನಾಲ್ಕು ದಶಕಗಳಿಂದಲೂ ತೆಲುಗು ಸಿನಿಮಾದಲ್ಲಿ ಹಾಸ್ಯನಟನಾಗಿ ಅವರದ್ದೇ ಪಾರುಪತ್ಯ. ಮೊದಲು ಬ್ರಹ್ಮಾನಂದಂ ಡೇಟ್ಸ್ ಪಡೆದು ನಂತರ ಸಿನಿಮಾ ಹೀರೋಗಳ ಡೇಟ್ಸ್ ಪಡೆವ ಕಾಲವೊಂದಿತ್ತು.

  ತೆರೆಯ ಮೇಲೆ ಪೆದ್ದನಂತೆ, ಮೂರ್ಖನಂತೆ ನಟಿಸಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಬ್ರಹ್ಮಾನಂದಂ ನಿಜ ಜೀವನದಲ್ಲಿ ಅಷ್ಟೇ ಗಂಭೀರ ಸ್ವಭಾವದವರು. ಕಾಲೇಜು ಉಪನ್ಯಾಸಕರಾಗಿದ್ದ ಬ್ರಹ್ಮಾನಂದಂ ಹಲವು ವಿಷಯಗಳ ಬಗ್ಗೆ ವಿದ್ವತ್‌ಪೂರ್ಣವಾಗಿ ಮಾತನಾಡಬಲ್ಲರು. ಜೊತೆಗೆ ಅವರೊಬ್ಬ ಅದ್ಭುತ ಚಿತ್ರಕಲಾವಿದರೂ ಸಹ.

  ಬ್ರಹ್ಮಾನಂದಂ ಬಗ್ಗೆ ತಿಳಿದವರಿಗೆ ಅವರ ಚಿತ್ರಕಲಾ ಪ್ರೇಮ ಗೊತ್ತೇ ಇರುತ್ತದೆ. ಪೆನ್ಸಿಲ್ ಸ್ಕೆಚ್ ಮಾದರಿಯ ಚಿತ್ರಕಲೆಯಲ್ಲಿ ಪಳಗಿದ್ದಾರೆ ಬ್ರಹ್ಮಾನಂದಂ. ತಾವು ಬಿಡಿಸಿದ ಚಿತ್ರಗಳನ್ನು ತಮ್ಮ ಸಿನಿಮಾರಂಗದ ಸ್ನೇಹಿತರಿಗೆ ಉಡುಗೊರೆಯಾಗಿ ನೀಡುತ್ತಾರೆ ಬ್ರಹ್ಮಾನಂದಂ. ನಟ ಅಲ್ಲು ಅರ್ಜುನ್‌ಗೆ ಇತ್ತೀಚೆಗಷ್ಟೆ ಸುಂದರವಾದ ಚಿತ್ರವನ್ನು ನೀಡಿದ್ದಾರೆ ಬ್ರಹ್ಮಾನಂದಂ.

  45 ದಿನಗಳಲ್ಲಿ ಬ್ರಹ್ಮಾನಂದಂ ಬರೆದ ಚಿತ್ರ

  45 ದಿನಗಳಲ್ಲಿ ಬ್ರಹ್ಮಾನಂದಂ ಬರೆದ ಚಿತ್ರ

  ಬ್ರಹ್ಮಾನಂದಂ ಅವರು ತಿರುಪತಿ ವೆಂಕಟೇಶ್ವರ ಸ್ವಾಮಿ ಅವರ ಸುಂದರವಾದ ಚಿತ್ರವನ್ನು ಬಿಡಿಸಿದ್ದಾರೆ. ಪೆನ್ಸಿಲ್ ಸ್ಕೆಚ್‌ನಲ್ಲಿ ಈ ಚಿತ್ರವನ್ನು ಬಿಡಿಸಲು ಬರೋಬ್ಬರಿ 45 ದಿನಗಳನ್ನು ತೆಗೆದುಕೊಂಡರಂತೆ ಬ್ರಹ್ಮಾನಂದ. ಸಾಕಷ್ಟು ವಿವರಗಳುಳ್ಳ ಚಿತ್ರ ಇದಾಗಿದ್ದು, ಬಹು ತಾಳ್ಮೆಯನ್ನು ಬೇಡುವ ಚಿತ್ರವಾಗಿದೆ.

  ಬೆಲೆಕಟ್ಟಲಾಗದ ಉಡುಗೊರೆ ಎಂದ ಅಲ್ಲು ಅರ್ಜುನ್

  ಬೆಲೆಕಟ್ಟಲಾಗದ ಉಡುಗೊರೆ ಎಂದ ಅಲ್ಲು ಅರ್ಜುನ್

  ಪಡೆದ ಉಡುಗೊರೆಯ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅಲ್ಲು ಅರ್ಜುನ್, 'ಬ್ರಹ್ಮಾನಂದಂ ಅವರಿಂದ ಪಡೆದ ಬೆಲೆಕಟ್ಟಲಾಗದ ಉಡುಗೊರೆ ಇದೆ. ಬ್ರಹ್ಮಾನಂದಂ ಅವರು ಬರೆದಿ ಪೆನ್ಸಿಲ್ ಸ್ಕೆಚ್ ಇದು, ಇದು 45 ದಿನಗಳ ಪರಿಶ್ರಮ' ಎಂದು ಹೇಳಿದ್ದಾರೆ ಅಲ್ಲು ಅರ್ಜುನ್.

  ರಾಮ-ಆಂಜನೇಯರ ಚಿತ್ರ ಸಖತ್ ವೈರಲ್ ಆಗಿತ್ತು

  ರಾಮ-ಆಂಜನೇಯರ ಚಿತ್ರ ಸಖತ್ ವೈರಲ್ ಆಗಿತ್ತು

  ಬ್ರಹ್ಮಾನಂದ ಅವರು ಈ ಮುಂಚೆಯೂ ಸಹ ಹಲವು ಪೆನ್ಸಿಲ್ ಸ್ಕೆಚ್ ಗಳನ್ನು ಬರೆದಿದ್ದಾರೆ. ಕೊರೊನಾ ಸಮಯದಲ್ಲಿ ಭಾರತವು ಹೇಗೆ ಕೊರೊನಾದಿಂದ ಬಾಧಿತವಾಗಿ ಎಂಬುದನ್ನು ಸೂಚಿಸುವ ಚಿತ್ರ ಬರೆದಿದ್ದರು. ಅದಕ್ಕೂ ಮುನ್ನಾ ರಾಮ-ಆಂಜನೇಯನ ಸ್ನೇಹ ಸಾರುವ ಸುಂದರವಾದ ಚಿತ್ರ ಬರೆದಿದ್ದರು. ಈ ಚಿತ್ರ ಸಖತ್ ವೈರಲ್ ಆಗಿತ್ತು.

  ಚಿರಂಜೀವಿ ಆಪ್ತರಾಗಿರುವ ಬ್ರಹ್ಮಾನಂದಂ

  ಚಿರಂಜೀವಿ ಆಪ್ತರಾಗಿರುವ ಬ್ರಹ್ಮಾನಂದಂ

  ಬ್ರಹ್ಮಾನಂದಂ ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಕುಟುಂಬದೊಂದಿಗೆ ಅತ್ಯಂತ ಆತ್ಮೀಯತೆ. ಹಾಗೆಯೇ ಅಲ್ಲು ಅರ್ಜುನ್ ಅವರೊಟ್ಟಿಗೂ ಸಹ ಗಾಢವಾದ ಸ್ನೇಹವಿದೆ. ಇಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರ ನಟನೆಯ 'ರೇಸು ಗುರ್ರಂ' ಸಿನಿಮಾದ ಕಾಮಿಡಿ ದೃಶ್ಯಗಳು ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಸುಳಿದಾಡುತ್ತಿವೆ

  English summary
  Allu Arjun gets hand-drawn sketch of Lord Balaji from Brahmanandam as New Year Gift.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X