Allu Arjun Look in Pushpa 2 : ಪುಷ್ಪ 2: ಬದಲಾಗುತ್ತೆ ಅಲ್ಲು ಅರ್ಜುನ್ ಲುಕ್!
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಸೂಪರ್ ಹಿಟ್ ಸಿನಿಮಾ 'ಪುಷ್ಪ' ಭಾಗ ಒಂದು ದಾಖಲೆ ಬರೆದಿದೆ. ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿ ಬಾಕ್ಸಾಫೀಸ್‌ನಲ್ಲಿ ಅಲ್ಲು ಅರ್ಜುನ್ ಚಿತ್ರ ಕಮಾಲ್ ಮಾಡಿದೆ.
'ಪುಷ್ಪ' ವಿಶ್ವಾದ್ಯಂತ 350 ಕೋಟಿಯ ಗಡಿದಾಟಿದೆ. ಅದರಲ್ಲೂ ಪುಷ್ಪ ಸಿನಿಮಾ ಹಿಂದಿಗೆ ಡಬ್ ಆಗಿ ರಿಲೀಸ್ ಆಗಿದೆ. ಹಿಂದಿಯಲ್ಲಿ ಈ ಚಿತ್ರದ ಗಳಿಕೆ ಬಾಲಿವುಡ್ಡಿಗರಿಗೆ ಅಚ್ಚರಿ ಮೂಡಿಸಿತು. ಹಿಂದಿಯಲ್ಲಿ ಪ್ರೇಕ್ಷಕರ ಮನ ಗೆದ್ದ 'ಪುಷ್ಪ' ದೊಡ್ಡ ಮಟ್ಟದ ದಾಖಲೆ ಮಾಡಿತು. ಹಿಂದಿಯಲ್ಲಿ 100 ಕೋಟಿ ಕ್ಲಬ್ ಸೇರಿದೆ 'ಪುಷ್ಪ' ಸಿನಿಮಾ.
ಈಗ ಪುಷ್ಪ 2 ಚಿತ್ರದ ಮೇಲೆ ಎಲ್ಲರ ಕಣ್ಣಿದೆ. 'ಪುಷ್ಪ 2' ಚಿತ್ರ ಮೊದಲ ಭಾಗಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಇರಲಿದೆ ಎನ್ನುವುದು ಖಚಿತಾ. ಈ ಯಶಸನ್ನು ದುಪ್ಪಟ್ಟು ಮಾಡಲು ಚಿತ್ರತಂಡ ಪಣ ತೊಟ್ಟಿದೆ. ಇದೆ ನಿಟ್ಟಿನಲ್ಲಿ ಚಿತ್ರತಂಡ ಈಗಾಗಲೇ ಎಲ್ಲಾ ರೀತಿಯ ತಯಾರಿ ನಡೆಸಿದೆ. ಸದ್ಯ ಚಿತ್ರ ಪ್ರೀ ಪ್ರೋಡಕ್ಷನ್ ಕೆಲಸಗಳು ನಡೆಯುತ್ತಿವೆ.

ಈಗ ಚಿತ್ರತಂಡದಿಂದ ಹೊಸ ಸುದ್ದಿ ಬಂದಿದೆ. 'ಪುಷ್ಪ 2' ಚಿತ್ರದಲ್ಲಿ ಅಲ್ಲು ಅರ್ಜುನ್ ಲುಕ್ ಹೆಗೆ ಇರಲಿದೆ ಎನ್ನುವ ಬಗ್ಗೆ ಸುದ್ದಿ ಹೊರ ಬಂದಿದೆ. ನಟ ಅಲ್ಲು ಅರ್ಜುನ್ ಲುಕ್ ಈ ಚಿತ್ರದಲ್ಲಿ ಬದಲಾಗಲಿದೆಯಂತೆ. ಪುಷ್ಪ ರಾಜ್ ಭಿನ್ನ ಅವರಾತದಲ್ಲಿ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಡಲಿದ್ದಾರೆ.

'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಗಡ್ಡ ಮತ್ತು ಹೇರ್ ಸ್ಟೈಲ್ ಹೆಚ್ಚಾಗಿ ಗಮನ ಸೆಳೆದಿತ್ತು. ಈಗ ಅಲ್ಲು ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ 'ಪುಷ್ಪ' ಭಾಗ ಒಂದರ ಕೊನೆಯಲ್ಲಿ ಪುಷ್ಪ ರಾಜ್ ಒಂದು ರೇಂಜಿಗೆ ಬೆಳೆದು ಬಿಟ್ಟಿರುತ್ತಾನೆ. ಹಾಗಾಗಿ ಪುಷ್ಪ ರಾಜ್ ಲುಕ್ ಬದಲಾಗುವುದು ಸಹಜ.
ಅಂತೆಯೇ ಪುಷ್ಪ ಭಾಗ ಎರಡರಲ್ಲಿ ಅಲ್ಲು ಅರ್ಜುನ್ ತಮ್ಮ ಲುಕ್ ಬದಲಾಯಿಸಿಕೊಮಡು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಿದ್ದಾರಂತೆ. ಈ ವಿಚಾರ ಅಲ್ಲು ಅರ್ಜುನ್ ಹೊಸ ಲುಕ್ ಹೇಗೆ ಇರಲಿದೆ ಎನ್ನುವ ಬಗ್ಗೆ ಹೆಚ್ಚಿನ ಕುತೂಹಲ ಹುಟ್ಟು ಹಾಕಿದೆ.


Click it and Unblock the Notifications











