For Quick Alerts
  ALLOW NOTIFICATIONS  
  For Daily Alerts

  ಮಗಳ ಎದುರು ಸೋತ 'ಪುಷ್ಪ'ರಾಜ್: ವಿಡಿಯೋ ವೈರಲ್

  |

  'ಪುಷ್ಪ' ಸಕ್ಸಸ್ ನಂತರ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ಯಾವುದೇ ಸಿನಿಮಾದಲ್ಲಿ ನಟಿಸ್ತಿಲ್ಲ. ಇತ್ತೀಚೆಗೆ ಕೆಲ ಜಾಹಿರಾತುಗಳಲ್ಲಿ ನಟಿಸಿದ್ದು ಬಿಟ್ಟರೆ 'ಪುಷ್ಪ' -2 ಸೆಟ್‌ಗೆ ಎಂಟ್ರಿ ಕೊಡಲು ಕಾಯ್ತಿದ್ದಾರೆ. ಶೂಟಿಂಗ್ ಇಲ್ಲದೇ ಸದ್ಯ ಫ್ಯಾಮಿಲಿ ಜೊತೆ ಹೆಚ್ಚು ಟೈಂ ಸ್ಪೆಂಡ್ ಮಾಡ್ತಿರೋ ಬನ್ನಿ ಮಕ್ಕಳ ಜೊತೆ ಆಟ ಆಡುತ್ತಾ ಕಾಲ ಕಳೆಯುತ್ತಿದ್ದಾರೆ. ಇನ್ನು ಮಗಳ ಜೊತೆ ತಮಾಷೆಯಾಗಿ ಆಟ ಆಡಿ ಅಲ್ಲು ಅರ್ಜುನ್ ಸೋತಿದ್ದಾರೆ.

  ಅಲ್ಲು ಫ್ಯಾಮಿಲಿಯ ಪುಟಾಣಿ ಅರ್ಹಾ ಬಗ್ಗೆ ಬಿಡಿಸಿ ಹೇಳುವುದೇ ಬೇಕಾಗಿಲ್ಲ. ಸ್ಟೈಲಿಶ್ ಸ್ಟಾರ್ ಮುದ್ದಿನ ಮಗಳಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಚಿಕ್ಕಂದಿನಿಂದಲೇ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಮಗಳನ್ನು ಸೆಲೆಬ್ರೆಟಿ ಮಾಡಿ ಬಿಟ್ಟಿದ್ದಾರೆ. ತಂದೆ ಮಗಳ ತುಂಟಾಟಗಳನ್ನು ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದಾರೆ. ಆ ಮೂಲಕ ಮಗಳನ್ನು ಕೂಡ ಅಭಿಮಾನಿಗಳಿಗೆ ಹತ್ತಿರ ಮಾಡ್ತಿದ್ದಾರೆ. 'ಪುಷ್ಪ'ರಾಜ್ ಕೂಡ ಸಮಯ ಸಿಕ್ಕಾಗಲೆಲ್ಲಾ ಮಗಳ ಜೊತೆ ಆಡುತ್ತಾ ಮಗುವಾಗಿ ಬಿಡ್ತಾರೆ. ಸದ್ಯ ತಂದೆ- ಮಗಳ ಕ್ಯೂಟ್ ವಿಡಿಯೊವೊಂದು ಸಖತ್ ವೈರಲ್ ಆಗಿದೆ.

  ವಿಶ್ವದ ಗಮನ ಸೆಳೆದ ಅಲ್ಲು ಅರ್ಜುನ್ 'ಪುಷ್ಪ': ಹೊಸ ಸಾಧನೆಯೇನು?ವಿಶ್ವದ ಗಮನ ಸೆಳೆದ ಅಲ್ಲು ಅರ್ಜುನ್ 'ಪುಷ್ಪ': ಹೊಸ ಸಾಧನೆಯೇನು?

  ಮಗಳು ಅರ್ಹಾ ಒಂದು ಒಗಟನ್ನು ಹೇಳಿದ್ದು ಅದನ್ನು ಅಲ್ಲು ಅರ್ಜುನ್ ಬಿಡಿಸಿದ್ದಾರೆ. ಇದನ್ನು ಕೇಳಿ ಅಚ್ಚರಿಕೊಂಡ ಆಕೆ ಇದು ನಿಂಗೆ ಹೇಗೆ ಗೊತ್ತು ಅಂತ ಕೇಳಿದ್ದಾಳೆ. ಎಲ್ಲಾ ನನಗೆ ಗೊತ್ತು ಎಂದು ಬನ್ನಿ ಉತ್ತರ ಕೊಟ್ಟಿದ್ದಾರೆ. ನಂತರ ಅರ್ಹಾ ಟಂಗ್ ಟ್ವಿಸ್ಟರ್ ಚಾಲೆಂಜ್ ಕೊಟ್ಟಿದ್ದಾಳೆ. ಆಕೆ ಕೊಟ್ಟ ಸಾಲನ್ನು ಮತ್ತೆ ಮತ್ತೆ ಹೇಳಲು ಅಲ್ಲು ಅರ್ಜುನ್ ವಿಫಲವಾಗಿದ್ದಾರೆ. ಅಲ್ಲಿಗೆ ಚಾಲೆಂಜ್‌ನಲ್ಲಿ ಮಗಳೇ ಗೆದ್ದಂತಾಗಿದೆ. ಸದ್ಯ ಇವರಿಬ್ಬರ ಈ ಕ್ಯೂಟ್ ಮೊಮೆಂಟ್ ವಿಡಿಯೋ ಅಭಿಮಾನಿಗಳ ಮನಗೆದ್ದಿದೆ.

  ಅಲ್ಲು ಅರ್ಹಾ ಕೂಡ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಗುಣಶೇಖರ್ ನಿರ್ದೇಶನದಲ್ಲಿ ಸಮಂತಾ ಅಭಿನಯದ 'ಶಾಕುಂತಲಂ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾಳೆ. ಕೆಲ ದಿನಗಳ ಹಿಂದೆ ಆಕೆ ಶೂಟಿಂಗ್ ಸೆಟ್‌ಗೆ ಎಂಟ್ರಿ ಕೊಟ್ಟಿದ್ದ ವಿಡಿಯೋ ವೈರಲ್ ಆಗಿದೆ. ಇನ್ನು ಅಲ್ಲು ಅರ್ಜುನ್‌ಗೆ ಅಯಾನ್ ಎನ್ನುವ ಮಗ ಕೂಡ ಇದ್ದಾನೆ. ಇನ್ನು ಈಗಾಗಲೇ 'ಪುಷ್ಪ'-2 ಸಿನಿಮಾ ಮುಹೂರ್ತ ನೆರವೇರಿದ್ದು, ಶೀಘ್ರದಲ್ಲೇ 'ಪುಷ್ಪ'ರಾಜ್ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

  'ಪುಷ್ಪ'ರಾಜ್ ಪ್ರೇಯಸಿ ಶ್ರೀವಲ್ಲಿ ಸೀರೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!'ಪುಷ್ಪ'ರಾಜ್ ಪ್ರೇಯಸಿ ಶ್ರೀವಲ್ಲಿ ಸೀರೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

  Allu Arjun having cute conversation with his daughter Allu Arha Video Goes Viral

  ಕಳೆದ ವರ್ಷ ಬಿಡುಗಡೆಯಾಗಿದ್ದ 'ಪುಷ್ಪ' ಸಿನಿಮಾ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಮುಖ್ಯವಾಗಿ ಹಿಂದಿ ಬೆಲ್ಟ್‌ನಲ್ಲಿ ಸಖತ್ ಸದ್ದು ಮಾಡಿತ್ತು. ಚಿತ್ರದ ಸಾಂಗ್ಸ್, ಡೈಲಾಗ್ಸ್ ಎಲ್ಲವೂ ಸಿನಿರಸಿಕರ ಗಮನ ಸೆಳೆದಿತ್ತು. ರಕ್ತ ಚಂದನ ಸ್ಮಗ್ಲರ್ 'ಪುಷ್ಪ'ರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಸಕ್ಸಸ್ ಕಂಡಿದ್ದರು. ಅವರ ಲುಕ್ ಮ್ಯಾನರಿಸಂ, ಆಕ್ಷನ್, ಡೈಲಾಗ್ಸ್‌ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮಿಂಚಿದ್ದರು. ಇನ್ನು ಸಮಂತಾ ಹೆಜ್ಜೆ ಹಾಕಿದ್ದ ಐಟಂ ಸಾಂಗ್ ಚಿತ್ರಕ್ಕೆ ಪ್ಲಸ್ ಆಗಿತ್ತು.

  ಪುಷ್ಪ 2 ಗೆ ಸೇರುತ್ತಾರಾ ಸಾಯಿ ಪಲ್ಲವಿ? ತೂಕದ ಪಾತ್ರ.. ಶೀಘ್ರದಲ್ಲೇ ಅಧಿಸೂಚನೆ!ಪುಷ್ಪ 2 ಗೆ ಸೇರುತ್ತಾರಾ ಸಾಯಿ ಪಲ್ಲವಿ? ತೂಕದ ಪಾತ್ರ.. ಶೀಘ್ರದಲ್ಲೇ ಅಧಿಸೂಚನೆ!

  English summary
  Allu Arjun having cute conversation with his daughter Allu Arha Video Goes Viral. Know More.
  Wednesday, September 21, 2022, 9:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X