ಈ ಮಹಿಳಾ ಕ್ರಿಕೆಟರ್‌ಗೆ ಅಲ್ಲು ಅರ್ಜುನ್ ಎಂದರೆ ಪಂಚ ಪ್ರಾಣವಂತೆ

ತೆಲುಗಿನ ನಟ ಅಲ್ಲು ಅರ್ಜುನ್ ತೆಲುಗಿನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದರಲ್ಲೂ ಅಲ್ಲುಗೆ ಮಹಿಳಾ ಅಭಿಮಾನಿಗಳೇ ಹೆಚ್ಚು.

ಕ್ರಿಕೆಟ್ ತಾರೆಯರು ಸಹ ಅಲ್ಲು ಅರ್ಜುನ್‌ ಅಭಿಮಾನಿಗಳು. ಭಾರತ ಮಹಿಳಾ ಕ್ರಿಕೆಟ್ ತಂಡದ ಭರವಸೆಯ ಆಟಗಾರ್ತಿ ಪ್ರಿಯಾ ಪೂನಿಯಾಗೆ ಅಲ್ಲು ಅರ್ಜುನ್‌ ಎಂದರೆ ಪಂಚ ಪ್ರಾಣವಂತೆ.

ಹೌದು, ಕ್ರಿಕೆಟ್ ಆಟಗಾರ್ತಿ ಪ್ರಿಯಾ ಪುನಿಯಾಗೆ ದಕ್ಷಿಣ ಭಾರತದ ನಟ ಅಲ್ಲು ಅರ್ಜುನ್ ಎಂದರೆ ಬಹು ಇಷ್ಟವಂತೆ. ಅಲ್ಲು ಅರ್ಜುನ್‌ ರ ಎಲ್ಲಾ ಸಿನಿಮಾಗಳನ್ನು ನೋಡುವುದಾಗಿ ಅವರು ಅಭಿಮಾನಿಗಳೊಟ್ಟಿಗೆ ನಡೆಸಿದ ಇನ್‌ಸ್ಟಾಗ್ರಾಂ ಸಂವಾದದಲ್ಲಿ ಉತ್ತರಿಸಿದ್ದಾರೆ.

ಲುಕ್ಸ್‌ನಿಂದ ಗಮನ ಸೆಳೆದಿದ್ದಾರೆ ಪ್ರಿಯಾ ಪುನಿಯಾ

ಲುಕ್ಸ್‌ನಿಂದ ಗಮನ ಸೆಳೆದಿದ್ದಾರೆ ಪ್ರಿಯಾ ಪುನಿಯಾ

ಸ್ಮೃತಿ ಮಂದಾನಾ ಬಳಿಕ ತಮ್ಮ ಲುಕ್ಸ್‌ನಿಂದಾಗಿ ಸಖತ್ ಖ್ಯಾತಿ ಗಳಿಸಿರುವ ಭಾರತ ಕ್ರಿಕೆಟ್ ತಂಡದ ಆಟಗಾರ್ತಿ ಪ್ರಿಯಾ ಪುನಿಯಾ. ಆರಂಭಿಕ ಬ್ಯಾಟ್ಸ್‌ವುಮನ್ ಆಗಿರುವ ಪ್ರಿಯಾ ಪುನಿಯಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಖ್ಯಾತಿ ಗಳಿಸಿದ್ದಾರೆ.

ಮೆಚ್ಚಿನ ಕ್ರಿಕೆಟರ್ ಯಾರು?

ಮೆಚ್ಚಿನ ಕ್ರಿಕೆಟರ್ ಯಾರು?

ನಿಮ್ಮ ಮೆಚ್ಚಿನ ಪುರುಷ ಕ್ರಿಕೆಟಿಗ ಯಾರು ಎಂಬ ಪ್ರಶ್ನೆ ಸಹ ಪ್ರಿಯಾ ಪುನಿಯಾಗೆ ಎದುರಾಯಿತು. ಇದಕ್ಕೆ ಭಾರತ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ, ಹಾಗೂ ಜಂಟಲ್‌ಮನ್ ಕ್ರಿಕೆಟರ್ ರಾಹುಲ್ ದ್ರಾವಿಡ್ ಹೆಸರು ಹೇಳಿದ್ದಾರೆ ಪುನಿಯಾ.

ಡೇವಿಡ್ ವಾರ್ನರ್ ಸಹ ಅಲ್ಲು ಅಭಿಮಾನಿ

ಡೇವಿಡ್ ವಾರ್ನರ್ ಸಹ ಅಲ್ಲು ಅಭಿಮಾನಿ

ಅಲ್ಲು ಅರ್ಜುನ್‌ ಗೆ ಹಲವು ಸೆಲೆಬ್ರಿಟಿ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಸಹ ಅಲ್ಲು ಅರ್ಜುನ್ ಅಭಿಮಾನಿಯಂತೆ. ಅಲ್ಲು ಅರ್ಜುನ್‌ರ 'ಬುಟ್ಟ ಬೊಮ್ಮ' ಹಾಡಿಗೆ ಡೇವಿಡ್ ವಾರ್ನರ್ ಕುಟುಂಬ ಡಾನ್ಸ್ ಮಾಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು.

Recommended Video

ಇವರ ಧೈರ್ಯವನ್ನು ನಾವು ಮೆಚ್ಚಲೇ ಬೇಕು | Neethu Shetty | Filmibeat Kannada
ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಬ್ಯುಸಿ

ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಬ್ಯುಸಿ

ಇನ್ನು ನಟ ಅಲ್ಲು ಅರ್ಜುನ್ ಪುಷ್ಪಾ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ರಕ್ತ ಚಂದನ ಕಳ್ಳ ಸಾಗಾಣೆದಾರನ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ.

More from Filmibeat

English summary
Indian women cricket team player Priya Puniya said her favorite south Indian actor is Allu Arjun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X