For Quick Alerts
  ALLOW NOTIFICATIONS  
  For Daily Alerts

  ಸೊಂಟ ಬಳುಕಿಸಿರುವ ಸ್ಟಾರ್ ನಟಿಗೆ ಕುಣಿಯಲು ತೆಲುಗು ನಟ ಸ್ಪೂರ್ತಿಯಂತೆ

  |

  ಕನ್ನಡದ ಒಂದು ಸಿನಿಮಾದಲ್ಲಿ ನಟಿಸಿರುವ ಬಾಲಿವುಡ್ ನಟಿ ಊರ್ವಶಿ ರಾಟೆಲ್ಲಾ ಚೆನ್ನಾಗಿ ಡಾನ್ಸ್ ಮಾಡುತ್ತಾರೆ.

  ಇತ್ತೀಚೆಗಷ್ಟೆ ವಿಚಿತ್ರವಾಗಿ ಸೊಂಟ ಬಳುಕಿಸಿ, ಮಾಸ್ ಸ್ಟೆಪ್ ಒಂದನ್ನು ಹಾಕಿರುವ ಊರ್ವಶಿ ರಾಟೆಲ್ಲಾ, ತಮ್ಮ ನೃತ್ಯದ ಸಣ್ಣ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಅಲ್ಲು ಅರ್ಜುನ್ ಗಾಗಿ 250 ಕಿ.ಮೀ ನಡೆದ ಅಭಿಮಾನಿ: ಸ್ಟೈಲಿಶ್ ಸ್ಟಾರ್ ಬಗ್ಗೆ ಹೇಳಿದ್ದೇನು?ಅಲ್ಲು ಅರ್ಜುನ್ ಗಾಗಿ 250 ಕಿ.ಮೀ ನಡೆದ ಅಭಿಮಾನಿ: ಸ್ಟೈಲಿಶ್ ಸ್ಟಾರ್ ಬಗ್ಗೆ ಹೇಳಿದ್ದೇನು?

  ಇದು ನನ್ನ ದಕ್ಷಿಣ ಭಾರತದ ನೃತ್ಯ ಶೈಲಿ ಎಂದು ಕ್ಯಾಪ್ಷನ್ ನೀಡಿದ್ದಾರೆ ಊರ್ವಶಿ. ವಿಡಿಯೋದಲ್ಲಿ ವಿಚಿತ್ರವಾಗಿ ಸೊಂಟ ಬಳುಕಿಸಿದ್ದಾರೆ. ವಿಡಿಯೋವು ಅವರ ಮುಂದಿನ ಸಿನಿಮಾದ ಹಾಡಿನ ತಾಲೀಮಿನಂತೆ ಕಾಣುತ್ತಿದೆ. ಈ ರೀತಿ ನೃತ್ಯ ಮಾಡಲು ನನಗೆ ತೆಲುಗು ಸ್ಟಾರ್ ನಟ ಸ್ಪೂರ್ತಿ ಎಂದಿದ್ದಾರೆ ಊರ್ವಶಿ.

  Recommended Video

  ನಾನು, ವೇಣು ಲವ್ ಮಾಡೋವಾಗ SPB ನಂಗೆ ಒಂದು ಗಿಫ್ಟ್ ಕೊಟ್ಟಿದ್ರು | Tara | SPB | Filmibeat kannada
  ರಾಟೆಲ್ಲಾಗೆ ಡಾನ್ಸ್ ಮಾಡಲು ಅಲ್ಲು ಅರ್ಜುನ್ ಸ್ಪೂರ್ತಿ

  ರಾಟೆಲ್ಲಾಗೆ ಡಾನ್ಸ್ ಮಾಡಲು ಅಲ್ಲು ಅರ್ಜುನ್ ಸ್ಪೂರ್ತಿ

  ಹೀಗೆ ರಗಡ್ ಸ್ಟೈಲ್‌ ನಲ್ಲಿ ಮಾಸ್ ಆಗಿ ಡಾನ್ಸ್ ಮಾಡಲು ಅವರಿಗೆ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಸ್ಪೂರ್ತಿಯಂತೆ. ನಾನು ಈಗ ಲೇಡಿ ಅಲ್ಲು ಅರ್ಜುನ್ ಆಗಿದ್ದೇನೆ, ನನಗೆ ಡಾನ್ಸ್ ಮಾಡಲು ಅವರೇ ಸ್ಪೂರ್ತಿ ಎಂದಿದ್ದಾರೆ ಊರ್ವಶಿ.

  ಹಿಂದಿ-ತೆಲುಗು ಭಾಷೆಗಳಲ್ಲಿ ಬಿಡುಗಡೆ

  ಹಿಂದಿ-ತೆಲುಗು ಭಾಷೆಗಳಲ್ಲಿ ಬಿಡುಗಡೆ

  ಊರ್ವಶಿ ರಾಟೆಲ್ಲಾ 'ಬ್ಲ್ಯಾಕ್ ರೋಸ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಏಕಕಾಲದಲ್ಲಿ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಇದು ಅವರ ಮೊದಲ ತೆಲುಗು ಸಿನಿಮಾ ಸಹ ಆಗಿದೆ.

  ಕಾಡಿಗೆ ಎಂಟ್ರಿ ಕೊಟ್ಟಿದ್ದ ನಟ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲುಕಾಡಿಗೆ ಎಂಟ್ರಿ ಕೊಟ್ಟಿದ್ದ ನಟ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲು

  ದರ್ಶನ್ ಅಭಿನಯದ ಸಿನಿಮಾದಲ್ಲಿ ನಟಿಸಿದ್ದಾರೆ

  ದರ್ಶನ್ ಅಭಿನಯದ ಸಿನಿಮಾದಲ್ಲಿ ನಟಿಸಿದ್ದಾರೆ

  ಊರ್ವಶಿ ರಾಟೆಲ್ಲಾ ಕನ್ನಡದ ಸಿನಿಮಾದಲ್ಲಿ ನಟಿಸಿದ್ದಾರೆ. ದರ್ಶನ್ ಅಭಿನಯದ ಮಿಸ್ಟರ್ ಐರಾವತ ದ ನಾಯಕಿಯಾಗಿ ರಾಟೆಲ್ಲಾ ನಟಿಸಿದ್ದರು. ಇದು ಅವರ ಎರಡನೇಯ ಸಿನಿಮಾ ಆಗಿತ್ತು ಹಾಗೂ ಕನ್ನಡದ ಮೊದಲ ಸಿನಿಮಾ. ಆ ನಂತರ ಕನ್ನಡದ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ ಊರ್ವಶಿ.

  ನಾಯಕಿ ಕೇಂದ್ರಿತ ಸಿನಿಮಾಗಳಲ್ಲಿ ನಟನೆ

  ನಾಯಕಿ ಕೇಂದ್ರಿತ ಸಿನಿಮಾಗಳಲ್ಲಿ ನಟನೆ

  ಊರ್ವಶಿ ರಾಟೆಲ್ಲಾ ಅವರ ಮುಂದಿನ ಸಿನಿಮಾ ಬ್ಲ್ಯಾಕ್ ರೋಸ್ ಸಿನಿಮಾ ಒಂದೇ ದಿನದಲ್ಲಿ ನಡೆಯುವ ಕತೆಯುಳ್ಳದ್ದಾಗಿದ್ದು, ಊರ್ವಶಿ ಆ ಸಿನಿಮಾದ ನಾಯಕ-ನಾಯಕಿ ಎರಡೂ ಆಗಿದ್ದಾರೆ. ಊರ್ವಶಿ ಬಹುತೇಕ ನಾಯಕಿ ಕೇಂದ್ರಿತ ಸಿನಿಮಾಗಳಲ್ಲಿಯೇ ಇತ್ತೀಚೆಗೆ ನಟಿಸುತ್ತಿದ್ದಾರೆ.

  ಕಾಡಿಗೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ನೋಡಲು ಮುಗಿಬಿದ್ದ ಅಭಿಮಾನಿಗಳುಕಾಡಿಗೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ನೋಡಲು ಮುಗಿಬಿದ್ದ ಅಭಿಮಾನಿಗಳು

  English summary
  Actress Urvashi Rautela said Allu Arjun is her inspiration to do dance. She posted a video of her dancing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X