For Quick Alerts
  ALLOW NOTIFICATIONS  
  For Daily Alerts

  'ಲೂಸಿಫರ್' ಸಿನಿಮಾದ ತೆಲುಗು ರಿಮೇಕ್ ಬಗ್ಗೆ ಅಲ್ಲು ಅರ್ಜುನ್ ಹೇಳಿದ್ದೇನು?

  |

  ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಚೊಚ್ಚಲ ನಿರ್ದೇಶನದ ಲೂಸಿಫರ್ ಸಿನಿಮಾ ಮಲಯಾಳಂ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದ ಲೂಸಿಫರ್ ಚಿತ್ರದಲ್ಲಿ ಖ್ಯಾತ ನಟ ಮೋಹನ್ ಲಾಲ್ ನಾಯಕನಾಗಿ ಕಾಣಿಸಿಕೊಂಡಿದ್ದರು.

  ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ | Pogaru Song Release | Dhruva Sarja | Filmibeat kannada

  ಮಲಯಾಳಂನಲ್ಲಿ ಹೊಸ ದಾಖಲೆ ಬರೆದ ಲೂಸಿಫರ್ ಈಗ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗುತ್ತಿದೆ. ಹೌದು, ಲೂಸಿಫರ್ ಸಿನಿಮಾ ತೆಲುಗುಗೆ ರಿಮೇಕ್ ಆಗುತ್ತಿದೆ. ವಿಶೇಷ ಅಂದರೆ ತೆಲುಗು ಲೂಸಿಫರ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಅಲ್ಲು ಅರ್ಜುನ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೀಗ ಅಲ್ಲು ಅರ್ಜುನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನವುದು ಖಚಿತವಾಗಿದೆ ಮುಂದೆ ಓದಿ..

  ಮಲಯಾಳಂನ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ-ಅಲ್ಲು ಅರ್ಜುನ್ಮಲಯಾಳಂನ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ-ಅಲ್ಲು ಅರ್ಜುನ್

  'ಲೂಸಿಫರ್' ರಿಮೇಕ್ ನಲ್ಲಿ ಮೆಗಾ ಸ್ಟಾರ್

  'ಲೂಸಿಫರ್' ರಿಮೇಕ್ ನಲ್ಲಿ ಮೆಗಾ ಸ್ಟಾರ್

  ಮಲಯಲಾಳಂ ಸ್ಟಾರ್ ನಟ ಮೋಹನ್ ಲಾಲ್ ಅಭಿನಯಿಸಿದ್ದ ಲೂಸಿಫರ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಈ ಬಗ್ಗೆ ಮಾತುಕತೆ ನಡೆದಿದ್ದು, ನಿರ್ದೇಶಕ ಕೂಡ ಫಿಕ್ಸ್ ಆಗಿದ್ದಾರೆ. ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ ಆದರೆ ಈಗಾಗಲೆ ಪ್ರಿಪ್ರೊಡಕ್ಷನ್ ಕೆಲಸ ನಡೆಯುತ್ತಿದೆಯಂತೆ.

  ತೆಲುಗು ರಿಮೇಕ್ ಗೆ ಸಾಹೋ ನಿರ್ದೇಶಕರ ಸಾರಥ್ಯ

  ತೆಲುಗು ರಿಮೇಕ್ ಗೆ ಸಾಹೋ ನಿರ್ದೇಶಕರ ಸಾರಥ್ಯ

  ಲೂಸಿಫರ್ ತೆಲುಗು ರಿಮೇಕ್ ಗೆ ಸಾಹೋ ಖ್ಯಾತಿಯ ನಿರ್ದೇಶಕ ಸುಜಿತ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೊದಲು ನಿರ್ದೇಶಕ ಸುಕುಮಾರ್ ಸಾರಥ್ಯದಲ್ಲಿ ಲೂಸಿಫರ್ ಸಿನಿಮಾ ಮೂಡಿ ಬರಲಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಸುಜಿತ್ ನಿರ್ದೇಶನ ಮಾಡಲಿದ್ದಾರಂತೆ. ಈಗಾಗಲೆ ಸುಜಿತ್ ಪ್ರಿ-ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರಂತೆ.

  ಹೊಸ ದಾಖಲೆ ಬರೆದ ಮೋಹನ್ ಲಾಲ್ -ಪೃಥ್ವಿರಾಜ್ ಜೋಡಿಹೊಸ ದಾಖಲೆ ಬರೆದ ಮೋಹನ್ ಲಾಲ್ -ಪೃಥ್ವಿರಾಜ್ ಜೋಡಿ

  ಪೃಥ್ವಿರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್

  ಪೃಥ್ವಿರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್

  ಲೂಸಿಫರ್ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ ಜೊತೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಲಯಾಳಂನಲ್ಲಿ ನಟ ಪೃಥ್ವಿರಾಜ್ ನಿಭಾಯಿಸಿದ್ದ ಪಾತ್ರದಲ್ಲಿ ಅಲ್ಲು ಅರ್ಜುನ್ ಬಣ್ಣಹಚ್ಚುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.

  ಲೂಸಿಫರ್ ರಿಮೇಕ್ ಮಾಡಲ್ಲ ಎಂದ ಅಲ್ಲು ಅರ್ಜುನ್

  ಲೂಸಿಫರ್ ರಿಮೇಕ್ ಮಾಡಲ್ಲ ಎಂದ ಅಲ್ಲು ಅರ್ಜುನ್

  ಚಿರಂಜೀವಿ ಮತ್ತು ಅಲ್ಲು ಅರ್ಜುನ್ ಇಬ್ಬರು ಲೂಸಿಫರ್ ತೆಲುಗು ರಿಮೇಕ್ ಮೂಲಕ ಒಟ್ಟಿಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೀಗ ಅಲ್ಲು ಅರ್ಜುನ್ ಲೂಸಿಫರ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅಧಿಕೃತವಾಗಿ. ಈ ಬಗ್ಗೆ ಅಲ್ಲು ಅರ್ಜುನ್ ಪರ ಪ್ರಚಾರಕರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

  ಪೃಥ್ವಿರಾಜ್ ಪಾತ್ರ ಮಾಡುತ್ತಾರಾ ರಾಮ್ ಚರಣ್?

  ಪೃಥ್ವಿರಾಜ್ ಪಾತ್ರ ಮಾಡುತ್ತಾರಾ ರಾಮ್ ಚರಣ್?

  ಸದ್ಯ ಅಲ್ಲು ಅರ್ಜುನ್ ಹಿಂದೆ ಸರಿದ ಕಾರಣ ಮಲಯಾಳಂನಲ್ಲಿ ಪೃಥ್ವಿ ರಾಜ್ ಮಾಡಿದ್ದ ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ರಾಮ್ ಚರಣ್, ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಆರ್ ಆರ್ ಆರ್ ಸಿನಿಮಾದಲ್ಲೂ ಬ್ಯುಸಿ ಇದ್ದಾರೆ.

  ಲೂಸಿಫರ್ ಎರಡನೆ ಆವೃತ್ತಿಗೆ ತಯಾರಿ

  ಲೂಸಿಫರ್ ಎರಡನೆ ಆವೃತ್ತಿಗೆ ತಯಾರಿ

  ಲೂಸಿಫರ್ ಎರಡನೇ ಆವೃತ್ತಿಗೆ 'ಎಂಪುರಾನ್' ಎಂದು ಹೆಸರಿಡಲಾಗಿದೆ. ಸ್ಟೀಫನ್ ನೆಡುಂಪಿಳ್ಳಿ ಅಲಿಯಾಸ್ ಖುರೇಶಿ ಅಬ್ರಾಮ್ ಆಗಿ ಮೋಹನ್ ಲಾಲ್ ಮತ್ತೆ ಮೋಡಿ ಮಾಡಲು ಸಿದ್ಧರಾಗುತ್ತಿದ್ದಾರೆ. ಲೂಸಿಫರ್ ನಲ್ಲಿ ಜಾಯೇದ್ ಮಸೂದ್ ಹೆಸರಿನ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿರಾಜ್, ಎರಡನೇ ಆವೃತ್ತಿಯಲ್ಲಿ ಹೆಚ್ಚು ಹೊತ್ತು ಪರದೆ ಮೇಲೆ ಕಾಣಿಸಿಕೊಂಡು ರಂಜಿಸಲಿದ್ದಾರಂತೆ.

  English summary
  Actor Allu Arjun is not a part of Chiranjeevi's telugu remake of Lucifer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X