ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಏಕೈಕ ತೆಲುಗು ನಟ
2020 ವರ್ಷಾಂತ್ಯದಲ್ಲಿದ್ದೇವೆ. ಈ ವರ್ಷ ಇಂಟರ್‌ನೆಟ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟಿದ್ದು ಕೊರೊನಾ ಎಂಬುದರಲ್ಲಿ ಅನುಮಾನವೇ ಇಲ್ಲ.
ಈ ಮಧ್ಯೆ, ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳು ಯಾರ್ಯಾರು ಎಂದು ಗಮನಿಸಿದರೆ ಕೆಲವು ಅಚ್ಚರಿಯ ಹೆಸರುಗಳಿವೆ.
ಸರ್ಚ್ ಎಂಜಿನ್ ಯಾಹೂ ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು. ಯಾಹೂ ಬಳಸಿ ಹುಡುಕಾಟ ನಡೆಸಿದ ಟಾಪ್ 10 ತೆಲುಗು ಸೆಲೆಬ್ರಿಟಿಗಳ ಪಟ್ಟಿಯಲ್ಲಿ ತೆಲುಗಿನ ಒಬ್ಬೇ ಒಬ್ಬ ನಟನ ಹೆಸರಿದೆ. ಅದೇ ಅಲ್ಲು ಅರ್ಜುನ್.

ಅಲಾ ವೈಕುಂಟಪುರಂ ನಂಥಹಾ ಭರ್ಜರಿ ಹಿಟ್ ಸಿನಿಮಾ ನೀಡಿದ ಅಲ್ಲು ಅರ್ಜುನ್ ಕುರಿತು ನೆಟ್ಟಿಗರು ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಇದೇ ವರ್ಷಾರಂಭದಲ್ಲಿ ಪ್ರಾರಂಭವಾದ ಪುಷ್ಪಾ ಸಿನಿಮಾ ಸಹ ಸಾಕಷ್ಟು ಕುತೂಹಲ ಕೆರಳಿಸಿತ್ತು, ಹಾಗಾಗಿ ಅಲ್ಲು ಅರ್ಜುನ್ ಬಗ್ಗೆ ಹೆಚ್ಚು ಮಂದಿ ಹುಡುಕಾಟ ನಡೆಸಿದ್ದಾರೆ.
2020 ರಲ್ಲಿ ಅತಿ ಹೆಚ್ಚು ಹುಡುಕಾಡಲ್ಪಟ್ಟ ಬಾಲಿವುಡ್ ಮಹಿಳಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ರಿಯಾ ಚಕ್ರವರ್ತಿ ಮೊದಲ ಸ್ಥಾನದಲ್ಲಿದ್ದರೆ, ಪುರುಷರ ಪಟ್ಟಿಯಲ್ಲಿ ಸುಶಾಂತ್ ಸಿಂಗ್ ರಜಪೂರ್ ಟಾಪ್‌ನಲ್ಲಿದ್ದಾರೆ.


Click it and Unblock the Notifications











