ಸೆಟ್ಟೇರುವುದಕ್ಕೂ ಮುನ್ನ ಶುರು ಅಲ್ಲು ಅರ್ಜುನ್- ಲೋಕೇಶ್ ಸಿನಿಮಾ ಆರ್ಭಟ; ಫ್ಯಾನ್ಸ್ ಖುಷ್

ದಕ್ಷಿಣ ಭಾರತದ ಸಿನಿಮಾ ರಂಗ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. ಇಲ್ಲಿನ ಒಂದೊಂದು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುತ್ತಿವೆ. ಸ್ಟಾರ್ ನಟರು ಹಾಗೂ ಸ್ಟಾರ್ ನಿರ್ದೇಶಕರು ಒಂದಾಗುತ್ತಿದ್ದಾರೆ ಅಂದರೆ ಅಲ್ಲಿ ಏನೋ ದೊಡ್ಡ ಮಟ್ಟದ ಮ್ಯಾಜಿಕ್ ನಡೆಯಲಿದೆ ಎಂದೇ ಅರ್ಥ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಒಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಒಂದು ಫೋಟೋ ಅಥವಾ ಒಂದು ಸಣ್ಣ ಸುಳಿವು ಸಿಕ್ಕರೆ ಸಾಕು, ಅಭಿಮಾನಿಗಳು ಅದನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಈಗ ಅಂತಹದ್ದೇ ಒಂದು ಕ್ಷಣ ಎದುರಾಗಿದೆ. ಈಗಾಗಲೇ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟನೆಯ ಸಿನಿಮಾ ಘೋಷಣೆ ಆಗಿದೆ. ಈ ಕ್ರೇಜಿ ಕಾಂಬಿನೇಷನ್ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Allu Arjun Lokesh Kanagaraj s AA23 Creates Massive Buzz Theme reels Crosses 1 Million Views

'ಪುಷ್ಪ'-2 ಬಳಿಕ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಆ ಬಳಿಕ ಲೋಕೇಶ್ ಜೊತೆ ಕೈ ಜೋಡಿಸಲಿದ್ದಾರೆ. ಇದು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸಲಿರುವ 23ನೇ ಸಿನಿಮಾ. ಸಂಕ್ರಾಂತಿ ಸಂಭ್ರಮದಲ್ಲಿ ಸಣ್ಣ ಮೋಷನ್ ಪೋಸ್ಟರ್ ಮೂಲಕ ಸಿನಿಮಾ ಘೋಷಣೆ ಆಗಿತ್ತು.

AA23 ಸಿನಿಮಾ ಮೋಷನ್ ಪೋಸ್ಟ್ ಥೀಮ್ ಮ್ಯೂಸಿಕ್ ವೈರಲ್ ಆಗಿ ಹಿಟ್ ಆಗಿರುವ ಬಗ್ಗೆ ಲೋಕೇಶ್ ಪೋಸ್ಟ್ ಮಾಡಿದ್ದಾರೆ. "AA23 ಥೀಮ್ ಒಂದು ಮಿಲಿಯನ್ ವೀವ್ಸ್" ಸಾಧಿಸಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲು ಅರ್ಜುನ್ ಜೊತೆಗಿನ ಸೆಲ್ಫಿಯನ್ನು ಲೋಕೇಶ್ ಪೋಸ್ಟ್ ಮಾಡಿದ್ದಾರೆ. ಅದು ಸಖತ್ ವೈರಲ್ ಆಗ್ತಿದೆ.

ಬನ್ನಿ- ಲೋಕಿ ಕಾಂಬೋ

ಅಲ್ಲು ಅರ್ಜುನ್ ಅವರ ಸ್ಟೈಲ್ ಮತ್ತು ಲೋಕೇಶ್ ಕನಕರಾಜ್ ಅವರ ಡಾರ್ಕ್ ಆಕ್ಷನ್ ಮೇಕಿಂಗ್ ಸೇರಿದರೆ ಅದು ಅಂತಿಂತಾ ಸಿನಿಮಾವಾಗಲು ಸಾಧ್ಯವೇ ಇಲ್ಲ. AA23 ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಆಗಿದೆ. ಈ ಸಿನಿಮಾ ಕಥೆ ಏನು? ಸಿನಿಮಾ ಹೇಗಿರಬಹುದು ಎಂಬ ಬಗ್ಗೆ ಫ್ಯಾನ್ಸ್ ತಮ್ಮದೇ ಆದ ಸ್ಟೋರಿ ಬಿಲ್ಡಪ್ ಕೊಡುತ್ತಿದ್ದಾರೆ.ಅಲ್ಲು ಅರ್ಜುನ್ ಅವರನ್ನು ಲೋಕೇಶ್ ಯಾವ ರೀತಿ ತೋರಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಬನ್ನಿ ಅವರ ಎನರ್ಜಿ ಮತ್ತು ಲೋಕೇಶ್ ಅವರ ಇಂಟೆನ್ಸ್ ಡೈರೆಕ್ಷನ್ ಮ್ಯಾಚ್ ಆದ್ರೆ ದಾಖಲೆಗಳು ಪುಡಿಪುಡಿಯಾಗುವುದು ಫಿಕ್ಸ್.

ಇದೊಂದು ಮಾಸ್ ಮನರಂಜನೆ...

ಸಿನಿಮಾ ಪ್ರೇಮಿಗಳಿಗೆ ಇದಕ್ಕಿಂತ ದೊಡ್ಡ ಸುದ್ದಿ ಮತ್ತೊಂದಿಲ್ಲ. ಲೋಕೇಶ್ ಕನಕರಾಜ್ ಅವರ ಕಥೆಯಲ್ಲಿ ಅಲ್ಲು ಅರ್ಜುನ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಾರಾ ಅಥವಾ ಮಾಸ್ ಹೀರೋ ಆಗಿ ರಗಡ್ ಲುಕ್ನಲ್ಲಿ ಬರ್ತಾರಾ ಅನ್ನೋದು ಸದ್ಯದ ಕುತೂಹಲ. ಈ ವೈರಲ್ ಫೋಟೋ ಮತ್ತು ಥೀಮ್ ನೋಡಿದರೆ ಇದು ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ಅನ್ನೋದರಲ್ಲಿ ಅನುಮಾನವೇ ಇಲ್ಲ.

ರಾಕ್‌ಸ್ಟರ್ ಮ್ಯಾಜಿಕ್

ಲೋಕೇಶ್ ಕನಕರಾಜ್ ಹಾಗೂ ಅಲ್ಲು ಅರ್ಜುನ್ ಚಿತ್ರಕ್ಕೆ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ರಾಕ್‌ಸ್ಟರ್ ಎಂದೇ ಫೇಮಸ್ ಆಗಿರುವ ಅನಿರುದ್ಧ್ ಸೂಪರ್ ಹಿಟ್ ಸಿನಿಮಾಗಳಿಗೆ ಟ್ಯೂನ್ ಹಾಕಿ ಸಕ್ಸಸ್ ಕಂಡಿದ್ದಾರೆ. ಲೋಕೇಶ್ ನಿರ್ದೇಶನದ 'ಕೂಲಿ' ಚಿತ್ರಕ್ಕೂ ಅವರು ಮ್ಯೂಸಿಕ್ ಕಂಪೋಸ್ ಮಾಡಿ ಗೆದ್ದಿದ್ದರು.

ಹೀರೊ ಆಗಿ ಲೋಕೇಶ್

ಸಿನಿಮಾ ನಿರ್ದೇಶನದ ಜೊತೆಗೆ ಲೋಕೇಶ್ ಕನಕರಾಜ್ ಹೀರೊ ಆಗುತ್ತಿದ್ದಾರೆ. ಈ ಹಿಂದೆ ಶ್ರುತಿ ಹಾಸನ್‌ ಜೊತೆ ಮ್ಯೂಸಿಕ್ ಆಲ್ಬಮ್‌ನಲ್ಲಿ ಲೋಕೇಶ್ ನಟಿಸಿದ್ದರು. ಅದು ಸಖತ್ ಹಿಟ್ ಆಗಿತ್ತು. ಆ ಬಳಿಕ ಲೋಕೇಶ್ ಸಿನಿಮಾ ಹೀರೊ ಆಗುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಈಗ ಅದು ನಿಜವಾಗ್ತಿದೆ.

More from Filmibeat

Read more about: allu arjun kollywood tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X