For Quick Alerts
  ALLOW NOTIFICATIONS  
  For Daily Alerts

  200 ಕಿ.ಮೀ ನಡೆದು, ಕೊನೆಗೂ ಅಲ್ಲು ಅರ್ಜುನ್ ಭೇಟಿಯಾಗಿ ಸಂತಸಪಟ್ಟ ಅಭಿಮಾನಿ

  |

  ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿದ್ದಾರೆ. ಅಲ್ಲು ಅರ್ಜುನ್ ನೋಡಲು, ಭೇಟಿಯಾಗಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ನೆಚ್ಚಿನ ನಟನ ದರ್ಶನ ಪಡೆಯಲು ಅಪ್ಪಟ ಅಭಿಮಾನಿಗಳು ಎಷ್ಟೆಲ್ಲಾ ಸಾಹಸ ಪಡುತ್ತಾರೆ ಅಂತ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ.

  ಇತ್ತೀಚಿಗೆ ಅಲ್ಲು ಅರ್ಜುನ್ ಅಪ್ಪಟ ಅಭಿಮಾನಿಯೊಬ್ಬ ಅಲ್ಲು ಅರ್ಜುನ್ ನೋಡಲು ಬರೋಬ್ಬರಿ 200 ಕಿ.ಮೀಗೂ ಹೆಚ್ಚು ದೂರದಿಂದ ನಡೆದುಕೊಂಡು ಬಂದಿದ್ದಾರೆ. ನೆಚ್ಚಿನ ನಟನನ್ನು ಭೇಟಿಯಾಗಲು ಎಷ್ಟು ಭಾರಿ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ ಎನ್ನುವ ಕಾರಣಕ್ಕೆ ತನ್ನ ಊರಿಂದ ಪಾದಯಾತ್ರೆ ಮಾಡಿಕೊಂಡು ಬಂದಿದ್ದಾರೆ. ಕೊನೆಗೂ ಅಲ್ಲು ಅರ್ಜುನ್ ಭೇಟಿಯಾಗಿ ಸಂತಸ ಪಟ್ಟಿದ್ದಾರೆ. ಮುಂದೆ ಓದಿ...

  ಅಲ್ಲು ಅರ್ಜುನ್ ಗಾಗಿ 250 ಕಿ.ಮೀ ನಡೆದ ಅಭಿಮಾನಿ: ಸ್ಟೈಲಿಶ್ ಸ್ಟಾರ್ ಬಗ್ಗೆ ಹೇಳಿದ್ದೇನು?ಅಲ್ಲು ಅರ್ಜುನ್ ಗಾಗಿ 250 ಕಿ.ಮೀ ನಡೆದ ಅಭಿಮಾನಿ: ಸ್ಟೈಲಿಶ್ ಸ್ಟಾರ್ ಬಗ್ಗೆ ಹೇಳಿದ್ದೇನು?

  ಮಾಚೆರ್ಲಾದಿಂದ ಹೈದರಾಬಾದ್ ಗೆ ಪಾದಯಾತ್ರೆ

  ಮಾಚೆರ್ಲಾದಿಂದ ಹೈದರಾಬಾದ್ ಗೆ ಪಾದಯಾತ್ರೆ

  ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಲ್ಲು ಅಭಿನಯ, ಡ್ಯಾನ್ಸ್ ನೋಡಲು ಅಭಿಮಾನಿಗಳು ನಿದ್ದೆಗೆಟ್ಟು ಕಾಯುತ್ತಿರುತ್ತಾರೆ. ಅಲ್ಲು ಮನೆಯಿಂದ ಹೊರಬಂದರೆ ಸಾಕು ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ಬನ್ನಿಯ ಡೈ ಹಾರ್ಡ್ ಫ್ಯಾನ್ ಪಿ ನಾಗೇಶ್ವರ್ ರಾವ್ ತನ್ನ ಹುಟ್ಟೂರು ಆಂಧ್ರಪ್ರದೇಶದ ಮಾಚೆರ್ಲಾದಿಂದ ಹೈದರಾಬಾದ್ ಗೆ ನಡೆದುಕೊಂಡೇ ಬಂದಿದ್ದಾರೆ.

  ಅಲ್ಲು ಸ್ಟುಡಿಯೋ ಉದ್ಘಾಟಿಸಿದ ಅಲ್ಲು ಅರ್ಜುನ್ ಕುಟುಂಬಅಲ್ಲು ಸ್ಟುಡಿಯೋ ಉದ್ಘಾಟಿಸಿದ ಅಲ್ಲು ಅರ್ಜುನ್ ಕುಟುಂಬ

  ಫ್ಲೆಕ್ಸ್ ಹಿಡಿದು ಬಂದಿದ್ದ ಅಭಿಮಾನಿ

  ಫ್ಲೆಕ್ಸ್ ಹಿಡಿದು ಬಂದಿದ್ದ ಅಭಿಮಾನಿ

  ಈ ಫ್ಯಾನ್ ಬಾಯ್ ಒಬ್ಬನೆ ನಡೆದುಕೊಂಡು ಬಂದಿಲ್ಲ. ಜೊತೆಯಲ್ಲಿ ಒಂದು ಫ್ಲೆಕ್ಸ್ ಹಿಡಿದುಕೊಂಡು ಬಂದಿದ್ದಾರೆ. "ಜೈ ಅಲ್ಲು ಅರ್ಜುನ್ ಅಣ್ಣ. ಮಾಚೆರ್ಲಾದಿಂದ ಹೈದರಾಬಾದ್ ಗೆ ಪಾದಯಾತ್ರೆ" ಎಂದು ಬರೆಯಲಾಗಿದೆ. ಈಗಾಗಲೇ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು ಸಾಕಷ್ಟು ಬಾರಿ ಪ್ರಯತ್ನ ಪಟ್ಟಿದ್ದಾರಂತೆ. ಆದರೆ ಸಾಧ್ಯವಾಗಿರಲಿಲ್ಲವಂತೆ. ಆದರೆ ಈ ಬಾರಿ ಪಾದಯಾತ್ರೆ ಮೂಲಕ ಗಮನ ಸೆಳೆದ ಕಾರಣ, ಈ ಬಾರಿಯ ಪ್ರಯತ್ನ ವಿಫಲವಾಗಲ್ಲ ಎನ್ನುವ ನಂಬಿಕೆಯೊಂದಿಗೆ ನಡಿಗೆ ಮುಂದುವರೆಸಿದ್ದರು.

  ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದ ಅಲ್ಲು ಅರ್ಜುನ್

  ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದ ಅಲ್ಲು ಅರ್ಜುನ್

  ಅಭಿಮಾನಿ ಪಿ ನಾಗೇಶ್ವರ್, ಇದೇ ತಿಂಗಳು 17ರಂದು ಮನೆಯಿಂದ ಹೊರಟಿದ್ದಾರೆ. 22ಕ್ಕೆ ಹೈದರಾಬಾದ್ ನ ಬಂಜಾರ

  ತಲುಪಿದ್ದಾರೆ. ಆದರೆ ಅಲ್ಲು ಅರ್ಜುನ್ ಮನೆಯಲ್ಲಿ ಇರಲಿಲ್ಲ. ಕುಟುಂಬದ ಜೊತೆ ಗೋವಾ ಪ್ರವಾಸಕ್ಕೆ ತೆರಳಿದ್ದರು. ಅಲ್ಲು ವಾಪಸ್ ಆಗುವವರೆಗೂ ಹೈದರಾಬಾದ್ ನಲ್ಲಿ ಕಾದು ನೆಚ್ಚಿನ ನಟನನ್ನು ಭೇಟಿಯಾಗಿ ಸಂತಸ ಪಟ್ಟಿದ್ದಾರೆ.

  ತೆಲುಗು ಸಿನಿಮಾದಲ್ಲಿ ಮಾಧವನ್ ವಿಲನ್ ಪಾತ್ರ: ಟ್ವೀಟ್ ಮೂಲಕ ಸ್ಪಷ್ಟನೆತೆಲುಗು ಸಿನಿಮಾದಲ್ಲಿ ಮಾಧವನ್ ವಿಲನ್ ಪಾತ್ರ: ಟ್ವೀಟ್ ಮೂಲಕ ಸ್ಪಷ್ಟನೆ

  ಸಂಜನಾ, ರಾಗಿಣಿ ವಿಚಾರದಲ್ಲಿ ಯಡವಟ್ಟು ಮಾಡಿದ ಪೊಲೀಸ್ | Filmibeat Kannada
  ಅಭಿಮಾನಿಯ ಅಭಿಮಾನಕ್ಕೆ ಮನಸೋತ ಅಲ್ಲು ಅರ್ಜುನ್

  ಅಭಿಮಾನಿಯ ಅಭಿಮಾನಕ್ಕೆ ಮನಸೋತ ಅಲ್ಲು ಅರ್ಜುನ್

  ಅಭಿಮಾನಿಯನ್ನು ತನ್ನ ಸ್ಟುಡಿಯೋಗೆ ಬರಮಾಡಿಕೊಂಡಿದ್ದ ಅಲ್ಲು ಅರ್ಜುನ್ ಕೆಲ ಸಮಯ ಮಾತನಾಡಿದ್ದಾರೆ. ಶುಕ್ರವಾರ ಸಂಜೆ ಅಭಿಮಾನಿ ಪಿ ನಾಗೇಶ್ವರ್ ಅಲ್ಲು ಅರ್ಜುನ್ ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಅಭಿಮಾನಿಯ ದೊಡ್ಡ ಕನಸು ನನಸು ಮಾಡಿದ್ದಾರೆ. ಅಭಿಮಾನಿಯ ಅಭಿಮಾನಕ್ಕೆ ಅಲ್ಲು ಅರ್ಜುನ್ ಮನಸೋತಿದ್ದಾರೆ.

  English summary
  Tollywood Actor Allu Arjun Meets His Fan Who Came All The Way From Macherla To Hyderbad Walking For Over 200 Kms.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X