twitter
    For Quick Alerts
    ALLOW NOTIFICATIONS  
    For Daily Alerts

    'ಪುಷ್ಪ' ಮೇಕಿಂಗ್ ಚಿತ್ರ: ಸುಕುಮಾರ್-ಅಲ್ಲು ಅರ್ಜುನ್ ಜೋಡಿ ಮೇಲೆ ಹೆಚ್ಚಿದ ನಿರೀಕ್ಷೆ

    |

    ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸ್ಟಾರ್ ನಿರ್ದೇಶಕ ಸುಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಪುಷ್ಪ ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಭಾರಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.

    ಕೊರೊನಾದಿಂದ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದ ಚಿತ್ರತಂಡ ಈಗ ಮತ್ತೆ ಶೂಟಿಂಗ್ ಆರಂಭಿಸಿದೆ. ಆಂಧ್ರಪ್ರದೇಶದ ಮರೆದುಮಿಲ್ಲಿ ಕಾಡಿನಲ್ಲಿ ಪುಷ್ಪ ಚಿತ್ರೀಕರಣ ಶುರುವಾಗಿದೆ.

    'ಪುಷ್ಪಾ' ಸಿನಿಮಾ ಸೆಟ್‌ಗೆ ಅಲ್ಲು ಅರ್ಜುನ್-ರಶ್ಮಿಕಾ ಹಾಜರ್'ಪುಷ್ಪಾ' ಸಿನಿಮಾ ಸೆಟ್‌ಗೆ ಅಲ್ಲು ಅರ್ಜುನ್-ರಶ್ಮಿಕಾ ಹಾಜರ್

    ಕೆಂಪು ಶ್ರೀಗಂಧದ ಕಳ್ಳಸಾಗಣೆ ಆಧಾರಿತವಾಗಿ ಪುಷ್ಪ ಸಿನಿಮಾ ತಯಾರಾಗುತ್ತಿದ್ದು, ಅಲ್ಲು ಅರ್ಜುನ್ ಅವರ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದೀಗ, ಕಾಡಿನೊಳಗೆ ಅಲ್ಲು ಅರ್ಜುನ್ ಹೋಗುತ್ತಿರುವ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

     Allu Arjun Movie Pushpa Making Still Viral

    ಮೈತ್ರಿ ಮೋವಿಸ್ ಟ್ವಿಟ್ಟರ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದು, ''ಪುಷ್ಪ ರಾಜ್ ಬಂದುಬಿಟ್ಟ. ಚಿತ್ರೀಕರಣ ಆರಂಭ. ಪುಷ್ಪ ಸೆಟ್‌ನಿಂದ ಈ ಫೋಟೋ'' ಎಂದು ಕ್ಯಾಪ್ಷನ್ ಹಾಕಿದ್ದಾರೆ.

    ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ, ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಹಿಂದಿ, ಕನ್ನಡದಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನವಿದೆ.

    English summary
    Stylish star Allu Arjun starrer Pushpa movie making still viral in social media. The Movie directed by Sukumar.
    Thursday, November 12, 2020, 18:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X